ಏಕ್ಯಾ ವನ : ದೇಶದ ಮೊದಲ ನಿಸರ್ಗ-ಪ್ರೇರಿತ ಶಾಲೆ
ಇದೀಗ ಸುದ್ದಿಯಲ್ಲಿದೆ:
- ಬೆಂಗಳೂರು ಮೂಲದ ‘ಏಕ್ಯಾ ವನ’ ಶಾಲೆಯು, ಭಾರತದ ಮೊಟ್ಟಮೊದಲ ನಿಸರ್ಗ-ಪ್ರೇರಿತ ಕೆ-12 ಶಾಲೆಯಾಗಿ ಹೊರಹೊಮ್ಮುವ ಮೂಲಕ ಸುದ್ದಿಯಲ್ಲಿದೆ.
ಏಕ್ಯಾ ವನ ಶಾಲೆಯ ಬಗ್ಗೆ:
- ಸ್ಥಳ : ಬೆಂಗಳೂರಿನ ಬನ್ನೇರುಘಟ್ಟ ಪ್ರದೇಶ.
- ಸ್ವರೂಪ: ಇದು ಒಂದು ನೂತನ ಹಾಗೂ ನಿರ್ದಿಷ್ಟ ಧ್ಯೇಯ-ಪ್ರೇರಿತ ಕೆ-12 ಮಾದರಿಯ ಶಾಲೆಯಾಗಿದೆ.
- ದೃಷ್ಟಿಕೋನ: ಇದು ಮುಖ್ಯವಾಗಿ ಸಂರಕ್ಷಣೆ, ಸುಸ್ಥಿರತೆ ಮತ್ತು ಪರಿಸರ ಸ್ನೇಹಿ ನಾವೀನ್ಯತೆಗೆ ಒತ್ತು ನೀಡುತ್ತದೆ.
- ವಿನ್ಯಾಸ: ವಿದ್ಯಾರ್ಥಿಗಳು ನಿಸರ್ಗದ ಮಡಿಲಲ್ಲಿ ಮತ್ತು ನಿಸರ್ಗದೊಂದಿಗೆ ಬೆರೆಯುತ್ತಾ ಕಲಿಯುವಂತಾಗಲು, ಈ ಶಾಲೆಯನ್ನು ಒಂದು “ಜೀವಂತ ಮತ್ತು ಕ್ರಿಯಾಶೀಲ ಜೀವಿ ಪರಿಸರ ವ್ಯವಸ್ಥೆ“ಯನ್ನಾಗಿ ರೂಪಿಸಲಾಗಿದೆ.
- ಧ್ಯೇಯ: ಹವಾಮಾನ ಬದಲಾವಣೆ ಮತ್ತು ಜೀವ ವೈವಿಧ್ಯದ ನಾಶದಂತಹ ಸಮಕಾಲೀನ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ಇದರ ಗುರಿಯಾಗಿದೆ. ಅವರನ್ನು ಸುಸ್ಥಿರತೆಯ ನಾವೀನ್ಯಕಾರರು, ಪ್ರತಿಪಾದಕರು ಮತ್ತು ನಾಯಕರನ್ನಾಗಿ ಸಬಲೀಕರಣಗೊಳಿಸುವುದು ಶಾಲೆಯ ಪ್ರಮುಖ ದೃಷ್ಟಿಕೋನವಾಗಿದೆ.
- ಸಲಹಾ ಮಂಡಳಿ: ಪ್ರಖ್ಯಾತ ಪರಿಸರವಾದಿಗಳು ಮತ್ತು ಉದ್ಯಮ ರಂಗದ ನಾಯಕರನ್ನೊಳಗೊಂಡ ವಿಶೇಷ ಸಲಹಾ ಮಂಡಳಿಯು ಈ ಉಪಕ್ರಮಕ್ಕೆ ಮಾರ್ಗದರ್ಶನ ನೀಡುತ್ತಿದೆ.
ಏಕ್ಯಾ ವನ ಶಾಲೆಯ ಪ್ರಮುಖ ಲಕ್ಷಣಗಳು:
-
- ನಿಸರ್ಗ ಆಧಾರಿತ ಕಲಿಕೆ: ಈ ಶಾಲೆಯ ಪಠ್ಯಕ್ರಮವು ಸಾಂಪ್ರದಾಯಿಕ ತರಗತಿ ಬೋಧನೆಯ ಸಹಿತ, ಹೊರಾಂಗಣ ತರಗತಿಗಳು, ಚಿಟ್ಟೆ ಮತ್ತು ಗಿಡಮೂಲಿಕೆ ಉದ್ಯಾನಗಳು, ಮಿಶ್ರಗೊಬ್ಬರ ಘಟಕಗಳು ಮತ್ತು ಪರಿಸರ ಪ್ರಯೋಗಾಲಯಗಳನ್ನು ಪ್ರಧಾನ ಕಲಿಕಾ ನೆಲೆಗಳಾಗಿ ಬಳಸಿಕೊಳ್ಳುತ್ತದೆ.
- ಪಠ್ಯಕ್ರಮದ ಮಾರ್ಗಗಳು: ಜಾಗತಿಕ ಸುಸ್ಥಿರತೆಯ ವಿಷಯಗಳನ್ನು ನೈಜ ಪ್ರಪಂಚದ ಕಲಿಕೆಯೊಂದಿಗೆ ಜೋಡಿಸಲು ನಾಲ್ಕು ಪ್ರಮುಖ ಶೈಕ್ಷಣಿಕ ಮಾರ್ಗಗಳನ್ನು ರೂಪಿಸಲಾಗಿದೆ:
- ಜನರು ಮತ್ತು ಗ್ರಹ
- ಭೂಮಿಯ ಆರೈಕೆ
- ಜೀವ ವ್ಯವಸ್ಥೆಗಳು
- ಶಕ್ತಿ ಮತ್ತು ನಾವೀನ್ಯತೆ
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (KPME) ಕಾಯಿದೆ, 2007
ಇದೀಗ ಸುದ್ದಿಯಲ್ಲಿದೆ:
- ಕರ್ನಾಟಕ ಸರ್ಕಾರವು ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (KPME) ಕಾಯಿದೆ, 2007’ ಕ್ಕೆ ಮಹತ್ವದ ತಿದ್ದುಪಡಿಗಳನ್ನು ಮಾಡಿದೆ.
ತಿದ್ದುಪಡಿಗಳ ಮುಖ್ಯಾಂಶಗಳು:
- ಉದ್ದೇಶ: ನಾಯಿ, ಇತರ ಪ್ರಾಣಿ ಮತ್ತು ಹಾವು ಕಡಿತಕ್ಕೆ ಒಳಗಾದ ಸಂತ್ರಸ್ತರಿಗೆ, ಸಮಯೋಚಿತ ಹಾಗೂ ಜೀವ ರಕ್ಷಕ ಚಿಕಿತ್ಸೆಯು ಲಭ್ಯವಾಗುವುದನ್ನು ಖಚಿತಪಡಿಸಲು ಅಸ್ತಿತ್ವದಲ್ಲಿರುವ ಕಾನೂನು ಉಪಬಂಧಗಳನ್ನು ಬಲಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
- ಹಿನ್ನೆಲೆ: ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ರೇಬೀಸ್ ನಿರೋಧಕ ಲಸಿಕೆ (ARV), ಇಮ್ಯುನೊಗ್ಲಾಬ್ಯುಲಿನ್ ಮತ್ತು ತುರ್ತು ಚಿಕಿತ್ಸಾ ಸೌಲಭ್ಯಗಳು ಏಕರೂಪವಾಗಿ ಲಭ್ಯವಿರಬೇಕೆಂದು ಕೋರಿ ದಾಖಲಾದ ಸ್ವಯಂಪ್ರೇರಿತ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು, ನವೆಂಬರ್ 7, 2025 ರಂದು ನೀಡಿದ ನಿರ್ದೇಶನಗಳನ್ನು ಪಾಲಿಸುವ ನಿಟ್ಟಿನಲ್ಲಿ ಈ ತಿದ್ದುಪಡಿಯನ್ನು ತರಲಾಗಿದೆ.
- ಕಡ್ಡಾಯ ಚಿಕಿತ್ಸೆ: ಕಾಯಿದೆಗೆ ಸೇರ್ಪಡೆಗೊಳಿಸಲಾದ ಹೊಸ ನಿಯಮದನ್ವಯ, ಹಾವು ಕಡಿತ ಅಥವಾ ನಾಯಿ/ಪ್ರಾಣಿ ಕಡಿತದ ಸಂತ್ರಸ್ತರಿಗೆ ಚಿಕಿತ್ಸೆ ನೀಡುವ ಮುನ್ನ ಮುಂಗಡ ಹಣ ಪಾವತಿಗೆ ಒತ್ತಾಯಿಸಬಾರದು. ಮತ್ತು ಪ್ರತಿಯೊಂದು ಖಾಸಗಿ ವೈದ್ಯಕೀಯ ಸಂಸ್ಥೆಯು ಸಂತ್ರಸ್ತರಿಗೆ ಅಗತ್ಯವಿರುವ ಪ್ರಥಮ ಚಿಕಿತ್ಸೆಯನ್ನು ನೀಡುವುದು ಕಡ್ಡಾಯವಾಗಿದೆ.



ನಿಮ್ಮದೊಂದು ಉತ್ತರ