ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KIA) ದಲ್ಲಿ ‘ಕಲಾಲೋಕ’ ಮಳಿಗೆ ಉದ್ಘಾಟನೆ
ಇದೀಗ ಸುದ್ದಿಯಲ್ಲಿದೆ:
- ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KIA) ದಲ್ಲಿ, ದೇಶೀಯ ಹಾಗೂ ವಿದೇಶಿ ಪ್ರಯಾಣಿಕರಿಗೆ ರಾಜ್ಯದ ಸಾಂಪ್ರದಾಯಿಕ ಮತ್ತು ಭೌಗೋಳಿಕ ಸೂಚ್ಯಂಕ (GI) ಮಾನ್ಯತೆ ಪಡೆದ ಉತ್ಪನ್ನಗಳನ್ನು ಪರಿಚಯಿಸುವ ಹಾಗೂ ಮಾರಾಟ ಮಾಡುವ ಉದ್ದೇಶದಿಂದ ‘ಕಲಾಲೋಕ’ ಮಳಿಗೆಯನ್ನು ಪ್ರಾರಂಭಿಸಲಾಗಿದೆ.
‘ಕಲಾಲೋಕ’ ಮಳಿಗೆಯ ವಿಶೇಷತೆಗಳು:
- ಸ್ಥಾಪನೆ: ರಾಜ್ಯದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವಂತೆ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ಈ ಮಳಿಗೆಯನ್ನು, ವಿಮಾನ ನಿಲ್ದಾಣದ ಟರ್ಮಿನಲ್-2 ರಲ್ಲಿ ರಾಜ್ಯ ಕೈಗಾರಿಕಾ ಇಲಾಖೆಯು ಸ್ಥಾಪಿಸಿದೆ.
- ಲಭ್ಯವಿರುವ ಉತ್ಪನ್ನಗಳು: ಇಲ್ಲಿ ಕರ್ನಾಟಕದ ಹೆಮ್ಮೆಯ ಪ್ರತೀಕಗಳಾದ ಮೈಸೂರು ಸ್ಯಾಂಡಲ್ ಸಾಬೂನು, ಶ್ರೀಗಂಧದ ಎಣ್ಣೆ, ಅಗರಬತ್ತಿಗಳು, ಮೈಸೂರು ರೇಷ್ಮೆ, ಚನ್ನಪಟ್ಟಣದ ಆಟಿಕೆಗಳು, ಲಿಡ್ಕರ್ ಚರ್ಮದ ವಸ್ತುಗಳು , ಸುಗಂಧಭರಿತ ಕಾಫಿ ಪುಡಿ ಮತ್ತು ಪಾನೀಯಗಳು, ಕೈಮಗ್ಗ ಉತ್ಪನ್ನಗಳು, ಇಳಕಲ್ ಸೀರೆಗಳು, ಲಂಬಾಣಿ ಕಸೂತಿ ವಸ್ತ್ರಗಳು, ಶ್ರೀಗಂಧದ ಕಲಾಕೃತಿಗಳು, ಬಿದರಿ ಕಲೆ ಮತ್ತು ಮೈಸೂರು ಶೈಲಿಯ ವರ್ಣಚಿತ್ರಗಳು ಲಭ್ಯವಿವೆ.
- ವ್ಯಾಪ್ತಿ: ಒಟ್ಟಾರೆಯಾಗಿ, ಕರ್ನಾಟಕದ 45 ಭೌಗೋಳಿಕ ಸೂಚ್ಯಂಕ ಪ್ರಮಾಣೀಕೃತ ಉತ್ಪನ್ನಗಳನ್ನು ಒಂದೇ ಸೂರಿನಡಿ ಪ್ರದರ್ಶನ ಮತ್ತು ಮಾರಾಟಕ್ಕೆ ಇರಿಸಲಾಗಿದೆ.
ದತ್ತು ಮಕ್ಕಳ ಸಂಖ್ಯೆ: ದೇಶದಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ
ಇದೀಗ ಸುದ್ದಿಯಲ್ಲಿದೆ:
- ಮಕ್ಕಳ ಸಂರಕ್ಷಣೆ ನಿರ್ದೇಶನಾಲಯದ ಅಧಿಕೃತ ದತ್ತಾಂಶಗಳ ಪ್ರಕಾರ, ದತ್ತು ಪ್ರಕ್ರಿಯೆಯ ಸಂಖ್ಯೆಯಲ್ಲಿ ಮಹಾರಾಷ್ಟ್ರ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ನಂತರ ಕರ್ನಾಟಕವು ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
- ರಾಜ್ಯದಲ್ಲಿ ಮಕ್ಕಳನ್ನು ದತ್ತು ಪಡೆಯಲು ಪೋಷಕರಿಂದ ಆಸಕ್ತಿ ಹೆಚ್ಚುತ್ತಿದ್ದರೂ, ದತ್ತು ನೀಡಲು ಲಭ್ಯವಿರುವ ಮಕ್ಕಳ ಕೊರತೆಯನ್ನು ಕರ್ನಾಟಕ ಎದುರಿಸುತ್ತಿದೆ.
ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (CARA) ದ ಬಗ್ಗೆ:
- ಕಾನೂನು ಸ್ಥಾನಮಾನ: ಇದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಒಂದು ಶಾಸನಬದ್ಧ ಸಂಸ್ಥೆಯಾಗಿ ಸ್ಥಾಪಿಸಲಾಗಿದೆ.
- ಕಾರ್ಯವ್ಯಾಪ್ತಿ: ಇದು ಭಾರತೀಯ ಮಕ್ಕಳ ದತ್ತು ಸ್ವೀಕಾರಕ್ಕೆ ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ದೇಶದೊಳಗಿನ ಮತ್ತು ಅಂತರ-ದೇಶೀಯ ದತ್ತು ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿಯಂತ್ರಿಸಲು ಇದಕ್ಕೆ ಸಚಿವಾಲಯವು ಆದೇಶ ನೀಡಿದೆ.
- ಅಂತರರಾಷ್ಟ್ರೀಯ ಮಾನ್ಯತೆ: 2003 ರಲ್ಲಿ ಭಾರತ ಸರ್ಕಾರವು ಅನುಮೋದಿಸಿದ, ಅಂತರ-ದೇಶೀಯ ದತ್ತು ಸ್ವೀಕಾರದ ಮೇಲಿನ 1993 ರ ಹೇಗ್ ಸಮಾವೇಶಗಳ ಅಡಿಯಲ್ಲಿ ವ್ಯವಹರಿಸಲು ಇದನ್ನು ‘ಕೇಂದ್ರ ಪ್ರಾಧಿಕಾರ’ವನ್ನಾಗಿ ನೇಮಿಸಲಾಗಿದೆ.
CARINGS ಪೋರ್ಟಲ್ (ಮಕ್ಕಳ ದತ್ತು ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ)
- ಆರಂಭ: 2011.
- ಮಹತ್ವ: ಇದು ಹೇಗ್ ಸಮಾವೇಶ, ಅಂತರರಾಷ್ಟ್ರೀಯ ಶಿಷ್ಟಾಚಾರಗಳು ಮತ್ತು ರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿ, ಪಾರದರ್ಶಕ ದತ್ತು ಪ್ರಕ್ರಿಯೆಗೆ ಏಕೈಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.



ನಿಮ್ಮದೊಂದು ಉತ್ತರ