66 ಅಂತರರಾಷ್ಟ್ರೀಯ ಸಂಸ್ಥೆಗಳಿಂದ ನಿರ್ಗಮಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷರ ಸಹಿ | ಡೂಮ್ಸ್‌ಡೇ ಹಿಮನದಿ | ಮಾಧವ್ ಗಾಡ್ಗೀಳ್

66 ಅಂತರರಾಷ್ಟ್ರೀಯ ಸಂಸ್ಥೆಗಳಿಂದ ನಿರ್ಗಮಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷರ ಸಹಿ

ಸಾಮಾನ್ಯ ಅಧ್ಯಯನ-2/ ಅಂತರರಾಷ್ಟ್ರೀಯ ಸಂಬಂಧಗಳು

ಇದೀಗ ಸುದ್ದಿಯಲ್ಲಿದೆ:

  • ಅಮೆರಿಕವು ವಿಶ್ವಸಂಸ್ಥೆಯ 31 ಘಟಕಗಳು ಮತ್ತು ವಿಶ್ವಸಂಸ್ಥೆಯೇತರ 35 ಸಂಸ್ಥೆಗಳು ಸೇರಿದಂತೆ ಒಟ್ಟು 66 ಅಂತರರಾಷ್ಟ್ರೀಯ ಸಂಸ್ಥೆಗಳಿಂದ ನಿರ್ಗಮಿಸಿದೆ.
  • ಈ ಸಂಸ್ಥೆಗಳಲ್ಲಿ ಹವಾಮಾನ, ಇಂಧನ ಮತ್ತು ವಿಜ್ಞಾನ ವೇದಿಕೆಗಳಾದ 
  1. ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಚೌಕಟ್ಟು ಸಮಾವೇಶ (UNFCCC)
  2. ಹವಾಮಾನ ಬದಲಾವಣೆ ಕುರಿತ ಅಂತರ ಸರ್ಕಾರಿ ಸಮಿತಿ (IPCC)
  3. ಅಂತರರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ (IRENA) ಮತ್ತು 
  4. ಅಂತರರಾಷ್ಟ್ರೀಯ ಸೌರ ಒಕ್ಕೂಟ (ISA) ಸೇರಿವೆ.

ಅಮೆರಿಕದ ನಿರ್ಗಮನಕ್ಕೆ ಕಾರಣಗಳು:

  • ಸಾರ್ವಭೌಮತ್ವದ ಕಳವಳ:- ದೇಶೀಯ ನೀತಿಯ ಸ್ವಾಯತ್ತತೆಯನ್ನು ನಿಯಂತ್ರಿಸುತ್ತವೆ ಅಥವಾ ಮಿತಿಗೊಳಿಸುತ್ತವೆ ಎಂದು ಭಾವಿಸಲಾದ, ಕಡ್ಡಾಯವಾಗಿ ಪಾಲಿಸಬೇಕಾದ ಅಂತರರಾಷ್ಟ್ರೀಯ ನಿಯಮಗಳಿಗೆ ವಿರೋಧ ವ್ಯಕ್ತಪಡಿಸುವುದು.
  • ಸಾಂಸ್ಥಿಕ ಪಕ್ಷಪಾತದ ಗ್ರಹಿಕೆ:- ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿನ ರಾಜಕೀಕರಣ, ಅದಕ್ಷತೆ ಮತ್ತು ಅಮೆರಿಕ ಅಥವಾ ಅದರ ಮಿತ್ರರಾಷ್ಟ್ರಗಳ ಹಿತಾಸಕ್ತಿಗಳಿಗೆ ವಿರುದ್ಧವಾಗಿರುವ ಪಕ್ಷಪಾತದ ಧೋರಣೆಗಳು.
  • ದೇಶೀಯ ರಾಜಕೀಯ ಒತ್ತಡಗಳು:- ಬಹುಪಕ್ಷೀಯ ಬದ್ಧತೆಗಳನ್ನು, ಸೀಮಿತ ನೇರ ಚುನಾವಣಾ ಲಾಭಗಳನ್ನು ನೀಡುವ ‘ದುಬಾರಿ ಬಾಧ್ಯತೆ’ಗಳಾಗಿ ಪರಿಗಣಿಸುತ್ತಿರುವುದು.
  • ಹೊರೆ ಹಂಚಿಕೆ ವಾದ:- ಜಾಗತಿಕ ಸಂಸ್ಥೆಗಳಿಗೆ ಅಮೆರಿಕವು ಅಸಮಾನವಾಗಿ (ಅಗತ್ಯಕ್ಕಿಂತ ಹೆಚ್ಚು) ಕೊಡುಗೆ ನೀಡುತ್ತಿದೆ ಎಂಬ ಪ್ರತಿಪಾದನೆಯೂ ಕೂಡ ಕಾರಣಗಳಲ್ಲಿ ಒಂದಾಗಿದೆ. 
  • ಕಾರ್ಯತಂತ್ರದ ಮರುಹೊಂದಾಣಿಕೆ:- ಸಾರ್ವತ್ರಿಕ ಸಂಸ್ಥೆಗಳಿಗಿಂತ ದ್ವಿಪಕ್ಷೀಯ ಅಥವಾ ಕಿರು-ಪಕ್ಷೀಯ ವ್ಯವಸ್ಥೆಗಳಿಗೆ ಆದ್ಯತೆ ನೀಡುವುದು.
  • ಕಾರ್ಯತಂತ್ರದ ಪೈಪೋಟಿ:- ಪ್ರತಿಸ್ಪರ್ಧಿಗಳು ಪ್ರಭಾವ ಬೀರುವ ವೇದಿಕೆಗಳನ್ನು ಮಿತಿಗೊಳಿಸುವ ಅಥವಾ ನಿಯಂತ್ರಿಸುವ ಬಯಕೆಯೂ ಕೂಡ ಈ ಕಾರಣಗಳಲ್ಲಿ ಸೇರಿದೆ. 

ಸಂಭಾವ್ಯ ಪರಿಣಾಮಗಳು:

  • ಹವಾಮಾನ ಬದಲಾವಣೆ ಹೋರಾಟಕ್ಕೆ ಹಿನ್ನಡೆ:- ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತಡೆಯುವ ಜಾಗತಿಕ ಪ್ರಯತ್ನಗಳನ್ನು ಇದು ದುರ್ಬಲಗೊಳಿಸುತ್ತದೆ. ಅಲ್ಲದೆ, ಹವಾಮಾನ ಬದ್ಧತೆಗಳು ಹಾಗೂ ಹಣಕಾಸಿನ ನೆರವಿನ ಭರವಸೆಗಳನ್ನು ವಿಳಂಬ ಮಾಡಲು ಇತರ ದೇಶಗಳಿಗೆ ನೆಪವನ್ನು ಒದಗಿಸುತ್ತದೆ.
  • ಬಹುಪಕ್ಷೀಯತೆಯ ವಿಘಟನೆ:- ಇದು ಅಂತರರಾಷ್ಟ್ರೀಯ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಶಿಥಿಲಗೊಳಿಸುತ್ತದೆ. ಪ್ರಬಲ ರಾಷ್ಟ್ರಗಳ ನಡುವಿನ ಪೈಪೋಟಿಯನ್ನು ತೀವ್ರಗೊಳಿಸಿ, ರಕ್ಷಣಾತ್ಮಕ ನೀತಿಗಳು ಹಾಗೂ ಸಣ್ಣ ತಾತ್ಕಾಲಿಕ ಪ್ರಾದೇಶಿಕ ಬಣಗಳತ್ತ ಸಾಗುವ ಪ್ರವೃತ್ತಿಯನ್ನು ವೇಗಗೊಳಿಸುತ್ತದೆ.
  • ಅಭಿವೃದ್ಧಿ ಮತ್ತು ಮಾನವೀಯ ನೆರವಿನ ಕುಸಿತ: ಅಮೆರಿಕದ ಅನುದಾನ ಕಡಿತವು ಈಗಾಗಲೇ ಕ್ಷೀಣಿಸುತ್ತಿರುವ ಅಂತರರಾಷ್ಟ್ರೀಯ ಅಭಿವೃದ್ಧಿ ಮತ್ತು ಮಾನವೀಯ ನೆರವಿನ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಇದು ಆರೋಗ್ಯ, ಶಿಕ್ಷಣ, ಆಹಾರ ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ (SDG) ಪ್ರಗತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
  • ಜಾಗತಿಕ ಶಾಂತಿ ಮತ್ತು ಭದ್ರತಾ ಅಪಾಯಗಳು:- ವಿಶ್ವಸಂಸ್ಥೆಯ ಶಾಂತಿ ನಿರ್ಮಾಣ ಆಯೋಗದಂತಹ ಸಂಸ್ಥೆಗಳಿಗೆ ಅಮೆರಿಕದ ಬೆಂಬಲ ಕಡಿಮೆಯಾಗುವುದರಿಂದ, ವಿಶೇಷವಾಗಿ ಆಫ್ರಿಕಾ ಮತ್ತು ಕೆರಿಬಿಯನ್‌ನಂತಹ ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆ ಮತ್ತು ಸಂಘರ್ಷದ ನಂತರದ ಚೇತರಿಕೆಗೆ ಅಡ್ಡಿಯಾಗುತ್ತದೆ.
  • ಜಾಗತಿಕ ನಿಯಮಗಳ ದುರ್ಬಲಗೊಳ್ಳುವಿಕೆ: ಅಂತರರಾಷ್ಟ್ರೀಯ ಕಾನೂನು ಮತ್ತು ಒಪ್ಪಂದದ ಕಟ್ಟುಪಾಡುಗಳನ್ನು ಆಯ್ದು ಪಾಲಿಸುವಂತೆ ಇದು ಇತರ ರಾಷ್ಟ್ರಗಳನ್ನು ಉತ್ತೇಜಿಸುತ್ತದೆ.
  • ನಾಯಕತ್ವದ ನಿರ್ವಾತ:- ಜಾಗತಿಕ ನಿಯಮಗಳು ಮತ್ತು ಸಂಸ್ಥೆಗಳನ್ನು ರೂಪಿಸಲು ಇತರ ಪ್ರಮುಖ ಶಕ್ತಿಗಳಿಗೆ ಇದು ಅವಕಾಶವನ್ನು ಸೃಷ್ಟಿಸುತ್ತದೆ.

ಡೂಮ್ಸ್‌ಡೇ ಹಿಮನದಿ

ಸಾಮಾನ್ಯ ಅಧ್ಯಯನ-1/ ಭೂಗೋಳಶಾಸ್ತ್ರ; ಸಾಮಾನ್ಯ ಅಧ್ಯಯನ-3/ ಪರಿಸರ

ಇದೀಗ ಸುದ್ದಿಯಲ್ಲಿದೆ:

  • ‘ಜರ್ನಲ್ ಆಫ್ ಜಿಯೋಫಿಸಿಕಲ್ ರಿಸರ್ಚ್: ಅರ್ಥ್ ಸರ್ಫೇಸ್’ನಲ್ಲಿ ಪ್ರಕಟವಾದ ಹೊಸ ಅಧ್ಯಯನವೊಂದು, ಥ್ವೈಟ್ಸ್ ಹಿಮನದಿ ಪ್ರದೇಶದಲ್ಲಿನ ಇತ್ತೀಚಿನ ರಚನಾತ್ಮಕ ಬದಲಾವಣೆಗಳನ್ನು ವಿವರಿಸಿದೆ. ಅಲ್ಲದೆ, ಭವಿಷ್ಯದಲ್ಲಿ ಅಂಟಾರ್ಕ್ಟಿಕ್‌ನ ಇತರ ಹಿಮ ತೊರೆ (ಐಸ್ ಶೆಲ್ಫ್‌)ಗಳುಹೇಗೆ ಕುಸಿಯಬಹುದು ಎಂಬುದನ್ನು ಇದು ವಿಶ್ಲೇಷಿಸಿದೆ.

ಡೂಮ್ಸ್‌ಡೇ ಹಿಮನದಿ (ಥ್ವೈಟ್ಸ್ ಹಿಮನದಿ)ಯ ಬಗ್ಗೆ:

  • ಇದು ಪಶ್ಚಿಮ ಅಂಟಾರ್ಕ್ಟಿಕ್ ಹಿಮ ಪಟಲ/ಪದರ (WAIS)ದ ಒಂದು ಹೊರಹರಿಯುವ ಹಿಮನದಿಯಾಗಿದ್ದು, ಅಮುಂಡ್ಸನ್ ಸಮುದ್ರವನ್ನು ಸೇರುತ್ತದೆ.
  • ಸಮುದ್ರದ ಮಟ್ಟದಲ್ಲಿ ಭಾರಿ ಏರಿಕೆಯನ್ನು ಉಂಟುಮಾಡುವ ಇದರ ಸಾಮರ್ಥ್ಯದಿಂದಾಗಿ, ಇದಕ್ಕೆ ‘ಡೂಮ್ಸ್‌ಡೇ ಹಿಮನದಿ’ ಎಂತಲೂ ಕರೆಯಲಾಗುತ್ತದೆ.
  • ಕುಸಿತದ ಪರಿಣಾಮ:- ಡೂಮ್ಸ್‌ಡೇ ಹಿಮನದಿಯ ಸಂಪೂರ್ಣ ನಾಶವು (ಕುಸಿತವು) ಜಾಗತಿಕ ಸಮುದ್ರ ಮಟ್ಟದಲ್ಲಿ 3 ಮೀಟರ್‌ಗಳಷ್ಟು ಏರಿಕೆಗೆ ಕಾರಣವಾಗಬಹುದು.

ಅಂಟಾರ್ಕ್ಟಿಕ್ ಒಪ್ಪಂದದ ಸಂರಕ್ಷಣಾ ಪ್ರಯತ್ನಗಳು:

  • ಒಳಗೊಂಡಿರುವ ಪ್ರದೇಶ:- ಈ ಒಪ್ಪಂದವು 60° ದಕ್ಷಿಣ ಅಕ್ಷಾಂಶದ ದಕ್ಷಿಣಕ್ಕಿರುವ ಪ್ರದೇಶವನ್ನು ಒಳಗೊಂಡಿದೆ.
  • ಉದ್ದೇಶ:- ಅಂಟಾರ್ಕ್ಟಿಕಾವನ್ನು ಸೇನಾಮುಕ್ತಗೊಳಿಸುವ ಉದ್ದೇಶದೊಂದಿಗೆ 1959ರಲ್ಲಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ಇದಕ್ಕೆ ಸಹಿ ಹಾಕಲಾಯಿತು.
  • ಒಪ್ಪಂದದ ನಿಯಮಗಳಿಗೆ ವಿರುದ್ಧವಾದ ಯಾವುದೇ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಲು, ಇದಕ್ಕೆ ಸಹಿ ಹಾಕಿದ ರಾಷ್ಟ್ರಗಳು ಸೂಕ್ತ ಕಾನೂನುಗಳನ್ನು ಜಾರಿಗೆ ತರಬೇಕಾಗುತ್ತದೆ.
  • ಭಾರತವು 1983ರಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿತು.

ಅಂಟಾರ್ಕ್ಟಿಕ್ ಸಮುದ್ರ (ಕಡಲ) ಜೀವಿ ಸಂಪನ್ಮೂಲಗಳ ಸಂರಕ್ಷಣೆಯ ಸಮಾವೇಶ (CCAMLR):

  • ಈ ಸಮಾವೇಶಕ್ಕೆ 1980ರಲ್ಲಿ ಕ್ಯಾನ್‌ಬೆರಾದಲ್ಲಿ (ಆಸ್ಟ್ರೇಲಿಯಾ) ಸಹಿ ಹಾಕಲಾಯಿತು. 
  • ಉದ್ದೇಶ:- ಅಂಟಾರ್ಕ್ಟಿಕಾ ಪರಿಸರವನ್ನು ರಕ್ಷಿಸಿ ಸಂರಕ್ಷಿಸುವುದು ಹಾಗೂ ವಿಶೇಷವಾಗಿ ಅಂಟಾರ್ಕ್ಟಿಕಾದ ಸಮುದ್ರೀಯ ಜೀವ ಸಂಪನ್ಮೂಲಗಳನ್ನು ಉಳಿಸಿ ಸಂರಕ್ಷಿಸುವುದು.
  • ಭಾರತವು 1985ರಲ್ಲಿ ಈ ಸಮಾವೇಶವನ್ನು ದೃಢೀಕರಿಸಿತು.

ಅಂಟಾರ್ಕ್ಟಿಕ್ ಒಪ್ಪಂದಕ್ಕೆ ಸಂಬಂಧಿಸಿದ ಪರಿಸರ ಸಂರಕ್ಷಣೆಯ ಶಿಷ್ಟಾಚಾರ (ಮ್ಯಾಡ್ರಿಡ್ ಪ್ರೋಟೋಕಾಲ್):

  • ಈ ಒಪ್ಪಂದಕ್ಕೆ 1991ರಲ್ಲಿ ಮ್ಯಾಡ್ರಿಡ್‌ನಲ್ಲಿ (ಸ್ಪೇನ್) ಸಹಿ ಹಾಕಲಾಯಿತು. 
  • ಉದ್ದೇಶ:- ಇದು ಅಂಟಾರ್ಕ್ಟಿಕ್ ಒಪ್ಪಂದ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಜೊತೆಗೆ ಅಂಟಾರ್ಕ್ಟಿಕ್ ಪರಿಸರ ಹಾಗೂ ಅದರ ಅವಲಂಬಿತ ಮತ್ತು ಸಂಬಂಧಿತ ಪರಿಸರ ವ್ಯವಸ್ಥೆಗಳ ಸಂರಕ್ಷಣೆಗಾಗಿ ಸಮಗ್ರ ವ್ಯವಸ್ಥೆಯನ್ನು ರೂಪಿಸುವ ಉದ್ದೇಶವನ್ನು ಹೊಂದಿದೆ.
  • ಭಾರತವು 1998ರಲ್ಲಿ ಈ  ಶಿಷ್ಟಾಚಾರವನ್ನು ದೃಢೀಕರಿಸಿತು.

ರಾಷ್ಟ್ರೀಯ ಅಂಟಾರ್ಕ್ಟಿಕ್ ಕಾರ್ಯಕ್ರಮದ ವ್ಯವಸ್ಥಾಪಕರ ಮಂಡಳಿ (COMNAP):

  • ಭಾರತವು ಇದರ ಸದಸ್ಯ ರಾಷ್ಟ್ರವೂ ಆಗಿದ್ದು, ಇದು ಅಂಟಾರ್ಕ್ಟಿಕ್ ಸಂಶೋಧನೆಯಲ್ಲಿ ತೊಡಗಿರುವ ರಾಷ್ಟ್ರಗಳ ಪೈಕಿ ಭಾರತ ಹೊಂದಿರುವ ಮಹತ್ವದ ಸ್ಥಾನವನ್ನು ತೋರಿಸುತ್ತದೆ.

ಮಾಧವ್ ಗಾಡ್ಗೀಳ್

ಸಾಮಾನ್ಯ ಅಧ್ಯಯನ-3/ ಪರಿಸರ; ಸುದ್ದಿಯಲ್ಲಿರುವ ವ್ಯಕ್ತಿಗಳು

ಇದೀಗ ಸುದ್ದಿಯಲ್ಲಿದೆ:

  • ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಕುರಿತು ಮಾಡಿದ ತಮ್ಮ ಮಹತ್ವದ ಕಾರ್ಯಕ್ಕಾಗಿ ಪ್ರಸಿದ್ಧರಾಗಿದ್ದ ಖ್ಯಾತ ಪರಿಸರ ವಿಜ್ಞಾನಿ ಮಾಧವ್ ಗಾಡ್ಗಿಲ್ ಅವರು ನಿಧನರಾಗಿದ್ದಾರೆ.

ಪ್ರಮುಖ ಕೊಡುಗೆಗಳು:

  • ಗಾಡ್ಗೀಳ್ ಆಯೋಗ, 2010:- ಪರಿಸರ ಮತ್ತು ಅರಣ್ಯ ಸಚಿವಾಲಯವು ‘ಗಾಡ್ಗೀಳ್ ಆಯೋಗ’ ಎಂದೇ ಪರಿಚಿತವಾಗಿರುವ “ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ” (WGEEP) ಅಧ್ಯಕ್ಷರನ್ನಾಗಿ ಮಾಧವ್ ಗಾಡ್ಗೀಳ್ ಅವರನ್ನು ನೇಮಿಸಿತು.
  • ಅವರು 2011ರ ತಮ್ಮ ವರದಿಯಲ್ಲಿ, 6 ರಾಜ್ಯಗಳಲ್ಲಿ ವ್ಯಾಪಿಸಿರುವ 1,40,000 ಚ.ಕಿ.ಮೀ ವಿಸ್ತೀರ್ಣದ ಪಶ್ಚಿಮ ಘಟ್ಟಗಳಲ್ಲಿನ 64% ಪ್ರದೇಶವನ್ನು “ಪರಿಸರದ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶಗಳು” (ESAs) ಎಂದು ವರ್ಗೀಕರಿಸುವಂತೆ ಶಿಫಾರಸು ಮಾಡಿದ್ದರು.
  • ಇದರಿಂದ ಪಶ್ಚಿಮ ಘಟ್ಟಗಳ ಜೀವವೈವಿಧ್ಯತೆಯ ಬಿಸಿತಾಣಗಳು (ಹಾಟ್‌ಸ್ಪಾಟ್’) ಆಗಿರುವ ಮಹತ್ವ ಹಾಗೂ ಅವುಗಳನ್ನು ಸಂರಕ್ಷಿಸಲು ಕೈಗೊಳ್ಳಬೇಕಾದ ಪ್ರಯತ್ನಗಳ ಕುರಿತು ವ್ಯಾಪಕ ಚರ್ಚೆ ಮತ್ತು ಸಂವಾದಗಳು ನಡೆಯಲು ಕಾರಣವಾಯಿತು.
  • ನೀಲಗಿರಿ- ಜೀವಗೋಳ ಮೀಸಲು ತಾಣ:- 1986ರಲ್ಲಿ ನೀಲಗಿರಿಯನ್ನು ಭಾರತದ ಮೊದಲ ಜೀವಗೋಳ ಮೀಸಲು ತಾಣವನ್ನಾಗಿ ಘೋಷಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.
  • ನಂತರ ಅವರು ಜೈವಿಕ ವೈವಿಧ್ಯತೆ ಕಾಯ್ದೆ-2002 ಮತ್ತು ಅರಣ್ಯ ಹಕ್ಕುಗಳ ಕಾಯ್ದೆ-2006 ಅನ್ನು ರೂಪಿಸುವಲ್ಲಿ ನೆರವಾದರು.
  • ಅವರು ಪ್ರಧಾನ ಮಂತ್ರಿಯವರ ವೈಜ್ಞಾನಿಕ ಸಲಹಾ ಮಂಡಳಿ ಮತ್ತು ರಾಷ್ಟ್ರೀಯ ಹುಲಿ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸಿದರು. ಅಷ್ಟೇ ಅಲ್ಲದೆ, ಶೈಕ್ಷಣಿಕ ಸಂಶೋಧನೆಯನ್ನು ತಳಮಟ್ಟದ ಪರಿಸರ ಚಳವಳಿಯೊಂದಿಗೆ ಯಶಸ್ವಿಯಾಗಿ ಬೆಸೆಯುವ ಕಾರ್ಯ ಮಾಡಿದರು.
  • ಅವರ ಕೊಡುಗೆಗಳನ್ನು ಗುರುತಿಸಿ ಪದ್ಮಶ್ರೀ (1992), ಪದ್ಮಭೂಷಣ (2006), ಪರಿಸರ ಸಾಧನೆಗಾಗಿ ನೀಡುವ ಟೈಲರ್ ಪ್ರಶಸ್ತಿ (2015) ಮತ್ತು ವಿಶ್ವಸಂಸ್ಥೆ ಪರಿಸರ ಕಾರ್ಯಕ್ರಮ (UNEP) ನೀಡುವ ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿ (2024) ಸೇರಿದಂತೆ ಪ್ರಮುಖ ಗೌರವಗಳನ್ನು ನೀಡಿ ಪುರಸ್ಕರಿಸಲಾಗಿದೆ.
  • ಪಶ್ಚಿಮ ಘಟ್ಟಗಳಲ್ಲಿನ ಅವರ ಕಾರ್ಯಕ್ಕಾಗಿ-‘ಚಾಂಪಿಯನ್ಸ್ ಆಫ್ ದಿ ಅರ್ಥ್’ ಪ್ರಶಸ್ತಿ:- ವಾರ್ಷಿಕವಾಗಿ ನೀಡಲಾಗುವ ‘ಚಾಂಪಿಯನ್ಸ್ ಆಫ್ ದಿ ಅರ್ಥ್’ ಪ್ರಶಸ್ತಿಯು ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವವಾಗಿದೆ. ಪಶ್ಚಿಮ ಘಟ್ಟಗಳಲ್ಲಿನ ಅವರ ಮಹತ್ವದ ಕಾರ್ಯಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts