ಕರ್ನಾಟಕ ಪರಿಶಿಷ್ಟ ಜಾತಿಗಳ (ಉಪ-ವರ್ಗೀಕರಣ) ಮಸೂದೆ, 2025
ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿಗೆ, ವಿಧಾನಸಭೆಯು ಬಹುಚರ್ಚಿತ ‘ಕರ್ನಾಟಕ ಪರಿಶಿಷ್ಟ ಜಾತಿಗಳ (ಉಪ-ವರ್ಗೀಕರಣ) ಮಸೂದೆ, 2025’ ಅನ್ನು ಅಂಗೀಕರಿಸಿದೆ.
ಮಸೂದೆಯ ಪ್ರಮುಖ ಲಕ್ಷಣಗಳು:
- ಧ್ಯೇಯೋದ್ದೇಶ:- 17% ಮೀಸಲಾತಿ ಹಂಚಿಕೆಯನ್ನು ಹೊಂದಿರುವ 101 ಪರಿಶಿಷ್ಟ ಜಾತಿಗಳ ಉಪ-ವರ್ಗೀಕರಣಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶಗಳಿಗೆ ಕಾನೂನುಬದ್ಧ ಮಾನ್ಯತೆ ನೀಡುವುದು ಈ ಮಸೂದೆಯ ಪ್ರಮುಖ ಉದ್ದೇಶವಾಗಿದೆ.
- ಮೀಸಲಾತಿ ಹಂಚಿಕೆ:–ಈ ಮಸೂದೆಯ ಅನ್ವಯ,
- ಪ್ರವರ್ಗ- ಎ (16 ಜಾತಿಗಳನ್ನೊಳಗೊಂಡ ಅತೀ ಹಿಂದುಳಿದ ಅಸ್ಪೃಶ್ಯರು)- 6% ರಷ್ಟು ಮೀಸಲಾತಿ ಹೊಂದಿದೆ.
- ಪ್ರವರ್ಗ- ಬಿ (19 ಜಾತಿಗಳನ್ನೊಳಗೊಂಡ ಹಿಂದುಳಿದ ಅಸ್ಪೃಶ್ಯರು)- 6% ರಷ್ಟು ಮೀಸಲಾತಿ ಹೊಂದಿದೆ.
- ಪ್ರವರ್ಗ- ಸಿ (63 ಜಾತಿಗಳನ್ನೊಳಗೊಂಡ ಸ್ಪೃಶ್ಯರು)- 5% ರಷ್ಟು ಮೀಸಲಾತಿ ಹೊಂದಿದೆ.
- ವರ್ಗೀಕರಿಸದ ಜಾತಿಗಳು:- ಅಂತೆಯೇ, ಈ ಮಸೂದೆಯಲ್ಲಿ ಯಾವುದೇ ವರ್ಗಕ್ಕೆ ಸೇರಿಸದ 3 ಪರಿಶಿಷ್ಟ ಜಾತಿಗಳಾದ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕಗಳನ್ನು ಗುರುತಿಸಲಾಗಿದೆ. ಇವುಗಳು ತಮ್ಮ ಜಾತಿ ಪ್ರಮಾಣಪತ್ರಗಳ ಆಧಾರದ ಮೇಲೆ ಪ್ರವರ್ಗ- ಎ ಅಥವಾ ಪ್ರವರ್ಗ- ಬಿ ಯ ಅಡಿಯಲ್ಲಿ ಮೀಸಲಾತಿ ಸೌಲಭ್ಯವನ್ನು ಆಯ್ಕೆ ಮಾಡಿಕೊಳ್ಳಲು ಅರ್ಹವಾಗಿರುತ್ತವೆ.
- ನಾಗಮೋಹನ್ ದಾಸ್ ಆಯೋಗದ ವರದಿ:- ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗವು, ಪರಿಶಿಷ್ಟ ಜಾತಿಗಳ ವಿವಿಧ ಉಪ-ಗುಂಪುಗಳ ನಡುವಿನ ಉಪ-ವರ್ಗೀಕರಣಕ್ಕೆ ಸಂಬಂಧಿಸಿದ ನಿರ್ದಿಷ್ಟ ಶಿಫಾರಸುಗಳೊಂದಿಗೆ ಈ ವರ್ಷದ ಆಗಸ್ಟ್ 4 ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
- ಅನುಷ್ಠಾನ:- ಮೀಸಲಾತಿ ಸೌಲಭ್ಯಗಳ ನ್ಯಾಯೋಚಿತ ಮತ್ತು ಸಮಾನ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು, ಸರ್ಕಾರವು ಆಯೋಗದ ಶಿಫಾರಸುಗಳಲ್ಲಿ ಕೆಲವು ಮಾರ್ಪಾಡುಗಳೊಂದಿಗೆ ಅನುಮೋದಿಸಿ, ಪರಿಶಿಷ್ಟ ಜಾತಿಗಳ ನಡುವೆ ಈ ಉಪ -ವರ್ಗೀಕರಣವನ್ನು ಜಾರಿಗೆ ತಂದಿದೆ.



ನಿಮ್ಮದೊಂದು ಉತ್ತರ