ಸಂಪನ್ಮೂಲ ಕ್ರೂಢೀಕರಣ ಸಮಿತಿ (RMC) ಯ ವರದಿ

ಇದೀಗ ಸುದ್ದಿಯಲ್ಲಿದೆ:
- ಕರ್ನಾಟಕದ ಸಂಪನ್ಮೂಲ ಕ್ರೂಢೀಕರಣ ಸಮಿತಿಯು (RMC) ರಾಜ್ಯದ ರಾಜಸ್ವವನ್ನು (ಆದಾಯ) ಹೆಚ್ಚಿಸಲು ಸಮಗ್ರ ಸುಧಾರಣೆಗಳನ್ನು ಶಿಫಾರಸು ಮಾಡಲು, ನವೆಂಬರ್ 2025 ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು.
ಕರ್ನಾಟಕದ ಸಂಪನ್ಮೂಲ ಕ್ರೂಢೀಕರಣ ಸಮಿತಿ (RMC) ಯ ಬಗ್ಗೆ:
- ರಚನೆ – ಆಗಸ್ಟ್- 2024.
- ನೇತೃತ್ವ – ನಿವೃತ್ತ ಐಎಎಸ್ ಅಧಿಕಾರಿ ಕೆ.ಪಿ. ಕೃಷ್ಣನ್ ಅವರ ನೇತೃತ್ವದ ಸಮಿತಿ.
- ಕಾರ್ಯವ್ಯಾಪ್ತಿ – ಇದು ರಾಜ್ಯದ ರಾಜಸ್ವವನ್ನು ಹೆಚ್ಚಿಸಲು ಸಮಗ್ರ ಸುಧಾರಣೆಗಳನ್ನು ಶಿಫಾರಸು ಮಾಡುವ ಸರ್ಕಾರ ನೇಮಿಸಿದ ಸಮಿತಿಯಾಗಿದೆ.
ಪ್ರಮುಖ ಶಿಫಾರಸುಗಳು
- ಬಳಕೆದಾರರ ಶುಲ್ಕಗಳ ಹೆಚ್ಚಳ ಮತ್ತು ತರ್ಕಬದ್ಧಗೊಳಿಸುವಿಕೆ: ಸರ್ಕಾರಿ ಸೇವೆ ಮತ್ತು ಸೌಲಭ್ಯಗಳಿಗೆ ವಿಧಿಸುವ ಶುಲ್ಕಗಳನ್ನು ತರ್ಕಬದ್ಧಗೊಳಿಸುವುದು ಮತ್ತು ಹೆಚ್ಚಿಸುವುದು. ಸ್ವಯಂಚಾಲಿತ ಹಣದುಬ್ಬರ ಸೂಚ್ಯಂಕದೊಂದಿಗೆ ಕೂಡಿದ ಗಾತ್ರಾಧಾರಿತ ಶುಲ್ಕ ಪದ್ಧತಿಗೆ ಬದಲಾಗುವುದು.
- ತೆರಿಗೆ ಸುಧಾರಣೆಗಳು: ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ವಾಣಿಜ್ಯ ತೆರಿಗೆಗಳು ಹಾಗೂ ಅಬಕಾರಿ ಸುಂಕಗಳಂತಹ ಕೆಲವೇ ಮೂಲಗಳ ಮೇಲಿನ ರಾಜ್ಯದ ಅವಲಂಬನೆಯನ್ನು ಕಡಿಮೆ ಮಾಡಲು ತೆರಿಗೆ ಪದ್ಧತಿಯನ್ನು ಪುನಾರಚಿಸುವುದು.
- ಅಬಕಾರಿ ವ್ಯವಸ್ಥೆಯ ಆಧುನೀಕರಣ: ಅಬಕಾರಿ ವಲಯದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಹರಾಜು ಆಧಾರಿತ ಡಿಜಿಟಲ್ ಪರವಾನಗಿಯನ್ನು ಪರಿಚಯಿಸುವುದು.
- ಆಸ್ತಿ ನಗದೀಕರಣ: ಸರ್ಕಾರಿ ಆಸ್ತಿಗಳ ವೈಜ್ಞಾನಿಕ ಮೌಲ್ಯಮಾಪನ ನಡೆಸಿ, ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಅಡಿಯಲ್ಲಿ ಗುತ್ತಿಗೆ ನೀಡುವ ಮೂಲಕ ಆಸ್ತಿಗಳ ಮೌಲ್ಯವನ್ನು ವರ್ಧಿಸುವುದು.
- ಆಸ್ತಿ ನಿರ್ವಹಣೆಯನ್ನು ಬಲಪಡಿಸುವುದು: ಆಸ್ತಿ ದತ್ತಾಂಶ ನಿರ್ವಹಣೆಯನ್ನು ಸುಧಾರಿಸುವುದು ಮತ್ತು ಸರ್ಕಾರಿ ಆಸ್ತಿಗಳ ವ್ಯವಸ್ಥಿತ ಸಮೀಕ್ಷೆಗಳನ್ನು ನಡೆಸುವುದು.
- ಆರ್ಥಿಕ ನೀತಿ ವಿಭಾಗದ ಸ್ಥಾಪನೆ: ತೆರಿಗೆಯೇತರ ರಾಜಸ್ವವನ್ನು ಮೇಲ್ವಿಚಾರಣೆ ಮಾಡಲು ಮತ್ತು ಆಸ್ತಿ ನಗದೀಕರಣ ಉಪಕ್ರಮಗಳ ಉಸ್ತುವಾರಿ ನೋಡಿಕೊಳ್ಳಲು ಹಣಕಾಸು ಇಲಾಖೆಯ ಅಡಿಯಲ್ಲಿ ಪ್ರತ್ಯೇಕ ‘ಆರ್ಥಿಕ ನೀತಿ ವಿಭಾಗ’ವನ್ನು ಸ್ಥಾಪಿಸುವುದು.
- ನಗರ ಭೂಮಿ ನಗದೀಕರಣ: ರಾಜಸ್ವ ಸಂಗ್ರಹಣೆಯನ್ನು ಹೆಚ್ಚಿಸುವ ಕ್ರಮಗಳ ಭಾಗವಾಗಿ ‘ನಗರ ಭೂಮಿ ನಗದೀಕರಣ’ಕ್ಕೂ ಒತ್ತು ನೀಡಲಾಗಿದೆ.
ಕೃಷಿ ಮೇಳ, 2025

ಇದೀಗ ಸುದ್ದಿಯಲ್ಲಿದೆ:
- ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು, ನವೆಂಬರ್ 13 ರಿಂದ 16 ರವರೆಗೆ ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ‘ಕೃಷಿ ಮೇಳ 2025’ ಅನ್ನು ಆಯೋಜಿಸಿತ್ತು.
- 2025 ರ ಧ್ಯೇಯವಾಕ್ಯ: ‘ಸಮೃದ್ಧ ಕೃಷಿ – ವಿಕಸಿತ ಭಾರತ: ನೆಲ, ಜಲ, ಬೆಳೆ’.



ನಿಮ್ಮದೊಂದು ಉತ್ತರ