ಜೀತದಾಳು ಪದ್ಧತಿ ನಿರ್ಮೂಲನೆ ಕಾಯ್ದೆ,1976 : 50 ವರ್ಷಗಳು
ಆಡಳಿತ
ಇದೀಗ ಸುದ್ದಿಯಲ್ಲಿದೆ:
- ಫೆಬ್ರವರಿ 9, 1976 ರಂದು ‘ಜೀತದಾಳು ಕಾರ್ಮಿಕ ಪದ್ಧತಿ ನಿರ್ಮೂಲನೆ ಕಾಯ್ದೆ’ಯನ್ನು ಜಾರಿಗೊಳಿಸುವ ಮೂಲಕ ಭಾರತೀಯ ಸಮಾಜದಲ್ಲಿ ಸಮಾನತೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ತಲುಪಲಾಯಿತು. ಈ ಕಾಯ್ದೆಯು ಜಾರಿಗೆಯಾಗಿ ಇದೀಗ 50 ವರ್ಷಗಳು ಸಂದಿವೆ.
ಜೀತದಾಳು ಪದ್ಧತಿ ನಿರ್ಮೂಲನೆ ಕಾಯ್ದೆ, 1976 ರ ಬಗ್ಗೆ:
- ವ್ಯಾಖ್ಯಾನ:- ಜೀತದಾಳು ಪದ್ಧತಿ (ಋಣಬಾಧೆ) ಎಂದರೆ, ಸಾಲ ಪಡೆದ ವ್ಯಕ್ತಿಯು ಆ ಸಾಲವನ್ನು ಹಣದ ರೂಪದಲ್ಲಿ ಹಿಂದಿರುಗಿಸುವ ಬದಲು, ಸಾಲಗಾರನ ಬಲವಂತಕ್ಕೆ ಒಳಪಟ್ಟು ತನ್ನ ಶ್ರಮದ (ದುಡಿಮೆಯ) ಮೂಲಕವೇ ತೀರಿಸಬೇಕಾದ ಒಂದು ಶೋಷಣಾತ್ಮಕ ಪರಿಸ್ಥಿತಿಯಾಗಿದೆ.
- ಸಂವಿಧಾನಾತ್ಮಕ ಹಿನ್ನೆಲೆ:- ಭಾರತೀಯ ಸಂವಿಧಾನದ 23ನೇ ವಿಧಿಗೆ (ಮಾನವ ಕಳ್ಳಸಾಗಣೆ ಮತ್ತು ಬಲವಂತದ ದುಡಿಮೆಯ ನಿಷೇಧ) ಕಾನೂನಾತ್ಮಕ ಬಲವನ್ನು ನೀಡುವ ಹಾಗೂ ಅದನ್ನು ಕಾರ್ಯಗತಗೊಳಿಸುವ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೊಳಿಸಲಾಯಿತು.
- ಜೀತದಾಳು ಪದ್ಧತಿಗೆ ಮೂಲ ಕಾರಣಗಳು:- ಬಡತನ, ಜಾತಿ ಶ್ರೇಣೀಕರಣ, ಭೂರಹಿತತೆ ಮತ್ತು ಋಣಭಾರದ ಕಾರಣಗಳಿಂದಾಗಿ ಜೀತದಾಳು ಪದ್ಧತಿಯು ಸಮಾಜದಲ್ಲಿ ಆಳವಾಗಿ ಬೇರೂರಿತ್ತು.
- ILO ‘ಒಪ್ಪಂದ ಸಂಖ್ಯೆ 29’ ನ್ನು ಭಾರತ 1954 ರಲ್ಲಿ ಅನುಮೋದಿಸಿತದೆ:- ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ (ILO) ‘ಒಪ್ಪಂದ ಸಂಖ್ಯೆ 29’ (ಬಲವಂತದ ದುಡಿಮೆಗೆ ಸಂಬಂಧಿಸಿದ ಒಪ್ಪಂದ) ಅನ್ನು ಅನುಮೋದಿಸಿತು. ಇದು ಬಲವಂತದ ದುಡಿಮೆಯನ್ನು ನಿರ್ಮೂಲನೆ ಮಾಡುವ ಭಾರತದ ಕಾನೂನಾತ್ಮಕ ಬದ್ಧತೆಯನ್ನು ಇನ್ನಷ್ಟು ಬಲಪಡಿಸಿತು.
ಈ ಕಾಯ್ದೆಯ ಪ್ರಮುಖ ಉದ್ದೇಶಗಳು:
- ಜೀತ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು.
- ಜೀತದಾಳುಗಳನ್ನು ಮುಕ್ತಗೊಳಿಸುವುದು ಮತ್ತು ಅವರ ಮೇಲಿದ್ದ ಸಾಲದ ಹೊರೆಯನ್ನು (ಋಣಭಾರವನ್ನು) ವಜಾಗೊಳಿಸುವುದು.
- ಆರ್ಥಿಕ ಮತ್ತು ಸಾಮಾಜಿಕ ಶೋಷಣೆಯನ್ನು ತಡೆಯುವುದು.
- ಮುಕ್ತಗೊಂಡ ಜೀತದಾಳುಗಳ ಪುನರ್ವಸತಿಗಾಗಿ ಕಾನೂನಾತ್ಮಕ ಚೌಕಟ್ಟನ್ನು ಒದಗಿಸುವುದು.
ಸೀಶೆಲ್ಸ್ (Seychelles)
ಅಂತರರಾಷ್ಟ್ರೀಯ ಸಂಬಂಧಗಳು

ಇದೀಗ ಸುದ್ದಿಯಲ್ಲಿದೆ:
- ಸೀಶೆಲ್ಸ್ ಅಧ್ಯಕ್ಷ ಡಾ. ಪ್ಯಾಟ್ರಿಕ್ ಹರ್ಮಿನಿ ಅವರ ಭಾರತ ಭೇಟಿಯ ಸಂದರ್ಭದಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೀಶೆಲ್ಸ್ಗೆ 175 ದಶಲಕ್ಷ ಡಾಲರ್ಗಳ ‘ವಿಶೇಷ ಆರ್ಥಿಕ ಪ್ಯಾಕೇಜ್’ ಅನ್ನು ಘೋಷಿಸಿದರು.
ಸೀಶೆಲ್ಸ್ ದೇಶದ ಬಗ್ಗೆ:
- ಪಶ್ಚಿಮ ಹಿಂದೂ ಮಹಾಸಾಗರದಲ್ಲಿ ನೆಲೆಗೊಂಡಿದೆ:- ಮಡಗಾಸ್ಕರ್ನ ಈಶಾನ್ಯಕ್ಕೆ ನೆಲೆಗೊಂಡ 115 ದ್ವೀಪಗಳನ್ನು ಒಳಗೊಂಡ ಒಂದು ದ್ವೀಪಸಮೂಹ ರಾಷ್ಟ್ರವಾಗಿದೆ.
- ಇದು ಆಫ್ರಿಕಾ ಖಂಡದ ಅತ್ಯಂತ ಚಿಕ್ಕ ಮತ್ತು ಅತ್ಯಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ.
- ರಾಜಧಾನಿ:- ಮಾಹೆ ದ್ವೀಪದಲ್ಲಿರುವ ‘ವಿಕ್ಟೋರಿಯಾ’.
- ಜೀವ ವೈವಿಧ್ಯತೆ:- ಇದು ‘ಕೊಕೊ ಡಿ ಮೆರ್’ , ‘ಅಲ್ಡಾಬ್ರಾ ದೈತ್ಯ ಆಮೆ’ ಮತ್ತು ಅಪರೂಪದ ‘ಕಪ್ಪು ಗಿಳಿ’ಯಂತಹ ಅಪರೂಪದ ಪ್ರಭೇದಗಳಿಗೆ ಹೆಸರುವಾಸಿಯಾಗಿದೆ.
ಮ್ಯಾಂಗ್ರೋವ್ ಕಪ್ಪೆಚಿಪ್ಪು / ಕ್ಲಾಮ್
ಪರಿಸರ

ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿಗೆ, ‘ಐಸಿಎಆರ್-ಕೇಂದ್ರೀಯ ಕಡಲ ಮೀನುಗಾರಿಕಾ ಸಂಶೋಧನಾ ಸಂಸ್ಥೆ (ICAR-CMFRI)’ಯು ಜಗತ್ತಿನಲ್ಲಿಯೇ ಮೊದಲ ಬಾರಿಗೆ ಮ್ಯಾಂಗ್ರೋವ್/ಕೆಸರು ಕಪ್ಪೆಚಿಪ್ಪು (ಗೆಲೋಯಿನಾ ಎರೋಸಾ) ಪ್ರಭೇದವನ್ನು ‘ಬಂಧಿತ ಪರಿಸರದಲ್ಲಿ ಪ್ರೇರೇಪಿತ ಸಂತಾನೋತ್ಪತ್ತಿ’ಗೆ ಒಳಪಡಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
- ಇದು ಭಾರತೀಯ ಮ್ಯಾಂಗ್ರೋವ್ ಕಾಡುಗಳಲ್ಲಿ ಮಿತಿಮೀರಿದ ಬಳಕೆಯಿಂದ ಕ್ಷೀಣಿಸಿದ ಇವುಗಳ ಸಂತತಿಯನ್ನು ಮರುಸ್ಥಾಪಿಸುವ ಭರವಸೆಯನ್ನು ಮೂಡಿಸಿದೆ.
ಮ್ಯಾಂಗ್ರೋವ್ ಕಪ್ಪೆಚಿಪ್ಪಿನ ಬಗ್ಗೆ:
- ವೈಜ್ಞಾನಿಕ ಹೆಸರು:- ‘ಗೆಲೋಯಿನಾ ಎರೋಸಾ’ (ಪಾಲಿಮೆಸೊಡಾ ಎರೋಸಾ ಎಂತಲೂ ಕರೆಯಲ್ಪಡುತ್ತದೆ).
- ಆವಾಸಸ್ಥಾನ:- ದಕ್ಷಿಣ ಮತ್ತು ಆಗ್ನೇಯ ಏಷ್ಯಾದಾದ್ಯಂತ ಮ್ಯಾಂಗ್ರೋವ್ಗಳು ಮತ್ತು ಅಳಿವೆಗಳ ಸಾವಯವ-ಸಮೃದ್ಧ, ಕೆಸರುಮಯ ‘ಉಬ್ಬರವಿಳಿತದ ವಲಯಗಳಲ್ಲಿ’ ವಾಸಿಸುವ ದೊಡ್ಡ ಗಾತ್ರದ ‘ದ್ವಿಕವಾಟ ಮೃದ್ವಂಗಿ’ ( 10 ಸೆಂ.ಮೀ ವರೆಗಿನ ಕವಚದ ಅಗಲವನ್ನು ಹೊಂದಿರುತ್ತದೆ)ಯಾಗಿದೆ.
- ಉತ್ತರ ಕೇರಳದಲ್ಲಿ ಇದನ್ನು ಸ್ಥಳೀಯವಾಗಿ “ಕಂಡಲ್ ಕಕ್ಕಾ” ಎಂದು ಕರೆಯಲಾಗುತ್ತದೆ.
- ಪರಿಸರ ವ್ಯವಸ್ಥೆಯಲ್ಲಿನ ಪಾತ್ರ:- ಇದು ಸಮರ್ಥ ‘ಶೋಧಕ ಭಕ್ಷಕ’ವಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಪೋಷಕಾಂಶಗಳ ಮರುಬಳಕೆಯ ಮೂಲಕ ಅಳಿವೆಗಳ ನೀರಿನ ಗುಣಮಟ್ಟವನ್ನು ಸುಧಾರಿಸುತ್ತದೆ.
- ಮ್ಯಾಂಗ್ರೋವ್ ಪರಿಸರ ವ್ಯವಸ್ಥೆಯ ಸ್ಥಿತಿಸ್ಥಾಪಕತ್ವ ಸಾಮರ್ಥ್ಯವನ್ನು ಬಲಪಡಿಸುತ್ತದೆ:- ಇದರ ಬಿಲ ತೋಡುವ ನಡವಳಿಕೆಯು ಹೂಳನ್ನು ಸ್ಥಿರಗೊಳಿಸುತ್ತದೆ, ಪೋಷಕಾಂಶಗಳ ಚಕ್ರವನ್ನು ವೃದ್ಧಿಸುತ್ತದೆ.



ನಿಮ್ಮದೊಂದು ಉತ್ತರ