ವಂದೇ ಮಾತರಂಗೆ 150 ವರ್ಷಗಳು
ಸಾಮಾನ್ಯ ಅಧ್ಯಯನ -1 / ಆಧುನಿಕ ಇತಿಹಾಸ
ಇದೀಗ ಸುದ್ದಿಯಲ್ಲಿದೆ:
- ಭಾರತವು ತನ್ನ ರಾಷ್ಟ್ರೀಯ ಹಾಡು (National Song) ‘ವಂದೇ ಮಾತರಂ’ನ 150ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.
‘ವಂದೇ ಮಾತರಂ’ ಹಾಡಿನ ಐತಿಹಾಸಿಕ ಹಿನ್ನೆಲೆ:
- ‘ವಂದೇ ಮಾತರಂ’ ಹಾಡನ್ನು “ಬಂಕಿಮಚಂದ್ರ ಚಟ್ಟೋಪಾಧ್ಯಾಯರು” ಸಂಸ್ಕೃತದಲ್ಲಿ ತಮ್ಮ 1882ರ ‘ಆನಂದಮಠ’ ಕಾದಂಬರಿಯಲ್ಲಿ ಮೊದಲು ಪ್ರಕಟಿಸಲಾಯಿತು.
- ರವೀಂದ್ರನಾಥ ಟ್ಯಾಗೋರ್ ಅವರು 1896ರಲ್ಲಿ ಕಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಬಾರಿಗೆ ಈ ಹಾಡನ್ನು ಹಾಡಿದರು, ಇದು ಈ ಹಾಡಿಗೆ ರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟಿತು.
- ಈ ಹಾಡು ಮಾತೃಭೂಮಿಯನ್ನು ಶಕ್ತಿ, ಸಮೃದ್ಧಿ ಮತ್ತು ದೈವತ್ವದ ಮೂರ್ತರೂಪವಾಗಿ ಬಣ್ಣಿಸುತ್ತದೆ ಹಾಗೂ ಭಾರತದ ಜಾಗೃತವಾಗುತ್ತಿರುವ ರಾಷ್ಟ್ರೀಯ ಪ್ರಜ್ಞೆಗೆ ಕಾವ್ಯಾತ್ಮಕ ಧ್ವನಿಯನ್ನು ನೀಡಿತು.
ರಾಷ್ಟ್ರೀಯ ಪ್ರಜ್ಞೆಯ ಉದಯ:
- 1905ರ ಸ್ವದೇಶಿ ಚಳವಳಿಯ ಸಂದರ್ಭದಲ್ಲಿ, ‘ವಂದೇ ಮಾತರಂ’ ನಾಗರಿಕ ಪ್ರತಿರೋಧದ ಗೀತೆ ಅಥವಾ ಮಂತ್ರವಾಗಿ ಹೊರಹೊಮ್ಮಿತು.
- ‘ವಂದೇ ಮಾತರಂ’ ಅನ್ನು ರಾಜಕೀಯ ಘೋಷಣೆಯಾಗಿ 1905ರ ಆಗಸ್ಟ್ 7 ರಂದು ಪ್ರಪ್ರಥಮ ಬಾರಿಗೆ ಬಳಸಲಾಯಿತು.
- ಗಲ್ಲುಶಿಕ್ಷೆಯನ್ನು ಎದುರಿಸುತ್ತಿದ್ದ ಅನೇಕ ಯುವ ಕ್ರಾಂತಿಕಾರಿಗಳಿಗೆ, ಹುತಾತ್ಮರಾಗುವ ಮುನ್ನ ‘ವಂದೇ ಮಾತರಂ’ ಎಂಬುದು ಕೊನೆಯ ಉದ್ಘೋಷವಾಗಿತ್ತು; ಇದು ಈ ಹಾಡನ್ನು ತ್ಯಾಗದ ಸಂಕೇತವನ್ನಾಗಿ ಪರಿವರ್ತಿಸಿತು.
- 1907ರಲ್ಲಿ, ಮೇಡಂ ಭಿಕಾಜಿ ಕಾಮಾ ಅವರು ಬರ್ಲಿನ್ನ ಸ್ಟಟ್ಗಾರ್ಟ್ನಲ್ಲಿ ಭಾರತದ ಹೊರಗೆ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದರು. ಆ ಧ್ವಜದ ಮೇಲೆ ‘ವಂದೇ ಮಾತರಂ’ ಎಂದು ಬರೆಯಲಾಗಿತ್ತು.
- ಮಾತೃಭೂಮಿಯ ಪರಿಕಲ್ಪನೆಯನ್ನು ಒಂದು ಧ್ಯೇಯ ಮತ್ತು ಧಾರ್ಮಿಕ ಭಾವನೆಯಾಗಿ ಉತ್ತೇಜಿಸಲು, 1905ರ ಅಕ್ಟೋಬರ್ನಲ್ಲಿ ಉತ್ತರ ಕಲ್ಕತ್ತಾದಲ್ಲಿ ‘ಬಂದೇ ಮಾತರಂ ಸಂಪ್ರದಾಯ’ವನ್ನು ಸ್ಥಾಪಿಸಲಾಯಿತು.
- 1906ರಲ್ಲಿ, ಬಿಪಿನ್ ಚಂದ್ರ ಪಾಲ್ ಅವರ ಸಂಪಾದಕತ್ವದಲ್ಲಿ ‘ಬಂದೇ ಮಾತರಂ’ ಎಂಬ ಶೀರ್ಷಿಕೆಯ ಇಂಗ್ಲಿಷ್ ದಿನಪತ್ರಿಕೆಯನ್ನು ಪ್ರಾರಂಭಿಸಲಾಯಿತು; ನಂತರ ಅರವಿಂದೋ ಅವರು ಜಂಟಿ ಸಂಪಾದಕರಾಗಿ ಇದಕ್ಕೆ ಜೊತೆಯಾದರು.
ರಾಷ್ಟ್ರೀಯ ಹಾಡು (National Song):
- ಸ್ವಾತಂತ್ರ್ಯದ ನಂತರ, ಸಂವಿಧಾನ ರಚನಾ ಸಭೆಯು ‘ವಂದೇ ಮಾತರಂ’ನ ಸ್ಥಾನಮಾನದ ಕುರಿತು ಚರ್ಚಿಸಿತು.
- 1950ರ ಜನವರಿ 24ರಂದು, ಇದರ ಮೊದಲ ಎರಡು ಚರಣಗಳನ್ನು ಭಾರತದ ‘ರಾಷ್ಟ್ರೀಯ ಹಾಡು’ ಎಂದು ಅಂಗೀಕರಿಸಲಾಯಿತು.

ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಬಗ್ಗೆ:
- ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರು ಆಧುನಿಕ ಭಾರತೀಯ ಸಾಹಿತ್ಯದ ನಿರ್ಮಾತೃಗಳಲ್ಲಿ ಒಬ್ಬರಾಗಿದ್ದಾರೆ.
- ಪ್ರಖ್ಯಾತ ಕಾದಂಬರಿಕಾರ, ಕವಿ ಮತ್ತು ಪ್ರಬಂಧಕಾರರಾಗಿದ್ದ ಇವರ ಕೊಡುಗೆಗಳು, ಆಧುನಿಕ ಬಂಗಾಳಿ ಗದ್ಯದ ಬೆಳವಣಿಗೆ ಮತ್ತು ಉದಯೋನ್ಮುಖ ಭಾರತೀಯ ರಾಷ್ಟ್ರೀಯತೆಯ ಅಭಿವ್ಯಕ್ತಿಯ ಮೇಲೆ ಗಮನಾರ್ಹ ಪ್ರಭಾವ ಬೀರಿದವು.
- ಕೃತಿಗಳು: ದುರ್ಗೇಶನಂದಿನಿ (1865), ಕಪಾಲಕುಂಡಲ (1866), ಆನಂದಮಠ (1882) ಮತ್ತು ದೇವಿ ಚೌಧುರಾಣಿ (1884). ಇತ್ಯಾದಿ
ಥೈಲ್ಯಾಂಡ್-ಕಾಂಬೋಡಿಯಾ ಸಂಘರ್ಷ
ಸಾಮಾನ್ಯ ಅಧ್ಯಯನ-2 / ಅಂತರರಾಷ್ಟ್ರೀಯ ಸಂಬಂಧಗಳು

ಇದೀಗ ಸುದ್ದಿಯಲ್ಲಿದೆ:
- ಇತ್ತೀಚೆಗೆ, ಥೈಲ್ಯಾಂಡ್ ದೇಶವು ಕಾಂಬೋಡಿಯಾದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿಗಳನ್ನು ನಡೆಸಿತು.
ಹಿನ್ನೆಲೆ:
- ಥೈಲ್ಯಾಂಡ್-ಕಾಂಬೋಡಿಯಾ ಸಂಘರ್ಷವು 1907ರಲ್ಲಿ ಫ್ರೆಂಚರು ಕೈಗೊಂಡ ವಸಾಹತುಶಾಹಿ ಕಾಲದ ‘ಗಡಿ ನಿರ್ಣಯಗಳಿಗೆ’ ಸಂಬಂಧಿಸಿದ ದೀರ್ಘಕಾಲದ ಪ್ರಾದೇಶಿಕ ವಿವಾದವನ್ನು ಆಧರಿಸಿದೆ.
- ಈ ವಿವಾದದ ಕೇಂದ್ರಬಿಂದು ‘ಪ್ರಿಹ ವಿಹಾರ್ ದೇವಾಲಯ’ವಾಗಿದೆ. ಸಾಂಸ್ಕೃತಿಕವಾಗಿ ಮಹತ್ವಪೂರ್ಣವಾದ 11-12ನೇ ಶತಮಾನದ ಈ ಖಮೇರ್ ದೇಗುಲದ ಮೇಲೆ ಎರಡೂ ರಾಷ್ಟ್ರಗಳು ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಿವೆ.
- ಅಂತರರಾಷ್ಟ್ರೀಯ ನ್ಯಾಯಾಲಯವು (ICJ) 1962ರಲ್ಲಿ (ಮತ್ತು 2013ರಲ್ಲಿ ಮರುದೃಢೀಕರಿಸಿ), ಕಾಂಬೋಡಿಯಾದ ಸಾರ್ವಭೌಮತ್ವವನ್ನು ಎತ್ತಿಹಿಡಿದಿದೆ. ಆದಾಗ್ಯೂ, ಥೈಲ್ಯಾಂಡ್ ಈ ತೀರ್ಪುಗಳನ್ನು ತಿರಸ್ಕರಿಸಿದ್ದು, ಈ ಪ್ರದೇಶವು ತೀವ್ರವಾಗಿ ಸೈನ್ಯದ ನಿಯಂತ್ರಣಕ್ಕೆ ಒಳಪಡಿಸಲಾಗಿದೆ.
IMF ನಿಂದ UPI ಗೆ ವಿಶ್ವದ ಅತಿದೊಡ್ಡ ‘ನೈಜ-ಸಮಯದ ಪಾವತಿ ವ್ಯವಸ್ಥೆ’ ಎಂಬ ಮನ್ನಣೆ ದೊರೆತಿದೆ
ಸಾಮಾನ್ಯ ಅಧ್ಯಯನ- 3/ಅರ್ಥವ್ಯವಸ್ಥೆ
ಇದೀಗ ಸುದ್ದಿಯಲ್ಲಿದೆ:
- ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಜೂನ್ 2025 ರ ತನ್ನ “ಬೆಳೆಯುತ್ತಿರುವ ಚಿಲ್ಲರೆ ಡಿಜಿಟಲ್ ಪಾವತಿಗಳ (ಪರಸ್ಪರ ಕಾರ್ಯಸಾಧ್ಯತೆಯ ಮೌಲ್ಯ)” ವರದಿಯಲ್ಲಿ, ವಹಿವಾಟಿನ ಪ್ರಮಾಣದ ಆಧಾರದ ಮೇಲೆ ‘ಏಕೀಕೃತ ಪಾವತಿ ವ್ಯವಸ್ಥೆ’ (UPI) ಯನ್ನು ವಿಶ್ವದ ಅತಿದೊಡ್ಡ ‘ಚಿಲ್ಲರೆ ತ್ವರಿತ ಪಾವತಿ ವ್ಯವಸ್ಥೆ’ ಎಂದು ಗುರುತಿಸಿದೆ.
ಏಕೀಕೃತ ಪಾವತಿ ವ್ಯವಸ್ಥೆ (UPI) ಯ ಬಗ್ಗೆ:
- ಆರಂಭ: UPI ಅನ್ನು ಭಾರತದ ರಾಷ್ಟ್ರೀಯ ಪಾವತಿ ನಿಗಮ (NPCI) 2016 ರಲ್ಲಿ ವಿನ್ಯಾಸಗೊಳಿಸಿ, ಜಾರಿಗೆ ತಂದಿತು.
- ಉದ್ದೇಶ: ಇದೊಂದು ಏಕೀಕೃತ ವ್ಯವಸ್ಥೆಯಾಗಿದ್ದು, ಒಂದೇ ಮೊಬೈಲ್ ಅಪ್ಲಿಕೇಶನ್ ಮೂಲಕ (ಯಾವುದೇ ಪಾಲ್ಗೊಳ್ಳುವ ಬ್ಯಾಂಕ್ನ) ಅನೇಕ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಇದು ವಿವಿಧ ಬ್ಯಾಂಕಿಂಗ್ ವೈಶಿಷ್ಟ್ಯಗಳು, ಸುಗಮ ಹಣ ವರ್ಗಾವಣೆ ಮತ್ತು ವ್ಯಾಪಾರ ಪಾವತಿ ಸೌಲಭ್ಯಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುತ್ತದೆ.
- ಕಾರ್ಯನಿರ್ವಹಿಸುತ್ತಿರುವ ಅಥವಾ ಯೋಜಿತ ‘ಪರಸ್ಪರ ಕಾರ್ಯಸಾಧ್ಯತೆ’ಯನ್ನು ಹೊಂದಿರುವ ದೇಶಗಳು: ಸಿಂಗಾಪುರ (PayNow), ಯುಎಇ, ಫ್ರಾನ್ಸ್, ನೇಪಾಳ, ಭೂತಾನ್, ಮಾರಿಷಸ್, ಶ್ರೀಲಂಕಾ, ಇಂಡೋನೇಷ್ಯಾ ಮತ್ತು ಇತರೆ.
ಭಾರತದ ರಾಷ್ಟ್ರೀಯ ಪಾವತಿ ನಿಗಮ (NPCI) ದ ಬಗ್ಗೆ:
- ಸ್ಥಾಪನೆ: ಇದು ಭಾರತದಲ್ಲಿನ ಚಿಲ್ಲರೆ ಪಾವತಿಗಳ ಕಾರ್ಯಾವನ್ನು ನಿರ್ವಹಿಸುವ ಒಂದು ‘ಸರ್ವೋಚ್ಚ (ಪ್ರಧಾನ) ಸಂಸ್ಥೆ’ಯಾಗಿ ಕಾರ್ಯನಿರ್ವಹಿಸುತ್ತದೆ.
- ಸ್ಥಾಪಿಸಿದವರು: ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ಜಂಟಿಯಾಗಿ ಇದನ್ನು ಸ್ಥಾಪಿಸಿವೆ.
- ಇದನ್ನು ‘ಪಾವತಿ ಮತ್ತು ನಿವಾರಣ ವ್ಯವಸ್ಥೆಗಳ ಕಾಯ್ದೆ, 2007’ ರ ನಿಬಂಧನೆಗಳ ಅಡಿಯಲ್ಲಿ ಸ್ಥಾಪಿಸಲಾಗಿದೆ.
NPCI ನ ಉತ್ಪನ್ನಗಳು:
- ರುಪೇ (RuPay)
- ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC)
- ಭಾರತ್ ಇಂಟರ್ಫೇಸ್ ಫಾರ್ ಮನಿ (BHIM)
- ಏಕೀಕೃತ ಪಾವತಿ ವ್ಯವಸ್ಥೆ (UPI)
- ಭಾರತ್ ಬಿಲ್ ಪಾವತಿ ವ್ಯವಸ್ಥೆ
ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ (IBCA)
ಸಾಮಾನ್ಯ ಅಧ್ಯಯನ – 3/ ಪರಿಸರ
ಇದೀಗ ಸುದ್ದಿಯಲ್ಲಿದೆ:
- ನವದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ (IBCA) ದ ಅಡಿಯಲ್ಲಿನ ‘ದೊಡ್ಡ ಬೆಕ್ಕುಗಳ ಸಂರಕ್ಷಣೆಗಾಗಿ ಸಹಯೋಗದ ಉಪಕ್ರಮ’ದ ಉನ್ನತ ಮಟ್ಟದ ಸಭೆಯನ್ನುದ್ದೇಶಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು ಮಾತನಾಡಿದರು.
ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ (IBCA) ದ ಬಗ್ಗೆ:
- ಪ್ರಧಾನ ಕಚೇರಿ: ಭಾರತ.
- ಉದ್ದೇಶ : ಇದು ದೊಡ್ಡ ಬೆಕ್ಕು (ವನ್ಯ ಮಾರ್ಜಾಲ) ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿರುವ ಮತ್ತು ಈ ಪ್ರಭೇದಗಳು ಕಂಡುಬರುವ ವ್ಯಾಪ್ತಿಯ 95 ದೇಶಗಳ ಬಹು-ರಾಷ್ಟ್ರ ಹಾಗೂ ಬಹು- ಸಂಸ್ಥೆಗಳ ಒಕ್ಕೂಟವಾಗಿದೆ.
- ಆರಂಭ : 2023 ರಲ್ಲಿ ‘ಪ್ರಾಜೆಕ್ಟ್ ಟೈಗರ್ನ 50 ವರ್ಷಗಳ ಸ್ಮರಣಾರ್ಥ’ ಆಯೋಜಿಸಲಾದ ಕಾರ್ಯಕ್ರಮದ ವೇಳೆ, ಭಾರತದ ಪ್ರಧಾನ ಮಂತ್ರಿಯವರು IBCA ಗೆ ಚಾಲನೆ ನೀಡಿದರು.
- ಗುರಿ:- ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಚೀತಾ, ಜಾಗ್ವಾರ್ ಮತ್ತು ಪೂಮಾ ಎಂಬ ಏಳು ಪ್ರಮುಖ ದೊಡ್ಡ ಬೆಕ್ಕು ಪ್ರಭೇದಗಳನ್ನು ಸಂರಕ್ಷಿಸುವುದು.
ಸದಸ್ಯ ರಾಷ್ಟ್ರಗಳು:- ನಿಕರಾಗುವಾ, ಈಸ್ವಾತಿನಿ, ಭಾರತ, ಸೊಮಾಲಿಯಾ ಮತ್ತು ಲೈಬೀರಿಯಾ.
|
ದೊಡ್ಡ ಬೆಕ್ಕುಗಳು |
ದೈಹಿಕ ನೋಟ |
IUCN ಸ್ಥಿತಿಗತಿ |
CITES ಸ್ಥಿತಿಗತಿ |
ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 (ಭಾರತ) |
|
ಹುಲಿ (ಪ್ಯಾಂಥೆರಾ ಟೈಗ್ರಿಸ್) |
![]() |
ಅಳಿವಿನಂಚಿನಲ್ಲಿರುವ (EN) |
ಅನುಬಂಧ I |
ಅನುಸೂಚಿ 1 |
|
ಸಿಂಹ (ಪ್ಯಾಂಥೆರಾ ಲಿಯೋ) |
![]() |
ದುರ್ಬಲ (VU) |
ಅನುಬಂಧ I |
ಅನುಸೂಚಿ 1 |
|
ಚಿರತೆ (ಪ್ಯಾಂಥೆರಾ ಪಾರ್ಡಸ್) |
![]() |
ದುರ್ಬಲ (VU) |
ಅನುಬಂಧ I |
ಅನುಸೂಚಿ 1 |
|
ಹಿಮ ಚಿರತೆ (ಪ್ಯಾಂಥೆರಾ ಉನ್ಸಿಯಾ) |
![]() |
ದುರ್ಬಲ (VU) |
ಅನುಬಂಧ I |
ಅನುಸೂಚಿ 1 |
|
ಚೀತಾ (ಅಸಿನೋನಿಕ್ಸ್ ಜುಬಾಟಸ್) |
![]() |
ದುರ್ಬಲ (VU) |
ಅನುಬಂಧ I |
ಅನುಸೂಚಿ 1 |
|
ಜಾಗ್ವಾರ್ (ಪ್ಯಾಂಥೆರಾ ಓಂಕಾ) |
![]() |
ಬಹುತೇಕ ಅಳಿವಿನಂಚಿನಲ್ಲಿರುವ (NT) |
ಅನುಬಂಧ I |
ಭಾರತದಲ್ಲಿ ಕಂಡುಬರುವುದಿಲ್ಲ |
|
ಪೂಮಾ (ಪೂಮಾ ಕಾನ್ಕಲರ್) |
![]() |
ಕನಿಷ್ಠ ಕಾಳಜಿ (LT) |
ಅನುಬಂಧ I |
ಭಾರತದಲ್ಲಿ ಕಂಡುಬರುವುದಿಲ್ಲ |
ಸಿ. ರಾಜಗೋಪಾಲಾಚಾರಿ
ಸಾಮಾನ್ಯ ಅಧ್ಯಯನ-1/ಇತಿಹಾಸ
ಇದೀಗ ಸುದ್ದಿಯಲ್ಲಿ:
- ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ‘ರಾಜಾಜಿ’ ಎಂದೇ ಜನಪ್ರಿಯರಾಗಿದ್ದ ಸಿ. ರಾಜಗೋಪಾಲಾಚಾರಿ ಅವರ ಜನ್ಮ ದಿನವಾದ ಡಿಸೆಂಬರ್ 10 ರಂದು ಅವರಿಗೆ ಗೌರವ ನಮನ ಸಲ್ಲಿಸಿದರು.
ಸಿ. ರಾಜಗೋಪಾಲಾಚಾರಿ ಅವರ ಬಗ್ಗೆ:
ಆರಂಭಿಕ ಜೀವನ ಮತ್ತು ಶಿಕ್ಷಣ:
- ಇವರು ಮಹಾತ್ಮ ಗಾಂಧೀಜಿಯವರ ಆಪ್ತ ಸಹವರ್ತಿಯಾಗಿದ್ದರು.
- ಕಾನೂನು ಪದವಿಯನ್ನು (1899) ಪೂರೈಸಿ, ಸೇಲಂನಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು.
- ಲಾರ್ಡ್ ಕರ್ಜನ್ನ 1905ರ ಬಂಗಾಳ ವಿಭಜನೆ ನೀತಿ ಮತ್ತು ತಿಲಕರ “ಸ್ವರಾಜ್ಯ”ದ ಕರೆಯು ಇವರ ಆರಂಭಿಕ ರಾಜಕೀಯ ಪ್ರಜ್ಞೆಯನ್ನು ರೂಪಿಸಿತು.
ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಗಳು:
-
- 1919ರಲ್ಲಿ ತಮ್ಮ ವಕೀಲಿ ವೃತ್ತಿಯನ್ನು ತ್ಯಜಿಸಿದ ರಾಜಗೋಪಾಲಾಚಾರಿ ಅವರು, ರೌಲತ್ ಕಾಯ್ದೆಯ ವಿರುದ್ಧದ ಪ್ರತಿಭಟನೆಗಳು, ಅಸಹಕಾರ ಚಳವಳಿ, ವೈಕೋಮ್ ಸತ್ಯಾಗ್ರಹ ಮತ್ತು ನಾಗರಿಕ ಅಸಹಕಾರ ಚಳುವಳಿ ಸೇರಿದಂತೆ ಹಲವು ಪ್ರಮುಖ ಹೋರಾಟಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
- ಗಾಂಧೀಜಿಯವರ ದಂಡಿ ಯಾತ್ರೆಗೆ ಸಮಾಂತರವಾಗಿ ಮದ್ರಾಸ್ ಪ್ರಾಂತ್ಯದಲ್ಲಿ 1930ರ ವೇದಾರಣ್ಯಂ ಉಪ್ಪಿನ ಸತ್ಯಾಗ್ರಹದ ನೇತೃತ್ವ ವಹಿಸಿದರು.
- “ಭಾರತ ಬಿಟ್ಟು ತೊಲಗಿ” ಚಳುವಳಿಯ ನಂತರ, ಪಾಕಿಸ್ತಾನದ ವಿಷಯವಾಗಿ ಮುಸ್ಲಿಂ ಲೀಗ್ನೊಂದಿಗೆ ಉಂಟಾಗಿದ್ದ ಸಾಂವಿಧಾನಿಕ ಬಿಕ್ಕಟ್ಟನ್ನು ಪರಿಹರಿಸಲು ಸಿ.ಆರ್. ಸೂತ್ರವನ್ನು ಪ್ರಸ್ತಾಪಿಸುವ “ದಿ ವೇ ಔಟ್” ಕೃತಿಯನ್ನು ಪ್ರಕಟಿಸಿದರು.
ಸ್ವಾತಂತ್ರ್ಯಾ ನಂತರದ ಕೊಡುಗೆಗಳು:
- ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಕಗೊಂಡರು ಮತ್ತು ತದನಂತರ ಸ್ವತಂತ್ರ ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ (1947–1950) ಆಗಿ ಸೇವೆ ಸಲ್ಲಿಸಿದರು.
- ಭಾರತದ ಜಾತ್ಯತೀತ ಸ್ವರೂಪವನ್ನು ಕಾಪಾಡಲು ಮತ್ತು ಮುಸ್ಲಿಮರನ್ನು ರಾಷ್ಟ್ರೀಯ ಮುಖ್ಯವಾಹಿನಿಗೆ ಸೇರಿಸಲು ಶ್ರಮಿಸಿದರು.
- ಸರ್ದಾರ್ ಪಟೇಲ್ ಅವರ ನಿಧನದ ನಂತರ ಕೇಂದ್ರ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದರು; ರಾಷ್ಟ್ರೀಯ ಏಕೀಕರಣ ಮತ್ತು ಮೊದಲ ಪಂಚವಾರ್ಷಿಕ ಯೋಜನೆ ಸೇರಿದಂತೆ ದೇಶದ ಆರಂಭಿಕ ಯೋಜನಾ ಪ್ರಕ್ರಿಯೆಗಳಿಗೆ ಮಹತ್ವದ ಕೊಡುಗೆ ನೀಡಿದರು.
- ‘ಭಾರತ ರತ್ನ’:- ರಾಜಕೀಯ, ಸಾಹಿತ್ಯ ಮತ್ತು ಸಾರ್ವಜನಿಕ ಸೇವೆಗೆ ನೀಡಿದ ಅನನ್ಯ ಕೊಡುಗೆಗಳಿಗಾಗಿ ಇವರಿಗೆ 1954ರಲ್ಲಿ ‘ಭಾರತ ರತ್ನ’ ಪುರಸ್ಕಾರ ನೀಡಿ ಗೌರವಿಸಲಾಯಿತು.
‘ನಿಮ್ಮ ಹಣ, ನಿಮ್ಮ ಹಕ್ಕು’ ಆಂದೋಲನ
ಸಾಮಾನ್ಯ ಅಧ್ಯಯನ-2/ಆಡಳಿತ + ಸಾಮಾನ್ಯ ಅಧ್ಯಯನ-3/ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
- ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ‘ನಿಮ್ಮ ಹಣ, ನಿಮ್ಮ ಹಕ್ಕು’ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನಾಗರಿಕರಿಗೆ ಕರೆ ನೀಡಿದರು.
‘ನಿಮ್ಮ ಹಣ, ನಿಮ್ಮ ಹಕ್ಕು’ ಆಂದೋಲನದ ಬಗ್ಗೆ:
- ‘ನಿಮ್ಮ ಹಣ, ನಿಮ್ಮ ಹಕ್ಕು’ ಆಂದೋಲನವು ಒಂದು ಮಹತ್ವಾಕಾಂಕ್ಷೆಯ ಉಪಕ್ರಮವಾಗಿದ್ದು, ಅಕ್ಟೋಬರ್ 2025ರಲ್ಲಿ ಇದನ್ನು ಪ್ರಾರಂಭಿಸಲಾಯಿತು.
- ನಾಗರಿಕರು ತಮ್ಮ ಹಕ್ಕಿನ ಸ್ವತ್ತುಗಳನ್ನು ಮರುಪಡೆಯುವುದನ್ನು ಖಾತ್ರಿಪಡಿಸಿಕೊಳ್ಳಲು ಇದನ್ನು ವಿನ್ಯಾಸಗೊಳಿಸಲಾಗಿದೆ.
- ಗುರಿ:- ಹಕ್ಕು ಕೋರದ ಠೇವಣಿಗಳು, ವಿಮಾ ಮೊತ್ತಗಳು, ಲಾಭಾಂಶಗಳು ಮತ್ತು ಇತರ ಹಣಕಾಸಿನ ಸ್ವತ್ತುಗಳನ್ನು ಮರುಪಡೆಯಲು ಜನರಿಗೆ ನೆರವಾಗುವ ಗುರಿಯನ್ನು ಇದು ಹೊಂದಿದೆ.
- ಮಹತ್ವ:- ಇದು ವ್ಯಕ್ತಿಗಳಿಗೆ ತಮ್ಮ ಮರೆತುಹೋದ ಹಣಕಾಸಿನ ಸ್ವತ್ತುಗಳನ್ನು, ಬಳಸಬಹುದಾದ ನಿಧಿಗಳನ್ನಾಗಿ ಪರಿವರ್ತಿಸಲು ಒಂದು ಅವಕಾಶವನ್ನು ಕಲ್ಪಿಸುತ್ತದೆ.
|
ಇದು ನಿಮಗೆ ತಿಳಿದಿದೆಯೇ?
|
ವಿವಿಧ ಉಪಕ್ರಮಗಳು
ನಿಧಿಗಳ ಸುಲಭ ಪತ್ತೆ ಮತ್ತು ಹಕ್ಕು ಕೋರುವಿಕೆಯನ್ನು ಸಕ್ರಿಯಗೊಳಿಸಲು ಈ ಕೆಳಗಿನ ಮೀಸಲಾದ ಆನ್ಲೈನ್ ಪೋರ್ಟಲ್ಗಳನ್ನು ರಚಿಸಲಾಗಿದೆ:
- ಹಕ್ಕು ಕೋರದ ಬ್ಯಾಂಕ್ ಠೇವಣಿಗಳಿಗಾಗಿ ಆರ್ಬಿಐ ನ ಉದ್ಗಮ್ ಪೋರ್ಟಲ್.
- ಹಕ್ಕು ಕೋರದ ವಿಮಾ ಮೊತ್ತಗಳಿಗಾಗಿ ಐಆರ್ಡಿಎಐ ನ ಬಿಮಾ ಭರೋಸಾ ಪೋರ್ಟಲ್.
- ಹಕ್ಕು ಕೋರದ ಮ್ಯೂಚುವಲ್ ಫಂಡ್ ಮೊತ್ತಗಳಿಗಾಗಿ ಸೆಬಿಯ ಮಿತ್ರ ಪೋರ್ಟಲ್.
- ಪಾವತಿಯಾಗದ ಲಾಭಾಂಶಗಳು ಮತ್ತು ಹಕ್ಕು ಕೋರದ ಷೇರುಗಳಿಗಾಗಿ ಐಇಪಿಎಫ್ಎ ಪೋರ್ಟಲ್ (IEPFA Portal).
ಗ್ರಾಮೀಣ ಮತ್ತು ದೂರದ ಪ್ರದೇಶಗಳ ಮೇಲೆ ವಿಶೇಷ ಗಮನಹರಿಸಿ, ದೇಶದಾದ್ಯಂತ 477 ಜಿಲ್ಲೆಗಳಲ್ಲಿ ಸೌಲಭ್ಯ ಶಿಬಿರಗಳನ್ನು ಆಯೋಜಿಸಲಾಗಿದೆ.










ನಿಮ್ಮದೊಂದು ಉತ್ತರ