ಆಪರೇಷನ್ ಸದರ್ನ್ ಸ್ಪಿಯರ್
ಸಾಮಾನ್ಯ ಅಧ್ಯಯನ-2 / ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
- ಅಮೇರಿಕ ಸಂಯುಕ್ತ ಸಂಸ್ಥಾನವು ಲ್ಯಾಟಿನ್ ಅಮೇರಿಕದಲ್ಲಿ ‘ಆಪರೇಷನ್ ಸದರ್ನ್ ಸ್ಪಿಯರ್’ ಎಂಬ ಮಹತ್ವದ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. “ನಾರ್ಕೋ-ಭಯೋತ್ಪಾದಕರನ್ನು” (ಮಾದಕವಸ್ತು ಕಳ್ಳಸಾಗಣೆದಾರರು ಮತ್ತು ಭಯೋತ್ಪಾದಕರ ಜಾಲ) ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಈ ಕಾರ್ಯಾಚರಣೆಯ ಮೂಲ ಉದ್ದೇಶವಾಗಿದೆ.
ಆಪರೇಷನ್ ಸದರ್ನ್ ಸ್ಪಿಯರ್ ಕಾರ್ಯಾಚರಣೆಯ ಪ್ರಮುಖಾಂಶಗಳು:
- ಸ್ವರೂಪ: ಇದೊಂದು ಪ್ರಮುಖ ಸೇನಾ ಮತ್ತು ಕಣ್ಗಾವಲು ಕಾರ್ಯಾಚರಣೆಯಾಗಿದ್ದು ನಾರ್ಕೋ-ಭಯೋತ್ಪಾದಕ ಜಾಲಗಳನ್ನು ಗುರಿಯಾಗಿಸಿಕೊಂಡಿದೆ.
- ನಿರ್ವಹಣೆ: ಈ ಕಾರ್ಯಾಚರಣೆಯನ್ನು ಅಮೆರಿಕದ ‘ಸೌತ್ ಕಾಮ್’ (SOUTHCOM) ಮುನ್ನಡೆಸುತ್ತಿದೆ.
‘ಸೌತ್ ಕಾಮ್’ ನ ಬಗ್ಗೆ
- ಪೂರ್ಣ ರೂಪ: ‘ಯು.ಎಸ್. ಸದರ್ನ್ ಕಮಾಂಡ್’
- ಕಾರ್ಯವ್ಯಾಪ್ತಿ: ಇದರ ಕಾರ್ಯವ್ಯಾಪ್ತಿಯು ದಕ್ಷಿಣ ಅಮೆರಿಕ, ಮಧ್ಯ ಅಮೆರಿಕ ಮತ್ತು ಕೆರಿಬಿಯನ್ ಪ್ರದೇಶದಾದ್ಯಂತ ಇರುವ 31 ದೇಶಗಳನ್ನು ಒಳಗೊಂಡಿದೆ.
ಕಾರ್ಯಾಚರಣೆಯ ಉದ್ದೇಶಗಳು
ಅಮೆರಿಕ ಸರ್ಕಾರದ ಪ್ರಕಾರ, ಈ ಕಾರ್ಯಾಚರಣೆಯು ಮೂರು ಪ್ರಮುಖ ಗುರಿಗಳನ್ನು ಹೊಂದಿದೆ:
- ತಾಯ್ನಾಡಿನ ರಕ್ಷಣೆ: ಅಮೆರಿಕದ ತಾಯ್ನಾಡನ್ನು ಬಾಹ್ಯ ಬೆದರಿಕೆಗಳಿಂದ ರಕ್ಷಿಸುವುದು.
- ಭಯೋತ್ಪಾದನೆ ನಿಗ್ರಹ: ಪಶ್ಚಿಮ ಗೋಳಾರ್ಧದಿಂದ ನಾರ್ಕೋ-ಭಯೋತ್ಪಾದಕ ಬೆದರಿಕೆಗಳನ್ನು ಸಂಪೂರ್ಣವಾಗಿ ತೊಡೆದು ಹಾಕುವುದು.
- ಮಾದಕ ದ್ರವ್ಯ ತಡೆಗಟ್ಟುವಿಕೆ: ಅಮೆರಿಕದ ಜನಸಂಖ್ಯೆಗೆ ಗಂಭೀರ ಹಾನಿಯನ್ನುಂಟು ಮಾಡುತ್ತಿರುವ ಅಕ್ರಮ ಮಾದಕ ದ್ರವ್ಯಗಳ ಹರಿವನ್ನು ತಡೆಗಟ್ಟುವುದು.
ಕೊಲಂಬೊ ಭದ್ರತಾ ಸಮಾವೇಶ (CSC)
ಸಾಮಾನ್ಯ ಅಧ್ಯಯನ – 2/ ಅಂತರರಾಷ್ಟ್ರೀಯ ಸಂಬಂಧಗಳು
ಇದೀಗ ಸುದ್ದಿಯಲ್ಲಿದೆ:
- ಕೊಲಂಬೊ ಭದ್ರತಾ ಸಮಾವೇಶವು ಅಧಿಕೃತವಾಗಿ ಬಾಂಗ್ಲಾದೇಶವನ್ನು ತನ್ನ ಐದನೇ ಸದಸ್ಯ ರಾಷ್ಟ್ರವನ್ನಾಗಿ ಸೇರ್ಪಡೆಗೊಳಿಸಿಕೊಂಡಿದೆ.
ಕೊಲಂಬೊ ಭದ್ರತಾ ಸಮಾವೇಶದ ಬಗ್ಗೆ:
- ಸ್ಥಾಪನೆ – 2020.
- ಉದ್ದೇಶ: ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಡಲ ಸಹಕಾರವನ್ನು ವಿಸ್ತರಿಸುವುದು ಮತ್ತು ಪ್ರಾದೇಶಿಕ ಭದ್ರತೆಯನ್ನು ಬಲಪಡಿಸುವುದು.
- ಸದಸ್ಯ ರಾಷ್ಟ್ರಗಳು: ಭಾರತ, ಶ್ರೀಲಂಕಾ, ಮಾಲ್ಡೀವ್ಸ್, ಮಾರಿಷಸ್ ಮತ್ತು ಬಾಂಗ್ಲಾದೇಶ.
- ಸೀಶೆಲ್ಸ್ ಒಂದು ವೀಕ್ಷಕ ರಾಷ್ಟ್ರವಾಗಿದೆ.
- ಸಹಕಾರದ ಆಧಾರಸ್ತಂಭಗಳು : ಕಡಲ ಭದ್ರತೆ, ಭಯೋತ್ಪಾದನಾ ನಿಗ್ರಹ, ಗಡಿಯಾಚೆಗಿನ ಸಂಘಟಿತ ಅಪರಾಧಗಳ ತಡೆಗಟ್ಟುವಿಕೆ, ಸೈಬರ್ ಭದ್ರತೆ ಹಾಗೂ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ.



ನಿಮ್ಮದೊಂದು ಉತ್ತರ