ಅಪ್ರಸ್ತುತ ಯೋಜನೆಗಳನ್ನು ವಿಲೀನಗೊಳಿಸುವಂತೆ – 2ನೇ ಆಡಳಿತ ಸುಧಾರಣಾ ಆಯೋಗ
ಇದೀಗ ಸುದ್ದಿಯಲ್ಲಿದೆ:
- ಹೆಚ್ಚುತ್ತಿರುವ ಹಣಕಾಸಿನ ಕೊರತೆಯನ್ನು ನಿಭಾಯಿಸಲು ರಾಜಸ್ವ ವೆಚ್ಚವನ್ನು ತರ್ಕಬದ್ಧಗೊಳಿಸುವಂತೆ 2ನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಶಿಫಾರಸು ಮಾಡಿದೆ.
ಈ ಆಯೋಗದ ಶಿಫಾರಸು ಮತ್ತು ಉದ್ದೇಶ:
- ಪ್ರಸ್ತಾಪಿಸಿದವರು:- ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ. ದೇಶಪಾಂಡೆ ಅವರ ನೇತೃತ್ವದ 2ನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗ.
- ಮೂಲ ಉದ್ದೇಶ:- ಕಳೆದ 2 ಆರ್ಥಿಕ ವರ್ಷಗಳಲ್ಲಿ ಹೆಚ್ಚಿರುವ ರಾಜಸ್ವ ಕೊರತೆಯನ್ನು ಸರಿದೂಗಿಸಲು ರಾಜಸ್ವ ವೆಚ್ಚವನ್ನು ಆದ್ಯತೆ ಮತ್ತು ತರ್ಕಬದ್ಧಗೊಳಿಸುವುದು.
- ಆದ್ಯತೆಯ ಕ್ರಮ:-
- ಕಾರ್ಯಚಟುವಟಿಕೆಗೆ ಅಪ್ರಸ್ತುತವಾಗಿರುವ ಹುದ್ದೆಗಳನ್ನು ರದ್ದುಗೊಳಿಸಲು ಮತ್ತು
- ದೀರ್ಘಕಾಲದಿಂದ ಬಾಕಿ ಉಳಿದಿರುವ ಮುಂಚೂಣಿ ಹುದ್ದೆಗಳನ್ನು ಆದ್ಯತೆಯ ಮೇರೆಗೆ ಭರ್ತಿ ಮಾಡಲು.
ಪ್ರಮುಖ ಶಿಫಾರಸುಗಳು:
-
- ಯೋಜನೆಗಳ ಪರಿಷ್ಕರಣೆ:- ಹಳೆಯದಾದ, ಅನುದಾನವಿಲ್ಲದ ಅಥವಾ ಸಾಲ ನಿರ್ವಹಣೆಯ ಭಾಗವಾಗಿರುವ ಸುಮಾರು 1,000 ಲೆಕ್ಕ ಶೀರ್ಷಿಕೆಗಳು ಅಥವಾ ಯೋಜನೆಗಳನ್ನು (ಒಟ್ಟು 2,874) ಕೊನೆಗೊಳಿಸಲು ಅಥವಾ ವಿಲೀನಗೊಳಿಸಲು ಆಯೋಗವು ಶಿಫಾರಸು ಮಾಡಿದೆ.
- ನೇಮಕಾತಿ ಸುಧಾರಣೆಗಳು:-
- ಹೊಸ ಹುದ್ದೆಗಳ ಸೃಜನೆಯನ್ನು ನಿರ್ಬಂಧಿಸುವುದು.
-
-
- ವಾರ್ಷಿಕ ನೇಮಕಾತಿ ಯೋಜನೆಯನ್ನು ಜಾರಿಗೊಳಿಸುವುದು.
-
- ‘ಸಿ’ ಮತ್ತು ‘ಡಿ’ ವೃಂದದ ಹುದ್ದೆಗಳಿಗೆ ಹೊರಗುತ್ತಿಗೆಯನ್ನು ಸ್ಥಗಿತಗೊಳಿಸುವುದು.
ಸಿಬ್ಬಂದಿ ಅಂಕಿಅಂಶಗಳು:
- ಖಾಲಿ ಹುದ್ದೆಗಳು:- 42 ಇಲಾಖೆಗಳಲ್ಲಿ ಮಂಜೂರಾದ 8.16 ಲಕ್ಷ ಹುದ್ದೆಗಳ ಪೈಕಿ 2.94 ಲಕ್ಷ ಹುದ್ದೆಗಳು ಖಾಲಿಯಿವೆ ಎಂದು ಆಯೋಗವು ಗುರುತಿಸಿದೆ.
ಪ್ರಸ್ತುತ ಸ್ಥಿತಿ:- ಪ್ರಸ್ತುತ ಕೇವಲ 5.18 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಮತ್ತು ಸುಮಾರು 70,000 ಸಿಬ್ಬಂದಿಯನ್ನು ಹೊರಗುತ್ತಿಗೆ ಮೂಲಕ ನೇಮಿಸಿಕೊಳ್ಳಲಾಗಿದೆ.



ನಿಮ್ಮದೊಂದು ಉತ್ತರ