ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (MPLADS)
ಕಲ್ಯಾಣ ಯೋಜನೆಗಳು
ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿಗೆ, MPLADS ನಿಧಿಯ ದುರುಪಯೋಗದ ಆರೋಪದ ಕುರಿತು ವಿವಾದ ಉದ್ಭವಿಸಿದ್ದು, ವಿಮರ್ಶಕರು ಈ ಯೋಜನೆಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (MPLADS)ಯ ಬಗ್ಗೆ:
- ಇದು 1993 ರಲ್ಲಿ ಪ್ರಾರಂಭವಾದ ಒಂದು ಕೇಂದ್ರ ವಲಯದ ಯೋಜನೆಯಾಗಿದೆ.
- ಅನುಷ್ಠಾನ ಸಚಿವಾಲಯ:- ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯವು (MoSPI).
- ಉದ್ದೇಶ:- ಕುಡಿಯುವ ನೀರು, ನೈರ್ಮಲ್ಯ, ರಸ್ತೆಗಳು ಮತ್ತು ಸಾರ್ವಜನಿಕ ಆರೋಗ್ಯ ಮೂಲಸೌಕರ್ಯಗಳಂತಹ ಸ್ಥಳೀಯ ಅಗತ್ಯಗಳನ್ನು ಆಧರಿಸಿ, ಬಾಳಿಕೆ ಬರುವ ಸಮುದಾಯ ಆಸ್ತಿಗಳನ್ನು ನಿರ್ಮಿಸುವ ಕಾಮಗಾರಿಗಳಿಗೆ ಶಿಫಾರಸು ಮಾಡಲು ಸಂಸದರಿಗೆ (MPs) ಅವಕಾಶ ಕಲ್ಪಿಸುವುದು.
- ವರ್ಷಕ್ಕೆ 5 ಕೋಟಿ ರೂ. ಹಂಚಿಕೆ ಮಾಡಲಾದ ನಿಧಿ:– ಪ್ರತಿಯೊಬ್ಬ ಸಂಸದರು MPLADS ಅಡಿಯಲ್ಲಿ ಪಡೆಯಲು ಅರ್ಹರಾಗಿರುತ್ತಾರೆ.
- ಅಸ್ತಿತ್ವದಲ್ಲಿರುವ ಅಭಿವೃದ್ಧಿ ಯೋಜನೆಗಳಿಗೆ ಪೂರಕವಾಗಿ ಮತ್ತು ಸ್ಥಳೀಯ ಕೊರತೆಗಳನ್ನು ನೀಗಿಸಲು ಈ ನಿಧಿಯನ್ನು ಬಳಸಲಾಗುತ್ತದೆ.
- ಸಂಸದರು ವಾರ್ಷಿಕವಾಗಿ ಕನಿಷ್ಠ 15% ರಷ್ಟು ನಿಧಿಯನ್ನು ಪರಿಶಿಷ್ಟ ಜಾತಿ (SC) ವಾಸಿಸುವ ಪ್ರದೇಶಗಳಿಗೆ ಮತ್ತು 7.5% ರಷ್ಟು ನಿಧಿಯನ್ನು ಪರಿಶಿಷ್ಟ ಪಂಗಡ (ST) ವಾಸಿಸುವ ಪ್ರದೇಶಗಳಿಗೆ ಶಿಫಾರಸು ಮಾಡುವುದು ಕಡ್ಡಾಯವಾಗಿದೆ.
- ಲೋಪವಾಗದ ನಿಧಿ:- MPLADS ನಿಧಿಗಳು ಲೋಪವಾಗುವುದಿಲ್ಲ/ರದ್ದಾಗುವುದಿಲ್ಲ, ಅಂದರೆ ಬಳಕೆಯಾಗದ ಹಣವನ್ನು ಮುಂದಿನ ವರ್ಷಗಳಿಗೆ ವರ್ಗಾಯಿಸಲಾಗುತ್ತದೆ ಮತ್ತು ಇದು ಯೋಜನೆಗಳ ಮುಂದುವರಿಕೆಯನ್ನು ಖಚಿತಪಡಿಸುತ್ತದೆ.
- ಭೌಗೋಳಿಕ ವ್ಯಾಪ್ತಿ:-
- ಲೋಕಸಭೆಯ ಸಂಸದರು ತಮ್ಮ ಮತ ಕ್ಷೇತ್ರಗಳಲ್ಲಿ, ಕಾಮಗಾರಿಗಳನ್ನು ಶಿಫಾರಸು ಮಾಡಬಹುದು.
- ರಾಜ್ಯಸಭೆಯ ಸಂಸದರು ತಾವು ಆಯ್ಕೆಯಾದ ರಾಜ್ಯದೊಳಗೆ ಕಾಮಗಾರಿಗಳನ್ನು ಶಿಫಾರಸು ಮಾಡಬಹುದು.
- ನಾಮನಿರ್ದೇಶಿತ ಸಂಸದರು ದೇಶದ ಯಾವುದೇ ಭಾಗದಲ್ಲಿ ಕಾಮಗಾರಿಗಳನ್ನು ಶಿಫಾರಸು ಮಾಡಬಹುದು.
- ವಿನಾಯಿತಿಗಳು:-
- ಸಂಸದರು ತಮ್ಮ ಮತ ಕ್ಷೇತ್ರ ಅಥವಾ ರಾಜ್ಯದ ಹೊರಗೆ ವರ್ಷಕ್ಕೆ ₹ 25 ಲಕ್ಷ ರೂ.ಗಳವರೆಗೆ ಮತ್ತು ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಪೀಡಿತ ಜಿಲ್ಲೆಗೆ ₹ 1 ಕೋಟಿ ರೂ.ಗಳವರೆಗೆ ಕಾಮಗಾರಿಗಳನ್ನು ಶಿಫಾರಸು ಮಾಡಬಹುದು.
ಘನತ್ಯಾಜ್ಯ ನಿರ್ವಹಣೆ (SWM) ನಿಯಮಗಳು, 2026
ಪರಿಸರ

ಇದೀಗ ಸುದ್ದಿಯಲ್ಲಿದೆ:
- ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಘನತ್ಯಾಜ್ಯ ನಿರ್ವಹಣೆ ನಿಯಮಗಳು, 2016 ಅನ್ನು ರದ್ದುಗೊಳಿಸಿ, ಘನತ್ಯಾಜ್ಯ ನಿರ್ವಹಣೆ (SWM) ನಿಯಮಗಳು, 2026 ಅನ್ನು ಅಧಿಸೂಚಿಸಿದೆ.
ಘನತ್ಯಾಜ್ಯ ನಿರ್ವಹಣೆ (SWM) ನಿಯಮಗಳು, 2026:
- ಈ ನಿಯಮಗಳನ್ನು ಪರಿಸರ (ಸಂರಕ್ಷಣೆ) ಕಾಯಿದೆ, 1986 ರ ಅಡಿಯಲ್ಲಿ ಅಧಿಸೂಚಿಸಲಾಗಿದೆ ಮತ್ತು ಇವು ಏಪ್ರಿಲ್ 1, 2026 ರಿಂದ ಸಂಪೂರ್ಣವಾಗಿ ಜಾರಿಗೆ ಬರಲಿವೆ.
- ಪರಿಸರ ಪರಿಹಾರ ದಂಡ:- ನೋಂದಣಿ ಇಲ್ಲದೆ ಕಾರ್ಯನಿರ್ವಹಿಸುವುದು, ತಪ್ಪು ವರದಿ ನೀಡುವುದು, ನಕಲಿ ದಾಖಲೆಗಳನ್ನು ಸಲ್ಲಿಸುವುದು ಅಥವಾ ಅನುಚಿತ ಘನತ್ಯಾಜ್ಯ ನಿರ್ವಹಣಾ ಪದ್ಧತಿಗಳಂತಹ ನಿಯಮಗಳ ಉಲ್ಲಂಘನೆಗಾಗಿ, ‘ಮಾಲಿನ್ಯಕಾರನೇ ದಂಡ ತೆರಬೇಕು’ ತತ್ವದ ಆಧಾರದ ಮೇಲೆ ಪರಿಸರ ಪರಿಹಾರ ದಂಡವನ್ನು ವಿಧಿಸಲು ಈ ನಿಯಮಗಳು ಅವಕಾಶ ಕಲ್ಪಿಸುತ್ತವೆ.
- ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB):- CPCB ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತದೆ, ಆದರೆ “ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ”ಗಳು ಮತ್ತು “ಮಾಲಿನ್ಯ ನಿಯಂತ್ರಣ ಸಮಿತಿ”ಗಳು ಪರಿಸರ ಪರಿಹಾರ ದಂಡವನ್ನು ವಿಧಿಸುತ್ತವೆ.
ಈ ಹೊಸ ನಿಯಮಗಳ ಪ್ರಮುಖ ಲಕ್ಷಣಗಳು:
- ಮೂಲದಲ್ಲೇ ಘನ ತ್ಯಾಜ್ಯದ 4 ವಿಧಗಳ ಪ್ರತ್ಯೇಕ ವಿಂಗಡಣೆ ಕಡ್ಡಾಯಗೊಳಿಸಲಾಗಿದೆ:-
- ಹಸಿ ತ್ಯಾಜ್ಯ:- ಇದು ಅಡುಗೆಮನೆಯ ತ್ಯಾಜ್ಯ, ತರಕಾರಿಗಳು, ಹಣ್ಣಿನ ಸಿಪ್ಪೆಗಳು, ಮಾಂಸ ಮತ್ತು ಹೂವುಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಇದನ್ನು ಹತ್ತಿರದ ಸಂಸ್ಕರಣಾ ಘಟಕದಲ್ಲಿ ಮಿಶ್ರಗೊಬ್ಬರ (ಕಾಂಪೋಸ್ಟ್) ಮಾಡಬೇಕು ಅಥವಾ ಜೈವಿಕ ಮೆಥನೇಷನ್ (ಜೈವಿಕ ಅನಿಲ ಉತ್ಪಾದನೆ) ಮೂಲಕ ಸಂಸ್ಕರಿಸಬೇಕು.
- ಒಣ ತ್ಯಾಜ್ಯ:- ಇದು ಪ್ಲಾಸ್ಟಿಕ್, ಕಾಗದ, ಲೋಹ, ಗಾಜು, ಮರ ಮತ್ತು ರಬ್ಬರ್ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಇದನ್ನು ವಿಂಗಡಣೆ ಮತ್ತು ಮರುಬಳಕೆಗಾಗಿ ವಸ್ತು ಮರುಪಡೆಯುವ ಘಟಕ (MRFs) ಗಳಿಗೆ ಸಾಗಿಸಬೇಕು.
- ನೈರ್ಮಲ್ಯ ತ್ಯಾಜ್ಯ:- ಇದು ಬಳಸಿದ ‘ಶಿಶು ಲಂಗೋಟಗಳು (ಡೈಪರ್‌ಗಳು), ಋತುಸ್ರಾವದ ಪ್ಯಾಡ್‌ಗಳು, ಟ್ಯಾಂಪೂನ್‌ಗಳು ಮತ್ತು ಕಾಂಡೋಮ್‌ಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಇವುಗಳನ್ನು ಸುರಕ್ಷಿತವಾಗಿ ಸುತ್ತಿ ಪ್ರತ್ಯೇಕವಾಗಿ ಸಂಗ್ರಹಿಸಿಡಬೇಕು.
- ವಿಶೇಷ ಕಾಳಜಿ ಅಗತ್ಯವಿರುವ ತ್ಯಾಜ್ಯ:- ಇದು ಬಣ್ಣದ ಡಬ್ಬಿಗಳು, ವಿದ್ಯುತ್ ದೀಪ (ಬಲ್ಬ್)ಗಳು, ಪಾದರಸದ ಥರ್ಮಾಮೀಟರ್‌ಗಳು ಮತ್ತು ಔಷಧಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಇವುಗಳನ್ನು ಅಧಿಕೃತ ಸಂಸ್ಥೆಗಳು ಸಂಗ್ರಹಿಸಬೇಕು ಅಥವಾ ನಿಗದಿತ ಸಂಗ್ರಹಣಾ ಕೇಂದ್ರಗಳಲ್ಲಿ ಜಮಾ ಮಾಡಬೇಕು.
- ಬೃಹತ್ ತ್ಯಾಜ್ಯ ಉತ್ಪಾದಕರ ಸ್ಪಷ್ಟ ವ್ಯಾಖ್ಯಾನ:- 20,000 ಚದರ ಮೀಟರ್ ಅಥವಾ ಅದಕ್ಕಿಂತ ಹೆಚ್ಚಿನ ವಿಸ್ತೀರ್ಣ ಹೊಂದಿರುವ, ದಿನಕ್ಕೆ 40,000 ಲೀಟರ್ ಅಥವಾ ಅದಕ್ಕಿಂತ ಹೆಚ್ಚು ನೀರು ಬಳಸುವ, ಅಥವಾ ದಿನಕ್ಕೆ 100 ಕೆ.ಜಿ ಅಥವಾ ಅದಕ್ಕಿಂತ ಹೆಚ್ಚು ಘನತ್ಯಾಜ್ಯ ಉತ್ಪಾದಿಸುವ ಸಂಸ್ಥೆಗಳನ್ನು ‘ಬೃಹತ್ ತ್ಯಾಜ್ಯ ಉತ್ಪಾದಕರು’ ಎಂದು ಪರಿಗಣಿಸಲಾಗುತ್ತದೆ.
- ತ್ವರಿತ ಭೂ ಹಂಚಿಕೆ ಮತ್ತು ಮೇಲ್ವಿಚಾರಣೆ:- ತ್ಯಾಜ್ಯ ಸಂಸ್ಕರಣೆಗೆ ತ್ವರಿತ ಭೂ ಹಂಚಿಕೆ ಮತ್ತು ಸಂಪೂರ್ಣ ಘನತ್ಯಾಜ್ಯ ನಿರ್ವಹಣೆಯ ಆನ್‌ಲೈನ್ ಮೇಲ್ವಿಚಾರಣೆ ವ್ಯವಸ್ಥೆಯನ್ನು ಇದು ಒಳಗೊಂಡಿದೆ.
- ಸ್ಥಳೀಯ ಸಂಸ್ಥೆಗಳು ಮತ್ತು ವಸ್ತು ಮರುಗಳಿಕೆ ಘಟಕಗಳ (MRFs) ಕರ್ತವ್ಯಗಳು:- ಈ ಎರಡರ ಸಹಯೋಗದೊಂದಿಗೆ ಘನತ್ಯಾಜ್ಯವನ್ನು ಸಂಗ್ರಹಿಸಬೇಕು, ವಿಂಗಡಿಸಬೇಕು ಮತ್ತು ಸಾಗಿಸಬೇಕು.
ನ್ಯೂ ಸ್ಟಾರ್ಟ್ ಒಪ್ಪಂದ (New START Treaty)
ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
- ನ್ಯೂ ಸ್ಟಾರ್ಟ್ ಒಪ್ಪಂದದ (New START Treaty) ಮುಕ್ತಾಯವು, ವಿಶ್ವದ ಎರಡು ಬೃಹತ್ ಅಣ್ವಸ್ತ್ರ ಶಕ್ತಿಗಳ ಅಣ್ವಸ್ತ್ರ ಸಂಗ್ರಹದ ಮೇಲಿರುವ ಏಕೈಕ ಹಾಗೂ ಕೊನೆಯ ಕಾನೂನುಬದ್ಧ ನಿರ್ಬಂಧವನ್ನು ಇಲ್ಲವಾಗಿಸುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ನ್ಯೂ ಸ್ಟಾರ್ಟ್ ಒಪ್ಪಂದದ ಬಗ್ಗೆ:
- New START Treaty ಸಂಕ್ಷಿಪ್ತ ರೂಪ:- ‘ಸ್ಟ್ರಾಟೆಜಿಕ್ ಆರ್ಮ್ಸ್ ರಿಡಕ್ಷನ್ ಟ್ರೀಟಿ’ (ಕಾರ್ಯತಂತ್ರದ ಶಸ್ತ್ರಾಸ್ತ್ರ ಕಡಿತ ಒಪ್ಪಂದ).
ಸ್ಟಾರ್ಟ್-I ಒಪ್ಪಂದದ ಬಗ್ಗೆ:
- ಇದು 1991 ರಲ್ಲಿ ಅಮೆರಿಕ (US) ಮತ್ತು ಹಿಂದಿನ ಸೋವಿಯತ್ ಒಕ್ಕೂಟದ (USSR) ನಡುವೆ ಸಹಿ ಹಾಕಲ್ಪಟ್ಟ ಒಪ್ಪಂದವಾಗಿದ್ದು, 1994 ರಲ್ಲಿ ಜಾರಿಗೆ ಬಂದಿತು.
- ಇದು ಎರಡೂ ರಾಷ್ಟ್ರಗಳಿಗೆ ತಲಾ 6,000 ಅಣ್ವಸ್ತ್ರ ಸಿಡಿತಲೆಗಳು ಮತ್ತು 1,600 ಖಂಡಾಂತರ ಕ್ಷಿಪಣಿಗಳನ್ನು (ICBMs) ಹೊಂದುವ ಮಿತಿಯನ್ನು ವಿಧಿಸಿತ್ತು; ಆದರೆ ಈ ಒಪ್ಪಂದವು 2009 ರಲ್ಲಿ ಮುಕ್ತಾಯಗೊಂಡಿತು.
- ಇದರ ನಂತರ SORT- ‘ಸ್ಟ್ರಾಟೆಜಿಕ್ ಅಫೆನ್ಸಿವ್ ರಿಡಕ್ಷನ್ ಟ್ರೀಟಿ’ (ಮಾಸ್ಕೋ ಒಪ್ಪಂದ) ಜಾರಿಗೆ ಬಂದಿತು. ತದನಂತರ ‘ನ್ಯೂ ಸ್ಟಾರ್ಟ್ ಒಪ್ಪಂದ’ (2010 ರಲ್ಲಿ ಸಹಿ ಹಾಕಲಾಗಿ, 2011 ರಲ್ಲಿ ಜಾರಿಗೆ ಬಂದಿತು) ಅಸ್ತಿತ್ವಕ್ಕೆ ಬಂದಿತು.
ನ್ಯೂ ಸ್ಟಾರ್ಟ್ ಒಪ್ಪಂದದ ಬಗ್ಗೆ:
- ಇದು ಎರಡೂ ರಾಷ್ಟ್ರಗಳು ನಿಯೋಜಿಸಬಹುದಾದ ಕಾರ್ಯತಂತ್ರದ ಅಣ್ವಸ್ತ್ರ ಸಿಡಿತಲೆಗಳ ಸಂಖ್ಯೆಯನ್ನು ತಲಾ 1,550 ಕ್ಕೆ ಮಿತಿಗೊಳಿಸುತ್ತದೆ.
- ಇದಲ್ಲದೆ, ನಿಯೋಜಿತ ಭೂ ಅಥವಾ ಜಲಾಂತರ್ಗಾಮಿ ಉಡಾವಣಾ ಕ್ಷಿಪಣಿಗಳು ಮತ್ತು ಬಾಂಬರ್ ವಿಮಾನಗಳ ಸಂಖ್ಯೆಯನ್ನು 700 ಕ್ಕೆ ಹಾಗೂ ಉಡಾವಣಾ ವಾಹನಗಳ (ಲಾಂಚರ್ಸ್) ಸಂಖ್ಯೆಯನ್ನು 800 ಕ್ಕೆ ಸೀಮಿತಗೊಳಿಸುತ್ತದೆ.
ಒಪ್ಪಂದದ ಮುಕ್ತಾಯದ ಪರಿಣಾಮಗಳು:
- ಒಪ್ಪಂದವಿಲ್ಲದೆ, ರಷ್ಯಾ ಮತ್ತು ಅಮೆರಿಕ ತಮ್ಮ ಅಣ್ವಸ್ತ್ರಗಳ ಸಂಖ್ಯೆಯನ್ನು ಮುಕ್ತವಾಗಿ ವಿಸ್ತರಿಸಬಹುದು. ಇದು ಜಾಗತಿಕ ಉದ್ವಿಗ್ನತೆಯ ನಡುವೆ ನವೀಕೃತ ಅಣ್ವಸ್ತ್ರ ಪೈಪೋಟಿಯ ಅಪಾಯವನ್ನು ತಂದೊಡ್ಡಬಹುದು.
- ಯಾವುದೇ ಚೌಕಟ್ಟು ಇಲ್ಲದಿರುವುದು ಅಣ್ವಸ್ತ್ರದ ಅಪಾಯಗಳನ್ನು ಹೆಚ್ಚಿಸುತ್ತದೆ ಮತ್ತು ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದಗಳು ಒದಗಿಸುವ ಪಾರದರ್ಶಕತೆ ಹಾಗೂ ಸ್ಥಿರತೆಯನ್ನು ಇಲ್ಲವಾಗಿಸುತ್ತದೆ.
ಪ್ರಧಾನ ಮಂತ್ರಿ ವಿರಾಸತ್ ಕಾ ಸಂವರ್ಧನ್ (PM VIKAS)
ಆಡಳಿತ/ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
- ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಯೋಜನಾ ಅನುಷ್ಠಾನ ಸಂಸ್ಥೆಗಳ ಮೂಲಕ ಸುಮಾರು 1.51 ಲಕ್ಷ ಅಲ್ಪಸoಖ್ಯಾತ ಫಲಾನುಭವಿಗಳಿಗೆ ತರಬೇತಿ ನೀಡುವ ಗುರಿಯನ್ನು ‘ಪಿಎಂ ವಿಕಾಸ್’ ಯೋಜನೆಗೆ ನಿಗದಿಪಡಿಸಲಾಗಿದೆ.
ಪ್ರಧಾನ ಮಂತ್ರಿ ವಿರಾಸತ್ ಕಾ ಸಂವರ್ಧನ್ (PM VIKAS) ಯೋಜನೆಯ ಬಗ್ಗೆ:
- ಹಣಕಾಸು:- ಕೇಂದ್ರ ವಲಯದ ಯೋಜನೆಯಾಗಿದೆ.
- ಅನುಷ್ಠಾನ ಸಚಿವಾಲಯ:- ಅಲ್ಪಸoಖ್ಯಾತ ವ್ಯವಹಾರಗಳ ಸಚಿವಾಲಯ.
- ಹಿಂದಿನ 5 ಯೋಜನೆಗಳ ವಿಲೀನ:–
- ಸಿಖೋ ಔರ್ ಕಮಾವೋ
- ನಯಿ ಮಂಜಿಲ್
- ನಯಿ ರೋಶನಿ
- ಉಸ್ತಾದ್’ (USTTAD)
- ಹಮಾರಿ ಧರೋಹರ್
- ಗುರಿ:- ಈ ಯೋಜನೆಯು ಕೌಶಲ್ಯ ಅಭಿವೃದ್ಧಿ, ಅಲ್ಪಸಖ್ಯಾತ ಮಹಿಳೆಯರ ಉದ್ಯಮಶೀಲತೆ ಮತ್ತು ನಾಯಕತ್ವ ಹಾಗೂ ಶಾಲೆಯಿಂದ ಹೊರಗುಳಿದವರಿಗೆ ಶಿಕ್ಷಣ ಬೆಂಬಲವನ್ನು ನೀಡುವ ಮೂಲಕ 6 ಅಧಿಸೂಚಿತ ಅಲ್ಪಸoಖ್ಯಾತ ಸಮುದಾಯಗಳ ಏಳಿಗೆಯತ್ತ ಗಮನಹರಿಸುತ್ತದೆ.
|
ನಿಮಗಿದು ತಿಳಿದಿದೆಯೇ?
|
SFDR ತಂತ್ರಜ್ಞಾನ ಹೊಂದಿರುವ ಗಣ್ಯ ರಾಷ್ಟ್ರಗಳ ಗುಂಪಿಗೆ ಭಾರತ ಸೇರ್ಪಡೆ
ರಕ್ಷಣೆ
ಇದೀಗ ಸುದ್ದಿಯಲ್ಲಿದೆ:
- ಒಡಿಶಾದ ಚಂಡಿಪುರದಲ್ಲಿರುವ ಸಮಗ್ರ ಪರೀಕ್ಷಾ ವಲಯದಿಂದ (ITR) ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯು SFDR- ‘ಸಾಲಿಡ್ ಫ್ಯುಯೆಲ್ ಡಕ್ಟೆಡ್ ರಾಮ್‌ಜೆಟ್’ (ಘನ ಇಂಧನ ನಾಳೀಕೃತ ರಾಮ್‌ಜೆಟ್) ತಂತ್ರಜ್ಞಾನವನ್ನು ಯಶಸ್ವಿಯಾಗಿ ಪ್ರದರ್ಶಿಸಿದೆ. ಈ ಬೆಳವಣಿಗೆಯು ಭಾರತದ ದೀರ್ಘ ಶ್ರೇಣಿಯ ಆಕಾಶದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ಸಾಮರ್ಥ್ಯಗಳನ್ನು ಹೆಚ್ಚಿಸಲಿದೆ.
SFDR- ಸಾಲಿಡ್ ಫ್ಯುಯೆಲ್ ಡಕ್ಟೆಡ್ ರಾಮ್‌ಜೆಟ್ (ಘನ ಇಂಧನ ನಾಳೀಕೃತ ರಾಮ್‌ಜೆಟ್) ತಂತ್ರಜ್ಞಾನದ ಬಗ್ಗೆ:
- ಕ್ಷಿಪಣಿ ಚಾಲನಾ ವ್ಯವಸ್ಥೆಯಾಗಿದೆ:- ಇದು ನಿರಂತರವಾದ ನೂಕುಬಲವನ್ನು ಒದಗಿಸಲು ರಾಮ್‌ಜೆಟ್ ಎಂಜಿನ್ ಅನ್ನು ಬಳಸುತ್ತದೆ.
- ವಾಯು ಹೀರಿಕೊಳ್ಳುವ ವ್ಯವಸ್ಥೆಯಾಗಿದೆ:- ಸಾಂಪ್ರದಾಯಿಕ ರಾಕೆಟ್‌ಗಳಿಗಿಂತ ಭಿನ್ನವಾಗಿ, ಇದೊಂದು ‘ವಾಯು ಹೀರಿಕೊಳ್ಳುವ’ ವ್ಯವಸ್ಥೆಯಾಗಿದೆ; ಅಂದರೆ, ಇದು ಉತ್ಕರ್ಷಕ (ಆಕ್ಸಿಡೈಜರ್)ವನ್ನು ತನ್ನೊಂದಿಗೆ ಕೊಂಡೊಯ್ಯುವುದಿಲ್ಲ, ಬದಲಿಗೆ ವಾತಾವರಣದಲ್ಲಿರುವ ಆಮ್ಲಜನಕವನ್ನೇ ಬಳಸಿಕೊಳ್ಳುತ್ತದೆ.
- ನಳಿಕೆ ರಹಿತ ಘನ ವೇಗವರ್ಧಕ ಬಳಸಿ ಉಡಾವಣೆ:- ರಾಮ್‌ಜೆಟ್ ಎಂಜಿನ್‌ಗಳು ಅಧಿಕ ವೇಗದಲ್ಲಿ ಮಾತ್ರ ಕಾರ್ಯನಿರ್ವಹಿಸುವುದರಿಂದ, ಶಬ್ದಾತೀತ ವೇಗವನ್ನು (ಮ್ಯಾಕ್ 2 ಕ್ಕಿಂತ ಹೆಚ್ಚು) ತಲುಪಲು ಕ್ಷಿಪಣಿಯನ್ನು ಆರಂಭದಲ್ಲಿ ‘ನಳಿಕೆ ರಹಿತ ಘನ ವೇಗವರ್ಧಕ’ ಬಳಸಿ ಉಡಾಯಿಸಲಾಗುತ್ತದೆ.
ಭಾರತಕ್ಕೆ ಕಾರ್ಯತಂತ್ರದ ಮಹತ್ವ:
- ದೀರ್ಘ ಶ್ರೇಣಿಯ ಆಕಾಶದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಗಳು (LRAAM):- SFDR ತಂತ್ರಜ್ಞಾನವು ‘ಅಸ್ತ್ರ ಮಾರ್ಕ್-3’ ಕ್ಷಿಪಣಿಗೆ ಸಾಮರ್ಥ್ಯ ಒದಗಿಸಲಿದ್ದು, ಇದು 150-300 ಕಿ.ಮೀ.ಗಿಂತ ಹೆಚ್ಚಿನ ದೂರದಲ್ಲಿರುವ, ವೇಗವಾಗಿ ಚಲಿಸುವ ಶತ್ರು ವಿಮಾನಗಳನ್ನು ತಡೆಹಿಡಿದು ಧ್ವಂಸಗೊಳಿಸಲು ಸಮರ್ಥವಾಗಿದೆ.
- ವಿಸ್ತೃತ “ನೋ-ಎಸ್ಕೇಪ್ ಜೋನ್” (ತಪ್ಪಿಸಿಕೊಳ್ಳಲು ಅವಕಾಶವಿಲ್ಲದ ವಲಯ):- ಕ್ಷಿಪಣಿಯು ಗುರಿಯನ್ನು ತಲುಪುವ ಅಂತಿಮ ಹಂತದವರೆಗೂ “ಚಾಲಿತ ಸ್ಥಿತಿಯಲ್ಲಿ” ಇರುವುದರಿಂದ, ಇದು ಗುರಿಯ ಸಮೀಪದಲ್ಲಿಯೂ ತೀವ್ರ ಸ್ವರೂಪದ ತಿರುವುಗಳನ್ನು ತೆಗೆದುಕೊಳ್ಳಬಲ್ಲ ಸಾಮರ್ಥ್ಯವನ್ನು ಹೊಂದಿದೆ ; ಇದರಿಂದಾಗಿ ಶತ್ರು ವಿಮಾನಗಳು ತಪ್ಪಿಸಿಕೊಳ್ಳುವುದು ಅಸಾಧ್ಯವಾಗುತ್ತದೆ.
- ಭೂಮಿಯಿಂದ ಆಕಾಶಕ್ಕೆ ಅನ್ವಯ:- ಹೈಪರ್‌ಸಾನಿಕ್ ಅಥವಾ ಅತ್ಯಂತ ವೇಗವಾಗಿ ಚಲಿಸುವ ಕ್ರೂಸ್ ಕ್ಷಿಪಣಿಗಳನ್ನು ಎದುರಿಸಲು, ಇದನ್ನು ಭವಿಷ್ಯದ ‘ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ’ (SAM) ವ್ಯವಸ್ಥೆಗಳಿಗೆ (ಉದಾಹರಣೆಗೆ ಪ್ರಸ್ತಾಪಿತ SAM-X) ಅಳವಡಿಸಿಕೊಳ್ಳಬಹುದಾಗಿದೆ.
ಕೃಷಿ ಮೂಲಸೌಕರ್ಯ ನಿಧಿ (AIF)
ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
- ಕೃಷಿ ಮೂಲಸೌಕರ್ಯ ನಿಧಿಯು (AIF) 2020 ರಿಂದ ಇಲ್ಲಿಯವರೆಗೆ 1.5 ಲಕ್ಷಕ್ಕೂ ಹೆಚ್ಚು ಯೋಜನೆಗಳಿಗೆ ₹80,224.15 ಕೋಟಿ ರೂ.ಗಳ ಸಾಲವನ್ನು ಮಂಜೂರು ಮಾಡಿದ್ದು, ಒಟ್ಟಾರೆಯಾಗಿ ₹1.27 ಲಕ್ಷ ಕೋಟಿ ರೂ.ಗಳ ಹೂಡಿಕೆಯನ್ನು ಕ್ರೂಢೀಕರಿಸಿದೆ.
ಕೃಷಿ ಮೂಲಸೌಕರ್ಯ ನಿಧಿ (AIF)ಯ ಬಗ್ಗೆ:
- ಇದೊಂದು ಕೇಂದ್ರ ವಲಯದ ಯೋಜನೆಯಾಗಿದೆ.
- ಉದ್ದೇಶ:- ಕೊಯ್ಲಿನ ನಂತರದ ನಿರ್ವಹಣಾ ಮೂಲಸೌಕರ್ಯ ಮತ್ತು ಸಮುದಾಯ ಕೃಷಿ ಆಸ್ತಿಗಳ ಅಭಿವೃದ್ಧಿಗಾಗಿ ಮಧ್ಯಮ ಮತ್ತು ದೀರ್ಘಾವಧಿಯ ಸಾಲದ ಮೂಲಕ ಹಣಕಾಸು ಒದಗಿಸುವುದು.
- ಪ್ರಾಮುಖ್ಯತೆ:- ಇದು ಕೃಷಿ ಸರಕು ಸಾಗಣೆಯನ್ನು ಬಲಪಡಿಸುವುದು, ಕೊಯ್ಲಿನ ನಂತರದ ನಷ್ಟವನ್ನು ಕಡಿಮೆ ಮಾಡುವುದು, ಆಧುನಿಕ ಶೇಖರಣಾ ವ್ಯವಸ್ಥೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಘಟಕಗಳನ್ನು ಉತ್ತೇಜಿಸುವುದು ಹಾಗೂ ಪೂರೈಕೆ ಸರಪಳಿಗಳ ದಕ್ಷತೆಗಾಗಿ ‘ಫಾರ್ಮ್-ಗೇಟ್’ (ಹೊಲದ ಬಾಗಿಲಲ್ಲಿಯೇ) ಮಟ್ಟದ ಮೂಲಸೌಕರ್ಯವನ್ನು ಸುಧಾರಿಸುವುದರತ್ತ ಗಮನಹರಿಸುತ್ತದೆ.



ನಿಮ್ಮದೊಂದು ಉತ್ತರ