ರಾಷ್ಟ್ರೀಯ ಯುವ ದಿನಾಚರಣೆ 2026
ಇತರೆ ವಿಷಯಗಳು
ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿಗೆ, ಸ್ವಾಮಿ ವಿವೇಕಾನಂದ ಅವರ ಜನ್ಮದಿನದ ಅಂಗವಾಗಿ, ಜನವರಿ 12 ರಂದು ‘ರಾಷ್ಟ್ರೀಯ ಯುವ ದಿನಾಚರಣೆ”ಯನ್ನು ಆಚರಿಸಲಾಯಿತು.
ರಾಷ್ಟ್ರೀಯ ಯುವ ದಿನಾಚರಣೆಯ ಬಗ್ಗೆ:
- ಜನವರಿ 12 ರಂದು ಸ್ವಾಮಿ ವಿವೇಕಾನಂದರ ಜನ್ಮದಿನ:- ಶ್ರೇಷ್ಠ ಆಧ್ಯಾತ್ಮಿಕ ನಾಯಕ, ತತ್ವಜ್ಞಾನಿ ಮತ್ತು ಚಿಂತಕ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಪ್ರತಿ ವರ್ಷ ಜನವರಿ 12 ರಂದು ಇದನ್ನು ಆಚರಿಸಲಾಗುತ್ತದೆ.
- ಯುವಜನರ ಸಾಮರ್ಥ್ಯದ ಮೇಲಿನ ಅವರ ಅಚಲವಾದ ನಂಬಿಕೆಯು, ದೇಶದ ಯುವ ನಾಗರಿಕರ ಮನದಲ್ಲಿ ಇಂದಿಗೂ ಆಳವಾಗಿ ಪ್ರತಿಧ್ವನಿಸುತ್ತಿದೆ.
- ಶಿಕ್ಷಣ, ನವೋದ್ಯಮಗಳು, ಸೇವೆ ಮತ್ತು ನಾಯಕತ್ವದ ಮೂಲಕ ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಭಾರತದ ಯುವಜನರ ಪ್ರಮುಖ ಪಾತ್ರವನ್ನು ‘ರಾಷ್ಟ್ರೀಯ ಯುವ ದಿನ 2026’ ಎತ್ತಿ ತೋರಿಸುತ್ತದೆ.
- ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿ ಪಡೆದ ಈ ದಿನವು, ಯುವಕರು ಕೇವಲ ಉತ್ತರಾಧಿಕಾರಿಗಳಲ್ಲ, ಬದಲಿಗೆ “2047 ರ ವಿಕಸಿತ ಭಾರತ ಕನಸಿನತ್ತ ಸಾಗುವ ಭಾರತದ ಪಯಣದ ಶಿಲ್ಪಿಗಳು” ಎಂಬುದನ್ನು ಒತ್ತಿಹೇಳುತ್ತದೆ.
ಯುವಕರಿಗಾಗಿ ಸರ್ಕಾರದ ಉಪಕ್ರಮಗಳು:
- ಮೇರಾ ಯುವ ಭಾರತ್ (MY Bharat):– ಇದು ಸ್ವಾಯತ್ತ, ತಂತ್ರಜ್ಞಾನ ಚಾಲಿತ ವೇದಿಕೆಯಾಗಿದೆ.
- ಸಚಿವಾಲಯ:- ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ.
- ಉದ್ದೇಶ:- ಇದು ಸ್ವಯಂಸೇವಕತನ, ಕೌಶಲ್ಯ ಅಭಿವೃದ್ಧಿ, ನಾಯಕತ್ವ ಮತ್ತು ಪ್ರಾಯೋಗಿಕ ಕಲಿಕೆಯ ಅವಕಾಶಗಳೊಂದಿಗೆ ಸಂಪರ್ಕ ಕಲ್ಪಿಸುವ ಮೂಲಕ ಯುವಜನರನ್ನು ಸಬಲೀಕರಣಗೊಳಿಸುತ್ತದೆ.
- ರಾಷ್ಟ್ರೀಯ ಸೇವಾ ಯೋಜನೆ (NSS):- ಇದು
- ಸಚಿವಾಲಯ:- ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ.
- ಉದ್ದೇಶ:- ಸಮುದಾಯ ಸೇವೆಯ ಮೂಲಕ ಯುವಜನರ ವ್ಯಕ್ತಿತ್ವ ವಿಕಸನ ಮಾಡುವುದು ಮತ್ತು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುವುದು ಇದರ ಒಟ್ಟಾರೆ ಉದ್ದೇಶವಾಗಿದೆ.
- ಅಗ್ನಿಪಥ ಯೋಜನೆ:-
- ಪ್ರಾರಂಭ:- ಕೇಂದ್ರ ಸರ್ಕಾರವು 2022 ರಲ್ಲಿ
- ಉದ್ದೇಶ:- ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಬ್ಬರನ್ನೂ ಭಾರತದ ಮೂರೂ ಸೇನೆಗಳ ‘ಅಧಿಕಾರಿ ಹುದ್ದೆಗಿಂತ ಕೆಳಗಿನ ಶ್ರೇಣಿಗೆ’ 4 ವರ್ಷಗಳ ಅವಧಿಗೆ ‘ಅಗ್ನಿವೀರರನ್ನಾಗಿ’ ನೇಮಿಸಿಕೊಳ್ಳಲಾಗುತ್ತದೆ.
- PM-SETU ಯೋಜನೆ:-
- PM-SETU ವಿಸ್ತರಿತ ರೂಪ:- ಉನ್ನತೀಕರಿಸಿದ ಐಟಿಐಗಳ ಮೂಲಕ – ಪ್ರಧಾನ ಮಂತ್ರಿ ಕೌಶಲ್ಯ ಮತ್ತು ಉದ್ಯೋಗಾರ್ಹತೆಯ ಪರಿವರ್ತನೆ ಯೋಜನೆ.
- ಪ್ರಾರಂಭ:- 2025 ರ ಅಕ್ಟೋಬರ್
- ಉದ್ದೇಶ:- ಇದು ಭಾರತದ ‘ಕೈಗಾರಿಕಾ ತರಬೇತಿ ಸಂಸ್ಥೆಗಳ’ (ITIs) ಜಾಲವನ್ನು ಆಧುನೀಕರಿಸಲು ಮತ್ತು ಜಾಗತಿಕ ಕೈಗರಿಕೋದ್ಯಮದ ಮಾನದಂಡಗಳೊಂದಿಗೆ ವೃತ್ತಿಪರ ತರಬೇತಿಯನ್ನು ಸಂಯೋಜಿಸಲು ರೂಪಿಸಲಾಗಿದೆ
- ಹಣಕಾಸಿನ ಹಂಚಿಕೆ:- ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
- ಕೌಶಲ್ಯ ಭಾರತ ಮಿಷನ್ (SIM):-
- ಪ್ರಾರಂಭ:- 2015 ರಲ್ಲಿ, ವಿಶ್ವ ಯುವ ಕೌಶಲ್ಯ ದಿನದಂದು.
- ಉದ್ದೇಶ:- ಇದು ವ್ಯಾಪಕವಾದ ಕೇಂದ್ರ ಮತ್ತು ಸಂಸ್ಥೆಗಳ ಜಾಲದ ಮೂಲಕ ವ್ಯಕ್ತಿಗಳಿಗೆ ಕೌಶಲ್ಯ ತರಬೇತಿ, ಮರು-ಕೌಶಲ್ಯ ಮತ್ತು ಉನ್ನತ-ಕೌಶಲ್ಯ ತರಬೇತಿಯನ್ನು ನೀಡುತ್ತದೆ.
- ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ (PMKVY):-
- ಪ್ರಾರಂಭ:- 2015
- ಉದ್ದೇಶ:- ಅಲ್ಪಾವಧಿಯ ಕೌಶಲ್ಯ ತರಬೇತಿ ಮತ್ತು ಉನ್ನತ-ಕೌಶಲ್ಯ ಅಥವಾ ಮರು-ಕೌಶಲ್ಯ ತರಬೇತಿಯನ್ನು ಒದಗಿಸಲು.
- ಇದು ‘ಪೂರ್ವ ಕಲಿಕೆಯ ಗುರುತಿಸುವಿಕೆ’ಯ ಮೂಲಕ ಭಾರತದಾದ್ಯಂತ ಯುವಜನರಿಗೆ ತರಬೇತಿ ನೀಡುವುದನ್ನು ಒಳಗೊಂಡಿದೆ.
- ಜನ ಶಿಕ್ಷಣ ಸಂಸ್ಥಾನ (JSS) ಯೋಜನೆ:-
- ಪ್ರಾರಂಭ:- ಆರಂಭದಲ್ಲಿ 1967 ರಲ್ಲಿ ‘ಶ್ರಮಿಕ್ ವಿದ್ಯಾಪೀಠ’ ಎಂದು ಪ್ರಾರಂಭಿಸಲಾಯಿತು.
- ಉದ್ದೇಶ:- ಇದು ಅನೌಪಚಾರಿಕ ವಿಧಾನದಲ್ಲಿ ಕೌಶಲ್ಯ ತರಬೇತಿಯನ್ನು ನೀಡುವ ಉದ್ದೇಶವನ್ನು ಹೊಂದಿದೆ.
- ರಾಷ್ಟ್ರೀಯ ಶಿಷ್ಯವೃತ್ತಿ ಉತ್ತೇಜನ ಯೋಜನೆ (NAPS):-
- ಪ್ರಾರಂಭ:- ಆಗಸ್ಟ್ 2016
- ಉದ್ದೇಶ:- ಶಿಷ್ಯವೃತ್ತಿ ವಿದ್ಯಾರ್ಥಿಗಳ ವೇತನಕ್ಕೆ ಹಣಕಾಸಿನ ಬೆಂಬಲವನ್ನು ಒದಗಿಸುವ ಮೂಲಕ ಶಿಷ್ಯವೃತ್ತಿಯನ್ನು ಉತ್ತೇಜಿಸುತ್ತದೆ.
- ದೀನ ದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (DDU-GKY):-
- ಪ್ರಾರಂಭ:- 2014
- ಇದು ‘ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಕಾರ್ಯಯೋಜನೆ ‘(NRLM)ಯ ಭಾಗವಾಗಿದೆ.
- 2 ಪ್ರಮುಖ ಉದ್ದೇಶಗಳು:-
- ಗ್ರಾಮೀಣ ಬಡ ಕುಟುಂಬಗಳ ಆದಾಯ ಮೂಲಗಳಲ್ಲಿ ವೈವಿಧ್ಯತೆಯನ್ನು ತರುವುದು.
- ಗ್ರಾಮೀಣ ಯುವಕರ ವೃತ್ತಿ ಆಕಾಂಕ್ಷೆಗಳನ್ನು ಪೂರೈಸುವುದು.
- ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್ಗಾರ್ ಯೋಜನೆ:-
- ಘೋಷಣೆ:- 2025 ರಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಘೋಷಣೆ.
- ವೆಚ್ಚ:- ₹1 ಲಕ್ಷ ಕೋಟಿ
- ಆರ್ಥಿಕ ಪ್ರೋತ್ಸಾಹ:- ಇದು ಹೊಸದಾಗಿ ಉದ್ಯೋಗಕ್ಕೆ ಸೇರುವ ಯುವಜನರಿಗೆ 2 ಕಂತುಗಳಲ್ಲಿ ₹15,000 ವರೆಗಿನ ಆರ್ಥಿಕ ಪ್ರೋತ್ಸಾಹವನ್ನು ನೀಡುತ್ತದೆ.
- ಉದ್ಯೋಗದಾತರಿಗೆ ಸಹಾಯಧನ:- ಹೆಚ್ಚುವರಿಯಾಗಿ, ಉದ್ಯೋಗದಾತರು ಪ್ರತಿ ಹೊಸ ಉದ್ಯೋಗಿಗೆ ತಿಂಗಳಿಗೆ ₹3,000 ವರೆಗೆ ಸಹಾಯಧನವನ್ನು ನೀಡುತ್ತಾರೆ. ಇದು ಹೊಸ ಉದ್ಯೋಗಾವಕಾಶಗಳ ಸೃಷ್ಟಿಯನ್ನು ಉತ್ತೇಜಿಸುತ್ತದೆ.
- ಸ್ಟಾರ್ಟ್ಅಪ್ ಇಂಡಿಯಾ:-
- ಪ್ರಾರಂಭ:- 2016
- ಉದ್ದೇಶ:- ನಾವೀನ್ಯತೆ ಮತ್ತು ಉದ್ಯಮಶೀಲತೆಗಾಗಿ ದೃಢವಾದ ಪರಿಸರ ವ್ಯವಸ್ಥೆಯನ್ನು ರೂಪಿಸುವ ಉದ್ದೇಶವನ್ನು ಹೊಂದಿದೆ.
- ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY):-
- ಉದ್ದೇಶ:- ಹಣಕಾಸು ಸೌಲಭ್ಯ ಪಡೆಯದ ಸೂಕ್ಷ್ಮ ಉದ್ಯಮ ಮತ್ತು ಸಣ್ಣ ವ್ಯಾಪಾರಗಳಿಗೆ ಹಣಕಾಸು ಸೌಲಭ್ಯ ಒದಗಿಸುವುದು
- ರಾಷ್ಟ್ರೀಯ ಕಿಶೋರ್ ಸ್ವಾಸ್ಥ್ಯ ಕಾರ್ಯಕ್ರಮ (RKSK):-
- ಪ್ರಾರಂಭ:- 2014
- ಸಚಿವಾಲಯ:- ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ.
- ಉದ್ದೇಶ:- ಭಾರತದಾದ್ಯಂತ 10–19 ವರ್ಷದ ಕಿಶೋರರ ಸಮಗ್ರ ಆರೋಗ್ಯ ಅಗತ್ಯಗಳನ್ನು ಪೂರೈಸುವ ಉದ್ದೇಶವನ್ನು ಹೊಂದಿದೆ.
ಸ್ವಾಮಿ ವಿವೇಕಾನಂದರ ಬಗ್ಗೆ:
- ಜನನ:- ಜನವರಿ 12, 1863 ರಂದು ಕೋಲ್ಕತ್ತಾದಲ್ಲಿ ನರೇಂದ್ರ ನಾಥ ದತ್ತ ಎಂಬ ಹೆಸರಿನಲ್ಲಿ ಜನಿಸಿದರು.
- ಪಾಶ್ಚಿಮಾತ್ಯರಿಗೆ ಯೋಗ ಮತ್ತು ವೇದಾಂತದ ಹಿಂದೂ ತತ್ವಚಿಂತನೆಗಳನ್ನು ಪರಿಚಯಿಸುವಲ್ಲಿ ಇವರು ಪ್ರಮುಖ ವ್ಯಕ್ತಿಯಾಗಿದ್ದರು.
- ಇವರು ರಾಮಕೃಷ್ಣ ಪರಮಹಂಸರ ಶಿಷ್ಯರಾಗಿದ್ದರು. ಭಾರತದಲ್ಲಿ ಆಧ್ಯಾತ್ಮಿಕ ಮತ್ತು ಸಾಮಾಜಿಕ ಸುಧಾರಣೆಗೆ ತಮ್ಮನ್ನು ಮುಡಿಪಾಗಿಟ್ಟರು ಹಾಗೂ ಆರ್ಥಿಕ ಸುಧಾರಣೆ ಮತ್ತು ಆಧ್ಯಾತ್ಮಿಕ ಜ್ಞಾನದ ಬಗ್ಗೆ ಜನರಿಗೆ ಶಿಕ್ಷಣ ನೀಡಲು ದೇಶಾದ್ಯಂತ ಸಂಚರಿಸಿದರು.
- 1893 ರಲ್ಲಿ ಚಿಕಾಗೋದಲ್ಲಿ ನಡೆದ ‘ವಿಶ್ವ ಧರ್ಮಗಳ ಸಂಸತ್ತಿನಲ್ಲಿ’ ಮಾಡಿದ ಭಾಷಣದ ಮೂಲಕ ಇವರು ಜಾಗತಿಕ ಮನ್ನಣೆಯನ್ನು ಗಳಿಸಿದರು. ಅದರಲ್ಲಿ ಅವರು ಸಾರ್ವತ್ರಿಕ ಸಹಿಷ್ಣುತೆ, ಎಲ್ಲಾ ಧರ್ಮಗಳ ಸ್ವೀಕಾರ ಮತ್ತು ಭಾರತೀಯ ಸಂಪ್ರದಾಯಗಳ ಬಗ್ಗೆ ಹೆಮ್ಮೆಯನ್ನು ಪ್ರತಿಪಾದಿಸಿದರು.
- 1897 ರಲ್ಲಿ ರಾಮಕೃಷ್ಣ ಮಿಷನ್ ಮತ್ತು 1899 ರಲ್ಲಿ ಬೇಲೂರು ಮಠ ಸ್ಥಾಪನೆ:- ಇದು ಲೌಕಿಕ ಪ್ರಗತಿಯೊಂದಿಗೆ ಆಧ್ಯಾತ್ಮಿಕತೆಯ ಏಕೀಕರಣವನ್ನು ಉತ್ತೇಜಿಸಿತು.
- ತಮ್ಮ ಬೋಧನೆ, ಉಪನ್ಯಾಸ ಮತ್ತು ಬರಹಗಳ ಮೂಲಕ ರಾಜ ಯೋಗ, ಜ್ಞಾನ ಯೋಗ ಮತ್ತು ಕರ್ಮ ಯೋಗ ಸೇರಿದಂತೆ ಅವರು ಯೋಗದ ಅಭ್ಯಾಸ ಮತ್ತು ‘ನವ-ವೇದಾಂತ’ದ ತತ್ವಗಳನ್ನು ಹರಡಿದರು. ಭಾರತೀಯ ಜ್ಞಾನಸಮಾಜದ ಹರಿಕಾರರಾಗಿ ಮತ್ತು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಉನ್ನತಿಯ ದಾರ್ಶನಿಕರಾಗಿ ಶಾಶ್ವತವಾದ ಪರಂಪರೆಯನ್ನು ಉಳಿಸಿದರು.
- ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ವಿವೇಕಾನಂದರನ್ನು “ಆಧುನಿಕ ಭಾರತದ ನಿರ್ಮಾತೃ” ಎಂದು ಕರೆದಿದ್ದಾರೆ.



ನಿಮ್ಮದೊಂದು ಉತ್ತರ