ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA)
ಇದೀಗ ಸುದ್ದಿಯಲ್ಲಿದೆ:
- ರಾಜ್ಯದಲ್ಲಿ ಸಾವು-ನೋವು, ಆರ್ಥಿಕ ನಷ್ಟ ಮತ್ತು ಸಾವುಗಳ ಸಂಖ್ಯೆಯನ್ನು ತಗ್ಗಿಸುವ ಉದ್ದೇಶದೊಂದಿಗೆ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು “ವಿಪತ್ತು-ಪ್ರತಿರೋಧಕ (ಸ್ಥಿತಿಸ್ಥಾಪಕ) ಕರ್ನಾಟಕ” ನಿರ್ಮಾಣಕ್ಕಾಗಿ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ.
ಕರ್ನಾಟಕ ರಾಜ್ಯ ವಿಪತ್ತು ಅಪಾಯ ಕುಗ್ಗಿಸುವ (KSDRR) ಯೋಜನಾ ರೂಪರೇಖೆ, 2025-30:
- ಈ ವರದಿಯ ಪ್ರಕಾರ, ರಾಜ್ಯದ ಒಟ್ಟು ಭೌಗೋಳಿಕ ವಿಸ್ತೀರ್ಣದ 80% ರಷ್ಟು ಭೂ ಪ್ರದೇಶವು ಬರಪೀಡಿತದ ಅಪಾಯಕ್ಕೆ ಒಳಪಡುವ ಸಾಧ್ಯತೆಗಳಿವೆ.
- ರಾಜ್ಯದ 22% ರಷ್ಟು ಭೂ ಪ್ರದೇಶವು ಮಧ್ಯಮ ತೀವ್ರತೆಯ ಭೂಕಂಪಗಳಿಗೆ ಮತ್ತು 24% ರಷ್ಟು ಭೂ ಪ್ರದೇಶವು ಚಂಡಮಾರುತ ಹಾಗೂ ತೀವ್ರ ಗಾಳಿಯಂತಹ ನೈಸರ್ಗಿಕ ವಿಕೋಪಗಳಿಗೆ ತುತ್ತಾಗುವ ಸಾಧ್ಯತೆಗಳಿವೆ.
- ಅಪಾಯದ ಮೌಲ್ಯಮಾಪನ ಮತ್ತು ವಿಪತ್ತು ಪರಿಹಾರ ಕ್ರಮಗಳ ಭಾಗವಾಗಿ ರಸ್ತೆ ಹಾಗೂ ಕೈಗಾರಿಕಾ ಅಪಘಾತಗಳಂತಹ ಮಾನವ ಪ್ರೇರಿತ ವಿಪತ್ತುಗಳನ್ನು ಸಹ ಪರಿಗಣಿಸಲಾಗಿದೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA)ದ ಬಗ್ಗೆ:
- ರಾಜ್ಯದ ಅತ್ಯುನ್ನತ ಸಂಸ್ಥೆ:- ಇದು ಕರ್ನಾಟಕದಲ್ಲಿ ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳುವ ಅತ್ಯುನ್ನತ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತದೆ.
- ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಾಯಕತ್ವ:– ಈ ಪ್ರಾಧಿಕಾರವು ಕರ್ನಾಟಕದ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತದೆ.
- ಸುಗಮಗೊಳಿಸುವಿಕೆ ಮತ್ತು ಮೇಲ್ವಿಚಾರಣೆ:- ಇದು ರಾಜ್ಯದ ಸಾಮರ್ಥ್ಯ ವರ್ಧನೆ ಸೇರಿದಂತೆ ವಿಪತ್ತು ಸಂಬಂಧಿತ ಎಲ್ಲಾ ಚಟುವಟಿಕೆಗಳನ್ನು ಸುಗಮಗೊಳಿಸುತ್ತದೆ, ಸಮನ್ವಯಗೊಳಿಸುತ್ತದೆ, ಪರಿಶೀಲಿಸುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ.
- ರಾಜ್ಯ ವಿಪತ್ತು ನಿರ್ವಹಣಾ ನೀತಿ ಮತ್ತು ಮಾರ್ಗಸೂಚಿಗಳ ನಿರೂಪಣೆ:- ವಿವಿಧ ಸರ್ಕಾರಿ ಇಲಾಖೆಗಳು ಅನುಸರಿಸಬೇಕಾದ ರಾಜ್ಯ ವಿಪತ್ತು ನಿರ್ವಹಣಾ ನೀತಿ ಮತ್ತು ಮಾರ್ಗಸೂಚಿಗಳನ್ನು ಇದು ರೂಪಿಸುತ್ತದೆ.
- ರಾಜ್ಯ ವಿಪತ್ತು ನಿರ್ವಹಣಾ ಯೋಜನೆಗಳ ಅನುಮೋದನೆ:– ಇದು ರಾಜ್ಯ ವಿಪತ್ತು ನಿರ್ವಹಣಾ ಯೋಜನೆ ಮತ್ತು ಇಲಾಖಾವಾರು ಯೋಜನೆಗಳನ್ನು ಅನುಮೋದಿಸುವುದಲ್ಲದೆ, ಅವುಗಳು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (NDMA) ಮಾರ್ಗಸೂಚಿಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸುತ್ತದೆ.



ನಿಮ್ಮದೊಂದು ಉತ್ತರ