ರಾಜ್ಯದಲ್ಲಿ ಮೊದಲ ಬಾರಿಗೆ ಕಂಡುಬಂದ ಅಪರೂಪದ ಬಣ್ಣದ ಚಿರತೆ

ಇದೀಗ ಸುದ್ದಿಯಲ್ಲಿದೆ:
- ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ ಅವರು ವಿಜಯನಗರ ಜಿಲ್ಲೆಯಲ್ಲಿ ಅತ್ಯಂತ ಅಪರೂಪದ ಬಣ್ಣ ವೈವಿಧ್ಯವನ್ನು ಹೊಂದಿರುವ ಚಿರತೆಯನ್ನು ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ದಾಖಲಿಸಿದ್ದಾರೆ.
ಪ್ರಮುಖ ಲಕ್ಷಣಗಳು ಮತ್ತು ಮಹತ್ವ:
- ವಿಶಿಷ್ಟ ನೋಟ:- ಸಾಮಾನ್ಯ ಚಿರತೆಗಳು ಹಳದಿ-ಕಂದು ಬಣ್ಣದ ಮೈಮೇಲೆ ಕಪ್ಪು ಚುಕ್ಕೆಗಳನ್ನು ಹೊಂದಿದ್ದರೆ, ಈ ಚಿರತೆಯು ಶ್ರೀಗಂಧದ ಬಣ್ಣವನ್ನು ಹೋಲುವ ಕೆಂಪು-ಗುಲಾಬಿ ಛಾಯೆಯ ತುಪ್ಪಳ ಮತ್ತು ಮಂಕಾದ ಕಂದು ಬಣ್ಣದ ಚುಕ್ಕೆಗಳನ್ನು ಹೊಂದಿರುವುದು ಇದರ ವಿಶೇಷತೆಯಾಗಿದೆ.
- ದಕ್ಷಿಣ ಆಫ್ರಿಕಾ ಮತ್ತು ತಾಂಜೇನಿಯಾದಲ್ಲಿ ಇಂತಹ ಚಿರತೆಗಳು ಕಂಡುಬಂದಿದ್ದವು:- ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ರಾಜಸ್ಥಾನದ ರಣಕಪುರದಲ್ಲಿ 2021ರಲ್ಲಿ ಇಂತಹ ಚಿರತೆ ಪತ್ತೆಯಾಗಿತ್ತು. ಹಾಗೂ ಕರ್ನಾಟಕದಲ್ಲಿ ಪತ್ತೆಯಾಗುತ್ತಿರುವುದು ದೇಶದಲ್ಲಿ ಎರಡನೇ ಬಾರಿ ಹಾಗಾಗಿ ಜಾಗತಿಕ ಮಹತ್ವವನ್ನು ಪಡೆದುಕೊಂಡಿದೆ.
- “ಸ್ಟ್ರಾಬೆರಿ ಚಿರತೆಗಳು”:- ಅಂತರರಾಷ್ಟ್ರೀಯ ಮಟ್ಟದಲ್ಲಿ ಇವುಗಳನ್ನು “ಸ್ಟ್ರಾಬೆರಿ ಚಿರತೆಗಳು” ಎಂದು ಕರೆಯಲಾಗುತ್ತದೆ. ಆದರೆ, ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ಸಲುವಾಗಿ ಸಂಜಯ್ ಗುಬ್ಬಿ ಅವರು ಈ ಬಗೆಯ ಚಿರತೆಗೆ “ಚಂದನ ಚಿರತೆ” ಎಂದು ಹೆಸರಿಸಲು ಪ್ರಸ್ತಾಪಿಸಿದ್ದಾರೆ.



ನಿಮ್ಮದೊಂದು ಉತ್ತರ