“ನಾರ್ಕೋ ಪರೀಕ್ಷೆ”
ಸಾಮಾನ್ಯ ಅಧ್ಯಯನ-2/ಆಡಳಿತ; ಸಾಮಾನ್ಯ ಅಧ್ಯಯನ-3/ವಿಜ್ಞಾನ ಮತ್ತು ತಂತ್ರಜ್ಞಾನ
ಇದೀಗ ಸುದ್ದಿಯಲ್ಲಿದೆ:
- ಬಲವಂತದ ಅಥವಾ ಅನೈಚ್ಛಿಕ ನಾರ್ಕೋ ಪರೀಕ್ಷೆಗಳು ಅಸಾಂವಿಧಾನಿಕ ಮತ್ತು ಅಸಿಂಧು ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ.
ನಾರ್ಕೋ ಪರೀಕ್ಷೆಯ ಬಗ್ಗೆ:
- ನಾರ್ಕೋ ಪರೀಕ್ಷೆಯು ತನಿಖೆಯ ಒಂದು ಪ್ರಕ್ರಿಯೆಯಾಗಿದ್ದು, ಇದರಲ್ಲಿ ಪರೀಕ್ಷೆಗೆ ಒಳಗಾಗುವ ಆರೋಪಿಯು ಮುಚ್ಚಿಟ್ಟಿರುವ ಸತ್ಯಗಳನ್ನು ವ್ಯಕ್ತಪಡಿಸುವನೆಂದು ನಿರೀಕ್ಷಿಸಲಾಗುತ್ತದೆ.
- ಈ ಪರೀಕ್ಷೆಯಲ್ಲಿ, ನಿರ್ದಿಷ್ಟ ವರ್ಗದ ವಸ್ತುಗಳನ್ನು ನೀಡುವ ಮೂಲಕ ಆರೋಪಿಯನ್ನು ಅರೆ ಪ್ರಜ್ಞಾವಸ್ಥೆಗೆ ತಳ್ಳಲಾಗುತ್ತದೆ. ಉದಾಹರಣೆಗೆ – ಸೋಡಿಯಂ ಪೆಂಟೊಥಾಲ್. ಇದು ವ್ಯಕ್ತಿಯ ಪ್ರತಿಬಂಧಕಗಳು ಮತ್ತು ತಾರ್ಕಿಕ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.
- ಇದು ಪಾಲಿಗ್ರಾಫ್‌ಗಳು ಅಥವಾ ಬ್ರೈನ್ ಮ್ಯಾಪಿಂಗ್‌ನಂತೆಯೇ ಅಹಿಂಸಾತ್ಮಕ ವಿಧಾನವಾಗಿದೆ.
ನಾರ್ಕೋ ಪರೀಕ್ಷೆಯ ಕಾನೂನುಬದ್ಧತೆಯ ಬಗ್ಗೆ:
- ಸೆಲ್ವಿ ಮಾರ್ಗಸೂಚಿಗಳು:– ಮುಕ್ತ ಒಪ್ಪಿಗೆಯಿಲ್ಲದೆ ನಡೆಸಿದ ಯಾವುದೇ ಪರೀಕ್ಷೆಯು ಅಸಾಂವಿಧಾನಿಕ ಮತ್ತು ಅದರ ಫಲಿತಾಂಶಗಳನ್ನು ಸಾಕ್ಷಿಯಾಗಿ ಬಳಸಲಾಗುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದೆ.
- ವಿಧಿ 20:- ಇದು ಪೂರ್ವಾನ್ವಯವಾಗುವ ಕಾನೂನುಗಳು, ಒಂದೇ ಅಪರಾಧಕ್ಕೆ ಎರಡು ಬಾರಿ ಶಿಕ್ಷೆ (ಡಬಲ್ ಜಿಯೋಪಾರ್ಡಿ) ಮತ್ತು ತನ್ನ ವಿರುದ್ಧವೇ ಸಾಕ್ಷಿ ನುಡಿಯುವಂತೆ ಒತ್ತಾಯಿಸುವುದರ ವಿರುದ್ಧ ರಕ್ಷಣೆ ನೀಡುತ್ತದೆ.
- ವಿಧಿ 21:– ನಾರ್ಕೋ ಪರೀಕ್ಷೆಯು ಸಂವಿಧಾನದ ವಿಧಿ 21 ರ ಅಡಿಯಲ್ಲಿನ “ಗೌಪ್ಯತೆಯ ಹಕ್ಕ”ನ್ನೂ ಉಲ್ಲಂಘಿಸುತ್ತದೆ.
- ವಿಧಿ 14 ಮತ್ತು 19:- ಇವು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ರಕ್ಷಿಸುತ್ತವೆ.
- ಮನೋಜ್ ಕುಮಾರ್ ಸೈನಿ v/s ಮಧ್ಯಪ್ರದೇಶ ರಾಜ್ಯ (2023) ಮತ್ತು ವಿನೋಭಾಯಿ v/s ಕೇರಳ ರಾಜ್ಯ (2025):- ನಾರ್ಕೋ ಪರೀಕ್ಷೆಯ ಫಲಿತಾಂಶಗಳು ಮಾತ್ರವೇ ತಪ್ಪಿತಸ್ಥರೆಂದು ಸಾಬೀತುಪಡಿಸುವುದಿಲ್ಲ ಮತ್ತು ಇತರ ಸಾಕ್ಷ್ಯಾಧಾರಗಳೊಂದಿಗೆ ಅದನ್ನು ದೃಢೀಕರಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ಭಾರತದ ಮೊದಲ ಜಲಜನಕ ಇಂಧನ ಕೋಶ ಪ್ರಯಾಣಿಕ ನೌಕೆ
ಸಾಮಾನ್ಯ ಅಧ್ಯಯನ-3/ಪರಿಸರ
ಇದೀಗ ಸುದ್ದಿಯಲ್ಲಿದೆ:
- ಭಾರತವು ವಾರಣಾಸಿಯಲ್ಲಿ ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಿಸಲಾದ ತನ್ನ ಮೊದಲ ಜಲಜನಕ (ಹೈಡ್ರೋಜನ್) ಇಂಧನ ಕೋಶ ಪ್ರಯಾಣಿಕ ನೌಕೆಯನ್ನು ಲೋಕಾರ್ಪಣೆ ಮಾಡಿದೆ. ಇದು ಹಸಿರು ಕಡಲ ಸಾರಿಗೆಯಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.
ಭಾರತದ ಮೊದಲ ಜಲಜನಕ ಇಂಧನ ಕೋಶ ಪ್ರಯಾಣಿಕ ನೌಕೆಯ ಬಗ್ಗೆ:
- ನಿರ್ಮಾಣ ಮತ್ತು ಒಡೆತನ:- ಇದನ್ನು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನಿರ್ಮಿಸಿದ್ದು, ಇದರ ಒಡೆತನವನ್ನು ‘ಭಾರತದ ಒಳನಾಡು ಜಲಮಾರ್ಗಗಳ ಪ್ರಾಧಿಕಾರ’ವು ಹೊಂದಿದೆ.
- ಪ್ರೋಟಾನ್ ಎಕ್ಸ್‌ಚೇಂಜ್ ಮೆಂಬರೇನ್ (ಪ್ರೋಟಾನ್ ವಿನಿಮಯ ಪೊರೆ) ತಂತ್ರಜ್ಞಾನವನ್ನು ಆಧರಿಸಿದ ಜಲಜನಕ ಇಂಧನ ಕೋಶ ವ್ಯವಸ್ಥೆಗಳು, ಭಾರತದ ಶುದ್ಧ ಇಂಧನ ಮತ್ತು ಹಸಿರು ಚಲನಶೀಲತೆಯ ಪರಿವರ್ತನೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
- ಕಾರ್ಯವಿಧಾನ: ಪ್ರೋಟಾನ್ ಎಕ್ಸ್‌ಚೇಂಜ್ ಮೆಂಬರೇನ್ ಫ್ಯೂಯಲ್ ಸೆಲ್ (PEMFC), ದಹನಕ್ರಿಯೆಯಿಲ್ಲದೆ ಜಲಜನಕ ಮತ್ತು ಆಮ್ಲಜನಕದ ನಡುವಿನ ವಿದ್ಯುದ್ರಾಸಾಯನಿಕ ಕ್ರಿಯೆಯ ಮೂಲಕ ವಿದ್ಯುತ್ ಉತ್ಪಾದಿಸುತ್ತದೆ. ಇದು ಇದನ್ನು ಒಂದು ಶುದ್ಧ ಮತ್ತು ಪರಿಣಾಮಕಾರಿ ಶಕ್ತಿಯ ಮೂಲವನ್ನಾಗಿ ಮಾಡುತ್ತದೆ.
ಮಹತ್ವ:
- ಈ ಚಾಲನೆಯು 2070 ರ ವೇಳೆಗೆ ಭಾರತದ ನಿವ್ವಳ ಶೂನ್ಯ ಹೊರಸೂಸುವಿಕೆ ಗುರಿಯನ್ನು ಬೆಂಬಲಿಸುತ್ತದೆ. ಜೊತೆಗೆ, ಶುದ್ಧ ಮತ್ತು ಸುಸ್ಥಿರ ಜಲಮಾರ್ಗಗಳನ್ನು ಉತ್ತೇಜಿಸುವ ‘ಮ್ಯಾರಿಟೈಮ್ ಇಂಡಿಯಾ ವಿಷನ್ 2030’ ಹಾಗೂ ‘ಮ್ಯಾರಿಟೈಮ್ ಅಮೃತ್ ಕಾಲ್ ವಿಷನ್ 2047’ ನೊಂದಿಗೆ ಇದು ಹೊಂದಿಕೆಯಾಗುತ್ತದೆ.
- ಈ ನೌಕೆಯು ಶಬ್ದರಹಿತ ಮತ್ತು ಮಾಲಿನ್ಯರಹಿತ ಪ್ರಯಾಣವನ್ನು ಒದಗಿಸುತ್ತದೆ, ರಸ್ತೆ ದಟ್ಟಣೆಯನ್ನು ಕಡಿಮೆ ಮಾಡುತ್ತದೆ, ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಮತ್ತು ಸಂಪೂರ್ಣ ದೇಶೀಯ ಹಸಿರು ತಂತ್ರಜ್ಞಾನವನ್ನು ಪ್ರದರ್ಶಿಸುತ್ತದೆ.
ಕೆಂಪು ಕಾಲುಳ್ಳ ಡೌಕ್ ಕೋತಿಗಳು (Red-Shanked Douc Monkeys)
ಸಾಮಾನ್ಯ ಅಧ್ಯಯನ-3/ ಪರಿಸರ

ಇದೀಗ ಸುದ್ದಿಯಲ್ಲಿದೆ:
- ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು “ಕೆಂಪು ಕಾಲುಳ್ಳ ಡೌಕ್ ಕೋತಿ”ಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಪ್ರಯಾಣಿಕನೊಬ್ಬನನ್ನು ಬಂಧಿಸಲಾಗಿದೆ.
ಕೆಂಪು ಕಾಲುಳ್ಳ ಡೌಕ್ ಕೋತಿಗಳ (ಪೈಗಾಥ್ರಿಕ್ಸ್ ನೆಮಿಯಸ್) ಬಗ್ಗೆ:
- ಇದು ತನ್ನ ಅತ್ಯಂತ ಆಕರ್ಷಕ ಮತ್ತು ವರ್ಣರಂಜಿತವಾದ ದೇಹ ರಚನೆಯುಳ್ಳ ‘ಹಳೆಯ ಪ್ರಪಂಚದ ಕೋತಿಗಳ’ ಪ್ರಭೇದವಾಗಿದ್ದು, ಇವುಗಳನ್ನು ಸಾಮಾನ್ಯವಾಗಿ “ಸಸ್ತನಿಗಳ ರಾಣಿ” ಎಂದು ಕರೆಯಲಾಗುತ್ತದೆ.
- ಹಂಚಿಕೆ:- ಈ ಕೋತಿಗಳು ವಿಯೆಟ್ನಾಂ, ಲಾವೋಸ್ ಮತ್ತು ಕಾಂಬೋಡಿಯಾದ ಕಾಡುಗಳಿಗೆ ಸ್ಥಳೀಯವಾಗಿರುವ, ಮರಗಳಲ್ಲಿ ವಾಸಿಸುವ ಮತ್ತು ಹಗಲಿನಲ್ಲಿ ಸಕ್ರಿಯವಾಗಿರುವ ಸಸ್ತನಿಗಳಾಗಿವೆ.
- ಆವಾಸಸ್ಥಾನ:- ಇವು ಸಮುದ್ರಮಟ್ಟದಿಂದ ಸುಮಾರು 2,000 ಮೀಟರ್ (6,600 ಅಡಿ) ಎತ್ತರದವರೆಗಿನ ನಿತ್ಯಹರಿದ್ವರ್ಣ ಮತ್ತು ಅರೆ-ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿ ಭಾಗದಲ್ಲಿ ವಾಸಿಸುತ್ತವೆ.
- ದೈಹಿಕ ನೋಟ:- ಬೂದು ಬಣ್ಣದ ದೇಹ, ಗಾಢವಾದ ಕಡುಗೆಂಪು- ಕೆಂಪು ಬಣ್ಣದ ಕೆಳಕಾಲುಗಳು, ಬಿಳಿ ಮುಂಗೈಗಳು ಮತ್ತು ಬಾಲ ಹಾಗೂ ತಿಳಿ ನೀಲಿ ಕಣ್ಣುರೆಪ್ಪೆಗಳೊಂದಿಗೆ ಕೂಡಿದ ಕಿತ್ತಳೆ-ಹಳದಿ ಮುಖ – ಇವು ಈ ಪ್ರಭೇಧದ ಮಂಗಗಳ ವಿಶಿಷ್ಟ ಲಕ್ಷಣಗಳಾಗಿವೆ.
- ಗಂಡು ಕೋತಿಗಳನ್ನು ಅವುಗಳ ಹಿಂಭಾಗದಲ್ಲಿರುವ ಬಿಳಿ ಕಲೆಗಳಿಂದ ಪ್ರತ್ಯೇಕಿಸಬಹುದು.
- IUCN ಸ್ಥಿತಿಗತಿ: ತೀವ್ರ ಅಳಿವಿನಂಚಿನಲ್ಲಿರುವ (CR).
ಸುಬನ್ಸಿರಿ ಕೆಳದಂಡೆಯ ಜಲವಿದ್ಯುತ್ ಯೋಜನೆ
ಸಾಮಾನ್ಯ ಅಧ್ಯಯನ-3/ಮೂಲಸೌಕರ್ಯ
ಇದೀಗ ಸುದ್ದಿಯಲ್ಲಿದೆ:
- ಸುಬನ್ಸಿರಿ ಕೆಳದಂಡೆಯ ಜಲವಿದ್ಯುತ್ ಯೋಜನೆಗೆ ನಿಧಿ ಸಂಗ್ರಹಿಸಲು, ಅರಣ್ಯ ಭೂಮಿಯಲ್ಲಿರುವ ಆಸ್ತಿಗಳನ್ನು ಭದ್ರತೆಯಾಗಿ ಬಳಸಿಕೊಳ್ಳುವ ಎನ್‌ಎಚ್‌ಪಿಸಿ (NHPC) ಪ್ರಸ್ತಾಪವನ್ನು ಪರಿಸರ ಸಚಿವಾಲಯವು ತಿರಸ್ಕರಿಸಿದೆ.
ಸುಬನ್ಸಿರಿ ಕೆಳದಂಡೆಯ ಜಲವಿದ್ಯುತ್ ಯೋಜನೆಯ ಬಗ್ಗೆ:
- ಇದು ಬ್ರಹ್ಮಪುತ್ರ ನದಿಯ ಉಪನದಿಯಾದ ಸುಬನ್ಸಿರಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಯೋಜನೆಯಾಗಿದೆ.
- ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಗಡಿಯಲ್ಲಿರುವ ಗೆರುಕಾಮುಖ್‌ನಲ್ಲಿ ಇದು ನೆಲೆಗೊಂಡಿದೆ.
- ಸಾಮರ್ಥ್ಯ ಮತ್ತು ವಿಧ : ಇದು 2,000 ಮೆಗಾವ್ಯಾಟ್ (8 × 250 ಮೆಗಾವ್ಯಾಟ್) ಒಟ್ಟು ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದೆ.
- ಕಾರ್ಯತಂತ್ರದ ಮಹತ್ವ:
- ಇದು ಈಶಾನ್ಯ ಭಾರತದಲ್ಲಿ ಶುದ್ಧ ಇಂಧನ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
- ಇದು ವಿದ್ಯುತ್ ಜಾಲದ ಸ್ಥಿರತೆಯನ್ನು ಬಲಪಡಿಸುತ್ತದೆ ಮತ್ತು ಭಾರತದ ನವೀಕರಿಸಬಹುದಾದ ಇಂಧನ ಗುರಿಗಳನ್ನು ಬೆಂಬಲಿಸುತ್ತದೆ.
ಮೊದಲ ಸ್ವದೇಶಿ ಮುಳುಗುಗಾರರ (ಡೈವಿಂಗ್) ಬೆಂಬಲ ನೌಕೆ (DSC A20)
ಸಾಮಾನ್ಯ ಅಧ್ಯಯನ-3/ ರಕ್ಷಣೆ

ಇದೀಗ ಸುದ್ದಿಯಲ್ಲಿದೆ:
- ಭಾರತೀಯ ನೌಕಾಪಡೆ ಸ್ವದೇಶಿಯಾಗಿ ವಿನ್ಯಾಸಗೊಳಿಸಿ ನಿರ್ಮಿಸಲಾದ ಮುಳುಗುಗಾರರ ಬೆಂಬಲ ನೌಕಾ (Diving Support Craft – DSC) ಸರಣಿಯ ಮೊದಲ ನೌಕೆ DSC A20 ಅನ್ನು ದಕ್ಷಿಣ ನೌಕಾ ಕಮಾಂಡ್‌ನ ಆಶ್ರಯದಲ್ಲಿ, ಕೊಚ್ಚಿಯಲ್ಲಿ ಸೇವೆಗೆ ಸೇರ್ಪಡೆಗೊಳಿಸಲು ಸಿದ್ಧವಾಗಿದೆ.
ಡಿಎಸ್‌ಸಿ ಎ20 (DSC A20) ಯ ಬಗ್ಗೆ:
- ನಿರ್ಮಾಣ:- ಇದನ್ನು ಕೋಲ್ಕತ್ತಾದ ಮೆಸರ್ಸ್ ಟಿಟಾಗಢ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (TRSL) ಸಂಸ್ಥೆಯು ನಿರ್ಮಿಸಿರುವ ಐದು ‘ಮುಳುಗುಗಾರರ ಬೆಂಬಲ ನೌಕೆ”ಗಳಲ್ಲಿ ಮೊದಲನೆಯದಾಗಿದೆ.
- ತಾಂತ್ರಿಕ ವೈಶಿಷ್ಟ್ಯಗಳು:- ಈ ನೌಕೆಯು ಸುಮಾರು 390 ಟನ್‌ಗಳಷ್ಟು ಸ್ಥಳಾಂತರ ಸಾಮರ್ಥ್ಯ ಹೊಂದಿದೆ.
- ಇದು ಅತ್ಯುತ್ತಮ ಸ್ಥಿರತೆ, ವಿಸ್ತಾರವಾದ ಹಡಗುಕಟ್ಟೆ (ಡೆಕ್) ಪ್ರದೇಶ ಮತ್ತು ಸುಧಾರಿತ ನೌಕಾ ಸ್ಥಿರತೆಯ (ಕಡಲ ಅಲೆಗಳ ನಡುವೆ ಸುಗಮವಾಗಿ ಚಲಿಸುವ) ಗುಣಲಕ್ಷಣಗಳನ್ನು ಒಳಗೊಂಡಿದೆ.
- ಕಾರ್ಯಾಚರಣೆಯ ಮಹತ್ವ:- ಇದರ ಸೇರ್ಪಡೆಯೊಂದಿಗೆ ಭಾರತೀಯ ನೌಕಾಪಡೆಯ ಈ ಕೆಳಗಿನ ಸಾಮರ್ಥ್ಯಗಳು ಹೆಚ್ಚಲಿವೆ:
- ಮುಳುಗುಗಾರರಿಗೆ (ಡೈವಿಂಗ್) ಬೆಂಬಲ
- ಜಲಾಂತರ್ಗಾಮಿ ತಪಾಸಣೆ
- ಮುಳುಗಿದ ವಸ್ತುಗಳ ಚೇತರಿಕೆ ಅಥವಾ ರಕ್ಷಣೆ
- ಕರಾವಳಿ ಕಾರ್ಯಾಚರಣೆಯ ನಿಯೋಜನೆ.



ನಿಮ್ಮದೊಂದು ಉತ್ತರ