ರಷ್ಯಾದ S-500 ವಾಯು ರಕ್ಷಣಾ ವ್ಯವಸ್ಥೆ | ಆಪರೇಷನ್ “ಸಾಗರ್ ಬಂಧು”

ರಷ್ಯಾದ S-500 ವಾಯು ರಕ್ಷಣಾ ವ್ಯವಸ್ಥೆ

ರಕ್ಷಣೆ

ಇದೀಗ ಸುದ್ದಿಯಲ್ಲಿದೆ:

  • ಭಾರತದ ಪ್ರಧಾನಮಂತ್ರಿಗಳು ಮತ್ತು ರಷ್ಯಾದ ಅಧ್ಯಕ್ಷರು, ರಷ್ಯಾದ ಮುಂದಿನ ಪೀಳಿಗೆಯ ಅತ್ಯಾಧುನಿಕ ‘S-500’ ವಾಯು ರಕ್ಷಣಾ ವ್ಯವಸ್ಥೆಯನ್ನು ಪಡೆಯುವ ಕುರಿತು ಭಾರತಕ್ಕಿರುವ ಆಸಕ್ತಿಯ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ.

S-500 ವಾಯು ರಕ್ಷಣಾ ವ್ಯವಸ್ಥೆಯ ಬಗ್ಗೆ:

  • ಇದು ರಷ್ಯಾದ ಅತ್ಯಂತ ಸುಧಾರಿತ ದೀರ್ಘ-ವ್ಯಾಪ್ತಿಯ, ‘ಭೂಮಿಯಿಂದ ಗಗನಕ್ಕೆ ಚಿಮ್ಮುವ’ ಮತ್ತು ಬಾಹ್ಯಾಕಾಶ ನಿರೋಧಕ ರಕ್ಷಣಾ ವ್ಯವಸ್ಥೆಯಾಗಿದ್ದು, ಆಧುನಿಕ ಹಾಗೂ ಭವಿಷ್ಯದ ವಿವಿಧ ರೀತಿಯ ವೈಮಾನಿಕ ಬೆದರಿಕೆಗಳನ್ನು ಹತ್ತಿಕ್ಕಲು ಇದನ್ನು ವಿನ್ಯಾಸಗೊಳಿಸಲಾಗಿದೆ.
  • ಇದು 600 ಕಿ.ಮೀ ವರೆಗಿನ ದೂರದಲ್ಲಿರುವ ವಿಮಾನಗಳು, ಕ್ಷಿಪಣಿಗಳು ಮತ್ತು ಶಬ್ದಾತೀತ (ಹೈಪರ್‌ಸಾನಿಕ್) ಶಸ್ತ್ರಾಸ್ತ್ರಗಳನ್ನು ಪ್ರತಿಬಂಧಿಸುವ ಸಾಮರ್ಥ್ಯ ಹೊಂದಿದೆ.
  • ಇದು 200 ಕಿ.ಮೀ ವರೆಗಿನ ಎತ್ತರದಲ್ಲಿ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಇದರ ಪ್ರತಿಕ್ರಿಯಾ ಸಮಯವು ಕೇವಲ 3–4 ಸೆಕೆಂಡುಗಳಾಗಿದ್ದು, ಇದು S-400 ವ್ಯವಸ್ಥೆಗಿಂತ ಸುಮಾರು ಎರಡು ಪಟ್ಟು ವೇಗವಾಗಿದೆ.

S-400 ಮತ್ತು S-500 ನಡುವಿನ ವ್ಯತ್ಯಾಸಗಳು

ವೈಶಿಷ್ಟ್ಯ

S-400

S-500

ವ್ಯಾಪ್ತಿ

380 ಕಿ.ಮೀ

600 ಕಿ.ಮೀ

ಗುರಿಯ ಎತ್ತರ

30–40 ಕಿ.ಮೀ

200 ಕಿ.ಮೀ ವರೆಗೆ (ಸಮೀಪ-ಬಾಹ್ಯಾಕಾಶ)

ಪ್ರತಿಬಂಧಿಸುವ ಬೆದರಿಕೆಗಳು 

ವಿಮಾನಗಳು, ಕ್ರೂಸ್ ಕ್ಷಿಪಣಿಗಳು, ಸೀಮಿತ ಬ್ಯಾಲಿಸ್ಟಿಕ್ ಕ್ಷಿಪಣಿಗಳು

ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಹೈಪರ್‌ಸಾನಿಕ್ ಶಸ್ತ್ರಾಸ್ತ್ರಗಳು, ಸ್ಟೆಲ್ತ್ (ರಹಸ್ಯ) ವಿಮಾನಗಳು, LEO ಉಪಗ್ರಹಗಳು

ಪ್ರತಿಕ್ರಿಯೆಯ ಸಮಯ

9–10 ಸೆಕೆಂಡುಗಳು

3–4 ಸೆಕೆಂಡುಗಳು

ಉಪಗ್ರಹ ನಿರೋಧಕ ಸಾಮರ್ಥ್ಯ

ಇಲ್ಲ

ಹೌದು

ಕಾರ್ಯವ್ಯಾಪ್ತಿ/ಪಾತ್ರ

ವಾಯು ರಕ್ಷಣೆ

ವಾಯು ಮತ್ತು ಬಾಹ್ಯಾಕಾಶ ರಕ್ಷಣೆ

ಆಪರೇಷನ್ “ಸಾಗರ್ ಬಂಧು”

ಅಂತರರಾಷ್ಟ್ರೀಯ ಸಂಬಂಧಗಳು

ಇದೀಗ ಸುದ್ದಿಯಲ್ಲಿದೆ:

  • ಶ್ರೀಲಂಕಾದಾದ್ಯಂತ ವ್ಯಾಪಕ ವಿನಾಶವನ್ನುಂಟುಮಾಡಿದ ದಿತ್ವಾಹ್‘ ಚಂಡಮಾರುತದ ಹಿನ್ನೆಲೆಯಲ್ಲಿ, ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗೆ ಬೆಂಬಲ ನೀಡಲು ಭಾರತವು ತಕ್ಷಣವೇ ‘ಆಪರೇಷನ್ ಸಾಗರ್ ಬಂಧು’ ಕಾರ್ಯಾಚರಣೆಯನ್ನು ಕೈಗೊಂಡಿತು.

ಆಪರೇಷನ್ “ಸಾಗರ್ ಬಂಧು” ಕಾರ್ಯಾಚರಣೆಯ ಬಗ್ಗೆ:

  • ಇದು ಶ್ರೀಲಂಕಾಕ್ಕೆ ತುರ್ತು ನೆರವು ನೀಡಲು ಭಾರತವು ಕೈಗೊಂಡ ‘ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ’ ಕಾರ್ಯಾಚರಣೆಯಾಗಿದೆ.
  • ಈ ಕಾರ್ಯಾಚರಣೆಯ ಅಡಿಯಲ್ಲಿ ಭಾರತವು ಈ ಕೆಳಗಿನ ನೆರವನ್ನು ರವಾನಿಸಿದೆ:
    • ಪರಿಹಾರ ಸಾಮಗ್ರಿಗಳು
    • ವೈದ್ಯಕೀಯ ಸರಬರಾಜುಗಳು 
    • ತುರ್ತು ರಕ್ಷಣಾ ಉಪಕರಣಗಳು

ಮಹತ್ವ:

  • ಈ ಕಾರ್ಯಾಚರಣೆಯು ಭಾರತದ ‘ನೆರೆಹೊರೆ ಮೊದಲು ನೀತಿ’ (Neighbourhood First Policy) ಮತ್ತು ‘ಮಹಾಸಾಗರ್’ (MAHASAGAR) ಎಂಬ ವಿಶಾಲವಾದ ಸಮುದ್ರಯಾನ ದೃಷ್ಟಿಕೋನದ ಬಗೆಗಿನ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ದಿತ್ವಾಹ್ ಚಂಡಮಾರುತದ ಬಗ್ಗೆ:

  • ಇದು ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಅತ್ಯಂತ ವೇಗವಾಗಿ ರೂಪುಗೊಂಡ ಒಂದು ಉಷ್ಣವಲಯದ ಚಂಡಮಾರುತವಾಗಿದೆ.
  • ದಿತ್ವಾಹ್’ ಎಂಬ ಹೆಸರನ್ನು ಯೆಮನ್ ದೇಶವು ಸೂಚಿಸಿದೆ.

Comments

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

More posts