ಅಮೆರಿಕ -ಇಸ್ರೇಲ್-ಇರಾನ್ ಯುದ್ಧ
ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
- ಅಮೆರಿಕದ ‘ಆಪರೇಷನ್ ಎಪಿಕ್ ಫ್ಯೂರಿ’ ಮತ್ತು ಇಸ್ರೇಲ್‌ನ ‘ಆಪರೇಷನ್ ರೋರಿಂಗ್ ಲಯನ್’ ಕಾರ್ಯಾಚರಣೆಗಳ ಬೆನ್ನಲ್ಲೇ, ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಮರಣವು ದೃಢಪಟ್ಟಿದೆ. ಈ ಘಟನೆಯು ಆ ಭಾಗದ ಭೂ-ರಾಜಕೀಯ ಚಿತ್ರಣವನ್ನು ಮೂಲಭೂತವಾಗಿ ಬದಲಿಸಿದೆ.
- ಇರಾನ್ ತನ್ನ ‘ಆಪರೇಷನ್ ಟ್ರೂ ಪ್ರಾಮಿಸ್ 4’ ರ ಮೂಲಕ ಇಸ್ರೇಲ್ ಮತ್ತು ನೆರೆಯ ಗಲ್ಫ್ ರಾಷ್ಟ್ರಗಳ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸುವ ಮೂಲಕ ಪ್ರತಿಕಾರವನ್ನು ತೀರಿಸಿಕೊಂಡಿದೆ.
- ಬಹ್ರೇನ್, ಕತಾರ್, ಯುಎಇ (UAE), ಕುವೈತ್ ಮತ್ತು ಜೋರ್ಡಾನ್‌ನಲ್ಲಿರುವ ಅಮೇರಿಕಾ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ಮಾಡಿದೆ.
- ತೈಲ ಸಾಗಣೆಯ ನೌಕೆಗಳ ಮೇಲೆ ದಾಳಿ ಹಾಗೂ ಬೆದರಿಕೆ ಹಾಕುವ ಮೂಲಕ ಇರಾನ್ ಹೋರ್ಮುಜ್ ಜಲಸಂಧಿಯನ್ನು ಪರಿಣಾಮಕಾರಿಯಾಗಿ ಸ್ಥಗಿತಗೊಳಿಸಿದೆ. ಇದರಿಂದಾಗಿ ಹಡಗು ಸಂಚಾರ ಶೇ. 70ರಷ್ಟು ಕುಸಿದಿದ್ದು, ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ.
ಪ್ರಸ್ತುತ ಉದ್ವಿಗ್ನತೆಯ ಐತಿಹಾಸಿಕ ಹಿನ್ನೆಲೆ:
- ದೀರ್ಘಕಾಲದ ಹಗೆತನ ಮತ್ತು ಸೈದ್ಧಾಂತಿಕ ಸಂಘರ್ಷ:- 1979ರ ಇಸ್ಲಾಮಿಕ್ ಕ್ರಾಂತಿಯ ನಂತರ, ಅಮೆರಿಕ ಮತ್ತು ಇರಾನ್ ನಡುವೆ ‘ಶೀತಲ ಸಮರ’ದಂತಹ ವಾತಾವರಣ ನಿರ್ಮಾಣವಾಗಿದೆ. ಕಠಿಣ ಆರ್ಥಿಕ ನಿರ್ಬಂಧಗಳು ಮತ್ತು ಇರಾನ್ ಅನ್ನು ‘ಭಯೋತ್ಪಾದನೆಯ ಪ್ರಾಯೋಜಕ ರಾಷ್ಟ್ರ’ ಎಂದು ಹಣೆಪಟ್ಟಿ ಹಚ್ಚಿರುವುದು ಉಭಯ ದೇಶಗಳ ಸಂಬಂಧವನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.
- 2015ರ ಪರಮಾಣು ಒಪ್ಪಂದದ (JCPOA) ವೈಫಲ್ಯ:- 2015ರ ಪರಮಾಣು ಒಪ್ಪಂದದಿಂದ 2018ರಲ್ಲಿ ಅಮೆರಿಕ ಹಿಂದೆ ಸರಿದಿದ್ದು, ಇರಾನ್ ಮೇಲೆ ‘ಹೆಚ್ಚಿನ ಒತ್ತಡ’ ಹೇರುವ ಅಭಿಯಾನಕ್ಕೆ ನಾಂದಿ ಹಾಡಿತು.
- ಇದಕ್ಕೆ ಪ್ರತಿಯಾಗಿ ಇರಾನ್ ಹಂತಹಂತವಾಗಿ ಯುರೇನಿಯಂ ಪುಷ್ಟೀಕರಣದ ಮಿತಿಗಳನ್ನು ಉಲ್ಲಂಘಿಸಿತು.
- ಇದರಿಂದಾಗಿ ಇರಾನ್‌ನ ಪರಮಾಣು ಸನ್ನದ್ಧತೆಯು ಅಮೆರಿಕ ಮತ್ತು ಇಸ್ರೇಲ್‌ಗೆ ಅಸ್ತಿತ್ವದ ಭೀತಿಯಾಗಿ ಪರಿಣಮಿಸಿತು.
- ಇದನ್ನು ಕೇವಲ ರಾಜತಾಂತ್ರಿಕತೆಯಿಂದ ನಿಯಂತ್ರಿಸಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಎರಡೂ ರಾಷ್ಟ್ರಗಳು ಬಂದವು.
- ‘ಗ್ರೇ ಝೋನ್’ ಮತ್ತು ಛಾಯಾ ಯುದ್ಧ (ಪ್ರಾಕ್ಸಿ ವಾರ್):- ಹಲವು ವರ್ಷಗಳಿಂದ ಈ ಸಂಘರ್ಷವು ತೆರೆಯ ಮರೆಯಲ್ಲಿ ಛಾಯಾ ಯುದ್ಧದಂತೆ ನಡೆಯುತ್ತಿದೆ. ಇರಾನ್ ತನ್ನ ‘ಆಕ್ಸಿಸ್ ಆಫ್ ರೆಸಿಸ್ಟೆನ್ಸ್’ (ಹಮಾಸ್, ಹೆಜ್ಬೊಲ್ಲಾ ಮತ್ತು ಹೌತಿ ಬಂಡುಕೋರರು) ಸಂಘಟನೆಗಳ ಮೂಲಕ ಲೆಬನಾನ್, ಸಿರಿಯಾ, ಇರಾಕ್ ಮತ್ತು ಯೆಮೆನ್‌ಗಳಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಿದೆ.
ಜಾಗತಿಕ ಪರಿಣಾಮಗಳು:
- ಇಂಧನ ಆಘಾತ ಮತ್ತು ಹಣದುಬ್ಬರ:- ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ನಿಯಂತ್ರಣ ಮೀರಿ ಏರಿಕೆಯಾಗುವ ಸಾಧ್ಯತೆಯಿದೆ. ಇದರಿಂದಾಗಿ ಸಾರಿಗೆ ವೆಚ್ಚ ಮತ್ತು ವಿಮಾ ಕಂತುಗಳ ದರಗಳಲ್ಲಿ ಭಾರಿ ಏರಿಕೆಯಾಗಲಿದೆ.
- ಜಾಗತಿಕ ಆರ್ಥಿಕ ಕುಸಿತದ ಭೀತಿ:- ವಿಶ್ವದ ಆರ್ಥಿಕತೆಯು ಕಡಿಮೆ ಬೆಳವಣಿಗೆ ಮತ್ತು ಅಧಿಕ ಹಣದುಬ್ಬರವಿರುವ ‘ಆರ್ಥಿಕ ಸ್ಥಗಿತದೊಂದಿಗಿನ ಹಣದುಬ್ಬರ’ (ಸ್ಟಾಗ್ಫ್ಲೇಷನ್) ಸ್ಥಿತಿಗೆ ತಲುಪುವ ಅಪಾಯವಿದೆ.
- ಜಾಗತಿಕ ಪೂರೈಕೆ ಸರಪಳಿಯ ವ್ಯತ್ಯಯ:- ಯುದ್ಧದ ಸನ್ನಿವೇಶವು ತೈಲ, ಎಲ್‌ಎನ್‌ಜಿ (LNG), ರಸಗೊಬ್ಬರ ಮತ್ತು ತೈಲ-ರಾಸಾಯನಿಕಗಳ ಪೂರೈಕೆಯ ಮೇಲೆ ತೀವ್ರವಾದ ಕೆಟ್ಟ ಪರಿಣಾಮ ಬೀರಲಿದೆ. ಹಡಗುಗಳು ಸುರಕ್ಷಿತ ಸಂಚಾರಕ್ಕಾಗಿ ದೀರ್ಘ ಮಾರ್ಗಗಳನ್ನು ಅವಲಂಬಿಸಬೇಕಾಗಿರುವುದರಿಂದ ಸರಕು ಸಾಗಣೆ ವೆಚ್ಚ ಗಣನೀಯವಾಗಿ ಹೆಚ್ಚಾಗಲಿದೆ.
- ಚೀನಾ ಮತ್ತು ರಷ್ಯಾದ ಪಾತ್ರ:- ಚೀನಾ, ಇರಾನ್‌ನಿಂದ ಅತ್ಯಂತ ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳುವ ದೇಶವಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗುವುದರಿಂದ ರಷ್ಯಾ ಹೆಚ್ಚಿನ ಆರ್ಥಿಕ ಲಾಭವನ್ನು ಗಳಿಸುವ ಸಾಧ್ಯತೆಯಿದೆ.
ಭಾರತದ ಮೇಲಾಗುವ ಪರಿಣಾಮಗಳು:
-
- ಇಂಧನ ಹಣದುಬ್ಬರ:- ಭಾರತವು ತನ್ನ ಒಟ್ಟು ಕಚ್ಚಾ ತೈಲದ ಅವಶ್ಯಕತೆಯಲ್ಲಿ ಶೇ. 85ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಯುದ್ಧದ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ತೈಲ ಬೆಲೆಗಳು ಮತ್ತು ಹಡಗುಗಳ ಮೇಲಿನ ಸಮರ ಶುಲ್ಕವು ರೂಪಾಯಿ ಮೌಲ್ಯದ ಮೇಲೆ ತೀವ್ರ ಒತ್ತಡ ಹೇರುತ್ತಿವೆ.
- ಪ್ರಜೆಗಳ ಸುರಕ್ಷತೆ:- ಗಲ್ಫ್ ರಾಷ್ಟ್ರಗಳಲ್ಲಿ ಸುಮಾರು 8-9 ದಶಲಕ್ಷ ಭಾರತೀಯರು ವಾಸಿಸುತ್ತಿದ್ದಾರೆ. ಆ ಭಾಗದಲ್ಲಿ ವಾಣಿಜ್ಯ ವಿಮಾನ ಸಂಚಾರ ಸ್ಥಗಿತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಪ್ರಜೆಗಳನ್ನು ಸುರಕ್ಷಿತವಾಗಿ ಕರೆತರುವ ಕುರಿತು ಕೇಂದ್ರ ಸಚಿವ ಸಂಪುಟದ ಭದ್ರತಾ ಸಮಿತಿಯು (CCS) ಚರ್ಚೆ ನಡೆಸಿದೆ.
- ವ್ಯಾಪಾರ ವ್ಯತ್ಯಯ:- ಕಡಲ ಮಾರ್ಗದ ಅಸುರಕ್ಷತೆಯಿಂದಾಗಿ ಕೃಷಿ ಉತ್ಪನ್ನಗಳ ರಫ್ತು ಮತ್ತು ಅಗತ್ಯ ರಸಗೊಬ್ಬರಗಳ ಆಮದಿಗೆ ತೀವ್ರ ಅಡೆತಡೆಗಳು ಉಂಟಾಗಿವೆ.
- ತಂತ್ರೋಪಾಯದ ಸಂಪರ್ಕಗಳು:- ಮಧ್ಯ ಏಷ್ಯಾವನ್ನು ಸಂಪರ್ಕಿಸುವ ಚಾಬಹಾರ್ ಬಂದರು, I2U2 (ಭಾರತ-ಇಸ್ರೇಲ್-ಯು ಎ ಇ-ಅಮೇರಿಕ) ಒಕ್ಕೂಟ, IMEC (ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಸಂಚಾರ ಮಾರ್ಗ) ಮತ್ತು “ಗಲ್ಫ್ ಪಾರ್ಟ್ನರ್ಷಿಪ್” (ಸೌದಿ ಅರೇಬಿಯಾ, ಯು ಎ ಇ)ಗಳ ಮೇಲೆ ಈ ಯುದ್ಧವು ಪ್ರತಿಕೂಲ ಪರಿಣಾಮ ಬೀರಿದ್ದು, ಈ ಯೋಜನೆಗಳ ಭವಿಷ್ಯದ ಮೇಲೆ ತೀವ್ರ ಅನಿಶ್ಚಿತತೆ ಮೂಡಿಸಿದೆ.
|
ಗ್ರೇ ಝೋನ್ (Gray Zone) ಎಂದರೇನು?
ಛಾಯಾ ಯುದ್ಧ (Proxy Warfare) ಎಂದರೇನು?
|
ಪಶ್ಚಿಮ ಏಷ್ಯಾ (ಮಧ್ಯಪ್ರಾಚ್ಯ)ದ ಬಗ್ಗೆ:

-
- ಏಷ್ಯಾ ಖಂಡದ ಒಂದು ಪ್ರಮುಖ ಭಾಗವಾಗಿದೆ:- ಇದು ಪಶ್ಚಿಮಕ್ಕೆ ಯುರೋಪ್, ಉತ್ತರಕ್ಕೆ ಮಧ್ಯ ಏಷ್ಯಾ, ಪೂರ್ವಕ್ಕೆ ದಕ್ಷಿಣ ಏಷ್ಯಾ ಮತ್ತು ದಕ್ಷಿಣಕ್ಕೆ ಆಫ್ರಿಕಾ ಹಾಗೂ ಅರಬ್ಬೀ ಸಮುದ್ರದಿಂದ ಆವೃತವಾಗಿದೆ.
- ಪಶ್ಚಿಮ ಏಷ್ಯಾ ಪ್ರದೇಶವು ಪ್ರಮುಖವಾಗಿ ಈ ರಾಷ್ಟ್ರಗಳನ್ನು ಒಳಗೊಂಡಿದೆ:
- ಅರ್ಮೇನಿಯಾ, ಅಜರ್ಬೈಜಾನ್, ಬಹ್ರೇನ್, ಸೈಪ್ರಸ್, ಜಾರ್ಜಿಯಾ, ಇರಾಕ್, ಇಸ್ರೇಲ್, ಜೋರ್ಡಾನ್, ಕುವೈತ್, ಲೆಬನಾನ್, ಇರಾನ್, ಓಮನ್, ಪ್ಯಾಲೆಸ್ಟೈನ್, ಕತಾರ್, ಸೌದಿ ಅರೇಬಿಯಾ, ಸಿರಿಯಾ, ಟರ್ಕಿ, ಯುಎಇ (UAE) ಮತ್ತು ಯೆಮೆನ್.
- ಈ ಪ್ರದೇಶವು ಈ ಕೆಳಗಿನ ಕಾರಣಗಳಿಗಾಗಿ ಕಾರ್ಯತಂತ್ರದ ಮಹತ್ವವನ್ನು ಹೊಂದಿದೆ:
-
- ಇಂಧನ ಸಂಪನ್ಮೂಲ:- ತೈಲ ಮತ್ತು ಅನಿಲದಂತಹ ಅಪಾರ ಇಂಧನ ಸಂಪನ್ಮೂಲಗಳನ್ನು ಇದು ಹೊಂದಿದೆ.
- ಪ್ರಮುಖ ಕಿರಿದಾದ ಜಲಮಾರ್ಗಗಳು (Chokepoints):- ಹೋರ್ಮುಜ್ ಜಲಸಂಧಿ, ಬಾಬ್-ಎಲ್-ಮಂಡೇಬ್ ಮತ್ತು ಸೂಯೆಜ್ ಕಾಲುವೆಗಳು ಇಲ್ಲಿವೆ.
- ಧಾರ್ಮಿಕ ಕೇಂದ್ರಗಳನ್ನು ಒಳಗೊಂಡಿದೆ:- ಜೆರುಸಲೇಮ್, ಮೆಕ್ಕಾ ಮತ್ತು ಮದೀನಾ.
- ಭೂ- ಕಾರ್ಯತಂತ್ರದ ಸ್ಥಾನ:- ಏಷ್ಯಾ, ಆಫ್ರಿಕಾ ಮತ್ತು ಯುರೋಪ್ ಖಂಡಗಳನ್ನು ಬೆಸೆಯುವ ಭೌಗೋಳಿಕ ಮತ್ತು ಕಾರ್ಯತಂತ್ರದ ಸ್ಥಾನದಲ್ಲಿದೆ.
- ಪ್ರಮುಖ ಬಾಹ್ಯ ಶಕ್ತಿಗಳ ಹಸ್ತಕ್ಷೇಪ:- ಅಮೆರಿಕ , ರಷ್ಯಾ ಮತ್ತು ಚೀನಾದಂತಹ ಪ್ರಮುಖ ಬಾಹ್ಯ ಶಕ್ತಿಗಳ ಹಸ್ತಕ್ಷೇಪವನ್ನು ಹೊಂದಿದೆ.
- ತೀವ್ರ ಸ್ವರೂಪದ ರಚನಾತ್ಮಕ ಸ್ಥಿತ್ಯಂತರಕ್ಕೆ ಸಾಕ್ಷಿ:- ಪ್ರಸ್ತುತ ಈ ಪ್ರದೇಶವು ಅಧಿಕಾರದ ಮರುಹೊಂದಾಣಿಕೆ, ಪರೋಕ್ಷ ಯುದ್ಧಗಳು ಮತ್ತು ತಂತ್ರೋಪಾಯದ ಪೈಪೋಟಿಗಳಿಂದಾಗಿ ತೀವ್ರ ಸ್ವರೂಪದ ರಚನಾತ್ಮಕ ಸ್ಥಿತ್ಯಂತರಕ್ಕೆ ಸಾಕ್ಷಿಯಾಗುತ್ತಿದೆ.
ಹೋರ್ಮುಜ್ ಜಲಸಂಧಿಯ ಬಗ್ಗೆ:

- ಭೌಗೋಳಿಕ ಸ್ಥಾನ:- ಹೋರ್ಮುಜ್ ಜಲಸಂಧಿಯು ಉತ್ತರಕ್ಕೆ ಇರಾನ್ ಮತ್ತು ದಕ್ಷಿಣಕ್ಕೆ ಓಮನ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ರಾಷ್ಟ್ರಗಳ ನಡುವೆ ವ್ಯಾಪಿಸಿದೆ.
- ಈ ಜಲಸಂಧಿಯು ಪರ್ಷಿಯನ್ ಕೊಲ್ಲಿಯನ್ನು ಓಮನ್ ಕೊಲ್ಲಿ ಮತ್ತು ಅರಬ್ಬೀ ಸಮುದ್ರದೊಂದಿಗೆ ಸಂಪರ್ಕಿಸುತ್ತದೆ.
- ತನ್ನ ಅತ್ಯಂತ ಕಿರಿದಾದ ಭಾಗದಲ್ಲಿ ಇದು ಸುಮಾರು 33 ಕಿಲೋಮೀಟರ್ ಅಗಲವನ್ನು ಹೊಂದಿದೆ. ಇದರಲ್ಲಿನ ಎರಡೂ ದಿಕ್ಕಿನ ನೌಕಾಯಾನ ಮಾರ್ಗಗಳು ಕೇವಲ ಕೆಲವೇ ಕಿಲೋಮೀಟರ್‌ಗಳಷ್ಟು ಮಾತ್ರವೇ ವಿಸ್ತಾರವಾಗಿವೆ.
- ಕಾರ್ಯತಂತ್ರದ ಮಹತ್ವ:- ಭಾರತವು ಆಮದು ಮಾಡಿಕೊಳ್ಳುವ ಒಟ್ಟು ಕಚ್ಚಾ ತೈಲದ ಸುಮಾರು ಅರ್ಧದಷ್ಟು ಭಾಗ ಹಾಗೂ ಶೇ. 60ರಷ್ಟು ನೈಸರ್ಗಿಕ ಅನಿಲವು ಇದೇ ಜಲಸಂಧಿಯ ಮಾರ್ಗದ ಮೂಲಕ ಪೂರೈಕೆಯಾಗುತ್ತದೆ.
ಮಾರುಕಟ್ಟೆ ದುರ್ಬಳಕೆ ಮತ್ತು ಸೈಬರ್ ವಂಚನೆಯ ಮೇಲೆ – ‘ಸೆಬಿ’ (SEBI) ಕಡಿವಾಣ
ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
- ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿಯು (SEBI) ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯ (AI) ಬಳಕೆಯ ಮೂಲಕ ಮಾರುಕಟ್ಟೆ ದುರ್ಬಳಕೆದಾರರು ಮತ್ತು ಸೈಬರ್ ವಂಚಕರ ಮೇಲಿನ ಕಣ್ಗಾವಲು ಮತ್ತು ಕಾನೂನು ಜಾರಿ ಕ್ರಮಗಳನ್ನು ಇನ್ನಷ್ಟು ತೀವ್ರಗೊಳಿಸಲಿದೆ.
ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿ (SEBI)ಯ ಬಗ್ಗೆ:
- ಇದು ಭಾರತದಲ್ಲಿನ ಭದ್ರತಾ ಪತ್ರ (ಸೆಕ್ಯುರಿಟೀಸ್) ಮತ್ತು ಬಂಡವಾಳ ಮಾರುಕಟ್ಟೆಗಳನ್ನು ನಿಯಂತ್ರಿಸುವ ಅತ್ಯುನ್ನತ ಸಂಸ್ಥೆಯಾಗಿದೆ.
- ಈ ಮಂಡಳಿಯನ್ನು 1988ರಲ್ಲಿ ಸ್ಥಾಪಿಸಲಾಯಿತು ಮತ್ತು ತದನಂತರ ಸೆಬಿ ಕಾಯ್ದೆ, 1992ರ ಅಡಿಯಲ್ಲಿ ಇದಕ್ಕೆ ಶಾಸನಬದ್ಧ ಅಧಿಕಾರಗಳನ್ನು ನೀಡಲಾಯಿತು.
- ಆಡಳಿತಾತ್ಮಕ ನಿಯಂತ್ರಣ/ಕಾರ್ಯನಿರ್ವಹಣೆ:- ಕೇಂದ್ರ ಹಣಕಾಸು ಸಚಿವಾಲಯ.
- ಉದ್ದೇಶಗಳು:-
- ಪ್ರಮುಖ ಉದ್ದೇಶ:- ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸುವುದು.
- ಭದ್ರತಾ ಮಾರುಕಟ್ಟೆಯ ಆರೋಗ್ಯಕರ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವುದು.
- ಭಾರತದಲ್ಲಿ ಭದ್ರತಾ ಮಾರುಕಟ್ಟೆಯನ್ನು ನಿಯಂತ್ರಿಸುವುದು ಮತ್ತು ವ್ಯವಸ್ಥಿತವಾಗಿ ಮುನ್ನಡೆಸುವುದು ಇದರ ಕಾರ್ಯವಾಗಿದೆ.
- ಸೆಬಿ (SEBI) ಸದಸ್ಯರ ಸಂಯೋಜನೆ:-
-
- ಅಧ್ಯಕ್ಷರು:- ಕೇಂದ್ರ ಸರ್ಕಾರದಿಂದ ನೇಮಕಗೊಂಡ ಒಬ್ಬರು ಈ ಮಂಡಳಿಯ ಅಧ್ಯಕ್ಷರಾಗಿರುತ್ತಾರೆ.
- ಇಬ್ಬರು ಸದಸ್ಯರು:- ಕೇಂದ್ರ ಹಣಕಾಸು ಸಚಿವಾಲಯವನ್ನು ಪ್ರತಿನಿಧಿಸುವ ಇಬ್ಬರು ಸದಸ್ಯರು ಇದರಲ್ಲಿರುತ್ತಾರೆ.
- ಒಬ್ಬ ಸದಸ್ಯರು:- ಭಾರತೀಯ ರಿಸರ್ವ್ ಬ್ಯಾಂಕ್ (RBI)ನಿಂದ ನಾಮನಿರ್ದೇಶನಗೊಂಡ ಒಬ್ಬ ಸದಸ್ಯರು ಇರುತ್ತಾರೆ.
- ಇತರ 5 ಸದಸ್ಯರು:- ಈ ಐವರಲ್ಲಿ ಕನಿಷ್ಠ 3 ಸದಸ್ಯರು ಪೂರ್ಣಾವಧಿ ಸದಸ್ಯರಾಗಿರುವುದು ಕಡ್ಡಾಯವಾಗಿದೆ.
ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು
ರಕ್ಷಣೆ
ಇದೀಗ ಸುದ್ದಿಯಲ್ಲಿದೆ:
- ಅಮೆರಿಕ ನೇತೃತ್ವದ ಮಿತ್ರಪಡೆಗಳು (ಇಸ್ರೇಲ್ ಮತ್ತು ಯುಎಇ ಒಳಗೊಂಡಂತೆ) ಮತ್ತು ಇರಾನ್ ನಡುವೆ ಮರುಕಳಿಸಿರುವ ಸಂಘರ್ಷವು, ಪಶ್ಚಿಮ ಏಷ್ಯಾದಲ್ಲಿ ಹೊಸದಾಗಿ ಸಂಯೋಜಿತಗೊಂಡಿರುವ ಪ್ರಾದೇಶಿಕ ವಾಯು ಮತ್ತು ಕ್ಷಿಪಣಿ ರಕ್ಷಣಾ ಜಾಲದ ಸಾಮರ್ಥ್ಯವನ್ನು ಪರೀಕ್ಷೆಗೆ ಒಳಪಡಿಸಿದೆ.
ಕ್ಷಿಪಣಿ ರಕ್ಷಣಾ ವ್ಯವಸ್ಥೆ ಎಂದರೇನು?
- ಬಹು-ಹಂತದ ರಕ್ಷಣಾ ವ್ಯವಸ್ಥೆಯಾಗಿದೆ:- ಇದು ಶತ್ರುಪಾಳಯದಿಂದ ಉಡಾವಣೆಯಾಗಿ ಮುನ್ನುಗ್ಗಿ ಬರುವ ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳನ್ನು ಪತ್ತೆಹಚ್ಚಿ, ಬೆನ್ನಟ್ಟಿ ಮತ್ತು ಆಗಸದಲ್ಲೇ ನಾಶಪಡಿಸಲು ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಹಾಗೂ ಬಹು-ಹಂತದ ರಕ್ಷಣಾ ವ್ಯವಸ್ಥೆಯಾಗಿದೆ.
‘ಭಾರತದ ಕ್ಷಿಪಣಿ ರಕ್ಷಣಾ ವಿನ್ಯಾಸ’ದ ಬಗ್ಗೆ:
- ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ಅಡಿಯಲ್ಲಿ ಬಹು-ಹಂತದ ಬ್ಯಾಲಿಸ್ಟಿಕ್ ಕ್ಷಿಪಣಿ ರಕ್ಷಣಾ (BMD) ವ್ಯವಸ್ಥೆ:
ಪೃಥ್ವಿ ವಾಯು ರಕ್ಷಣಾ ಪ್ರತಿಬಂಧಕ ವ್ಯವಸ್ಥೆ (PAD):- ಇದನ್ನು ವಾತಾವರಣದ ಹೊರವಲಯದ ರಕ್ಷಣೆಗಾಗಿ ವಿನ್ಯಾಸಗೊಳಿಸಲಾಗಿದ್ದು, ಇದು 50 ಕಿ.ಮೀ. ನಿಂದ 180 ಕಿ.ಮೀ. ಎತ್ತರದಲ್ಲಿಯೇ ಶತ್ರು ಕ್ಷಿಪಣಿಗಳನ್ನು ತಡೆದು ನಾಶಪಡಿಸುವ ಸಾಮರ್ಥ್ಯ ಹೊಂದಿದೆ.

-
- ಅತ್ಯಾಧುನಿಕ ವಾಯು ರಕ್ಷಣಾ ಪ್ರತಿಬಂಧಕ ವ್ಯವಸ್ಥೆ (AAD):- ಇದು ಭೂಮಿಯ ವಾತಾವರಣದ ಒಳಗೆ ಅಂತಿಮ ಹಂತದಲ್ಲಿ ನುಗ್ಗಿಬರುವ ಕ್ಷಿಪಣಿಗಳನ್ನು ತಟಸ್ಥಗೊಳಿಸುವ ಉದ್ದೇಶವನ್ನು ಹೊಂದಿದ್ದು, 30 ಕಿ.ಮೀ. ಎತ್ತರದವರೆಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.
- ಬಹು-ಹಂತದ ವಾಯು ರಕ್ಷಣಾ ಕವಚ:-
ಬಹು-ಹಂತದ ವಾಯು ರಕ್ಷಣಾ ಕವಚ:

- ರಷ್ಯಾ ಅಭಿವೃದ್ಧಿಪಡಿಸಿದ ‘ಎಸ್-400 ಟ್ರಯಂಫ್’ (S-400 Triumf):- ಇದು ಅತ್ಯಾಧುನಿಕ, ಸುಲಭವಾಗಿ ಸ್ಥಳಾಂತರಿಸಬಹುದಾದ ಮತ್ತು ದೀರ್ಘ-ಶ್ರೇಣಿಯ ‘ನೆಲದಿಂದ ಆಗಸಕ್ಕೆ ಚಿಮ್ಮುವ’ (SAM) ಕ್ಷಿಪಣಿ ವ್ಯವಸ್ಥೆಯಾಗಿದೆ. ಭಾರತವು ತನ್ನ ದೀರ್ಘ-ಶ್ರೇಣಿಯ ವಾಯು ರಕ್ಷಣಾ ಸಾಮರ್ಥ್ಯವನ್ನು ವೃದ್ಧಿಸಲು ಇದನ್ನು ಸೇರ್ಪಡೆಗೊಳಿಸಿದೆ.
- ಇಸ್ರೇಲ್ ಜೊತೆ ಜಂಟಿಯಾಗಿ ಅಭಿವೃದ್ಧಿಪಡಿಸಲಾದ ‘ಬರಾಕ್-8’ (MRSAM/LRSAM) ಕ್ಷಿಪಣಿ:- ಮಧ್ಯಮ-ಶ್ರೇಣಿಯ (70-100 ಕಿ.ಮೀ.) ಅಥವಾ ದೀರ್ಘ-ಶ್ರೇಣಿಯ ‘ನೆಲದಿಂದ ಆಗಸಕ್ಕೆ ಚಿಮ್ಮುವ’ ಕ್ಷಿಪಣಿ ವ್ಯವಸ್ಥೆಯಾಗಿದೆ. ಭಾರತದ ಭೂ-ಸೇನಾ ಹಾಗೂ ನೌಕಾ ಸಂಪನ್ಮೂಲಗಳಿಗೆ 360-ಡಿಗ್ರಿ ರಕ್ಷಣೆಯನ್ನು ಒದಗಿಸುತ್ತದೆ.
- ಸ್ವದೇಶಿ ನಿರ್ಮಿತ ‘ಆಕಾಶ್’ ವ್ಯವಸ್ಥೆ ಹಾಗೂ ಇಸ್ರೇಲ್‌ನ ‘ಸ್ಪೈಡರ್’ ಕ್ಷಿಪಣಿಗಳು:- ಈ ಅಲ್ಪ-ಶ್ರೇಣಿಯ (25-50 ಕಿ.ಮೀ.) ಕ್ಷಿಪಣಿಯು, ದೇಶದ ಆಯಕಟ್ಟಿನ ಪ್ರದೇಶಗಳು ಮತ್ತು ಸಂಚಾರಿ ಸೇನಾ ತುಕಡಿಗಳಿಗೆ ರಕ್ಷಣೆ ಒದಗಿಸುತ್ತವೆ.
ಮಿಷನ್ ಸುದರ್ಶನ್ ಚಕ್ರ:
- 2035ರ ಸಮಗ್ರ ದೃಷ್ಟಿಕೋನದೊಂದಿಗೆ ಘೋಷಿಸಲಾದ ‘ಮಿಷನ್ ಸುದರ್ಶನ್ ಚಕ್ರ’ವು, ಕೃತಕ ಬುದ್ಧಿಮತ್ತೆ (AI) ಆಧಾರಿತ ಸರ್ವವ್ಯಾಪಿ ರಾಷ್ಟ್ರೀಯ ರಕ್ಷಣಾ ಕವಚವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.
ಇತರ ದೇಶಗಳ ಪ್ರಮುಖ ವಾಯು-ರಕ್ಷಣಾ ವ್ಯವಸ್ಥೆಗಳು:
|
ದೇಶ / ಪ್ರದೇಶ |
ಪ್ರಮುಖ ಕ್ಷಿಪಣಿ ವ್ಯವಸ್ಥೆಗಳು |
|
ರಷ್ಯಾ |
ಎಸ್-400 ಟ್ರಯಂಫ್, ಎಸ್-300ವಿಎಂ, ಎಸ್-350 ವಿತ್ಯಾಜ್, ಎಸ್-500 ಪ್ರೊಮಿಥಿಯಸ್ |
|
ಅಮೆರಿಕ (USA) |
ಥಾಡ್ (THAAD), ಪ್ಯಾಟ್ರಿಯಾಟ್ ( PAC-3 MSE), ಗೋಲ್ಡನ್ ಡೋಮ್ (ಅಭಿವೃದ್ಧಿ ಹಂತದಲ್ಲಿದೆ) |
|
ಇಸ್ರೇಲ್ |
ಐರನ್ ಡೋಮ್, ಡೇವಿಡ್ಸ್ ಸ್ಲಿಂಗ್, ಐರನ್ ಬೀಮ್ |
|
ಚೀನಾ |
ಹೆಚ್‌ಕ್ಯೂ-9 (HQ-9), ಹೆಚ್‌ಕ್ಯೂ-22 (HQ-22), ಹೆಚ್‌ಕ್ಯೂ-16 (HQ-16) |
|
ಯುರೋಪಿಯನ್ ಸ್ಕೈ ಶೀಲ್ಡ್ ಇನಿಶಿಯೇಟಿವ್ (ESSI) |
ಸ್ಕೈರೇಂಜರ್ (Skyranger), ಐಆರ್‌ಐಎಸ್-ಟಿ ಎಸ್‌ಎಲ್‌ಎಂ (IRIS-T SLM) |
ದೇಶದ ಮೊದಲ ಸೆಮಿಕಂಡಕ್ಟರ್ (ಅರೆವಾಹಕ) ಘಟಕ
ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
- ಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿನ ಸಾನಂದ್‌ನಲ್ಲಿ ಭಾರತದ ಮೊಟ್ಟಮೊದಲ ಸೆಮಿಕಂಡಕ್ಟರ್ (ಅರೆವಾಹಕ) ಘಟಕವನ್ನು ಉದ್ಘಾಟಿಸಿದರು.
- ಅಮೆರಿಕದ ಪ್ರಖ್ಯಾತ ಚಿಪ್ ತಯಾರಕ ಕಂಪನಿಯಾದ ‘ಮೈಕ್ರಾನ್ ಟೆಕ್ನಾಲಜಿ’ ಗುಜರಾತಿನ ಸಾನಂದ್‌ನಲ್ಲಿ ₹22,516 ಕೋಟಿ ಹೂಡಿಕೆಯೊಂದಿಗೆ ಈ ಘಟಕವನ್ನು ಸ್ಥಾಪಿಸಿದೆ.
- ಈ ಘಟಕವು ಪ್ರಮುಖವಾಗಿ ‘ಜೋಡಣೆ, ಪರೀಕ್ಷೆ, ಗುರ್ತಿಸುವಿಕೆ ಮತ್ತು ಪ್ಯಾಕೇಜಿಂಗ್’ (ATMP) ಸೌಲಭ್ಯವನ್ನು ಒಳಗೊಂಡಿದೆ.
ಸೆಮಿಕಂಡಕ್ಟರ್ (ಅರೆವಾಹಕ) ಚಿಪ್‌ಗಳ ಬಗ್ಗೆ:
-
- ಅರೆವಾಹಕಗಳು:- ಇವು ವಾಹಕಗಳು ಮತ್ತು ಅವಾಹಕಗಳ ನಡುವಿನ ವಾಹಕತೆಯನ್ನು ಹೊಂದಿರುವ ವಸ್ತುಗಳಾಗಿವೆ.
- ಉದಾಹರಣೆಗೆ:- ಇವು ಸಿಲಿಕಾನ್ ಅಥವಾ ಜರ್ಮೇನಿಯಂನಂತಹ ಶುದ್ಧ ಧಾತುಗಳಾಗಿರಬಹುದು; ಅಥವಾ ಗ್ಯಾಲಿಯಂ, ಆರ್ಸೆನೈಡ್ ಮತ್ತು ಕ್ಯಾಡ್ಮಿಯಂ ಸೆಲೆನೈಡ್‌ನಂತಹ ಸಂಯುಕ್ತಗಳಾಗಿರಬಹುದು.
- ಮಹತ್ವ:- ಇವು ಎಲ್ಲಾ ಆಧುನಿಕ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಉತ್ಪನ್ನಗಳಿಗೆ ‘ಹೃದಯ ಮತ್ತು ಮಿದುಳು’ ಆಗಿ ಕಾರ್ಯನಿರ್ವಹಿಸುವ ಮೂಲಭೂತ ಘಟಕಗಳಾಗಿವೆ.
- ಉಪಯೋಗಗಳು:- ಆಧುನಿಕ ವಾಹನಗಳು, ಗೃಹಬಳಕೆಯ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಇಸಿಜಿ (ECG) ಯಂತ್ರಗಳಂತಹ ಅತ್ಯಗತ್ಯ ವೈದ್ಯಕೀಯ ಸಾಧನಗಳ ಅವಿಭಾಜ್ಯ ಅಂಗವಾಗಿವೆ.
ಭಾರತ ಸೆಮಿಕಂಡಕ್ಟರ್ ಅಭಿಯಾನ (ISM):
- ಪ್ರಾರಂಭಿಸಿದವರು:- ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ.
- ಪ್ರಮುಖ ಉದ್ದೇಶ:- ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ವಿನ್ಯಾಸ ಕ್ಷೇತ್ರದಲ್ಲಿ ಭಾರತವನ್ನು ಜಾಗತಿಕ ಮಟ್ಟದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ, ಅತ್ಯಂತ ಕ್ರಿಯಾಶೀಲವಾದ ಹಾಗೂ ಸುಭದ್ರವಾದ ‘ಸೆಮಿಕಂಡಕ್ಟರ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು’ ನಿರ್ಮಿಸುವುದು.



ನಿಮ್ಮದೊಂದು ಉತ್ತರ