ಉಡುಪಿ ಜಿಲ್ಲೆಯಲ್ಲಿ ಬೃಹತ್ ಶಿಲಾಯುಗದ ಮೆನ್ಹಿರ್ಗಳ ಪತ್ತೆ

ಇದೀಗ ಸುದ್ದಿಯಲ್ಲಿದೆ:
- ಉಡುಪಿಯ ಆದಿಮ ಕಲಾ ಟ್ರಸ್ಟ್ (ರಿ.) ಕುಂದಾಪುರ ಪ್ರದೇಶದಲ್ಲಿ ಇತ್ತೀಚೆಗೆ ಕೈಗೊಂಡ ಪುರಾತತ್ವ ಅನ್ವೇಷಣೆಗಳಲ್ಲಿ ಎರಡು ಮೆನ್ಹಿರ್ಗಳನ್ನು ಪತ್ತೆಹಚ್ಚಲಾಗಿದೆ.
- ಸ್ಥಳೀಯವಾಗಿ ‘ನಿಲ್ಸಕಲ್ಲು ‘ ಅಥವಾ ‘ಸ್ವತಂತ್ರವಾಗಿ ನಿಂತಿರುವ ಕಲ್ಲುಗಳು’ ಎಂದು ಕರೆಯಲ್ಪಡುವ ಈ ರಚನೆಗಳು, ಬೃಹತ್ ಶಿಲಾಯುಗದ ಅವಧಿಗೆ ಸೇರಿವೆ ಎಂದು ತಜ್ಞರು ಗುರುತಿಸಿದ್ದಾರೆ.
ಪತ್ತೆಯಾದ ಸ್ಥಳಗಳು ಮತ್ತು ಅಳತೆಗಳು:
ಈ ಎರಡು ಮೆನ್ಹಿರ್ಗಳು ಪ್ರತ್ಯೇಕ ಗ್ರಾಮಗಳಲ್ಲಿ ಪತ್ತೆಯಾಗಿದ್ದು, ವಿಶಿಷ್ಟ ಆಯಾಮಗಳನ್ನು ಹೊಂದಿವೆ:
- ಹಿಲ್ಕೋಡ್ ಮೆನ್ಹಿರ್: ನೇರಳಕಟ್ಟೆ-ಅಜ್ರಿ ರಸ್ತೆಯಲ್ಲಿರುವ ಹಿಲ್ಕೋಡ್ನಲ್ಲಿ ಒಂದು ಮೆನ್ಹಿರ್ ಪತ್ತೆಯಾಗಿದೆ. ಈ ನಿರ್ದಿಷ್ಟ ‘ನಿಲ್ಸ್ ಕಲ್’ ಸುಮಾರು 135 ಸೆಂ.ಮೀ ಎತ್ತರವಿದೆ.
- ಮಾವಿನಕೆರೆ ಮೆನ್ಹಿರ್: ಎರಡನೇ ಮೆನ್ಹಿರ್ ಕೆಂಚನೂರು ಗ್ರಾಮದ ಮಾವಿನಕೆರೆಯಲ್ಲಿ ಪತ್ತೆಯಾಗಿದೆ. ಇದು ಸುಮಾರು 112 ಸೆಂ.ಮೀ ಎತ್ತರವಿದ್ದು , ವಾಯುವ್ಯ ದಿಕ್ಕಿಗೆ ಸ್ವಲ್ಪ ವಾಲಿದಂತೆ ಕಂಡುಬರುತ್ತದೆ.
“ನಿಲ್ಸಕಲ್ಲು” ಎಂದರೇನು?
- ಭೂಮಿಯ ಮೇಲೆ ಲಂಭವಾಗಿ, ಸ್ವಲ್ಪ ವಾಲಿದಂತೆ ನಿಂತು ಬೃಹತ್ ಶಿಲಾಯುಗದ ಸಮಾಧಿಯ ಮೇಲೆ ಅಥವಾ ಸಮಾಧಿ ಸಮೀಪದಲ್ಲಿ ಮೃತರ ಸ್ಮರಣಾರ್ಥವಾಗಿ ನಿಲ್ಲಿಸಲಾದ ಒರಟಾದ ಬೃಹತ್ ಶಿಲೆಗಳನ್ನು ನಿಲ್ಸಕಲ್ಲು, ನಿಂತಿಕಲ್ಲು, ಗರ್ಭಿಣಿಕಲ್ಲು, ಆನೆಕಲ್ಲು, ರಕ್ಕಸಕಲ್ಲು ಹೆಸರುಗಳಿಂದ ಕರೆಯಲಾಗುತ್ತದೆ. ದಕ್ಷಿಣ ಭಾರತದೆಲ್ಲೆಡೆ ಇಂತಹ ಕಲ್ಲುಗಳು ಕಂಡುಬರುತ್ತವೆ.



ನಿಮ್ಮದೊಂದು ಉತ್ತರ