ರಾಷ್ಟ್ರೀಯ ಗುಪ್ತಚರ ಜಾಲ (NATGRID)
ರಕ್ಷಣೆ
ಇದೀಗ ಸುದ್ದಿಯಲ್ಲಿದೆ:
- ಇತ್ತೀಚಿಗೆ, ರಾಷ್ಟ್ರೀಯ ಗುಪ್ತಚರ ಜಾಲ (ನ್ಯಾಟ್‌ಗ್ರಿಡ್) ಪ್ರತಿ ತಿಂಗಳು ಸುಮಾರು 45,000 ವಿನಂತಿಗಳನ್ನು ಸ್ವೀಕರಿಸುತ್ತಿದ್ದು, ಇದು ಕೇಂದ್ರ ಮತ್ತು ರಾಜ್ಯ ಭದ್ರತಾ ಸಂಸ್ಥೆಗಳಿಂದ ಈ ವ್ಯವಸ್ಥೆಯ ಬಳಕೆಯು ಗಮನಾರ್ಹವಾಗಿ ಏರಿಕೆಯಾಗಿರುವುದನ್ನು ಪ್ರತಿಬಿಂಬಿಸುತ್ತದೆ.
ರಾಷ್ಟ್ರೀಯ ಗುಪ್ತಚರ ಜಾಲ (ನ್ಯಾಟ್‌ಗ್ರಿಡ್)ದ ಬಗ್ಗೆ:
- ಇದು 2008ರ 26/11ರ ಮುಂಬೈ ಭಯೋತ್ಪಾದನಾ ದಾಳಿಯ ನಂತರ ಅಭಿವೃದ್ಧಿಪಡಿಸಲಾದ ನೈಜ-ಸಮಯದ ಗುಪ್ತಚರ ಮಾಹಿತಿ ಮತ್ತು ದತ್ತಾಂಶ ಪ್ರವೇಶ ವೇದಿಕೆಯಾಗಿದೆ.
- ಉದ್ದೇಶ:- ವಿವಿಧ ಭದ್ರತಾ ಮತ್ತು ತನಿಖಾ ಸಂಸ್ಥೆಗಳ ನಡುವೆ ತಡೆರಹಿತ ಮಾಹಿತಿ ಹಂಚಿಕೆಯನ್ನು ಸುಗಮಗೊಳಿಸುವುದು.
- ಆಡಳಿತಾತ್ಮಕ ನಿಯಂತ್ರಣ:- ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
- ದತ್ತಾಂಶಗಳ ಕ್ರೂಢೀಕರಣ:- ಇದು ಬ್ಯಾಂಕ್ ವಹಿವಾಟುಗಳು, ಟೆಲಿಕಾಂ ಬಳಕೆ, ಪಾಸ್‌ಪೋರ್ಟ್/ವಲಸೆ ದಾಖಲೆಗಳು, ತೆರಿಗೆ ಗುರುತಿನ ಸಂಖ್ಯೆಗಳು (PAN), ಪೊಲೀಸ್ ಪ್ರಥಮ ಮಾಹಿತಿ ವರದಿಗಳು (CCTNS/FIRs) ಮತ್ತು ಇತರ ಇ-ಆಡಳಿತ ಮೂಲಗಳನ್ನೊಳಗೊಂಡ 20ಕ್ಕೂ ಹೆಚ್ಚು ವಿಭಾಗಗಳ ನಾಗರಿಕ ಹಾಗೂ ವಾಣಿಜ್ಯ ದತ್ತಾಂಶಗಳನ್ನು ಕ್ರೂಢೀಕರಿಸುತ್ತದೆ.
- ದತ್ತಾಂಶ ಪ್ರವೇಶಾವಕಾಶ:- ಆರಂಭದಲ್ಲಿ ಪ್ರವೇಶವನ್ನು
- ಗುಪ್ತಚರ ಕಚೇರಿ (IB),
- ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ (RAW),
- ರಾಷ್ಟ್ರೀಯ ತನಿಖಾ ಸಂಸ್ಥೆ (NIA),
- ಜಾರಿ ನಿರ್ದೇಶನಾಲಯ (ED),
- ಹಣಕಾಸು ಗುಪ್ತಚರ ಘಟಕ (FIU),
- ಮಾದಕ ದ್ರವ್ಯ ನಿಯಂತ್ರಣ ಕಚೇರಿ (NCB),
- ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಮುಂತಾದ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿತ್ತು.
- ಪ್ರಸ್ತುತ, ನ್ಯಾಟ್‌ಗ್ರಿಡ್ ದತ್ತಾಂಶಗಳ ಪ್ರವೇಶಾವಕಾಶವನ್ನು ಪೊಲೀಸ್ ಅಧೀಕ್ಷಕರ (SP) ಶ್ರೇಣಿಯ ಅಧಿಕಾರಿಗಳಿಗೂ ವಿಸ್ತರಿಸಲಾಗಿದೆ.
ನ್ಯಾಟ್‌ಗ್ರಿಡ್‌ನ ಮಹತ್ವ:
- ಭಯೋತ್ಪಾದನಾ ನಿಗ್ರಹ:- ವ್ಯಕ್ತಿಗಳ ಪ್ರಯಾಣದ ಮಾದರಿ, ಹಣಕಾಸು ವಹಿವಾಟು, ಟೆಲಿಕಾಂ ದತ್ತಾಂಶ ಮತ್ತು ಸಾಮಾಜಿಕ ಸಂಪರ್ಕಗಳನ್ನು ಪರಸ್ಪರ ವಿಶ್ಲೇಷಿಸುವ ಮೂಲಕ ಭಯೋತ್ಪಾದಕ ಜಾಲಗಳನ್ನು ಪತ್ತೆಹಚ್ಚುವ ಹಾಗೂ ಹತ್ತಿಕ್ಕುವ ಸಾಮರ್ಥ್ಯವನ್ನು ನ್ಯಾಟ್‌ಗ್ರಿಡ್ ವೃದ್ಧಿಸುತ್ತದೆ.
- ಅಪರಾಧ ಪತ್ತೆ ಹಚ್ಚುವಿಕೆಯಲ್ಲಿ ಸುಧಾರಣೆ: ಸಂಘಟಿತ ಅಪರಾಧ, ಮಾದಕ ದ್ರವ್ಯ ಜಾಲಗಳು, ಮಾನವ ಅಕ್ರಮ ಸಾಗಣೆ, ಸೈಬರ್ ಅಪರಾಧ, ನಕಲಿ ನೋಟಿನ ಜಾಲ ಮತ್ತು ಗಡಿಯಾಚೆಗಿನ ಅಕ್ರಮ ಸಾಗಣೆಗೆ ಸಂಬಂಧಿಸಿದ ತನಿಖೆಗಳಿಗೆ ಈ ವೇದಿಕೆಯು ವ್ಯವಸ್ಥಿತ ನೆರವು ನೀಡುತ್ತದೆ.
11ನೇ ಭಾರತ ಅಂತರರಾಷ್ಟ್ರೀಯ ವಿಜ್ಞಾನ ಹಬ್ಬ (IISF)
ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
- ಭಾರತ ಅಂತರರಾಷ್ಟ್ರೀಯ ವಿಜ್ಞಾನ ಹಬ್ಬ (IISF)ದ 11ನೇ ಆವೃತ್ತಿಯು ಹರಿಯಾಣದ ಪಂಚಕುಳದಲ್ಲಿ ಆರಂಭವಾಯಿತು.
ಭಾರತ ಅಂತರರಾಷ್ಟ್ರೀಯ ವಿಜ್ಞಾನ ಹಬ್ಬದ ಬಗ್ಗೆ:
- ಪ್ರಾರಂಭ:- ಇದನ್ನು 2015 ರಲ್ಲಿ ಪ್ರಾರಂಭಿಸಲಾಯಿತು.
- ಇದು ವೈಜ್ಞಾನಿಕ ವಿನಿಮಯ, ನಾವೀನ್ಯತೆ, ಜನಸಂಪರ್ಕ ಮತ್ತು ಸಾರ್ವಜನಿಕ ಸಹಭಾಗಿತ್ವಕ್ಕೆ ಒಂದು ಪ್ರಮುಖ ವೇದಿಕೆಯಾಗಿದೆ.
- 2025ರ ಧ್ಯೇಯವಾಕ್ಯ:- “ವಿಜ್ಞಾನದಿಂದ ಸಮೃದ್ಧಿ: ಆತ್ಮನಿರ್ಭರ ಭಾರತಕ್ಕಾಗಿ”
IISF, 2025 ಐದು ಪ್ರಮುಖ ಧ್ಯೇಯಗಳ ಮೇಲೆ ಕೇಂದ್ರೀಕರಿಸುತ್ತದೆ:
- ವಾಯುವ್ಯ ಭಾರತ ಮತ್ತು ಹಿಮಾಲಯ ಪ್ರದೇಶದ ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ ವಿಜ್ಞಾನ;
- ಸಮಾಜ ಮತ್ತು ಶಿಕ್ಷಣಕ್ಕಾಗಿ ವಿಜ್ಞಾನ;
- ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಆತ್ಮನಿರ್ಭರ ಭಾರತ;
- ಜೈವಿಕ ತಂತ್ರಜ್ಞಾನ ಮತ್ತು ಜೈವಿಕ ಆರ್ಥಿಕತೆ;
- ಆಧುನಿಕ ವಿಜ್ಞಾನದೊಂದಿಗೆ ಸಾಂಪ್ರದಾಯಿಕ ಜ್ಞಾನದ ಸಂಯೋಜನೆ.
ಸರಸ್ ಆಹಾರ ಮೇಳ, 2025
ಇತರೆ
ಇದೀಗ ಸುದ್ದಿಯಲ್ಲಿದೆ:
- ದೆಹಲಿಯ ಸುಂದರ್ ನರ್ಸರಿಯಲ್ಲಿ ಆಯೋಜಿಸಲಾದ ‘ಸರಸ್ ಆಹಾರ ಮೇಳ, 2025’, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗುರಿ (NRLM)ಯ ಅಡಿಯಲ್ಲಿ ಸ್ವಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣ ಒಂದು ಉಜ್ವಲ ಪ್ರದರ್ಶನವಾಗಿ ಮೂಡಿಬಂದಿದೆ.
ಸರಸ್ ಆಹಾರ ಮೇಳ, 2025 ರ ಬಗ್ಗೆ:
- ಈ ಮೇಳವು ಹರಿಯಾಣ, ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಕೇರಳ, ಅಸ್ಸಾಂ, ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಗುಜರಾತ್ ಸೇರಿದಂತೆ ದೇಶದ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ 62 ಮಳಿಗೆಗಳಲ್ಲಿ 500 ಕ್ಕೂ ಹೆಚ್ಚು ಸಾಂಪ್ರದಾಯಿಕ ಖಾದ್ಯಗಳನ್ನು ಒಳಗೊಂಡಿತ್ತು.
- ಇದು ಮಹಿಳಾ ಉದ್ಯಮಶೀಲತೆ ಮತ್ತು ಸ್ವಾವಲಂಬನೆಯನ್ನು ಪ್ರತಿಬಿಂಬಿಸುತ್ತಿದ್ದು, ಭಾರತದಾದ್ಯಂತ ಇರುವ ಸ್ವಸಹಾಯ ಸಂಘಗಳ ಸುಮಾರು 300 “ಲಖ್ಪತಿ ದೀದಿಯರು” ಈ ಮೇಳದಲ್ಲಿ ವಿವಿಧ ಆಹಾರ ಪದಾರ್ಥ ಮತ್ತು ಗ್ರಾಮೀಣ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದ್ದಾರೆ.
ಸರಸ್ ಅಜೀವಿಕ ಮೇಳದ ಬಗ್ಗೆ:
- ಆಯೋಜಕರು:- ದೀನ್ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗುರಿ (DAY-NRLM)ಯ ಅಡಿಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಇದನ್ನು ಆಯೋಜಿಸುತ್ತದೆ.
- ಇದು ಗ್ರಾಮೀಣ ಮಹಿಳೆಯರಿಗೆ ಮತ್ತು ಸ್ವಸಹಾಯ ಸಂಘಗಳಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಲು, ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಮತ್ತು ಪ್ರಮುಖ ಮಾರುಕಟ್ಟೆ ಮಾನ್ಯತೆಯನ್ನು ಪಡೆಯಲು ಒಂದು ರಾಷ್ಟ್ರೀಯ ವೇದಿಕೆಯನ್ನು ಒದಗಿಸುತ್ತದೆ.
- ಮುಚ್ಚಳಿಕರಣ (ಪ್ಯಾಕೇಜಿಂಗ್), ವಿನ್ಯಾಸ, ಸಂವಹನ ಮತ್ತು ಮಾರುಕಟ್ಟೆ ಪ್ರಕ್ರಿಯೆಗಳ ಕುರಿತಾದ ಕಾರ್ಯಾಗಾರಗಳ ಮೂಲಕ ಉತ್ಪನ್ನಗಳನ್ನು ಮೇಲ್ದರ್ಜೆಗೇರಿಸಲು, ಆದಾಯವನ್ನು ಹೆಚ್ಚಿಸಲು ಮತ್ತು ದೇಶ-ವಿದೇಶಗಳ ಖರೀದಿದಾರರೊಂದಿಗೆ ಸಂಪರ್ಕ ಸಾಧಿಸಲು ಅಗತ್ಯವಾದ ಕೌಶಲಗಳನ್ನು ಈ ಮೇಳಗಳು ಅವರಿಗೆ ಒದಗಿಸುತ್ತವೆ.



ನಿಮ್ಮದೊಂದು ಉತ್ತರ