ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವ
ಸಾಮಾನ್ಯ ಅಧ್ಯಯನ -1/ ಇತಿಹಾಸ
ಇದೀಗ ಸುದ್ದಿಯಲ್ಲಿದೆ:
- ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥ ನವೆಂಬರ್ 15 ರಂದು “ಜನಜಾತೀಯ ಗೌರವ ದಿವಸ’ವನ್ನಾಗಿ ಆಚರಿಸಲಾಗುತ್ತದೆ.
- ಸರ್ಕಾರವು 2021 ರಲ್ಲಿ ಈ ದಿನವನ್ನು ‘ಜನಜಾತೀಯ ಗೌರವ ದಿವಸ’ ಎಂದು ಘೋಷಿಸಿತು.
ಬಿರ್ಸಾ ಮುಂಡಾ ಅವರ ಬಗ್ಗೆ:
- ಬಿರ್ಸಾ ಮುಂಡಾ ಅವರು ಜಾರ್ಖಂಡ್ನ ಉಲಿಹಾಟು ಎಂಬ ಗ್ರಾಮದಲ್ಲಿ 1874 ರಲ್ಲಿ ಜನಿಸಿದರು ಮತ್ತು ಅವರು ಒಬ್ಬ ಆಧ್ಯಾತ್ಮಿಕ ಸುಧಾರಕ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.
- ಅವರನ್ನು “ಧರ್ತಿ ಆಬಾ” (ಭೂಮಿಯ ತಂದೆ) ಎಂದು ಪ್ರಸಿದ್ಧರಾಗಿದ್ದಾರೆ.
- ಬುಡಕಟ್ಟು ಸ್ವ-ಆಡಳಿತ ಮತ್ತು ಖುಂಟ್ಕಟ್ಟಿ (ಸಮುದಾಯ ಭೂ ಹಕ್ಕುಗಳು) ವ್ಯವಸ್ಥೆಯ ಪುನಃಸ್ಥಾಪನೆಗಾಗಿ ನಡೆದ ಉಗ್ರ ಹೋರಾಟವಾದ “ಉಲ್ಗುಲನ್ ಅಥವಾ ಮಹಾ ಕ್ರಾಂತಿ/ ಗ್ರೇಟ್ ತುಮುಲ್ಟ್” (1899–1900) ನ ನೇತೃತ್ವವನ್ನು ಅವರು ವಹಿಸಿದ್ದರು. ಇದನ್ನು ಮುಂಡಾ ದಂಗೆ ಎಂದೂ ಕೂಡ ಕರೆಯುತ್ತಾರೆ.
- ಬ್ರಿಟಿಷರ ಭೂ ಕಾನೂನುಗಳು ಮತ್ತು ಊಳಿಗಮಾನ್ಯ ಪದ್ಧತಿಯ ಶೋಷಣೆಯ ವಿರುದ್ಧ ಅವರು ಮುಂಡಾ ಬುಡಕಟ್ಟು ಸಮುದಾಯವನ್ನು ಒಗ್ಗೂಡಿಸಿದರು.
- ವಸಾಹತುಶಾಹಿ ಪ್ರಭಾವದಿಂದ ಮುಕ್ತವಾದ ನೈತಿಕ, ಸ್ವ-ಆಡಳಿತ ಸಮಾಜವನ್ನು ಅವರು ಕಲ್ಪಿಸಿಕೊಂಡಿದ್ದರು.
- ಅಂತಿಮವಾಗಿ ಅವರನ್ನು ಸೆರೆಹಿಡಿಯಲಾಯಿತು ಮತ್ತು ತಮ್ಮ 25 ನೇ ವಯಸ್ಸಿನಲ್ಲಿ ರಾಂಚಿ ಜೈಲಿನಲ್ಲಿ ಹುತಾತ್ಮರಾದರು.
ಜನಜಾತೀಯ ಗೌರವ ದಿವಸದ ಬಗ್ಗೆ:
- ದೇಶಕ್ಕಾಗಿ ಬುಡಕಟ್ಟು ಸಮುದಾಯದ ಸ್ವಾತಂತ್ರ್ಯ ಹೋರಾಟಗಾರರು ನೀಡಿದ ಕೊಡುಗೆಗಳನ್ನು ಸ್ಮರಿಸಲು ಜನಜಾತೀಯ ಗೌರವ ದಿವಸವನ್ನು ಮೀಸಲಿಡಲಾಗಿದೆ.
- ಈ ದಿನಾಚರಣೆಯನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ.
- ಇದು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ಬುಡಕಟ್ಟು ಜನಾಂಗದವರು ನಡೆಸಿದ ಪ್ರಯತ್ನಗಳನ್ನು ಗುರುತಿಸುತ್ತದೆ ಮತ್ತು ದೇಶಕ್ಕಾಗಿ ಬುಡಕಟ್ಟು ಜನಾಂಗದವರು ಮಾಡಿದ ತ್ಯಾಗಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಲು ಸಹಾಯ ಮಾಡುತ್ತದೆ.
- ಸಮಸ್ತ ಬುಡಕಟ್ಟು ಸಮುದಾಯಗಳಿಂದ “ಭಗವಾನ್” ಎಂದು ಪೂಜಿಸಲ್ಪಡುವ “ಶ್ರೀ ಬಿರ್ಸಾ ಮುಂಡಾ” ಅವರ ಜನ್ಮದಿನವಾದ ನವೆಂಬರ್ 15 ಅನ್ನು, ‘ಜನಜಾತೀಯ ಗೌರವ ದಿವಸ’ವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ.
ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (PM-JANMAN) ದ ಬಗ್ಗೆ:
- ಉದ್ದೇಶ:- ದೇಶದ ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಗುಂಪುಗಳಿಗೆ (PVTGs) ಕಲ್ಯಾಣ ಯೋಜನೆಗಳ ಫಲವನ್ನು ಕೊನೆಯ ಹಂತದ ಫಲಾನುಭವಿಗಳವರೆಗೂ ತಲುಪಿಸುವ ಮತ್ತು ಅವರಿಗೆ ಸೂಕ್ತ ರಕ್ಷಣೆಯನ್ನು ಖಚಿತಪಡಿಸುವ ಮಹತ್ವದ ಉದ್ದೇಶವನ್ನು ಈ ಅಭಿಯಾನವು ಹೊಂದಿದೆ.
- ವಿಕಸಿತ ಭಾರತ ಸಂಕಲ್ಪ ಯಾತ್ರೆ – ಇದು ರಾಷ್ಟ್ರದಾದ್ಯಂತ ವ್ಯಾಪಿಸಿರುವ ಒಂದು ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದೆ. ಇದರ ಮೂಲಕ ದೇಶದ ಪ್ರತಿಯೊಂದು ಗ್ರಾಮವನ್ನು ತಲುಪಿ, ಅಲ್ಲಿನ ವಿವಿಧ ಕೇಂದ್ರ ಯೋಜನೆಗಳಿಗೆ ಅರ್ಹರಾದ ನಾಗರಿಕರನ್ನು ಗುರುತಿಸಿ, ಅವರನ್ನು ಯೋಜನೆಯ ವ್ಯಾಪ್ತಿಗೆ ಸೇರ್ಪಡಿಸುವುದೇ ಇದರ ಪ್ರಮುಖ ಗುರಿಯಾಗಿದೆ.
ಕಾಂಡ ಕೋಶ ಚಿಕಿತ್ಸೆ (ಸ್ಟೇಮ್ ಸೆಲ್ ಥೆರೇಪಿ)
ಸಾಮಾನ್ಯ ಅಧ್ಯಯನ – 3/ ವಿಜ್ಞಾನ ಮತ್ತು ತಂತ್ರಜ್ಞಾನ
ಇದೀಗ ಸುದ್ದಿಯಲ್ಲಿದೆ:
- ಒಸಾಕಾ ಮೆಟ್ರೋಪಾಲಿಟನ್ ವಿಶ್ವವಿದ್ಯಾನಿಲಯದ ಸಂಶೋಧಕರು ಅಡಿಪೋಸ್ (ಕೊಬ್ಬು) ಮೂಲದ ಕಾಂಡ ಕೋಶಗಳನ್ನು (ADSCs) ಬಳಸಿಕೊಂಡು ಬೆನ್ನುಮೂಳೆಯ ಮುರಿತಗಳನ್ನು ಗುಣಪಡಿಸಲು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.
ಕಾಂಡ ಕೋಶ (ಸ್ಟೇಮ್ ಸೆಲ್ ) ಗಳ ಬಗ್ಗೆ:
- ವ್ಯಾಖ್ಯಾನ:- ಕಾಂಡ ಕೋಶವು ದೇಹದಲ್ಲಿ ಕಂಡುಬರುವ ಅನೇಕ ವಿಭಿನ್ನ ಜೀವಕೋಶ ವಿಧಗಳನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿರುವ ಕೋಶವಾಗಿದೆ.
- ಕಾಂಡ ಕೋಶಗಳು ವಿಭಜನೆಗೊಂಡಾಗ, ಅವು ಹೆಚ್ಚಿನ ಕಾಂಡ ಕೋಶಗಳನ್ನು ಅಥವಾ ವಿಶೇಷ ಕಾರ್ಯಗಳನ್ನು ನಿರ್ವಹಿಸುವ ಇತರ ಜೀವಕೋಶಗಳನ್ನು ರೂಪಿಸುತ್ತವೆ.
- ವಯಸ್ಕ/ದೈಹಿಕ ಕಾಂಡ ಕೋಶಗಳು: ಇವು ಅಸ್ಥಿಮಜ್ಜೆಯಲ್ಲಿ ಕಂಡುಬರುವ ವಯಸ್ಕ ದೈಹಿಕ ಕೋಶಗಳಾಗಿವೆ (ASCs).
- ಭ್ರೂಣದ ಕಾಂಡ ಕೋಶಗಳು: ಇವುಗಳನ್ನು ಸುಮಾರು 6 ರಿಂದ 8 ದಿನಗಳ ಭ್ರೂಣಗಳಿಂದ ಪಡೆಯಲಾಗುತ್ತದೆ. ಇವು ವಯಸ್ಕ ಕೋಶಗಳಿಗಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುತ್ತವೆ. ಏಕೆಂದರೆ ಸರಿಯಾದ ರೀತಿಯಲ್ಲಿ ಪಡೆದ ಭ್ರೂಣದ ಕಾಂಡ ಕೋಶವು ನರ ಕೋಶಗಳು, ಸ್ನಾಯು ಕೋಶಗಳು ಮತ್ತು ಯಕೃತ್ ಕೋಶಗಳನ್ನು ಉತ್ಪತ್ತಿ ಮಾಡಬಲ್ಲದು.
ಕಾಂಡ ಕೋಶ ಚಿಕಿತ್ಸೆಯ ಬಗ್ಗೆ:
- ಕಾಂಡ ಕೋಶ ಚಿಕಿತ್ಸೆಯು ಮಾನವ ದೇಹದಲ್ಲಿ ಹಾನಿಗೊಳಗಾದ ಜೀವಕೋಶಗಳು ಮತ್ತು ಅಂಗಾಂಶಗಳನ್ನು ಪುನರುತ್ಪಾದಿಸಲು ಕಾಂಡ ಕೋಶಗಳ ವಿಶಿಷ್ಟ ಗುಣಲಕ್ಷಣಗಳನ್ನು ಬಳಸಿಕೊಳ್ಳುತ್ತದೆ.
- ಕಾಂಡ ಕೋಶಗಳು ಈ ಹಾನಿಗೊಳಗಾದ ಕೋಶಗಳನ್ನು ಹೊಸ, ಆರೋಗ್ಯಕರ ಮತ್ತು ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಕೋಶಗಳೊಂದಿಗೆ ಬದಲಾಯಿಸುತ್ತವೆ.
- ಇದನ್ನು “ಪುನರುತ್ಪಾದಕ ಔಷಧ” ಎಂದೂ ಕರೆಯಲಾಗುತ್ತದೆ.
- ಇದು ಅಂಗಾಂಗ ಕಸಿ ಪ್ರಕ್ರಿಯೆಯಲ್ಲಿ ಮುಂದಿನ ಹಂತವಾಗಿದೆ ಮತ್ತು ಪೂರೈಕೆ ಸೀಮಿತವಾಗಿರುವ ದಾನಿ ಅಂಗಗಳ ಬದಲಿಗೆ ಜೀವಕೋಶಗಳನ್ನು ಬಳಸುತ್ತದೆ.
- ಕಾಂಡ ಕೋಶಗಳನ್ನು ಪ್ರಯೋಗಾಲಯಗಳಲ್ಲಿ ಬೆಳೆಸಲಾಗುತ್ತದೆ. ಈ ಕಾಂಡ ಕೋಶಗಳನ್ನು ಹೃದಯದ ಸ್ನಾಯು ಕೋಶಗಳು, ರಕ್ತ ಕಣಗಳು ಅಥವಾ ನರ ಕೋಶಗಳಂತಹ ನಿರ್ದಿಷ್ಟ ರೀತಿಯ ಜೀವಕೋಶಗಳಾಗಿ ಪರಿಣತಿ ಹೊಂದಲು ಮಾರ್ಪಡಿಸಲಾಗುತ್ತದೆ.
- ನಂತರ ಈ ವಿಶೇಷ ಜೀವಕೋಶಗಳನ್ನು ವ್ಯಕ್ತಿಯ ದೇಹದಲ್ಲಿ ಅಳವಡಿಸಬಹುದಾಗಿದೆ.
- ಕಳೆದ 90 ವರ್ಷಗಳಿಂದ, ಲ್ಯುಕೇಮಿಯಾ ಮತ್ತು ಲಿಂಫೋಮಾದಂತಹ ಕಾಯಿಲೆಗಳಿರುವ ಜನರಿಗೆ ಚಿಕಿತ್ಸೆ ನೀಡಲು ಹೆಮಾಟೊಪಯಟಿಕ್ ಕಾಂಡ ಕೋಶ ಕಸಿಯನ್ನು ಬಳಸಲಾಗುತ್ತಿದೆ.



ನಿಮ್ಮದೊಂದು ಉತ್ತರ