ಹಂಪಿಯಲ್ಲಿ ‘ಟ್ರಾವೆಲರ್ ನೂಕ್ಸ್’ (ಪ್ರಯಾಣಿಕರ ವಿಶ್ರಾಂತಿ ಸ್ಥಳಗಳು)
ಇದೀಗ ಸುದ್ದಿಯಲ್ಲಿದೆ:
- ಯುನೆಸ್ಕೋದ ವಿಶ್ವ ಪರಂಪರೆಯ ತಾಣವಾದ ಹಂಪಿಯಲ್ಲಿ ಪ್ರವಾಸಿಗರ ಅನುಭವವನ್ನು ಸುಧಾರಿಸುವ ಉದ್ದೇಶದ ನೂತನ ‘ಟ್ರಾವೆಲರ್ ನೂಕ್ಸ್’ (ಪ್ರಯಾಣಿಕರ ವಿಶ್ರಾಂತಿ ಸ್ಥಳಗಳು) ಕೇಂದ್ರಗಳು ಮಾರ್ಚ್ 2026ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
‘ಟ್ರಾವೆಲರ್ ನೂಕ್ಸ್’ (ಪ್ರಯಾಣಿಕರ ವಿಶ್ರಾಂತಿ ಸ್ಥಳಗಳು)ಗಳ ಬಗ್ಗೆ:
- ಹಿನ್ನೆಲೆ:- ಈ ಪಾರಂಪರಿಕ ಸ್ಥಳಕ್ಕೇ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅವರಿಗೆ ಅಗತ್ಯ ಮೂಲಸೌಕರ್ಯ ಮತ್ತು ಮಾಹಿತಿ ನೆರವು ಒದಗಿಸುವುದು.
- ಗುರಿ:– ಹಂಪಿಯ ಪುರಾತತ್ವ ಮತ್ತು ಸಾಂಸ್ಕೃತಿಕ ಮಹತ್ವಕ್ಕೆ ಧಕ್ಕೆ ಬಾರದಂತೆ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಬಲಪಡಿಸುವುದು ಹಾಗೂ ಇ ಮೂಲಕ ಹಂಪಿಯಲ್ಲಿ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಯನ್ನು ಬೆಂಬಲಿಸುವುದು.
- ಚಾಲನೆ ನೀಡಿದವರು:- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2024ರಲ್ಲಿ ಈ ಉಪಕ್ರಮಕ್ಕೆ ಚಾಲನೆ ನೀಡಿದರು.
- ಸಚಿವಾಲಯ:- ಕೇಂದ್ರ ಪ್ರವಾಸೋದ್ಯಮ ಸಚಿವಾಲಯ
- ಕೇಂದ್ರ ಯೋಜನೆ:- ‘ಸ್ವದೇಶ್ ದರ್ಶನ್ 2.0’ ಯೋಜನೆಯಡಿ ಪ್ರವಾಸಿಗರ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ₹25.64 ಕೋಟಿ ವೆಚ್ಚದ ‘ಹಂಪಿಯಲ್ಲಿ ಟ್ರಾವೆಲರ್ ನೂಕ್ಸ್ ಸ್ಥಾಪನೆ’ಗೆ ಮಂಜೂರಾತಿ ನೀಡಿದೆ.
- ರಾಜ್ಯದಲ್ಲಿ ಅನುಷ್ಠಾನ ಸಂಸ್ಥೆ:- ‘ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ನಿಯಮಿತ ’ (KTIL).
- ಪ್ರಯೋಜನೆಗಳು:- ಈ ‘ಟ್ರಾವೆಲರ್ ನೂಕ್ಸ್’ ಕೇಂದ್ರಗಳು ಪ್ರವಾಸಿಗರ ಸೌಲಭ್ಯಗಳಲ್ಲಿನ ಪ್ರಮುಖ ಕೊರತೆಗಳನ್ನು ನಿವಾರಿಸುವ ಸಲುವಾಗಿ ಕುಡಿಯುವ ನೀರಿನ ಘಟಕಗಳು, ನೈರ್ಮಲ್ಯಯುತ ಶೌಚಾಲಯಗಳು, ಎಟಿಎಂಗಳು, ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ವಿಶ್ರಾಂತಿಗಾಗಿ ನೆರಳಿನ ಆಸರೆಗಳನ್ನು ಒದಗಿಸಲಿವೆ.



ನಿಮ್ಮದೊಂದು ಉತ್ತರ