2026ರ ದೆಹಲಿ ಘೋಷಣೆ | ಜ್ಞಾನ ಭಾರತಂ | ರಾಷ್ಟ್ರೀಯ ಭಾವೈಕ್ಯತೆ ಪರಿಷತ್ತು | ಭಾರತ್-ವಿಸ್ತಾರ್ (Bharat-VISTAAR) | ಗೋಬರ್ಧನ್ ಯೋಜನೆ

2026ರ ದೆಹಲಿ ಘೋಷಣೆ

ಅಂತರರಾಷ್ಟ್ರೀಯ ಸಂಬಂಧಗಳು

ಇದೀಗ ಸುದ್ದಿಯಲ್ಲಿದೆ:

  • ಇತ್ತೀಚಿಗೆ, ಭಾರತವು 2ನೇ ಭಾರತ-ಅರಬ್ ವಿದೇಶಾಂಗ ಸಚಿವರ ಸಭೆಯನ್ನು ಆಯೋಜಿಸಿತ್ತು.

ಅರಬ್ ಲೀಗ್ ಮೈತ್ರಿಕೂಟದ ಬಗ್ಗೆ: 

  • ಇದನ್ನು ಅಧಿಕೃತವಾಗಿ ‘ಲೀಗ್ ಆಫ್ ಅರಬ್ ಸ್ಟೇಟ್ಸ್’ ಎಂದು ಕರೆಯಲಾಗುತ್ತದೆ.
  • ಸ್ಥಾಪನೆ:- 1945 ರಲ್ಲಿ ಈಜಿಪ್ಟ್‌ನ ಕೈರೋದಲ್ಲಿ ಸ್ಥಾಪಿಸಲಾಯಿತು.
  • ಸದಸ್ಯ ರಾಷ್ಟ್ರಗಳು:- 22 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ.
  • ಭಾರತವು ‘ವೀಕ್ಷಕ ಸ್ಥಾನಮಾನ’ವನ್ನು ಹೊಂದಿದೆ:- ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾದಾದ್ಯಂತ ಇರುವ ದೇಶಗಳನ್ನು ಪ್ರತಿನಿಧಿಸುವ ಅರಬ್ ಲೀಗ್‌ನಲ್ಲಿ ಈ ಸ್ಥಾನಮಾನ ಹೊಂದಿದೆ.

ಭಾರತ-ಅರಬ್ ಲೀಗ್ ಸಂಪರ್ಕ:

  • ಭಾರತ-ಅರಬ್ ವಿದೇಶಾಂಗ ಸಚಿವರ ಸಭೆಯು ಅರಬ್ ಲೀಗ್‌ನೊಂದಿಗಿನ ಭಾರತದ ಸಂಪರ್ಕಕ್ಕೆ ಮಾರ್ಗದರ್ಶನ ನೀಡುವ ಅತ್ಯುನ್ನತ ಸಾಂಸ್ಥಿಕ ವ್ಯವಸ್ಥೆಯಾಗಿದೆ.

ದೆಹಲಿ ಘೋಷಣೆಯ ಪ್ರಮುಖ ಅಂಶಗಳು:

  • ದೆಹಲಿ ಘೋಷಣೆಯು ಸುಡಾನ್, ಲಿಬಿಯಾ ಮತ್ತು ಸೋಮಾಲಿಯಾ ದೇಶಗಳ ಸಾರ್ವಭೌಮತ್ವ, ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಬೆಂಬಲವನ್ನು ಪುನರುಚ್ಚರಿಸುತ್ತದೆ.
  • ಸುಡಾನ್:- ಯುಎಇ (UAE) ದೇಶವು’ ಕ್ಷಿಪ್ರ ಬೆಂಬಲ ಪಡೆ’ಗಳನ್ನು  (‘ರಾಪಿಡ್  ಸಪೋರ್ಟ್ ಫೋರ್ಸಸ್’ -RSF) ಬೆಂಬಲಿಸುತ್ತಿದೆ ಎಂದು ಆರೋಪಿಸಲಾಗಿದೆ. ಈ ಪಡೆಯು 2023 ರಿಂದ ಸುಡಾನ್ ಸರ್ಕಾರದ ವಿರುದ್ಧ ಹೋರಾಡುತ್ತಿದೆ ಮತ್ತು 2025 ರಲ್ಲಿ ಸಮಾನಾಂತರ ಸರ್ಕಾರವನ್ನು ರಚಿಸಿದೆ. ಪ್ರಸ್ತುತ ಘೋಷಣೆಯು ಸುಡಾನ್ ಸರ್ಕಾರದ ನಿಲುವಿಗೆ ಬೆಂಬಲ ನೀಡಿದೆ ಮತ್ತು ನಾಗರಿಕರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿದೆ.
  • ಸೋಮಾಲಿಯಾ:- ಇಸ್ರೇಲ್ ಮಾತ್ರ ಸೋಮಾಲಿಲ್ಯಾಂಡ್ ಅನ್ನು ಪ್ರತ್ಯೇಕವೆಂದು ಗುರುತಿಸುತ್ತದೆ; 2025 ರಲ್ಲಿ ಯುಎಇ ಸೋಮಾಲಿಲ್ಯಾಂಡ್ ಪಾಸ್‌ಪೋರ್ಟ್‌ಗಳಿಗೆ ಮಾನ್ಯತೆ ನೀಡಿರುವುದು ಅರಬ್ ಲೀಗ್‌ನ ಒಮ್ಮತದ ನಿಲುವಿನಿಂದ ಭಿನ್ನವಾಗಿದೆ. ಭಾರತವು ಈ ಮಾನ್ಯತೆಯನ್ನು ದೃಢವಾಗಿ ತಿರಸ್ಕರಿಸಿದೆ ಮತ್ತು ಸೋಮಾಲಿಯಾದ ಪ್ರಾದೇಶಿಕ ಸಮಗ್ರತೆಯನ್ನು ಬೆಂಬಲಿಸಿದೆ.
  • ಯೆಮೆನ್:- ‘ಕೆಂಪು ಸಮುದ್ರ’ದಲ್ಲಿ ಹೌತಿ ಬಂಡುಕೋರರು ನಡೆಸುತ್ತಿರುವ ದಾಳಿಯನ್ನು ಭಾರತ ಮತ್ತು ಅರಬ್ ಲೀಗ್ ಸ್ಪಷ್ಟವಾಗಿ ಖಂಡಿಸಿವೆ. 2023 ರ ನಂತರದ ಅವಧಿಯಲ್ಲಿ ಭಾರತವು ಬಳಸುತ್ತಿದ್ದ ಪರೋಕ್ಷ ಭಾಷಾ ಪ್ರಯೋಗದಿಂದ ಇದೀಗ ಉಂಟಾಗಿರುವ ಬದಲಾವಣೆಯನ್ನು ಇದು ಸೂಚಿಸುತ್ತದೆ.
  • ಯೆಮೆನ್‌ನ ಏಕತೆಗೆ ಬೆಂಬಲ ನೀಡುವುದು, ಯುಎಇ ಬೆಂಬಲಿತ ‘ಸದರ್ನ್ ಟ್ರಾನ್ಸಿಷನಲ್ ಕೌನ್ಸಿಲ್’ ನ ವಿರುದ್ಧ ಸೌದಿ ಅರೇಬಿಯಾ ಕೈಗೊಂಡಿರುವ ಕ್ರಮಗಳಿಗೆ ಅನುಗುಣವಾಗಿದೆ.

ಜ್ಞಾನ ಭಾರತಂ

ಸಂಸ್ಕೃತಿ

ಇದೀಗ ಸುದ್ದಿಯಲ್ಲಿದೆ:

  • ಜ್ಞಾನ ಭಾರತಂ ಉಪಕ್ರಮದ ಅಡಿಯಲ್ಲಿ 7.5 ಲಕ್ಷಕ್ಕೂ ಹೆಚ್ಚು ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಈ ಪೈಕಿ 1.29 ಲಕ್ಷ ಹಸ್ತಪ್ರತಿಗಳು ಜ್ಞಾನ ಭಾರತಂ ಪೋರ್ಟಲ್‌ನಲ್ಲಿ ಲಭ್ಯವಿವೆ.

ಜ್ಞಾನ ಭಾರತಂ ಅಭಿಯಾನದ ಬಗ್ಗೆ:

  • ಗುರಿ:- ದೇಶಾದ್ಯಂತ ಕಂಡುಬರುವ ಹಸ್ತಪ್ರತಿಗಳನ್ನು ಸಂರಕ್ಷಿಸುವುದು ಮತ್ತು ರಕ್ಷಿಸುವುದು.
  • ಧ್ಯೇಯೋದ್ದೇಶ:- ಶೈಕ್ಷಣಿಕ ಸಂಸ್ಥೆ, ವಸ್ತುಸಂಗ್ರಹಾಲಯ, ಗ್ರಂಥಾಲಯ ಇತ್ಯಾದಿಗಳಲ್ಲಿ ಲಭ್ಯವಿರುವ ಒಂದು ಕೋಟಿಗೂ ಹೆಚ್ಚು ಹಸ್ತಪ್ರತಿ ಸಂಪತ್ತಿನ “ಸಮೀಕ್ಷೆ, ದಾಖಲೀಕರಣ ಮತ್ತು ಸಂರಕ್ಷಣೆ”ಯನ್ನು ಕೈಗೊಳ್ಳುವುದು.
  • ಅಭಿಯಾನದ ಮಹತ್ವ:- ಐತಿಹಾಸಿಕ ಮೌಲ್ಯವನ್ನು ಕಾಪಾಡುವುದು, ಪ್ರಾಚೀನ ಭಾರತೀಯ ಜ್ಞಾನವನ್ನು ಜಗತ್ತಿಗೆ ಅನಾವರಣಗೊಳಿಸುವುದು, ಹಸ್ತಪ್ರತಿಗಳ ದೀರ್ಘಕಾಲೀನ ಉಳಿವಿಕೆ ಮತ್ತು ದಿನದ 24 ಗಂಟೆಯೂ ಪ್ರವೇಶಾವಕಾಶವನ್ನು ಖಚಿತಪಡಿಸುವುದು ಇತ್ಯಾದಿಗಳನ್ನು ಇದು ಒಳಗೊಂಡಿದೆ.

ಹಸ್ತಪ್ರತಿಗಳ ಬಗ್ಗೆ:

  • ಕೈಬರಹದ ರಚನೆ:- ಹಸ್ತಪ್ರತಿಯು ಕಾಗದ, ಮರದ ತೊಗಟೆ, ತಾಳೆಗರಿ ಇತ್ಯಾದಿಗಳ ಮೇಲಿನ ಕೈಬರಹದ ರಚನೆಯಾಗಿದ್ದು, ಇದು ಕನಿಷ್ಠ 75 ವರ್ಷಗಳಷ್ಟು ಹಳೆಯದಾಗಿರುತ್ತದೆ ಮತ್ತು ಗಮನಾರ್ಹ ವೈಜ್ಞಾನಿಕ, ಐತಿಹಾಸಿಕ ಅಥವಾ ಸೌಂದರ್ಯಾತ್ಮಕ ಮೌಲ್ಯವನ್ನು ಹೊಂದಿರುತ್ತದೆ.
  • ಉದಾಹರಣೆ:- ಭೂರ್ಜ ಮರದ ತೊಗಟೆಯ ಮೇಲೆ ಬರೆಯಲಾದ ಪ್ರಾಚೀನ ಭಾರತದ ಗಣಿತ ಗ್ರಂಥವಾದ ‘ಬಖ್ಶಾಲೀ ಹಸ್ತಪ್ರತಿ’ಯು (ಕ್ರಿ.ಶ. 3 ನೇ ಅಥವಾ 4 ನೇ ಶತಮಾನ), ಸೊನ್ನೆಯ (ಶೂನ್ಯದ) ಬಳಕೆಯ ಅತ್ಯಂತ ಹಳೆಯ ದಾಖಲಿತ ಉದಾಹರಣೆ ಎಂದು ಪರಿಗಣಿಸಲಾಗಿದೆ.
  • ಭಾರತವು ಬ್ರಾಹ್ಮಿ, ಕುಶಾನ್, ಗೌಡಿ, ಲೆಪ್ಚಾ ಮತ್ತು ಮೈಥಿಲಿಯಂತಹ 80 ಪ್ರಾಚೀನ ಲಿಪಿಗಳಲ್ಲಿ ಅಂದಾಜು 10 ದಶಲಕ್ಷ ಹಸ್ತಪ್ರತಿಗಳನ್ನು ಹೊಂದಿದೆ.

ಭಾರತದಲ್ಲಿ ಹಸ್ತಪ್ರತಿ ಸಂರಕ್ಷಣೆಗಾಗಿ ಇರುವ ಇತರ ಉಪಕ್ರಮಗಳು:

  • ರಾಷ್ಟ್ರೀಯ ಹಸ್ತಪ್ರತಿ ಅಭಿಯಾನ (NMM):- ಹಸ್ತಪ್ರತಿಗಳನ್ನು ಪತ್ತೆಹಚ್ಚಲು ಮತ್ತು ಸಂರಕ್ಷಿಸಲು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯವು 2003 ರಲ್ಲಿ ಇದನ್ನು ಪ್ರಾರಂಭಿಸಿತು.
  • ಭಾರತೀಯ ರಾಷ್ಟ್ರೀಯ ಗ್ರಂಥಾಲಯ, ಕೋಲ್ಕತ್ತಾ:- ಈ ಗ್ರಂಥಾಲಯವು ಸುಮಾರು 3600 ಅಪರೂಪದ ಮತ್ತು ಐತಿಹಾಸಿಕವಾಗಿ ಪ್ರಮುಖವಾದ ಹಸ್ತಪ್ರತಿಗಳನ್ನು ಹೊಂದಿದೆ.
  • ಬಂಗಾಳದ ಏಷ್ಯಾಟಿಕ್ ಸೊಸೈಟಿ:- ಸರ್ ವಿಲಿಯಂ ಜೋನ್ಸ್ ಅವರಿಂದ 1784 ರ ಜನವರಿ 15 ರಂದು ಸ್ಥಾಪಿಸಲ್ಪಟ್ಟ ಈ ಸಂಸ್ಥೆಯು, ಪ್ರಾಚೀನ ಹಸ್ತಪ್ರತಿಗಳ ಡಿಜಿಟಲೀಕರಣ ಕಾರ್ಯವನ್ನು ಕೈಗೊಳ್ಳುತ್ತದೆ.

ರಾಷ್ಟ್ರೀಯ ಭಾವೈಕ್ಯತೆ ಪರಿಷತ್ತು

ಆಡಳಿತ

ಇದೀಗ ಸುದ್ದಿಯಲ್ಲಿದೆ: 

  • ಇತ್ತೀಚಿಗೆ, ರಾಜ್ಯಸಭೆಯ ಶೂನ್ಯ ವೇಳೆಯಲ್ಲಿ, ರಾಷ್ಟ್ರೀಯ ಭಾವೈಕ್ಯತೆ ಪರಿಷತ್ತಿಗೆ ಪುನಶ್ಚೇತನ ನೀಡಬೇಕೆಂಬ ಆಗ್ರಹ ವ್ಯಕ್ತವಾಯಿತು.

ರಾಷ್ಟ್ರೀಯ ಭಾವೈಕ್ಯತೆ ಪರಿಷತ್ತಿನ ಬಗ್ಗೆ:

  • ಸ್ಥಾಪನೆ:- 1961
  • ಉದ್ದೇಶ:- ರಾಷ್ಟ್ರೀಯ ಭಾವೈಕ್ಯತೆ, ಕೋಮು ಸೌಹಾರ್ದತೆ ಮತ್ತು ವೈವಿಧ್ಯತೆಯಲ್ಲಿ ಏಕತೆಯನ್ನು ಉತ್ತೇಜಿಸುವುದು ಹಾಗೂ ದೇಶದ ಸಾಮಾಜಿಕ ಒಗ್ಗಟ್ಟಿಗೆ ಧಕ್ಕೆ ತರುವ ಸಮಸ್ಯೆಗಳನ್ನು ಪರಿಹರಿಸುವುದು.
  • ರಚನೆ:- ಕೇಂದ್ರ ಸಚಿವರು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು, ಪ್ರಮುಖ ರಾಜಕೀಯ ಪಕ್ಷಗಳ ನಾಯಕರು, ಗಣ್ಯ ಸಾರ್ವಜನಿಕ ವ್ಯಕ್ತಿಗಳು, ಚಿಂತಕರು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳನ್ನು ಈ ಪರಿಷತ್ತು ಒಳಗೊಂಡಿರುತ್ತದೆ.
  • ಪ್ರಮುಖ ಕಾರ್ಯಗಳು:
    • ಚರ್ಚೆ ಮತ್ತು ಶಿಫಾರಸು:- ಇದು ಕೋಮುವಾದ, ಜಾತಿವಾದ, ಪ್ರಾದೇಶಿಕವಾದ, ಪ್ರತ್ಯೇಕತಾವಾದ ಮತ್ತು ಉಗ್ರವಾದವನ್ನು ಎದುರಿಸಲು ಕ್ರಮಗಳನ್ನು ಚರ್ಚಿಸುತ್ತದೆ ಮತ್ತು ಶಿಫಾರಸು ಮಾಡುತ್ತದೆ.
    • ನೀತಿಗಳ ಕುರಿತು ಸರ್ಕಾರಕ್ಕೆ ಸಲಹೆ:- ಸಾಂವಿಧಾನಿಕ ಮೌಲ್ಯಗಳು, ಜಾತ್ಯತೀತತೆ ಮತ್ತು ಸಾಮಾಜಿಕ ಸೌಹಾರ್ದತೆಯನ್ನು ಬಲಪಡಿಸುವ ನೀತಿಗಳ ಕುರಿತು ಇದು ಸರ್ಕಾರಕ್ಕೆ ಸಲಹೆ ನೀಡುತ್ತದೆ.
    • ಒಮ್ಮತ ಮೂಡಿಸುವ ಒಂದು ವೇದಿಕೆ:- ಸೂಕ್ಷ್ಮ ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಒಮ್ಮತ ಮೂಡಿಸಲು ಇದು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
  • ಸಲಹಾ ಸಂಸ್ಥೆಯಾಗಿದೆ:- ಇದು ಶಾಸನಬದ್ಧ ಅಥವಾ ಸಂವಿಧಾನಾತ್ಮಕ ಸಂಸ್ಥೆಯಲ್ಲ.
  • ಇದರ ಶಿಫಾರಸುಗಳು ಸರ್ಕಾರದ ಮೇಲೆ ಕಡ್ಡಾಯವಾಗಿರುವುದಿಲ್ಲ.
  • ಸಭೆಗಳು ನಿಯಮಿತವಾಗಿ ನಡೆಯುವುದಿಲ್ಲ:- ರಾಷ್ಟ್ರೀಯ ಸಂದರ್ಭಗಳಿಗೆ ಅನುಗುಣವಾಗಿ ಅಗತ್ಯವಿದ್ದಾಗ ಸಭೆಯನ್ನು ಕರೆಯಲಾಗುತ್ತದೆ.
  • ರಾಷ್ಟ್ರೀಯ ಭಾವೈಕ್ಯತಾ ಪರಿಷತ್ತು 2013 ರಿಂದ ಯಾವುದೇ ಸಭೆಯನ್ನು ನಡೆಸಿಲ್ಲ.

ಭಾರತ್-ವಿಸ್ತಾರ್ (Bharat-VISTAAR)

ಆಡಳಿತ,ಕೃಷಿ

ಇದೀಗ ಸುದ್ದಿಯಲ್ಲಿದೆ: 

  • 2026-27 ರ ಕೇಂದ್ರ ಮುಂಗಡ ಪತ್ರದಲ್ಲಿ ‘ಭಾರತ್-ವಿಸ್ತಾರ್’ (Bharat-VISTAAR – ಕೃಷಿ ಸಂಪನ್ಮೂಲಗಳಿಗೆ ಪ್ರವೇಶಿಸಲು ವಾಸ್ತವಿಕ ಸಂಯೋಜಿತ ವ್ಯವಸ್ಥೆ) ಯೋಜನೆಯನ್ನು ಪ್ರಸ್ತಾಪಿಸಲಾಗಿದೆ.

ಭಾರತ್-ವಿಸ್ತಾರ್ (Bharat-VISTAAR) ವ್ಯವಸ್ಥೆಯ ಬಗ್ಗೆ:

  • Bharat-VISTAAR ಸಂಪೂರ್ಣ ರೂಪ:- ವರ್ಚುವಲ್ಲಿ ಇಂಟೆಗ್ರಟೆಡ್ ಸಿಸ್ಟಮ್ ಟು ಅಕ್ಸಸ್ ಅಗ್ರಿಕಲ್ಚರಲ್ ರೆಸೊರ್ಸ್ಸ್ (ಕೃಷಿ ಸಂಪನ್ಮೂಲಗಳಿಗೆ ಪ್ರವೇಶಿಸಲು ವಾಸ್ತವಿಕ ಸಂಯೋಜಿತ ವ್ಯವಸ್ಥೆ).
  • ಬಹುಭಾಷಾ ಎಐ (AI) ಸಾಧನ:- ರೈತರಿಗೆ ಈ ಕೆಳಗಿನವುಗಳ ಕುರಿತು ಅವರ ಸ್ವಂತ ಭಾಷೆಯಲ್ಲಿಯೇ ಮಾಹಿತಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
  • ಬೆಳೆ ಯೋಜನೆ, ಸಾಗುವಳಿ ಕ್ರಮಗಳ ಪ್ಯಾಕೇಜ್ ಮತ್ತು ಕೀಟಬಾಧೆ, ಹವಾಮಾನ ಮುನ್ಸೂಚನೆ, ಮಾರುಕಟ್ಟೆಗಳು, ಯೋಜನೆಯ ಮಾಹಿತಿ, ಅರ್ಹತೆ, ಅರ್ಜಿ ಸಲ್ಲಿಕೆ ಮತ್ತು ಕುಂದುಕೊರತೆ. 
  • ಇದು ‘ಅಗ್ರಿ-ಸ್ಟಾಕ್’ (AgriStack) ಪೋರ್ಟಲ್‌ಗಳು ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR)ಯ ಕೃಷಿ ಪದ್ಧತಿಗಳ ಪ್ಯಾಕೇಜ್ ಅನ್ನು AI ವ್ಯವಸ್ಥೆಗಳೊಂದಿಗೆ ಸಂಯೋಜಿಸಲಿದೆ.
  • ಮಹತ್ವ:- ಇದು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲಿದೆ, ರೈತರು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡಲಿದೆ ಮತ್ತು ರೈತರಿಗೆ ವೈಯಕ್ತೀಕರಿಸಿದ ಸಲಹಾ ಬೆಂಬಲವನ್ನು ನೀಡುವ ಮೂಲಕ ಅಪಾಯವನ್ನು ಕಡಿಮೆ ಮಾಡಲಿದೆ.
  • ಹಣಕಾಸು ಸಚಿವರು ಮುಂದಿನ ಆರ್ಥಿಕ ವರ್ಷಕ್ಕೆ (2026-27) ಭಾರತ್-ವಿಸ್ತಾರ್‌ ಯೋಜನೆಗಾಗಿ ₹ 150 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದ್ದಾರೆ.

ಗೋಬರ್ಧನ್ ಯೋಜನೆ

ಆರ್ಥಿಕತೆ

ಇದೀಗ ಸುದ್ದಿಯಲ್ಲಿದೆ: 

  • ‘ಗೋಬರ್ಧನ್ ಯೋಜನೆ’ಯು ಉದ್ಯೋಗ ಸೃಷ್ಟಿ, ರೈತರ ಆದಾಯ ಹೆಚ್ಚಳ, ಗೊಬ್ಬರ ಮತ್ತು ಜೈವಿಕ ಇಂಧನ ಪೂರೈಕೆ ಸರಪಳಿಯ ಅಭಿವೃದ್ಧಿ ಹಾಗೂ ಗ್ರಾಮೀಣ ಮೂಲಸೌಕರ್ಯಕ್ಕೆ ಬೆಂಬಲ ನೀಡುವ ಮೂಲಕ ಗ್ರಾಮೀಣ ಆರ್ಥಿಕತೆಗೆ ಮಹತ್ತರವಾದ ಕೊಡುಗೆ ನೀಡುತ್ತಿದೆ.

‘ಸಾವಯವ ಜೈವಿಕ-ಕೃಷಿ ಸಂಪನ್ಮೂಲಗಳ ಸಂವರ್ಧನೆ ಮತ್ತು ಧನ್ (GOBARdhan) ಯೋಜನೆ’ಯ ಬಗ್ಗೆ:

  • GOBARdhan ಸಂಪೂರ್ಣ ರೂಪ:- ಗ್ಯಾಲ್ವನೈಸಿಂಗ್ ಆರ್ಗಾನಿಕ್ ಬಯೋ – ಆಗ್ರೋ ರೆಸೊರ್ಸ್ಸ್ ಧನ್.
  • ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಅಡಿಯಲ್ಲಿ ಇದನ್ನು 2018 ರಲ್ಲಿ ಪ್ರಾರಂಭಿಸಲಾಯಿತು.
  • ಉದ್ದೇಶ:- ಹಳ್ಳಿಗಳ ನೈರ್ಮಲ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದು ಮತ್ತು ಜಾನುವಾರು ಹಾಗೂ ಸಾವಯವ ತ್ಯಾಜ್ಯದಿಂದ ಸಂಪತ್ತು ಮತ್ತು ಇಂಧನವನ್ನು ಉತ್ಪಾದಿಸುವುದು.
  • ಮಹತ್ವ:- ಹಳ್ಳಿಗಳನ್ನು ಸ್ವಚ್ಛವಾಗಿಡುವುದು, ಗ್ರಾಮೀಣ ಕುಟುಂಬಗಳ ಆದಾಯವನ್ನು ಹೆಚ್ಚಿಸುವುದು ಮತ್ತು ಜಾನುವಾರುಗಳ ತ್ಯಾಜ್ಯದಿಂದ ಶಕ್ತಿ ಹಾಗೂ ಸಾವಯವ ಗೊಬ್ಬರವನ್ನು ಉತ್ಪಾದಿಸುವುದು.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts