ಕೋಡೆಕ್ಸ್ ಅಲಿಮೆಂಟರಿಯಸ್ ಆಯೋಗ (Codex Alimentarius Commission)
ಪಠ್ಯಕ್ರಮ: ಜಿ.ಎಸ್-3/ ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
- ಭಾರತವು ಏಷ್ಯಾ ಪ್ರದೇಶಕ್ಕಾಗಿ ಕೋಡೆಕ್ಸ್ ಅಲಿಮೆಂಟೇರಿಯಸ್ ಆಯೋಗದ ಕಾರ್ಯಕಾರಿ ಸಮಿತಿಗೆ 2027ರ CAC50 (50ನೇ ಅಧಿವೇಶನ) ಮುಕ್ತಾಯದವರೆಗೆ ಮರುಚುನಾಯಿತವಾಗಿದೆ.
ಕೋಡೆಕ್ಸ್ ಅಲಿಮೆಂಟರಿಯಸ್ ಆಯೋಗ (CAC) ದ ಬಗ್ಗೆ:
- ಸ್ಥಾಪನೆ: 1963 ರಲ್ಲಿ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಜಂಟಿಯಾಗಿ ಸ್ಥಾಪಿಸಿದವು.
- ಉದ್ದೇಶ: ಗ್ರಾಹಕರ ಆರೋಗ್ಯವನ್ನು ರಕ್ಷಿಸುವುದು ಮತ್ತು ಆಹಾರ ವ್ಯಾಪಾರದಲ್ಲಿ ನ್ಯಾಯಯುತ ಅಭ್ಯಾಸಗಳನ್ನು ಉತ್ತೇಜಿಸುವುದು.
- ಸದಸ್ಯರು: ಯುರೋಪಿಯನ್ ಒಕ್ಕೂಟವೂ ಸೇರಿದಂತೆ ಒಟ್ಟು 189 ದೇಶಗಳು.
- ಸಭೆಗಳು: ವಾರ್ಷಿಕ ಅಧಿವೇಶನಗಳು ಜಿನೇವಾ ಮತ್ತು ರೋಮ್ ನಡುವೆ ಪರ್ಯಾಯವಾಗಿ ನಡೆಯುತ್ತವೆ.
ಜಲ ಆಯವ್ಯಯ (Water Budgeting)
ಪಠ್ಯಕ್ರಮ: ಜಿ.ಎಸ್-3/ ಕೃಷಿ
ಸಂದರ್ಭ:
- ಸ್ಥಳೀಯ ಜಲ ಭದ್ರತೆಯನ್ನು ಹೆಚ್ಚಿಸಲು ಮಹತ್ವಾಕಾಂಕ್ಷಿ ವಲಯಗಳಲ್ಲಿ (Aspiration Blocks) ಜಲ ಆಯವ್ಯಯದ ಕುರಿತು ನೀತಿ ಆಯೋಗವು ವರದಿಯನ್ನು ಬಿಡುಗಡೆ ಮಾಡಿದೆ.
ಜಲ ಆಯವ್ಯಯ (ವಾಟರ್ ಬಜೆಟಿಂಗ್) ಬಗ್ಗೆ:
- ವ್ಯಾಖ್ಯಾನ: ಕೃಷಿ, ಮನೆಬಳಕೆ, ಜಾನುವಾರು, ಕೈಗಾರಿಕೆ ಮತ್ತು ಪರಿಸರ ವ್ಯವಸ್ಥೆ ಸೇರಿದಂತೆ ಎಲ್ಲಾ ವಲಯಗಳಲ್ಲಿ ನೀರಿನ ಲಭ್ಯತೆ ಮತ್ತು ನೀರಿನ ಬೇಡಿಕೆಯನ್ನು ವ್ಯವಸ್ಥಿತವಾಗಿ ಅಂದಾಜು ಮಾಡುವುದಾಗಿದೆ.
- ಇದು ಸುಸ್ಥಿರ ಅಭಿವೃದ್ಧಿ ಗುರಿ – SDG 6 (ಶುದ್ಧ ನೀರು ಮತ್ತು ನೈರ್ಮಲ್ಯ) ಮತ್ತು ನೀರಿನ ಬಳಕೆಯ ದಕ್ಷತೆಯ ಕಡೆಗಿನ ರಾಷ್ಟ್ರೀಯ ಪ್ರಯತ್ನಗಳಿಗೆ ನೇರವಾಗಿ ಬೆಂಬಲ ನೀಡುತ್ತದೆ.
- ಮಹತ್ವ: ಜಲ ಜೀವನ್ ಮಿಷನ್, ಜಲ ಶಕ್ತಿ ಅಭಿಯಾನ ಮತ್ತು ಅಟಲ್ ಭೂಜಲ ಯೋಜನೆಯಡಿ ವಿಕೇಂದ್ರೀಕೃತ ಯೋಜನೆಯನ್ನು ಬಲಪಡಿಸಲು ಇದು ಸಹಕಾರಿಯಾಗಿದೆ.
ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ
ಪಠ್ಯಕ್ರಮ: ಇತರೆ

ಸಂದರ್ಭ:
- ಚಿಲಿ ದೇಶದ ಮಾಜಿ ರಾಷ್ಟ್ರಪತಿಯಾದ ಮಿಚೆಲ್ ಬ್ಯಾಚೆಲೆಟ್ ಅವರು 2024ನೇ ಸಾಲಿನ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿಯ ಬಗ್ಗೆ:
- ಇದು ಭಾರತದಲ್ಲಿನ ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ಸ್ಥಾಪಿಸಿದ ವಾರ್ಷಿಕವಾಗಿ ನೀಡುವ ಪ್ರಶಸ್ತಿಯಾಗಿದೆ.
- ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಗೌರವಾರ್ಥ ಪ್ರಶಸ್ತಿಗೆ ಈ ಹೆಸರನ್ನು ಇಡಲಾಗಿದೆ.
- ಇದನ್ನು 1986ರಲ್ಲಿ ಸ್ಥಾಪಿಸಲಾಯಿತು.
- ಪ್ರಶಸ್ತಿ ಮೊತ್ತ: ಇತ್ತೀಚೆಗೆ ಈ ಪ್ರಶಸ್ತಿಯ ನಗದು ಮೊತ್ತವನ್ನು ₹25 ಲಕ್ಷದಿಂದ ₹1 ಕೋಟಿಗೆ ಹೆಚ್ಚಿಸಲಾಗಿದೆ.
- ಉದ್ದೇಶ: ಅಂತರರಾಷ್ಟ್ರೀಯ ಶಾಂತಿ, ನಿಶ್ಶಸ್ತ್ರೀಕರಣ, ಅಭಿವೃದ್ಧಿ, ನೂತನ ಅಂತರರಾಷ್ಟ್ರೀಯ ಆರ್ಥಿಕ ಕ್ರಮ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸಲು ಗಮನಾರ್ಹ ಕೊಡುಗೆ ನೀಡಿದ ವ್ಯಕ್ತಿಗಳಿಗೆ ಮತ್ತು ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
- ಸಾಮಾನ್ಯವಾಗಿ, ಇಂದಿರಾ ಗಾಂಧಿಯವರ ಜನ್ಮದಿನವಾದ ನವೆಂಬರ್ 19 ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಈ ಪ್ರಶಸ್ತಿಯನ್ನು ಮೂರು ಕ್ಷೇತ್ರಗಳಲ್ಲಿ ನೀಡಲಾಗುತ್ತದೆ:
- ಶಾಂತಿ: ಅಂತರರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಉತ್ತೇಜಿಸುವ ಹಾಗೂ ಅದನ್ನು ಕಾಪಾಡುವ ನಿಟ್ಟಿನಲ್ಲಿ ನಡೆಸಲಾದ ಮಹತ್ವದ ಪ್ರಯತ್ನಗಳನ್ನು ಇದು ಗುರುತಿಸುತ್ತದೆ.
- ನಿಶ್ಯಸ್ತ್ರೀಕರಣ: ಪರಮಾಣು ಅಸ್ತ್ರಗಳು ಸೇರಿದಂತೆ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಕಡಿತ ಮತ್ತು ಅವುಗಳ ಸಂಪೂರ್ಣ ನಿರ್ಮೂಲನೆಗೆ ನೀಡಿದ ಕೊಡುಗೆಗಳನ್ನು ಈ ವಿಭಾಗದಲ್ಲಿ ಪರಿಗಣಿಸಲಾಗುತ್ತದೆ.
- ಅಭಿವೃದ್ಧಿ: ಜಾಗತಿಕವಾಗಿ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಮತ್ತು ಬಡತನ ನಿರ್ಮೂಲನೆಗೆ ಸಹಕರಿಸುವ ಕಾರ್ಯಗಳನ್ನು ಇದು ಗೌರವಿಸುತ್ತದೆ.
ಎಎಂಆರ್ 2.0 ಮೇಲಿನ ರಾಷ್ಟ್ರೀಯ ಕಾರ್ಯ ಯೋಜನೆ ಬಿಡುಗಡೆ ಮಾಡಲಾಗಿದೆ
ಪಠ್ಯಕ್ರಮ: ಜಿ.ಎಸ್-2/ ಆರೋಗ್ಯ ಸಂಬಂಧಿತ ವಿಷಯಗಳು

ಸಂದರ್ಭ:
- ಇತ್ತೀಚೆಗೆ, ಕೇಂದ್ರ ಆರೋಗ್ಯ ಸಚಿವರು ಸೂಕ್ಷ್ಮಾಣುಜೀವಿ ಪ್ರತಿರೋಧ (ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್) ದ ಮೇಲಿನ ರಾಷ್ಟ್ರೀಯ ಕಾರ್ಯ ಯೋಜನೆಯ ಎರಡನೇ ಆವೃತ್ತಿಯನ್ನು (NAP – AMR, 2025–29) ಬಿಡುಗಡೆ ಮಾಡಿದರು.
ಸೂಕ್ಷ್ಮಾಣುಜೀವಿ ಪ್ರತಿರೋಧ (ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್) ದ ಮೇಲಿನ ರಾಷ್ಟ್ರೀಯ ಕಾರ್ಯ ಯೋಜನೆ 2.0 ದ ಬಗ್ಗೆ:
- ಇದು ಎನ್‌ಎಪಿ-ಎಎಂಆರ್ 1.0 (2017–2021) ರಲ್ಲಿದ್ದ ಲೋಪದೋಷಗಳನ್ನು ಸರಿಪಡಿಸುತ್ತದೆ. ಇದರಲ್ಲಿ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸುವುದು, ಸಾರ್ವಜನಿಕ ಜಾಗೃತಿಯನ್ನು ವಿಸ್ತರಿಸುವುದು, ಖಾಸಗಿ ವಲಯದ ಸಹಭಾಗಿತ್ವವನ್ನು ಹೆಚ್ಚಿಸುವುದು ಮತ್ತು ನಿಯಂತ್ರಣ ಹಾಗೂ ಪ್ರಯೋಗಾಲಯಗಳ ಸಾಮರ್ಥ್ಯವನ್ನು ಸುಧಾರಿಸುವುದು ಸೇರಿದಂತೆ ಅನೇಕ ಅಂಶಗಳು ಸೇರಿವೆ.
ಸೂಕ್ಷ್ಮಾಣುಜೀವಿ ಪ್ರತಿರೋಧ (ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್) ದ ಕುರಿತ:
- ವ್ಯಾಖ್ಯಾನ: ಬ್ಯಾಕ್ಟೀರಿಯಾ, ವೈರಸ್‌ಗಳು, ಶಿಲೀಂಧ್ರಗಳು ಮತ್ತು ಪರಾವಲಂಬಿ ಜೀವಿಗಳು ಕಾಲಕ್ರಮೇಣ ಬದಲಾವಣೆಗೆ ಒಳಗಾಗಿ, ಔಷಧಿಗಳಿಗೆ ಸ್ಪಂದಿಸುವುದನ್ನು ನಿಲ್ಲಿಸಿದಾಗ ಈ ಸ್ಥಿತಿ ಉಂಟಾಗುತ್ತದೆ. ಇದರಿಂದ ಸೋಂಕಿನ ಚಿಕಿತ್ಸೆ ಕಷ್ಟಕರವಾಗುತ್ತದೆ ಹಾಗೂ ರೋಗ ಹರಡುವಿಕೆ, ತೀವ್ರ ಅನಾರೋಗ್ಯ ಮತ್ತು ಸಾವಿನ ಅಪಾಯ ಹೆಚ್ಚಾಗುತ್ತದೆ.
- ಪ್ರತಿ ವರ್ಷ ಸುಮಾರು 700,000 ಜನರು ಎಎಂಆರ್ (AMR) ನಿಂದ ಸಾವನ್ನಪ್ಪುತ್ತಿದ್ದಾರೆ. 2050 ರ ಹೊತ್ತಿಗೆ ಈ ಸಂಖ್ಯೆ 1 ಕೋಟಿಗೆ ಏರಬಹುದು ಮತ್ತು ಜಾಗತಿಕ ಒಟ್ಟು ಆಂತರಿಕ ಉತ್ಪನ್ನದ (GDP) ಶೇಕಡಾ 3.8 ರಷ್ಟು ಈ ಸಮಸ್ಯೆಯಿಂದಲೇ ವ್ಯಾಪಿಸಬಹುದು.
ಸೂಕ್ಷ್ಮಾಣುಜೀವಿ ಪ್ರತಿರೋಧಕ್ಕೇ ಕಾರಣಗಳು:
- ಪ್ರತಿಜೀವಕ ಔಷಧಿಗಳ (Antibiotics) ಅತಿಯಾದ ಮತ್ತು ದುರ್ಬಳಕೆ.
- ಅಸಮರ್ಪಕ ಔಷಧದ ಪ್ರಮಾಣ ಮತ್ತು ಅವಧಿ.
- ವೈದ್ಯರ ಸಲಹೆಯಿಲ್ಲದೆ ಔಷಧಿ ಸೇವನೆ (ಸ್ವಯಂ-ಚಿಕಿತ್ಸೆ).
- ಆಹಾರಕ್ಕಾಗಿ ಬಳಸುವ ಪ್ರಾಣಿಗಳಲ್ಲಿ ಪ್ರತಿಜೀವಕ ಔಷಧಿಗಳ ಬಳಕೆ.
- ಅಸಮರ್ಪಕ ಸ್ವಚ್ಛತೆ.
ಸೂಕ್ಷ್ಮಾಣುಜೀವಿ ಪ್ರತಿರೋಧದ ವಿರುದ್ಧ ಜಾಗತಿಕ ಪ್ರಯತ್ನಗಳು:
- ಸೂಕ್ಷ್ಮಾಣುಜೀವಿ ಪ್ರತಿರೋಧ(AMR) ದ ಮೇಲಿನ ಜಾಗತಿಕ ಕಾರ್ಯ ಯೋಜನೆ.
- ವಿಶ್ವ ಸೂಕ್ಷ್ಮಾಣುಜೀವಿ ಪ್ರತಿರೋಧದ ಜಾಗೃತಿ ಸಪ್ತಾಹ (WAAW).
- ಜಾಗತಿಕ ಸೂಕ್ಷ್ಮಾಣುಜೀವಿ ಪ್ರತಿರೋಧ ಮತ್ತು ಬಳಕೆಯ ಕಣ್ಗಾವಲು ವ್ಯವಸ್ಥೆ (GLASS).
- ಜಾಗತಿಕ ಪ್ರತಿಜೀವಕ ಔಷಧಿ ಸಂಶೋಧನೆ ಮತ್ತು ಅಭಿವೃದ್ಧಿ ಪಾಲುದಾರಿಕೆ (GARDP).
ಭಾರತದಲ್ಲಿ ಸೂಕ್ಷ್ಮಾಣುಜೀವಿ ಪ್ರತಿರೋಧದ ವಿರುದ್ಧ ತೆಗೆದುಕೊಂಡ ಕ್ರಮಗಳು:
- ಸೂಕ್ಷ್ಮಾಣುಜೀವಿ ಪ್ರತಿರೋಧ (AMR) ದ ಮೇಲಿನ ರಾಷ್ಟ್ರೀಯ ಕಾರ್ಯ ಯೋಜನೆ (NAP – AMR)
- ಸೂಕ್ಷ್ಮಾಣುಜೀವಿ ಪ್ರತಿರೋಧ (AMR) ದ ಕಣ್ಗಾವಲು ಜಾಲ.
- ಭಾರತದ ‘ರೆಡ್ ಲೈನ್’ ಅಭಿಯಾನ: ವೈದ್ಯರ ಚೀಟಿ ಇದ್ದರೆ ಮಾತ್ರ ಮಾರಾಟ ಮಾಡಬೇಕಾದ ಪ್ರತಿಜೀವಕ ಔಷಧಿಗಳ ಪ್ಯಾಕೆಟ್ ಮೇಲೆ ‘ಕೆಂಪು ಗೆರೆ’ಯನ್ನು ಕಡ್ಡಾಯವಾಗಿ ಮುದ್ರಿಸಬೇಕೆಂದು ಈ ಅಭಿಯಾನವು ಪ್ರತಿಪಾದಿಸುತ್ತದೆ. ಔಷಧ ಅಂಗಡಿಗಳಲ್ಲಿ ನೇರವಾಗಿ (ವೈದ್ಯರ ಸಲಹೆಯಿಲ್ಲದೆ) ಪ್ರತಿಜೀವಕ ಔಷಧಿಗಳನ್ನು ಮಾರಾಟ ಮಾಡುವುದನ್ನು ತಡೆಯಲು ಇದೊಂದು ದಿಟ್ಟ ಕ್ರಮವಾಗಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಯ ಪಟ್ಟಿಯಿಂದ ಅನರ್ಹ ಫಲಾನುಭವಿಗಳ ತೆರವು
ಪಠ್ಯಕ್ರಮ: ಜಿ.ಎಸ್-3/ ಆಹಾರ ಭದ್ರತೆ
ಸಂದರ್ಭ:
- ಕಳೆದ ನಾಲ್ಕೈದು ತಿಂಗಳುಗಳಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಯ ಅಡಿಯಲ್ಲಿ ಉಚಿತ ಮಾಸಿಕ ಪಡಿತರ ಯೋಜನೆಯಿಂದ ಸುಮಾರು 2.25 ಕೋಟಿ ಅನರ್ಹ ಫಲಾನುಭವಿಗಳನ್ನು ಕೇಂದ್ರ ಸರ್ಕಾರವು ತೆಗೆದುಹಾಕಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA), 2013 ರ ಬಗ್ಗೆ:
- ಭಾರತದ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಬರುವ “ಜೀವಿಸುವ ಹಕ್ಕಿ”ನ ಅಡಿಯಲ್ಲಿ “ಆಹಾರದ ಹಕ್ಕು” ಅಂತರ್ಗತವಾಗಿದೆ.
- ಗುರಿ: ಇದು ಭಾರತದ ಜನಸಂಖ್ಯೆಯ ಹೆಚ್ಚಿನ ವರ್ಗಕ್ಕೆ ರಿಯಾಯಿತಿ ದರದಲ್ಲಿ ಆಹಾರ ಧಾನ್ಯಗಳನ್ನು ಒದಗಿಸುವುದು.
- 2011 ರ ಜನಗಣತಿ ದತ್ತಾಂಶದ ಆಧಾರದ ಮೇಲೆ, ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆಯ (TPDS) ಅಡಿಯಲ್ಲಿ ಇದು ಸರಿಸುಮಾರು 81.35 ಕೋಟಿ ಜನರಿಗೆ ನೆರವಾಗಿದೆ.
ಇಷ್ಟು ಫಲಾನುಭವಿಗಳನ್ನು ಒಳಗೊಂಡಿದೆ:
- ಗ್ರಾಮೀಣ ಜನಸಂಖ್ಯೆಯ 75% ರಷ್ಟು.
- ನಗರ ಜನಸಂಖ್ಯೆಯ 50% ರಷ್ಟು.
ಫಲಾನುಭವಿಗಳ ವರ್ಗಗಳು: ಈ ಕಾಯ್ದೆಯು ಫಲಾನುಭವಿಗಳನ್ನು ಎರಡು ಮುಖ್ಯ ಗುಂಪುಗಳಾಗಿ ವಿಂಗಡಿಸುತ್ತದೆ, ಅವುಗಳೆಂದರೆ-
- ಅಂತ್ಯೋದಯ ಅನ್ನ ಯೋಜನೆ (AAY) ಕುಟುಂಬಗಳು: ಪ್ರತಿ ಕುಟುಂಬ ತಿಂಗಳಿಗೆ 35 ಕೆಜಿ ಆಹಾರ ಧಾನ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
- ಆದ್ಯತಾ ಕುಟುಂಬದ (PHH) ವ್ಯಕ್ತಿಗಳು: ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಆಹಾರ ಧಾನ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
- ಪ್ರಸ್ತುತ, ಈ ವರ್ಗಗಳ ಅಡಿಯಲ್ಲಿ ಬರುವ ಬಡ ಕುಟುಂಬಗಳಿಗೆ ಪ್ರತಿ ತಿಂಗಳು ಉಚಿತ ಆಹಾರ ಧಾನ್ಯಗಳನ್ನು (ಗೋಧಿ ಮತ್ತು ಅಕ್ಕಿ) ವಿತರಿಸಲಾಗುತ್ತಿದೆ.
ವಿತರಣೆಯ ಪ್ರಮಾಣ:
- ಭಾರತವು ಪ್ರಸ್ತುತ 19 ಕೋಟಿಗೂ ಹೆಚ್ಚು ಪಡಿತರ ಚೀಟಿದಾರರನ್ನು ಹೊಂದಿದೆ ಮತ್ತು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 5 ಲಕ್ಷ ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ.
- ಇದು ಸಾರ್ವಜನಿಕ ವಿತರಣಾ ವ್ಯವಸ್ಥೆಯ (PDS) ಅಸ್ತಿತ್ವದಲ್ಲಿರುವ ಮೂಲಸೌಕರ್ಯವನ್ನು ಬಳಸಿಕೊಳ್ಳುತ್ತದೆ ಮತ್ತು ಮಧ್ಯಾಹ್ನದ ಬಿಸಿಯೂಟ ಯೋಜನೆ ಹಾಗೂ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳಂತಹ (ICDS) ಯೋಜನೆಗಳನ್ನು ಸಂಯೋಜಿಸುತ್ತದೆ.
ಕೇವಲ ‘ಅರ್ಹ’ ಫಲಾನುಭವಿಗಳನ್ನು ಗುರುತಿಸುವುದು:
- ಕೇವಲ ನೈಜ ಫಲಾನುಭವಿಗಳು ಅಂದರೆ, ನಿಜವಾಗಿಯೂ ಸಹಾಯದ ಅಗತ್ಯವಿರುವವರು ಮಾತ್ರ ಪ್ರಯೋಜನಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ.
- ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ವಿವಿಧ ಮಾನದಂಡಗಳನ್ನು ಉಪಯೋಗಿಸಿಕೊಂಡು ಅನರ್ಹ ವ್ಯಕ್ತಿಗಳನ್ನು ಗುರುತಿಸಿ ಮತ್ತು ಪರಿಶೀಲನೆ ಹಾಗೂ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ರಾಜ್ಯ ಸರ್ಕಾರಗಳೊಂದಿಗೆ ಪಟ್ಟಿಗಳನ್ನು ಹಂಚಿಕೊಂಡಿದೆ.
- ಅನರ್ಹ ಹೆಸರುಗಳನ್ನು ಗುರುತಿಸಿ ತೆಗೆದುಹಾಕಲು ಇದು ಆಧಾರ್-ಆಧಾರಿತ ಪರಿಶೀಲನೆಯನ್ನು ಬಳಸಿದೆ.
ಪಟ್ಟಿಯಿಂದ ಹೆಸರುಗಳನ್ನುತೆಗೆದುಹಾಕಲು ಪ್ರಮುಖ ಕಾರಣಗಳು:
- ನಾಲ್ಕು ಚಕ್ರದ ವಾಹನಗಳ ಒಡೆತನ ಹೊಂದಿದ್ದರೆ.
- ಅರ್ಹತೆ ಮಿತಿ ಮೀರಿ ಹೆಚ್ಚಿನ ಆದಾಯ ಹೊಂದಿದ್ದರೆ.
- ಕಂಪನಿಯ ನಿರ್ದೇಶಕ ಸ್ಥಾನಗಳನ್ನು ಹೊಂದಿದ್ದರೆ.
- ಮೃತಪಟ್ಟ ಫಲಾನುಭವಿಗಳು.
ಪರಿಷ್ಕೃತ “ಉಡಾನ್” (UDAN) ಪ್ರಾದೇಶಿಕ ವಾಯು ಸಂಪರ್ಕ ಯೋಜನೆ
ಪಠ್ಯಕ್ರಮ: ಜಿ.ಎಸ್-3/ ಆರ್ಥಿಕತೆ
ಸಂದರ್ಭ:
- ಪರಿಷ್ಕೃತ ಉಡಾನ್ (UDAN) ಪ್ರಾದೇಶಿಕ ವಾಯು ಸಂಪರ್ಕ ಯೋಜನೆಯನ್ನು ಏಪ್ರಿಲ್ 2027 ರ ನಂತರವೂ ವಿಸ್ತರಿಸಲು ಕೇಂದ್ರ ಸರ್ಕಾರವು 30,000 ಕೋಟಿ ರೂಪಾಯಿಗಳ ವೆಚ್ಚವನ್ನು ಪ್ರಸ್ತಾಪಿಸಿದೆ.
- ಇದರಲ್ಲಿ, ಹೊಸ ವಿಮಾನ ನಿಲ್ದಾಣ ಅಭಿವೃದ್ಧಿಗಾಗಿ 18,000 ಕೋಟಿ ರೂ.ಗಳನ್ನು ಮತ್ತು ಸೇವೆ ಲಭ್ಯವಿಲ್ಲದ ಪ್ರದೇಶಗಳನ್ನು ಸಂಪರ್ಕಿಸುವ ವಿಮಾನಯಾನ ಸಂಸ್ಥೆಗಳನ್ನು ಬೆಂಬಲಿಸಲು “ಲಾಭದಾಯಕತೆಯ ಅಂತರದ ಧನಸಹಾಯ” (ವಯಬಿಲಿಟಿ ಗ್ಯಾಪ್ ಫಂಡಿಂಗ್ -VGF) ಕ್ಕಾಗಿ 12,000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.
ಉಡಾನ್ ಯೋಜನೆಯ ಬಗ್ಗೆ:
- ಇದು 2016 ರಲ್ಲಿ ಪ್ರಾರಂಭಿಸಲಾದ ಪ್ರಾದೇಶಿಕ ಸಂಪರ್ಕ ಯೋಜನೆಯಾಗಿದೆ.
- ಮೊದಲ ಉಡಾನ್ ವಿಮಾನವು 2017 ರಲ್ಲಿ ಶಿಮ್ಲಾ ಮತ್ತು ದೆಹಲಿ ನಡುವೆ ಹಾರಾಟ ನಡೆಸಿತು.
- ಸಚಿವಾಲಯ: ನಾಗರಿಕ ವಿಮಾನಯಾನ ಸಚಿವಾಲಯ.
- ಗುರಿ: ಎರಡನೇ (Tier-2) ಮತ್ತು ಮೂರನೇ ಸ್ತರದ (Tier-3) ನಗರಗಳನ್ನು ಪ್ರಮುಖ ಕೇಂದ್ರಗಳಿಗೆ ಸಂಪರ್ಕಿಸುವ ಮೂಲಕ ಸಾಮಾನ್ಯ ನಾಗರಿಕರಿಗೆ ವಿಮಾನ ಪ್ರಯಾಣವನ್ನು ಕೈಗೆಟುಕುವ ಮತ್ತು ಸುಲಭವಾಗಿ ಸಿಗುವಂತೆ ಮಾಡುವುದು.
ಅನುಷ್ಠಾನ :
- “ಲಾಭದಾಯಕತೆಯ ಅಂತರದ ಧನಸಹಾಯ” (ವಯಬಿಲಿಟಿ ಗ್ಯಾಪ್ ಫಂಡಿಂಗ್ -VGF): ಇದು ಕೈಗೆಟುಕುವ ದರಗಳನ್ನು ಖಚಿತಪಡಿಸಿಕೊಳ್ಳಲು ವಿಮಾನಯಾನ ಸಂಸ್ಥೆಗಳಿಗೆ ನೀಡುವ ಆರ್ಥಿಕ ಬೆಂಬಲವಾಗಿದೆ.
- ದರಗಳು ಕೈಗೆಟುಕುವಂತೆ ನೋಡಿಕೊಳ್ಳಲು ವಿಮಾನ ಪ್ರಯಾಣ ದರಗಳ ಮೇಲೆ ಗರಿಷ್ಠ ಮಿತಿ ನಿಗದಿಪಡಿಸಲಾಗಿದೆ.



ನಿಮ್ಮದೊಂದು ಉತ್ತರ