ಸ್ಕೈರೂಟ್‌ನ ಪ್ರಥಮ ಕಕ್ಷೀಯ ಉಡಾವಣೆ ವಾಹನ (ರಾಕೆಟ್): ವಿಕ್ರಮ್-1
ವಿಜ್ಞಾನ ಮತ್ತು ತಂತ್ರಜ್ಞಾನ

ಇದೀಗ ಸುದ್ದಿಯಲ್ಲಿದೆ:
- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತೀಯ ಬಾಹ್ಯಾಕಾಶ ನವೋದ್ಯಮವಾದ ‘ಸ್ಕೈರೂಟ್’ನ ‘ಇನ್ಫಿನಿಟಿ ಕ್ಯಾಂಪಸ್’ ಅನ್ನು ಲೋಕಾರ್ಪಣೆಗೊಳಿಸಿದರು.
- ಇದೇ ಸಂದರ್ಭದಲ್ಲಿ ಉಪಗ್ರಹಗಳನ್ನು ಕಕ್ಷೆಗೆ ತಲುಪಿಸುವ ಸಾಮರ್ಥ್ಯವಿರುವ ಸಂಸ್ಥೆಯ ಮೊದಲ ಕಕ್ಷೀಯ ಉಡಾವಣೆ ವಾಹನ ‘ವಿಕ್ರಮ್-1’ ಅನ್ನು ಸಹ ಅನಾವರಣಗೊಳಿಸಿದರು.
‘ಸ್ಕೈರೂಟ್’ ನ ಬಗ್ಗೆ:
- ಇದು ಪವನ್ ಚಂದನ್ ಮತ್ತು ಭರತ್ ಡಾಕಾ ಅವರಿಂದ ಸ್ಥಾಪಿಸಲ್ಪಟ್ಟ ಭಾರತದ ಪ್ರಮುಖ ಖಾಸಗಿ ಬಾಹ್ಯಾಕಾಶ ನವೋದ್ಯಮವಾಗಿದೆ.
- ನವೆಂಬರ್ 2022 ರಲ್ಲಿ, ಸ್ಕೈರೂಟ್ ತನ್ನ ಉಪ-ಕಕ್ಷೀಯ ಉಡಾವಣೆ ವಾಹನ ‘ವಿಕ್ರಮ್-S’ ಅನ್ನು ಉಡಾವಣೆ ಮಾಡುವ ಮೂಲಕ ಬಾಹ್ಯಾಕಾಶಕ್ಕೆ ರಾಕೆಟ್ ಉಡಾಯಿಸಿದ ಭಾರತದ ಮೊದಲ ಖಾಸಗಿ ಕಂಪನಿ ಎಂಬ ಮೈಲಿಗಲ್ಲು ಸ್ಥಾಪಿಸಿತು.
‘ವಿಕ್ರಮ್-1’ ನ ಬಗ್ಗೆ:
- ಇದನ್ನು ‘ಸ್ಕೈರೂಟ್ ಏರೋಸ್ಪೇಸ್’ ಅಭಿವೃದ್ಧಿಪಡಿಸಿದ್ದು, ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಡಾ. ವಿಕ್ರಮ್ ಸಾರಾಭಾಯ್ ಅವರ ಗೌರವಾರ್ಥವಾಗಿ ‘ವಿಕ್ರಮ್’ ಎಂದು ಹೆಸರಿಡಲಾಗಿದೆ.
- ಇದು ಸಣ್ಣ ಉಪಗ್ರಹಗಳ ಮಾರುಕಟ್ಟೆಯ ಬೇಡಿಕೆಗಳನ್ನು ಪೂರೈಸಲು, ತ್ವರಿತ ಹಾಗೂ ಮಿತವ್ಯಯಕಾರಿ ಉಡಾವಣೆಗಳಿಗಾಗಿ ವಿನ್ಯಾಸಗೊಳಿಸಲಾದ ಭಾರತದ ಮೊದಲ ಖಾಸಗಿ ಕಕ್ಷೀಯ ಶ್ರೇಣಿಯ ಉಡಾವಣಾ ವಾಹನವಾಗಿದೆ.
ಭಾರತವು ಅಂತರರಾಷ್ಟ್ರೀಯ ಸಮುದ್ರಯಾನ ಸಂಸ್ಥೆಯ (IMO) ಮಂಡಳಿಗೆ ಮರು ಆಯ್ಕೆಗೊಂಡಿದೆ
ಪರಿಸರ
ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿಗೆ, ಭಾರತವು ಅಂತರರಾಷ್ಟ್ರೀಯ ಸಮುದ್ರಯಾನ ಸಂಸ್ಥೆಯ (IMO) ಮಂಡಳಿಗೆ 2026-27ರ ಅವಧಿಗೆ ಅತ್ಯಧಿಕ ಮತಗಳೊಂದಿಗೆ ಮರು ಆಯ್ಕೆಯಾಗಿದೆ.
ಅಂತರರಾಷ್ಟ್ರೀಯ ಸಮುದ್ರಯಾನ ಸಂಸ್ಥೆ (IMO) ಯ ಬಗ್ಗೆ:
- ಇದು ವಿಶ್ವಸಂಸ್ಥೆಯ ಒಂದು ವಿಶೇಷ ಸಂಸ್ಥೆಯಾಗಿದೆ.
- ಧ್ಯೇಯೋದ್ದೇಶ:- ಹಡಗು ಸಂಚಾರದ ಸುರಕ್ಷತೆ ಮತ್ತು ಭದ್ರತೆಯನ್ನು ಖಾತರಿಪಡಿಸುವುದು ಹಾಗೂ ಹಡಗುಗಳಿಂದ ಉಂಟಾಗುವ ಸಮುದ್ರ ಮತ್ತು ವಾಯುಮಂಡಲದ ಮಾಲಿನ್ಯವನ್ನು ತಡೆಗಟ್ಟುವುದು ಇದರ ಪ್ರಮುಖ ಹೊಣೆಗಾರಿಕೆಯಾಗಿದೆ.
- ಉಗಮ:- ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಸಮ್ಮೇಳನದ ನಿರ್ಣಯದಂತೆ 1948 ರಲ್ಲಿ ಇದು ಸ್ಥಾಪನೆಯಾಯಿತು ಮತ್ತು 1958 ರಲ್ಲಿ ಅಸ್ತಿತ್ವಕ್ಕೆ ಬಂದಿತು.
- ಸದಸ್ಯತ್ವ:- ಪ್ರಸ್ತುತ 175 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ.
- ಕೇಂದ್ರ ಕಚೇರಿ:- ಲಂಡನ್, (ಯುನೈಟೆಡ್ ಕಿಂಗ್‌ಡಮ್)
- ಭಾರತವು ಕೂಡ ಸದಸ್ಯ:- 1959 ರಲ್ಲಿ ಇದರ ಸದಸ್ಯತ್ವವನ್ನು ಪಡೆಯಿತು.
- ರಚನೆ:- ಐಎಂಒ ಆಡಳಿತವನ್ನು ದ್ವೈವಾರ್ಷಿಕವಾಗಿ ಸಭೆ ಸೇರುವ ಎಲ್ಲಾ ಸದಸ್ಯ ರಾಷ್ಟ್ರಗಳ ‘ಅಸೆಂಬ್ಲಿ’ ಮತ್ತು 2 ವರ್ಷಗಳ ಅವಧಿಗೆ ಆಯ್ಕೆಯಾಗುವ 40 ಸದಸ್ಯರ ‘ಮಂಡಳಿ’ಯು ನಿರ್ವಹಿಸುತ್ತದೆ.



ನಿಮ್ಮದೊಂದು ಉತ್ತರ