ಕರ್ನಾಟಕ ಋತು ಸ್ರಾವ ರಜೆ ನೀತಿ, 2025
ಇದೀಗ ಸುದ್ದಿಯಲ್ಲಿದೆ:
- ಕರ್ನಾಟಕ ರಾಜ್ಯ ಸರ್ಕಾರವು ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೆ ಒಂದು ದಿನದ ವೇತನ ಸಹಿತ ರಜೆ ನೀಡುವ ‘ಋತು ಸ್ರಾವ ರಜೆ ನೀತಿ’ಯನ್ನು ಅಧಿಕೃತವಾಗಿ ಜಾರಿಗೊಳಿಸಿದೆ.
ಕರ್ನಾಟಕ ಋತು ಸ್ರಾವ ರಜೆ ನೀತಿ-2025 ರ ಬಗ್ಗೆ:
- ಅರ್ಹತೆ: ಈ ನೀತಿಯ ಅನ್ವಯ, ರಾಜ್ಯದ ಮಹಿಳಾ ಉದ್ಯೋಗಿಗಳು ವಾರ್ಷಿಕವಾಗಿ 12 ದಿನಗಳ ಋತು ಸ್ರಾವ ರಜೆಯನ್ನು ಪಡೆಯಲು ಅರ್ಹರಾಗಿರುತ್ತಾರೆ.
- ಆರೋಗ್ಯ ಮತ್ತು ಹಕ್ಕುಗಳು: ಉದ್ಯೋಗ ಸ್ಥಳದಲ್ಲಿ ಮಹಿಳೆಯರ ಋತು ಸ್ರಾವದ ಆರೋಗ್ಯ ಮತ್ತು ಹಕ್ಕುಗಳನ್ನು ಗುರುತಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.
- ಸಮಿತಿ: ಈ ನೀತಿಯ ರೂಪುರೇಷೆಗಳನ್ನು ಅಧ್ಯಯನ ಮಾಡಲು ಮತ್ತು ಸೂಕ್ತ ಶಿಫಾರಸುಗಳನ್ನು ನೀಡಲು ಸರ್ಕಾರವು ಡಾ. ಸಪ್ನಾ ಎಸ್. ನೇತೃತ್ವದ ಸಮಿತಿಯನ್ನು ಸರ್ಕಾರವು ನೇಮಿಸಿತ್ತು.
- ಉದ್ದೇಶ ಮತ್ತು ಮಹತ್ವ: ಉದ್ಯೋಗದ ಸ್ಥಳವನ್ನು ಹೆಚ್ಚು ಸಮಗ್ರ ಮತ್ತು ಮುಜುಗರ ರಹಿತವನ್ನಾಗಿ ಮಾಡುವುದು ಇದರ ಮೂಲ ಉದ್ದೇಶವಾಗಿದೆ. ಇದು ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳೆರಡರಲ್ಲೂ ವ್ಯಾಪಕ ವ್ಯಾಪ್ತಿಯನ್ನು ಹೊಂದಿರುವುದರಿಂದ, ಭಾರತದ ಪಾಲಿಗೆ ಇದು ಐತಿಹಾಸಿಕ ಹೆಜ್ಜೆಯಾಗಿದೆ.
ನೀತಿಯ ಪ್ರಮುಖ ಲಕ್ಷಣಗಳು
-
- ವಯೋಮಿತಿ ಮತ್ತು ವ್ಯಾಪ್ತಿ: 18 ರಿಂದ 52 ವರ್ಷ ವಯಸ್ಸಿನ ಮಹಿಳೆಯರು ಋತು ಸ್ರಾವ ರಜೆ ಪಡೆಯಲು ಅರ್ಹರಾಗಿರುತ್ತಾರೆ. ಇದು ಕಾಯಂ, ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರಿತ ಸಿಬ್ಬಂದಿಗೆ ಅನ್ವಯಿಸುತ್ತದೆ.
- ಅನ್ವಯವಾಗುವ ಕಾಯಿದೆಗಳು: ಈ ನೀತಿಯು ಕೆಳಕಂಡ ಕಾಯಿದೆಗಳಡಿ ನೋಂದಾಯಿತವಾದ ಸಂಸ್ಥೆಗಳಿಗೆ ಅನ್ವಯಿಸುತ್ತದೆ:
- ಕಾರ್ಖಾನೆಗಳ ಕಾಯಿದೆ, 1948.
-
-
- ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯಿದೆ, 1961.
-
- ತೋಟ (ಪ್ಲಾಂಟೇಶನ್) ದ ಕಾರ್ಮಿಕರ ಕಾಯಿದೆ, 1951.
-
-
- ಬೀಡಿ ಮತ್ತು ಸಿಗಾರ್ ಕಾರ್ಮಿಕರ (ಉದ್ಯೋಗದ ಷರತ್ತುಗಳು) ಕಾಯಿದೆ, 1966.
-
- ಮೋಟಾರು ಸಾರಿಗೆ ಕಾರ್ಮಿಕರ ಕಾಯಿದೆ, 1961.
- ಷರತ್ತುಗಳು: ಈ ರಜೆಯನ್ನು ಬಳಸಿಕೊಳ್ಳದಿದ್ದರೆ ಮುಂದಿನ ತಿಂಗಳಿಗೆ ವರ್ಗಾಯಿಸಿಕೊಳ್ಳಲು ಅವಕಾಶವಿರುವುದಿಲ್ಲ. ರಜೆ ಪಡೆಯಲು ಯಾವುದೇ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಲ್ಲ.
- ಪ್ರಸ್ತುತ ಹೊರಡಿಸಲಾದ ಸರ್ಕಾರಿ ಆದೇಶದಲ್ಲಿ, ಸರ್ಕಾರಿ ನೌಕರರು, ಅಂಗನವಾಡಿ ಕಾರ್ಯಕರ್ತರು ಅಥವಾ ಆಶಾ ಕಾರ್ಯಕರ್ತರಿಗೆ ಈ ರಜೆ ಅನ್ವಯವಾಗುವ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.



ನಿಮ್ಮದೊಂದು ಉತ್ತರ