‘ಸ್ಟಾರ್ಟ್-ಅಪ್ ಇಂಡಿಯಾ’ ಉಪಕ್ರಮಕ್ಕೆ ಒಂದು ದಶಕ | 2025: ದಾಖಲೆಯ ಅತ್ಯಂತ ಉಷ್ಣತೆಯ ‘ಲಾ ನಿನಾ’ ವರ್ಷ | ‘ವುಮನಿಯಾ’ (Womaniya) ಉಪಕ್ರಮ | ಬುಡಕಟ್ಟು ವೈದ್ಯರಿಗಾಗಿ ಭಾರತದ ಮೊದಲ ರಾಷ್ಟ್ರೀಯ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮ | ಕಾಮನ್‌ವೆಲ್ತ್ ರಾಷ್ಟ್ರಗಳ ಸಭಾಧ್ಯಕ್ಷರ ಮತ್ತು ಪೀಠಾಸೀನ ಅಧಿಕಾರಿಗಳ (CSPOC) 28ನೇ ಸಮ್ಮೇಳನ | ಗುಜರಾತ್‌ನಲ್ಲಿ- ಅತ್ಯಂತ ಮಾರಕ ರೋಗಕಾರಕಗಳಿಗಾಗಿ ಭಾರತದ ಮೊದಲ ಸರ್ಕಾರಿ ಅನುದಾನಿತ BSL-4 ಪ್ರಯೋಗಾಲಯ

‘ಸ್ಟಾರ್ಟ್-ಅಪ್ ಇಂಡಿಯಾ’ ಉಪಕ್ರಮಕ್ಕೆ ಒಂದು ದಶಕ

ಸಾಮಾನ್ಯ ಅಧ್ಯಯನ-3/ಆರ್ಥಿಕತೆ

ಇದೀಗ ಸುದ್ದಿಯಲ್ಲಿದೆ: 

  • ರಾಷ್ಟ್ರೀಯ ಸ್ಟಾರ್ಟ್-ಅಪ್ (ನವೋದ್ಯಮ) ದಿನವಾದ ಜನವರಿ 16 ರಂದು, ‘ಸ್ಟಾರ್ಟ್-ಅಪ್ ಇಂಡಿಯಾ’ ಉಪಕ್ರಮವು ಒಂದು ದಶಕವನ್ನು ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಿದರು.

ಸ್ಟಾರ್ಟ್-ಅಪ್ ಇಂಡಿಯಾ ಉಪಕ್ರಮದ ಬಗ್ಗೆ:

  • ಪ್ರಾರಂಭ:- ಜನವರಿ 16, 2016.
  • ಉದ್ದೇಶ:- ಉದ್ಯಮಶೀಲತೆಯನ್ನು ಉತ್ತೇಜಿಸುವುದು ಮತ್ತು ಹೂಡಿಕೆ ಆಧಾರಿತ ಬೆಳವಣಿಗೆಯನ್ನು ಸಾಧ್ಯವಾಗಿಸುವುದು.

ಭಾರತದ ನವೋದ್ಯಮ (ಸ್ಟಾರ್ಟ್-ಅಪ್) ಪರಿಸರ ವ್ಯವಸ್ಥೆಯ ಬಗ್ಗೆ:

  • 2025ರ ವೇಳೆಗೆ 2 ಲಕ್ಷಕ್ಕೂ ಹೆಚ್ಚು ನವೋದ್ಯಮಗಳನ್ನು ಹೊಂದುವ ಮೂಲಕ, ಭಾರತವು ವಿಶ್ವದ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿ ತ್ವರಿತವಾಗಿ ರೂಪುಗೊಂಡಿದೆ.
  • ಭಾರತವು ವಿಶ್ವದಲ್ಲೇ 3ನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಹೊಂದಿದೆ.
  • ಬೆಂಗಳೂರು, ಹೈದರಾಬಾದ್, ಮುಂಬೈ ಮತ್ತು ದೆಹಲಿ-ಎನ್‌ಸಿಆರ್ (ರಾಷ್ಟ್ರ ರಾಜಧಾನಿ ಪ್ರದೇಶ)ನಂತಹ ಪ್ರಮುಖ ಕೇಂದ್ರಗಳು ಈ ಪರಿವರ್ತನೆಯ ಮುಂಚೂಣಿಯಲ್ಲಿವೆ.
  • ಭಾರತವು $350 ಬಿಲಿಯನ್‌ಗೂ ಅಧಿಕ ಮೌಲ್ಯವನ್ನು ಹೊಂದಿರುವ 120 ಕ್ಕೂ ಹೆಚ್ಚು ಯುನಿಕಾರ್ನ್‌ಗಳನ್ನು ಹೊಂದಿದೆ.

ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (WIPO)ಯ – ಜಾಗತಿಕ ನಾವೀನ್ಯತೆ ಸೂಚ್ಯಂಕ (GII), 2025 ರ ಶ್ರೇಯಾಂಕ:

  • ಇದು ಕಾರ್ಯಕ್ಷಮತೆಯ ಮಾನದಂಡಗಳನ್ನು ಒದಗಿಸುತ್ತದೆ ಮತ್ತು ಸುಮಾರು 140 ಆರ್ಥಿಕತೆಗಳನ್ನು ಅವುಗಳ ನಾವೀನ್ಯತೆ ಪರಿಸರ ವ್ಯವಸ್ಥೆಗಳ ಆಧಾರದ ಮೇಲೆ ಶ್ರೇಣೀಕರಿಸುತ್ತದೆ.
  • ಭಾರತವು 2020 ರಲ್ಲಿನ 48 ನೇ ಸ್ಥಾನದಿಂದ 2025 ರಲ್ಲಿ 38 ನೇ ಸ್ಥಾನಕ್ಕೆ ಸ್ಥಿರವಾದ ಏರಿಕೆಯನ್ನು ಕಂಡಿದೆ.

2025: ದಾಖಲೆಯ ಅತ್ಯಂತ ಉಷ್ಣತೆಯ ‘ಲಾ ನಿನಾ’ ವರ್ಷ

ಸಾಮಾನ್ಯ ಅಧ್ಯಯನ-1/ಭೂಗೋಳಶಾಸ್ತ್ರ/ಸಾಮಾನ್ಯ ಅಧ್ಯಯನ-3/ಪರಿಸರ

ಇದೀಗ ಸುದ್ದಿಯಲ್ಲಿದೆ: 

  • ಹೊಸ ವರದಿಯೊಂದರ ಪ್ರಕಾರ, 2025 ದಾಖಲಾದ 3 ನೇ ಅತ್ಯಂತ ಉಷ್ಣತೆಯ ವರ್ಷ ಮತ್ತು ಇತಿಹಾಸದಲ್ಲೇ ಅತ್ಯಂತ ಉಷ್ಣತೆಯ ‘ಲಾ ನಿನಾ’ ವರ್ಷವಾಗಿದೆ.

“ಲಾ ನಿನಾ” ಬಗ್ಗೆ:

  • ಇದೊಂದು ಪೆಸಿಫಿಕ್ ಮಹಾಸಾಗರದ ಹವಾಮಾನ ಮಾದರಿಯಾಗಿದ್ದು, ಇದರಲ್ಲಿ ಬೆಚ್ಚಗಿನ ಸಾಗರದ ನೀರು ಮತ್ತು ಮೋಡಗಳು ಪಶ್ಚಿಮದ ಕಡೆಗೆ ಸ್ಥಳಾಂತರಗೊಳ್ಳುತ್ತವೆ.
  • ಸಾಮಾನ್ಯಕ್ಕಿಂತ ಭಾರೀ ಮಳೆ:- ಈ ಪ್ರಕ್ರಿಯೆಯು ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾದಂತಹ ಪ್ರದೇಶಗಳಲ್ಲಿ ಭಾರೀ ಮಳೆಗೆ ಕಾರಣವಾಗುತ್ತದೆ.
  • ಸಾಮಾನ್ಯಕ್ಕಿಂತ ಹೆಚ್ಚು ಶುಷ್ಕ ಪರಿಸ್ಥಿತಿ:- ಇದಕ್ಕೆ ವ್ಯತಿರಿಕ್ತವಾಗಿ, ಅಮೆರಿಕದ ನೈಋತ್ಯ ಭಾಗದ ಪ್ರದೇಶಗಳು ಈ ಪರಿಸ್ಥಿತಿಗಳನ್ನು ಅನುಭವಿಸುತ್ತವೆ.

ಭಾರತದ ಮೇಲೆ El-Nino ಮತ್ತು La-Nina ಪ್ರಭಾವಗಳು:

  • ‘ಎಲ್ ನಿನೊ’ ಸಾಮಾನ್ಯವಾಗಿ ಕಡಿಮೆ ಮಳೆ ಮತ್ತು ಹೆಚ್ಚಿನ ತಾಪಮಾನಕ್ಕೆ ಕಾರಣವಾಗುತ್ತದೆ.
  • ‘ಲಾ ನಿನಾ’ ಹೆಚ್ಚಿನ ಮಳೆ ಮತ್ತು ತಂಪಾದ ತಾಪಮಾನವನ್ನು ತರುತ್ತದೆ.

‘ವುಮನಿಯಾ’ (Womaniya) ಉಪಕ್ರಮ

ಸಾಮಾನ್ಯ ಅಧ್ಯಯನ-1/ಮಹಿಳಾ ಸಬಲೀಕರಣ

ಇದೀಗ ಸುದ್ದಿಯಲ್ಲಿದೆ:

  • ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (GeM) ಅಡಿಯಲ್ಲಿ ಜಾರಿಗೊಳಿಸಲಾದ ‘ವುಮೆನಿಯಾ’ ಉಪಕ್ರಮವು, ತನ್ನ ಅನುಷ್ಠಾನದ 7 ವರ್ಷಗಳನ್ನು ಪೂರೈಸಿದೆ.

‘ವುಮೆನಿಯಾ’ (Womaniya) ಉಪಕ್ರಮದ ಬಗ್ಗೆ:

  • ಪ್ರಾರಂಭ:- 2019
  • ಉದ್ದೇಶ:- ಖರೀದಿದಾರರೊಂದಿಗೆ ನೇರ, ಪಾರದರ್ಶಕ ಮತ್ತು ಸಂಪೂರ್ಣ ಡಿಜಿಟಲ್ ಸಂಪರ್ಕವನ್ನು ಕಲ್ಪಿಸುವ ಮೂಲಕ, ಮಧ್ಯವರ್ತಿಗಳನ್ನು ಹಾಗೂ ಪ್ರವೇಶಕ್ಕಿರುವ ಅಡೆತಡೆಗಳನ್ನು ನಿವಾರಿಸಿ, ಮಹಿಳಾ ಉದ್ಯಮಿ ಮತ್ತು ಸ್ವಸಹಾಯ ಸಂಘಗಳಿಗೆ ಸರ್ಕಾರಿ ಮಾರುಕಟ್ಟೆಗಳಲ್ಲಿ ಪ್ರವೇಶವನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ.
  • ಮಹತ್ವ:- ಸಾರ್ವಜನಿಕ ಸಂಗ್ರಹಣೆಯಲ್ಲಿ ಮಹಿಳೆಯರ ನೇತೃತ್ವದ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಭಾಗವಹಿಸುವಿಕೆಯನ್ನು ಬಲಪಡಿಸುವ ಗುರಿಯನ್ನು ಇದು ಹೊಂದಿದೆ.

ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (GeM)ನ ಬಗ್ಗೆ:

  • ಸ್ಥಾಪನೆ:- 2016.
  • ಆನ್‌ಲೈನ್ ಮಾರುಕಟ್ಟೆ ವೇದಿಕೆ:- ಇದರಲ್ಲಿ ಸರ್ಕಾರಿ ಸಚಿವಾಲಯಗಳು, ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳು (PSU) ಸರಕು ಮತ್ತು ಸೇವೆಗಳನ್ನು ಖರೀದಿಸಲು ಅನುಕೂಲವಾಗುತ್ತದೆ. 
  • ಇದನ್ನು ‘ಭಾರತದ ರಾಷ್ಟ್ರೀಯ ಸಂಗ್ರಹಣಾ ಪೋರ್ಟಲ್’ ಎಂತಲೂ ಕರೆಯಲಾಗುತ್ತದೆ
  • ಅಭಿವೃದ್ಧಿಪಡಿಸಿದವರು:- ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಷ್ಟ್ರೀಯ ಇ-ಆಡಳಿತ  ವಿಭಾಗದ ತಾಂತ್ರಿಕ ಬೆಂಬಲದೊಂದಿಗೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಸರಬರಾಜು ಮತ್ತು ವಿಲೇವಾರಿ ಮಹಾನಿರ್ದೇಶನಾಲಯ.
  • ಕಾರ್ಯನಿರ್ವಹಣೆ:- ಇದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಸರಬರಾಜು ಮತ್ತು ವಿಲೇವಾರಿ ಮಹಾನಿರ್ದೇಶನಾಲಯ (DGS&D).
  • ಮಹತ್ವ:- GeM ಸಂಪೂರ್ಣವಾಗಿ ಕಾಗದರಹಿತ, ನಗದುರಹಿತ ಮತ್ತು ವ್ಯವಸ್ಥೆ ಚಾಲಿತ ಇ-ಮಾರುಕಟ್ಟೆಯಾಗಿದ್ದು, ಇದು ಕನಿಷ್ಠ ಮಾನವ ಹಸ್ತಕ್ಷೇಪದೊಂದಿಗೆ ಸಾಮಾನ್ಯ ಬಳಕೆಯ ಸರಕು ಮತ್ತು ಸೇವೆಗಳ ಖರೀದಿಯನ್ನು ಸಾಧ್ಯವಾಗಿಸುತ್ತದೆ.

ಬುಡಕಟ್ಟು ವೈದ್ಯರಿಗಾಗಿ ಭಾರತದ ಮೊದಲ ರಾಷ್ಟ್ರೀಯ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮ

ಸಾಮಾನ್ಯ ಅಧ್ಯಯನ – 2/ಆಡಳಿತ

ಇದೀಗ ಸುದ್ದಿಯಲ್ಲಿದೆ:

  • ಬುಡಕಟ್ಟು ಪ್ರದೇಶಗಳಲ್ಲಿ ಆರೋಗ್ಯ ಸೇವೆಯ ವ್ಯಾಪ್ತಿಯನ್ನು ಬಲಪಡಿಸುವ ಉದ್ದೇಶದಿಂದ, ಬುಡಕಟ್ಟು ವ್ಯವಹಾರಗಳ ಸಚಿವಾಲಯವು (MoTA) ‘ಬುಡಕಟ್ಟು ವೈದ್ಯರಿಗಾಗಿ ಭಾರತದ ಮೊದಲ ರಾಷ್ಟ್ರೀಯ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮ’ವನ್ನು ಆಯೋಜಿಸುತ್ತಿದೆ.

‘ಬುಡಕಟ್ಟು ವೈದ್ಯರಿಗಾಗಿ ಭಾರತದ ಮೊದಲ ರಾಷ್ಟ್ರೀಯ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮ’ದ ಬಗ್ಗೆ:

  • ಸಮುದಾಯ ಮಟ್ಟದ ವಿಶ್ವಾಸಾರ್ಹ ಪಾಲುದಾರ:- ಬುಡಕಟ್ಟು ಮತ್ತು ಸ್ಥಳೀಯ ವೈದ್ಯರನ್ನು ಭಾರತದ ಸಾರ್ವಜನಿಕ ಆರೋಗ್ಯ ಪರಿಸರ ವ್ಯವಸ್ಥೆಯೊಳಗೆ, ಸಮುದಾಯ ಮಟ್ಟದ ವಿಶ್ವಾಸಾರ್ಹ ಪಾಲುದಾರರನ್ನಾಗಿ ಗುರುತಿಸುವುದು ಮತ್ತು ಅವರನ್ನು ಮುಖ್ಯವಾಹಿನಿಯೊಂದಿಗೆ ಸಂಯೋಜಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ.
  • ಈ ವೈದ್ಯರು ಆಳವಾದ ಜನಾಂಗೀಯ-ಔಷಧೀಯ ಜ್ಞಾನವನ್ನು ಹೊಂದಿರುತ್ತಾರೆ. ಇವರು ಸಮುದಾಯದ ಜನರಿಗೆ ಸುಲಭವಾಗಿ ಲಭ್ಯವಿರುತ್ತಾರೆ ಮತ್ತು ಆರೋಗ್ಯ ಸೇವೆಗಳಿಗಾಗಿ ಜನರು ಆಶ್ರಯಿಸುವ ‘ಮೊದಲ ಸಂಪರ್ಕ ಬಿಂದುಗಳಾಗಿ’ ಕಾರ್ಯನಿರ್ವಹಿಸುತ್ತಾರೆ..
  • ಅನುಷ್ಠಾನ:- “ಪ್ರಾಜೆಕ್ಟ್ ದೃಷ್ಟಿ” (DRISTI)ಯ ಅಡಿಯಲ್ಲಿ ಭಾರತದ ಮೊದಲ ರಾಷ್ಟ್ರೀಯ ಬುಡಕಟ್ಟು ಆರೋಗ್ಯ ವೀಕ್ಷಣಾಲಯವಾದ, ‘ಭಾರತ್ ಬುಡಕಟ್ಟು ಆರೋಗ್ಯ ವೀಕ್ಷಣಾಲಯ’ (B-THO)ವನ್ನು ಸ್ಥಾಪಿಸುವ ಸಲುವಾಗಿ, ICMR – ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯದ (MoTA) ನಡುವೆ ತಿಳುವಳಿಕಾ ಒಡಂಬಡಿಕೆಗೆ (MoU) ಸಹಿ ಹಾಕಲಾಗುವುದು.

ಕಾಮನ್‌ವೆಲ್ತ್ ರಾಷ್ಟ್ರಗಳ ಸಭಾಧ್ಯಕ್ಷರ ಮತ್ತು ಪೀಠಾಸೀನ ಅಧಿಕಾರಿಗಳ (CSPOC) 28ನೇ ಸಮ್ಮೇಳನ

ಸಾಮಾನ್ಯ ಅಧ್ಯಯನ – 2/ಆಡಳಿತ

ಇದೀಗ ಸುದ್ದಿಯಲ್ಲಿದೆ:

  • ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಸಂವಿಧಾನ ಸದನ’ದಲ್ಲಿ ಆಯೋಜಿಸಲಾಗಿದ್ದ “CSPOC- ಕಾಮನ್‌ವೆಲ್ತ್ ರಾಷ್ಟ್ರಗಳ ಸಭಾಧ್ಯಕ್ಷರ (Speakers) ಮತ್ತು ಪೀಠಾಸೀನ ಅಧಿಕಾರಿಗಳ (Presiding Officers) 28ನೇ ಸಮ್ಮೇಳನ”ವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತವು ತನ್ನ ವೈವಿಧ್ಯತೆಯನ್ನು ಹೇಗೆ ಪ್ರಜಾಸತ್ತಾತ್ಮಕ ಶಕ್ತಿಯನ್ನಾಗಿ ಪರಿವರ್ತಿಸಿಕೊಂಡಿದೆ ಎಂಬುದನ್ನು ಎತ್ತಿ ತೋರಿಸಿದರು.

ಈ 28ನೇ ಸಮ್ಮೇಳನದ ಬಗ್ಗೆ:

  • ಈ ಸಮ್ಮೇಳನದಲ್ಲಿ 42 ಕಾಮನ್‌ವೆಲ್ತ್ ರಾಷ್ಟ್ರಗಳನ್ನು ಪ್ರತಿನಿಧಿಸುವ 61 ಸಭಾಧ್ಯಕ್ಷರು ಮತ್ತು ಪೀಠಾಸೀನ ಅಧಿಕಾರಿಗಳು ಭಾಗವಹಿಸಿದ್ದರು.
  • ಉದ್ದೇಶ:- ಸಂಸದೀಯ ಪ್ರಜಾಪ್ರಭುತ್ವದ ವಿವಿಧ ಸ್ವರೂಪಗಳ ಕುರಿತು ಜ್ಞಾನ ಮತ್ತು ತಿಳುವಳಿಕೆಯನ್ನು ಉತ್ತೇಜಿಸುವುದು ಹಾಗೂ ಸಂಸದೀಯ ಸಂಸ್ಥೆಗಳನ್ನು ಅಭಿವೃದ್ಧಿಪಡಿಸುವುದು.
  • ಅಧ್ಯಕ್ಷತೆ:- ಲೋಕಸಭೆಯ ಸಭಾಧ್ಯಕ್ಷರಾದ ‘ಓಂ ಬಿರ್ಲಾ’ ಅವರು ಈ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾಮನ್‌ವೆಲ್ತ್ ರಾಷ್ಟ್ರಗಳ ಬಗ್ಗೆ:

  • ಸದಸ್ಯ ರಾಷ್ಟ್ರಗಳು:- 56 ಸ್ವತಂತ್ರ ಸದಸ್ಯ ರಾಷ್ಟ್ರಗಳ ಸ್ವಯಂಪ್ರೇರಿತ ಒಕ್ಕೂಟವಾಗಿದೆ. 
  • ಈ ಸದಸ್ಯ ರಾಷ್ಟ್ರಗಳನ್ನು 5 ಪ್ರದೇಶವಾರು ಸದಸ್ಯ ರಾಷ್ಟ್ರಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ, 
  1. ಆಫ್ರಿಕಾ (21), ಏಷ್ಯಾ (8), ಕೆರಿಬಿಯನ್ ಮತ್ತು ಅಮೆರಿಕ (13), ಯುರೋಪ್ (3), ಮತ್ತು ಪೆಸಿಫಿಕ್ (11).
  2. ಈ ದೇಶಗಳು ಒಟ್ಟಾಗಿ ಸುಮಾರು 2.7 ಬಿಲಿಯನ್ ಜನಸಂಖ್ಯೆಯನ್ನು ಪ್ರತಿನಿಧಿಸುತ್ತವೆ ಮತ್ತು ಇದು ವಿಶ್ವದ ಒಟ್ಟು ಜನಸಂಖ್ಯೆಯ ಸುಮಾರು ಮೂರನೇ ಒಂದರಷ್ಟು ಭಾಗವಾಗಿದೆ.
  • ಯಾವುದೇ ರಾಷ್ಟ್ರ ಸೇರ್ಪಡೆಯಾಗಲಬಹುದು:- ಇಲ್ಲಿನ ಬಹುಪಾಲು ಸದಸ್ಯ ರಾಷ್ಟ್ರಗಳು ಬ್ರಿಟಿಷ್ ಸಾಮ್ರಾಜ್ಯದ ಹಿಂದಿನ ಪ್ರಾಂತ್ಯಗಳಾಗಿದ್ದರೂ, ಒಕ್ಕೂಟದ ಮೌಲ್ಯಗಳಿಗೆ ಬದ್ಧವಾಗಿರುವ ಯಾವುದೇ ರಾಷ್ಟ್ರವು ಇದಕ್ಕೆ ಸೇರ್ಪಡೆಯಾಗಲು ಅರ್ಜಿ ಸಲ್ಲಿಸಬಹುದಾಗಿದೆ.

ಕಾಮನ್‌ವೆಲ್ತ್ ರಾಷ್ಟ್ರಗಳ ಪ್ರಮುಖ ಸಂಗತಿಗಳು ಮತ್ತು ಆಡಳಿತ:

  • ಕಾಮನ್‌ವೆಲ್ತ್ ಮುಖ್ಯಸ್ಥರು:- ಕಿಂಗ್ ಚಾರ್ಲ್ಸ್ III ಅವರು ಈ ಒಕ್ಕೂಟದ ಸಾಂಕೇತಿಕ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಾರೆ.
  • ಮಹಾಕಾರ್ಯದರ್ಶಿ:- ಷಿರ್ಲಿ ಅಯೋರ್ಕರ್ ಬೋಚ್ವೆ
  • ಬ್ರಿಟಿಷ್ ಇತಿಹಾಸ ಹೊಂದಿರದ ರಾಷ್ಟ್ರಗಳು:- ಮೊಜಾಂಬಿಕ್, ರುವಾಂಡಾ, ಗ್ಯಾಬನ್ ಮತ್ತು ಟೋಗೊ ರಾಷ್ಟ್ರಗಳು, ಯುನೈಟೆಡ್ ಕಿಂಗ್‌ಡಮ್‌ನೊಂದಿಗೆ ಯಾವುದೇ ಐತಿಹಾಸಿಕ ಸಂಪರ್ಕವನ್ನು ಹೊಂದಿರದಿದ್ದರೂ ಒಕ್ಕೂಟಕ್ಕೆ ಸೇರ್ಪಡೆಗೊಂಡಿವೆ.
  • ಅತಿದೊಡ್ಡ ಮತ್ತು ಚಿಕ್ಕ ರಾಷ್ಟ್ರಗಳು:- ಭಾರತವು ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಸದಸ್ಯ ರಾಷ್ಟ್ರವಾಗಿದ್ದರೆ, ನೌರು ಮತ್ತು ತುವಾಲು ಅತ್ಯಂತ ಚಿಕ್ಕ ರಾಷ್ಟ್ರಗಳಾಗಿವೆ.
  • ಕಾಮನ್‌ವೆಲ್ತ್ ಸರ್ಕಾರದ ಮುಖ್ಯಸ್ಥರ ಸಭೆ (CHOGM):- ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ಮುಂದಿನ ಸಭೆಯು 2026 ರ ಅಂತ್ಯದಲ್ಲಿ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ನಡೆಯಲಿದೆ.

ಗುಜರಾತ್‌ನಲ್ಲಿ- ಅತ್ಯಂತ ಮಾರಕ ರೋಗಕಾರಕಗಳಿಗಾಗಿ ಭಾರತದ ಮೊದಲ ಸರ್ಕಾರಿ ಅನುದಾನಿತ BSL-4 ಪ್ರಯೋಗಾಲಯ

ಸಾಮಾನ್ಯ ಅಧ್ಯಯನ – 2/ಆರೋಗ್ಯ;ಸಾಮಾನ್ಯ ಅಧ್ಯಯನ – 3/ವಿಜ್ಞಾನ ಮತ್ತು ತಂತ್ರಜ್ಞಾನ

ಇದೀಗ ಸುದ್ದಿಯಲ್ಲಿದೆ:

  • ಕೇಂದ್ರ ಗೃಹ ಸಚಿವರು ಗಾಂಧಿನಗರದಲ್ಲಿ ‘ಜೈವಿಕ ಸುರಕ್ಷತಾ ಹಂತ-4’ (BSL-4) ನಿಯಂತ್ರಣ ಸೌಲಭ್ಯ ಮತ್ತು ಪ್ರಯೋಗಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಅವರು, ಇದನ್ನು ಭಾರತದ “ಆರೋಗ್ಯ ಕವಚ” ಎಂದು ಬಣ್ಣಿಸಿದರು.

ಜೈವಿಕ ಸುರಕ್ಷತಾ ಹಂತ-4 (BSL-4) ಪ್ರಯೋಗಾಲಯ ಸೌಲಭ್ಯದ ಬಗ್ಗೆ:

  • ಇವುಗಳು ಜೈವಿಕ ನಿಯಂತ್ರಣದ ಅತ್ಯುನ್ನತ ಗುಣಮಟ್ಟವನ್ನು ಪ್ರತಿನಿಧಿಸುತ್ತವೆ.
  • ಲಸಿಕೆಗಳು ಅಥವಾ ಚಿಕಿತ್ಸೆಗಳು ಲಭ್ಯವಿಲ್ಲದ, ವಿಶ್ವದ ಅತ್ಯಂತ ಅಪಾಯಕಾರಿ ಮತ್ತು ಹೆಚ್ಚು ಸಾಂಕ್ರಾಮಿಕ ರೋಗಕಾರಕಗಳನ್ನು ಸುರಕ್ಷಿತವಾಗಿ ಅಧ್ಯಯನ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ.
  • ವಿಜ್ಞಾನಿಗಳು ಇಲ್ಲಿ ಸುಧಾರಿತ ಸಂಶೋಧನೆಯನ್ನು ನಡೆಸುತ್ತಾರೆ; ರೋಗನಿರ್ಣಯ ವಿಧಾನಗಳು, ಲಸಿಕೆಗಳು ಮತ್ತು ಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿಪಡಿಸುತ್ತಾರೆ. ಅಲ್ಲದೆ, ಕಟ್ಟುನಿಟ್ಟಾದ ನಿಯಂತ್ರಿತ ಮತ್ತು ಅಂತಾರಾಷ್ಟ್ರೀಯ ನಿಗಾ ವ್ಯವಸ್ಥೆಯ ಅಡಿಯಲ್ಲಿ, ರೋಗ ಉಲ್ಬಣದ ತನಿಖೆ ಮತ್ತು ತ್ವರಿತ ಪ್ರತಿಕ್ರಿಯೆ ಕಾರ್ಯಗಳನ್ನು ಇಲ್ಲಿ ಕೈಗೊಳ್ಳಲಾಗುತ್ತದೆ.
  • ಮಹತ್ವ:- ಗಾಂಧಿನಗರದಲ್ಲಿ ನಿರ್ಮಾಣವಾಗಲಿರುವ BSL-4 ಪ್ರಯೋಗಾಲಯವು, ‘ಪ್ರಾಣಿಗಳ ಜೈವಿಕ ಸುರಕ್ಷತಾ ಹಂತ’ದ ಸೌಲಭ್ಯದೊಂದಿಗೆ, ಕಾರ್ಯತಂತ್ರದ ರಾಷ್ಟ್ರೀಯ ಆಸ್ತಿಯಾಗಲಿದೆ. ಇಲ್ಲಿ ಎಬೋಲಾ ವೈರಸ್, ಮಾರ್ಬರ್ಗ್ ವೈರಸ್, ಕ್ರಿಮಿಯನ್-ಕಾಂಗೋ ಹೆಮರಾಜಿಕ್ ಜ್ವರ (CCHF) ವೈರಸ್, ಕ್ಯಾಸನೂರು ಅರಣ್ಯ ಕಾಯಿಲೆ ವೈರಸ್ (KFD) ಮತ್ತು ನಿಫಾ ವೈರಸ್ ಸೇರಿದಂತೆ ಮಾನವಕುಲಕ್ಕೆ ತಿಳಿದಿರುವ ಅತ್ಯಂತ ಮಾರಕ ರೋಗಕಾರಕಗಳ ಮೇಲೆ ಸಂಶೋಧನೆ ನಡೆಸಲಾಗುತ್ತದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts