ಕರ್ನಾಟಕದ ಕಿರು ಬಂದರುಗಳಲ್ಲಿ ಕಬ್ಬಿಣದ ಅದಿರು ನಿರ್ವಹಣಾ ನೀತಿ, 2025
ಇದೀಗ ಸುದ್ದಿಯಲ್ಲಿದೆ:
- ಕರ್ನಾಟಕದ ಕಿರು (ಪ್ರಮುಖವಲ್ಲದ) ಬಂದರುಗಳಿಂದ ಕಬ್ಬಿಣದ ಅದಿರನ್ನು ರಫ್ತು ಮಾಡಲು ರಾಜ್ಯ ಸರ್ಕಾರವು ನೂತನ ನೀತಿಯನ್ನು ಅನುಮೋದಿಸಿದೆ.
ಹಿನ್ನೆಲೆ:
- ರಫ್ತನ್ನು ನಿಷೇಧಿಸಿತ್ತು:- ಕಬ್ಬಿಣದ ಅದಿರು ಹೊರತೆಗೆಯುವಿಕೆಯಲ್ಲಿನ ನಿಯಮಗಳ ವ್ಯಾಪಕ ಉಲ್ಲಂಘನೆ ಮತ್ತು ಭಾರಿ ಪ್ರಮಾಣದ ಕಬ್ಬಿಣದ ಅದಿರಿನ ಅಕ್ರಮ ರಫ್ತಿನ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು 2010ರಲ್ಲಿ ‘ಕರ್ನಾಟಕ ಬಂದರುಗಳ (ಬಂದಿಳಿಯುವಿಕೆ ಮತ್ತು ಸಾಗಾಣಿಕೆ /ಲ್ಯಾಂಡಿಂಗ್ ಮತ್ತು ಶಿಪ್ಪಿಂಗ್ ಶುಲ್ಕಗಳು) ಕಾಯ್ದೆ, 1961’ ರ ಅಡಿಯಲ್ಲಿ 10 ಕಿರು ಬಂದರುಗಳಿಂದ ಕಬ್ಬಿಣದ ಅದಿರು ರಫ್ತನ್ನು ನಿಷೇಧಿಸಿತ್ತು.
- ಆದಾಗ್ಯೂ, 2022ರಲ್ಲಿ ಸರ್ವೋಚ್ಚ ನ್ಯಾಯಾಲಯವು ಭಾರತ ಸರ್ಕಾರದ ನೀತಿಗಳ ಅಡಿಯಲ್ಲಿ ಕಟ್ಟುನಿಟ್ಟಾಗಿ ಈ ಬಂದರುಗಳಿಂದ ಕಬ್ಬಿಣದ ಅದಿರನ್ನು ರಫ್ತು ಮಾಡಲು ಅನುಮತಿ ನೀಡಿತು.
- ದೇಶದ ಉಳಿದ ಭಾಗಗಳಲ್ಲಿ ಇರುವಂತೆಯೇ ಕರ್ನಾಟಕದ ಬಂದರುಗಳ ಮೂಲಕವೂ ಕಬ್ಬಿಣದ ಅದಿರು ರಫ್ತು ಮಾಡಲು ಸರ್ವೋಚ್ಚ ನ್ಯಾಯಾಲಯ ಅನುಮತಿಸಿದೆ.
2025 ರ ನೂತನ ನೀತಿಯ ಬಗ್ಗೆ:
ಕರ್ನಾಟಕದ ಕಿರು ಬಂದರುಗಳಿಂದ ಕಬ್ಬಿಣದ ಅದಿರು ರಫ್ತಿಗೆ ದಾರಿಯನ್ನು ಸುಗಮಗೊಳಿಸಲು ರಾಜ್ಯ ಸರ್ಕಾರವು ‘ಕರ್ನಾಟಕದ ಕಿರು ಬಂದರುಗಳಲ್ಲಿ ಕಬ್ಬಿಣದ ಅದಿರು ನಿರ್ವಹಣಾ ನೀತಿ, 2025’ ಕ್ಕೆ ಅನುಮೋದನೆ ನೀಡಿದೆ.
- ಉದ್ದೇಶ:- ಕರ್ನಾಟಕ ಸಮುದ್ರ ಸಾರಿಗೆ ಮಂಡಳಿಯ ಅಡಿಯಲ್ಲಿ ಬರುವ ಕಿರು (ಪ್ರಮುಖವಲ್ಲದ) ಬಂದರುಗಳ ಮೂಲಕ ಕಬ್ಬಿಣದ ಅದಿರನ್ನು ನಿರ್ವಹಿಸುವುದು ಈ ನೀತಿಯ ಮುಖ್ಯ ಉದ್ದೇಶವಾಗಿದೆ.
- ಈ ನೀತಿಯು ಈ ಬಂದರುಗಳಿಂದ ಕಬ್ಬಿಣದ ಅದಿರು ರಫ್ತು ಮಾಡಲು ಅನುಸರಿಸಬೇಕಾದ ಒಂದು ಪ್ರಮಾಣಿತ ಕಾರ್ಯಾಚರಣಾ ವಿಧಾನವಾಗಿದೆ (SOP).
ಕರ್ನಾಟಕದ 13 ಕಿರು (ಪ್ರಮುಖವಲ್ಲದ) ಬಂದರುಗಳು:
- ಕಾರವಾರ (ಎಲ್ಲಾ ಹವಾಮಾನಕ್ಕೂ ಸೂಕ್ತವಾದ, ಆಳ ಸಮುದ್ರದ ಬಂದರು)
- ಬೇಲಿಕೇರಿ
- ತದ್ರಿ (ತಡದಿ)
- ಪಾವಿನಕುರುವ (ಪಾವಿನಕುರ್ವೆ)
- ಹೊನ್ನಾವರ
- ಮಂಕಿ
- ಭಟ್ಕಳ
- ಕುಂದಾಪುರ
- ಹಂಗರಕಟ್ಟೆ
- ಮಲ್ಪೆ
- ಪಡುಬಿದ್ರಿ
- ಹಳೆಯ ಮಂಗಳೂರು
- ಬೈಂದೂರು (ಉಡುಪಿ ಜಿಲ್ಲೆ)



ನಿಮ್ಮದೊಂದು ಉತ್ತರ