ಇಂಧನ ದಕ್ಷತೆ ಬ್ಯೂರೋ/ಕಛೇರಿ (BEE)ಯ 25ನೇ ಸಂಸ್ಥಾಪನಾ ದಿನ
ಪರಿಸರ
ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿಗೆ, ನವದೆಹಲಿಯ ‘ಭಾರತೀಯ ಆವಾಸ ಕೇಂದ್ರ’ದಲ್ಲಿ ‘ಇಂಧನ ದಕ್ಷತೆ ಬ್ಯೂರೋ’ದ (BEE) 25ನೇ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.
ಇಂಧನ ದಕ್ಷತೆ ಬ್ಯೂರೋ/ಕಛೇರಿ (BEE)ಯ ಬಗ್ಗೆ:
-
- ಇಂಧನ ಸಂರಕ್ಷಣಾ ಕಾಯ್ದೆ, 2001:- ಈ ಕಾಯ್ದೆಯ ಅನ್ವಯ 2002ರಲ್ಲಿ ಸ್ಥಾಪಿಸಲಾದ ಭಾರತದ ಒಂದು ಶಾಸನಬದ್ಧ ಸಂಸ್ಥೆಯಾಗಿದೆ.
- ಆಡಳಿತಾತ್ಮಕ ಸಚಿವಾಲಯ:- ಕೇಂದ್ರ ವಿದ್ಯುತ್ ಸಚಿವಾಲಯ.
- ಪ್ರಮುಖ ಉದ್ದೇಶ:- ಮಾರುಕಟ್ಟೆ ಆಧಾರಿತ ಉಪಕ್ರಮಗಳು ಮತ್ತು ಸ್ವಯಂ-ನಿಯಂತ್ರಣದ ಮೂಲಕ ಭಾರತೀಯ ಆರ್ಥಿಕತೆಯ ‘ಇಂಧನ ತೀವ್ರತೆ’ಯನ್ನು ತಗ್ಗಿಸುವುದು.
BEE ಯ ಪ್ರಮುಖ ಕಾರ್ಯಕ್ರಮಗಳು ಮತ್ತು ಉಪಕ್ರಮಗಳು:
- ಮಾನದಂಡಗಳು ಮತ್ತು ಗುರುತು ಅಂಟಿಸುವ ಪ್ರಕ್ರಿಯೆ (ಲೇಬಲಿಂಗ್) ಯೋಜನೆ:- ಗ್ರಾಹಕರಿಗೆ ಗೃಹೋಪಯೋಗಿ ಉಪಕರಣಗಳ (ಉದಾಹರಣೆಗೆ: ರೆಫ್ರಿಜರೇಟರ್, ಎಸಿ) ಇಂಧನ ದಕ್ಷತೆ ಮತ್ತು ವಿದ್ಯುತ್ ಉಳಿತಾಯದ ಸಾಮರ್ಥ್ಯದ ಬಗ್ಗೆ ಮಾಹಿತಿ ನೀಡಲು, ಈ ಯೋಜನೆಯು ಉತ್ಪನ್ನಗಳ ಮೇಲೆ ‘ಸ್ಟಾರ್-ರೇಟಿಂಗ್’ ಲೇಬಲ್‌ಗಳನ್ನು ಒದಗಿಸುತ್ತದೆ.
- ಕಾರ್ಯನಿರ್ವಹಣೆ, ಸಾಧನೆ ಮತ್ತು ವಹಿವಾಟು (PAT):- ಇದು ‘ವರ್ಧಿತ ಇಂಧನ ದಕ್ಷತೆಗಾಗಿನ ರಾಷ್ಟ್ರೀಯ ಅಭಿಯಾನ’ (NMEEE) ಅಡಿಯಲ್ಲಿ ಜಾರಿಗೆ ತರಲಾದ ಮಾರುಕಟ್ಟೆ-ಆಧಾರಿತ ಕಾರ್ಯವಿಧಾನವಾಗಿದೆ. ಇಂಧನವನ್ನು ಅತಿ ಹೆಚ್ಚು ಬಳಸುವ ಬೃಹತ್ ಕೈಗಾರಿಕೆಗಳು ತಮ್ಮ ಇಂಧನ ದಕ್ಷತೆಯ ಗುರಿಗಳನ್ನು ತಲುಪಲು ಇದು ಪ್ರೋತ್ಸಾಹ ನೀಡುತ್ತದೆ.
- ಇಂಧನ ಸಂರಕ್ಷಣಾ ಕಟ್ಟಡ ಸಂಹಿತೆಗಳು (ECBC):- ಇಂಧನ ದಕ್ಷತೆಯನ್ನು ಹೊಂದಿರುವ ಪರಿಸರಸ್ನೇಹಿ ಕಟ್ಟಡಗಳ ವಿನ್ಯಾಸಕ್ಕಾಗಿ ಇದು ಮಾರ್ಗಸೂಚಿಗಳನ್ನು ಒದಗಿಸುತ್ತದೆ.
- ಕೈಗಾರಿಕೆಗಳು ಮತ್ತು ಸಂಸ್ಥೆಗಳಲ್ಲಿ ಇಂಧನ ದಕ್ಷ ತಂತ್ರಜ್ಞಾನಗಳ ಅಳವಡಿಕೆಗೆ ನೆರವು (ADEETIE) ಯೋಜನೆ:- ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ (MSME) ಇಂಧನ-ದಕ್ಷ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಅಗತ್ಯವಿರುವ ತಾಂತ್ರಿಕ ಹಾಗೂ ಹಣಕಾಸಿನ ನೆರವನ್ನು ಈ ಯೋಜನೆಯು ನೀಡುತ್ತದೆ.
- ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿಗಳು (NECA):- ಇಂಧನ ದಕ್ಷತೆ ಮತ್ತು ಸಂರಕ್ಷಣಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಸಂಸ್ಥೆಗಳನ್ನು ಗುರುತಿಸಿ ನೀಡುವ ವಾರ್ಷಿಕ ಪುರಸ್ಕಾರವಾಗಿದೆ.
ಅಕ್ಕಿ ಪೋಷಕಾಂಶ ಬಲವರ್ಧನೆ ಯೋಜನೆ ಸ್ಥಗಿತ
ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
- ಅನುಷ್ಠಾನದ ಪರಾಮರ್ಶೆಯ ನಂತರ, ಭಾರತ ಸರ್ಕಾರವು ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ (PMGKAY) ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಅಕ್ಕಿ ಪೋಷಕಾಂಶ ಬಲವರ್ಧನೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY)ಯ ಬಗ್ಗೆ:
- ಪ್ರಾರಂಭ:- ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಪರಿಹಾರ ಪ್ಯಾಕೇಜ್‌ನ ಭಾಗವಾಗಿ ಘೋಷಿಸಲಾಯಿತು.
- ಮುಖ್ಯ ಗುರಿ:- ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಬಡವರು ಮತ್ತು ಅಗತ್ಯವಿರುವವರಿಗೆ ಪೂರಕ ಆಹಾರ ಧಾನ್ಯಗಳನ್ನು ಒದಗಿಸುವುದು.
- ಅನುಷ್ಠಾನ ಸಚಿವಾಲಯ:- ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಡಿಯಲ್ಲಿರುವ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ.
- ಫಲಾನುಭವಿಗಳು:- ಈ ಯೋಜನೆಯಡಿ ಸುಮಾರು 80 ಕೋಟಿ ಫಲಾನುಭವಿಗಳು ಉಚಿತ ಆಹಾರ ಧಾನ್ಯಗಳನ್ನು ಪಡೆಯಲು ಅರ್ಹರಾಗಿದ್ದಾರೆ.
‘ಆಹಾರ ಪೋಷಕಾಂಶ ಬಲವರ್ಧನೆ’ಯ ಬಗ್ಗೆ:
- ವ್ಯಾಖ್ಯಾನ:- ಆಹಾರ ಪೋಷಕಾಂಶ ಬಲವರ್ಧನೆಯು ಆಹಾರದಲ್ಲಿ ಒಂದು ಅಥವಾ ಹೆಚ್ಚಿನ ಸೂಕ್ಷ್ಮ ಪೋಷಕಾಂಶಗಳ (ಜೀವಸತ್ವಗಳು ಮತ್ತು ಖನಿಜಗಳು) ಪ್ರಮಾಣವನ್ನು ಹೆಚ್ಚಿಸುವ ವೈಜ್ಞಾನಿಕ ವಿಧಾನವಾಗಿದೆ.
- ಮಹತ್ವ:- ಇದು ಆಹಾರದ ಪೌಷ್ಟಿಕಾಂಶದ ಗುಣಮಟ್ಟವನ್ನು ಸುಧಾರಿಸಲು ಮತ್ತು ಕನಿಷ್ಠ ಆರೋಗ್ಯದ ಅಪಾಯದೊಂದಿಗೆ ಸಾರ್ವಜನಿಕ ಆರೋಗ್ಯದ ಪ್ರಯೋಜನಗಳನ್ನು ಒದಗಿಸಲು ಸಹಕಾರಿಯಾಗಿದೆ.
- ಅಕ್ಕಿ ಪೋಷಕಾಂಶ ಬಲವರ್ಧನೆ:- ಇದು ಅಕ್ಕಿಗೆ ಕಬ್ಬಿಣಾಂಶ, ಫೋಲಿಕ್ ಆಮ್ಲ ಮತ್ತು ವಿಟಮಿನ್ ಬಿ 12 ನಂತಹ ಸೂಕ್ಷ್ಮ ಪೋಷಕಾಂಶಗಳ ಸೇರ್ಪಡೆಯನ್ನು ಒಳಗೊಂಡಿದೆ.
- ಹಾಲಿನ ಪೋಷಕಾಂಶ ಬಲವರ್ಧನೆ:- ಇದು ಹಾಲಿಗೆ ವಿಟಮಿನ್ ಎ ಮತ್ತು ಡಿ ಸೇರಿಸುವ ಪ್ರಕ್ರಿಯೆಯಾಗಿದ್ದು, ಈ ಜೀವಸತ್ವಗಳ ಕೊರತೆಯಿಂದ ಉಂಟಾಗುವ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
- ಉಪ್ಪಿನ ಪೋಷಕಾಂಶ ಬಲವರ್ಧನೆ:- ಅಯೋಡಿನ್ ಕೊರತೆಯಿಂದ ಬರುವ ಕಾಯಿಲೆಗಳನ್ನು ತಡೆಗಟ್ಟಲು ಉಪ್ಪಿಗೆ ಅಯೋಡಿನ್ ಸೇರಿಸುವ (ಅಯೋಡೀಕರಿಸಿದ ಉಪ್ಪು) ಪ್ರಕ್ರಿಯೆಯನ್ನು ಇದು ಒಳಗೊಂಡಿದೆ.
ವಿಶ್ವ ಸ್ಥೂಲತೆ ಅಟ್ಲಾಸ್, 2026
ಆರೋಗ್ಯ
ಇದೀಗ ಸುದ್ದಿಯಲ್ಲಿದೆ:
- ಮಾರ್ಚ್ 4 ವಿಶ್ವ ಸ್ಥೂಲತೆಯ ದಿನದಂದು ‘ವಿಶ್ವ ಸ್ಥೂಲತೆಯ ಒಕ್ಕೂಟ’ ಪ್ರಕಟಿಸಿ ಬಿಡುಗಡೆಗೊಳಿಸಿದ ‘ವಿಶ್ವ ಸ್ಥೂಲತೆ ಅಟ್ಲಾಸ್, 2026’ ವರದಿಯ ಪ್ರಕಾರ, ಅತಿಯಾದ ತೂಕ ಅಥವಾ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಭಾರತವು ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ.
‘ವಿಶ್ವ ಸ್ಥೂಲತೆ ಅಟ್ಲಾಸ್’ನ ಬಗ್ಗೆ:
- ಪ್ರಕಟಿಸಿ ಬಿಡುಗಡೆಗೊಳಿಸುವವರು:- ವಿಶ್ವ ಸ್ಥೂಲತೆಯ ಒಕ್ಕೂಟ
- ಇದು ಸ್ಥೂಲತೆಯ ಪ್ರವೃತ್ತಿಗಳು ಮತ್ತು ಅದಕ್ಕೆ ಸಂಬಂಧಿಸಿದ ಆರೋಗ್ಯದ ಅಪಾಯಗಳ ಕುರಿತು ಜಾಗತಿಕ ದತ್ತಾಂಶ, ಮುನ್ಸೂಚನೆಗಳು ಹಾಗೂ ನೀತಿ ಸಂಬಂಧಿತ ಒಳನೋಟಗಳನ್ನು ಒದಗಿಸುತ್ತದೆ.
- 2025ರ ವೇಳೆಗೆ ಬಾಲ್ಯದ ಸ್ಥೂಲತೆಯ ಏರಿಕೆಯನ್ನು ತಡೆಯುವ ಜಾಗತಿಕ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ ಎಂದು ವರದಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ, ಈ ಗುರಿ ಸಾಧನೆಯ ಕಾಲಮಿತಿಯನ್ನು ಈಗ 2030ರವರೆಗೆ ವಿಸ್ತರಿಸಲಾಗಿದೆ.
ಸರ್ಕಾರದ ಉಪಕ್ರಮಗಳು:
- ಪೋಷಣ್ ಅಭಿಯಾನ (ರಾಷ್ಟ್ರೀಯ ಪೌಷ್ಟಿಕಾಂಶ ಅಭಿಯಾನ):- ವಿವಿಧ ಪೌಷ್ಟಿಕಾಂಶ ಸಂಬಂಧಿತ ಯೋಜನೆಗಳ ಸಮನ್ವಯದ ಮೂಲಕ ಮಕ್ಕಳು, ಕಿಶೋರಿಯರು ಮತ್ತು ಮಹಿಳೆಯರ ಪೌಷ್ಟಿಕಾಂಶದ ಮಟ್ಟವನ್ನು ಸುಧಾರಿಸುವತ್ತ ಇದು ಗಮನ ಹರಿಸುತ್ತದೆ.
- ಫಿಟ್ ಇಂಡಿಯಾ ಅಭಿಯಾನ:- ನಾಗರಿಕರಲ್ಲಿ ದೈಹಿಕ ಚಟುವಟಿಕೆ, ಸದೃಢತೆಯ ಸಂಸ್ಕೃತಿ ಮತ್ತು ಜೀವನಶೈಲಿಯಲ್ಲಿ ನಡವಳಿಕೆಯ ಬದಲಾವಣೆಯನ್ನು ಉತ್ತೇಜಿಸಲು ಈ ಅಭಿಯಾನವನ್ನು ಪ್ರಾರಂಭಿಸಲಾಗಿದೆ.
- ಈಟ್ ರೈಟ್ ಇಂಡಿಯಾ ಅಭಿಯಾನ:- ಇದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಉಪಕ್ರಮವಾಗಿದ್ದು, ಆರೋಗ್ಯಕರ ಆಹಾರ ಕ್ರಮ, ಆಹಾರ ಸುರಕ್ಷತೆ ಮತ್ತು ಅನಾರೋಗ್ಯಕರ ಆಹಾರ ಸೇವನೆಯನ್ನು ತಗ್ಗಿಸಲು ಜನರನ್ನು ಪ್ರೇರೇಪಿಸುತ್ತದೆ.
- ಶಾಲಾ ಆರೋಗ್ಯ ಮತ್ತು ಸ್ವಾಸ್ಥ್ಯ ಕಾರ್ಯಕ್ರಮ:- ಶಾಲಾ ವಿದ್ಯಾರ್ಥಿಗಳಲ್ಲಿ ಆರೋಗ್ಯ ಶಿಕ್ಷಣ, ದೈಹಿಕ ಚಟುವಟಿಕೆ ಮತ್ತು ಆರೋಗ್ಯಕರ ಜೀವನಶೈಲಿಯ ಕುರಿತು ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.



ನಿಮ್ಮದೊಂದು ಉತ್ತರ