ನಗರ ಸಹಕಾರಿ ಬ್ಯಾಂಕುಗಳು (UCB’s)
ಸಾಮಾನ್ಯ ಅಧ್ಯಾಯನ-3/ಆರ್ಥಿಕತೆ
ಸಂದರ್ಭ:
- ಇತ್ತೀಚೆಗೆ, ಕೇಂದ್ರ ಗೃಹ ಮತ್ತು ಸಹಕಾರ ಸಚಿವರು, ‘ಕೋ -ಒಪ್ ಕುಂಭ 2025’ ರಲ್ಲಿ, ಭಾರತದ ಯುವಜನರು ಮತ್ತು ಹಿಂದುಳಿದ ಸಮುದಾಯಗಳನ್ನು ಸಬಲೀಕರಣಗೊಳಿಸುವಲ್ಲಿ ಪರಿವರ್ತನಾತ್ಮಕ ಪಾತ್ರ ವಹಿಸುವಂತೆ ನಗರ ಸಹಕಾರಿ ಬ್ಯಾಂಕುಗಳಿಗೆ (ಯುಸಿಬಿ) ಕರೆ ನೀಡಿದರು.
‘ಕೋ -ಒಪ್ ಕುಂಭ 2025′ ರ ಪ್ರಮುಖ ಮುಖ್ಯಾಂಶಗಳು:
- ‘ದೆಹಲಿ ಘೋಷಣೆ 2025’:- ಸಹಕಾರಿ ಬ್ಯಾಂಕಿಂಗ್ ಜಾಲದೊಳಗೆ ಆರ್ಥಿಕ ಸ್ಥಿರತೆ, ಆಡಳಿತ ಮತ್ತು ಡಿಜಿಟಲೀಕರಣವನ್ನು ಹೆಚ್ಚಿಸುವತ್ತ ಗಮನಹರಿಸುವುದು ಮತ್ತು ರಾಷ್ಟ್ರೀಯ ನಗರ ಸಹಕಾರಿ ಬ್ಯಾಂಕುಗಳು ಮತ್ತು ಸಾಲ ಸಂಘಗಳ ಒಕ್ಕೂಟ (NAFCUB) ಅಂಗೀಕರಿಸುವುದು.
ನಗರ ಸಹಕಾರಿ ಬ್ಯಾಂಕುಗಳ (UCB’s) ಬಗ್ಗೆ:
-
- ಇವು ಪ್ರಾಥಮಿಕವಾಗಿ ನಗರ ಮತ್ತು ಅರೆ ನಗರದ ಜನರಿಗೆ ಸೇವೆಯನ್ನು ಓದಗಿಸುವ ಹಣಕಾಸು ಸಂಸ್ಥೆಗಳಾಗಿವೆ.
- ಸಹಕಾರದ ತತ್ವಗಳು:- ವಾಣಿಜ್ಯ ಬ್ಯಾಂಕುಗಳಿಗಿಂತ ಭಿನ್ನವಾಗಿ ಪರಸ್ಪರ ಸಹಾಯ, ಪ್ರಜಾಪ್ರಭುತ್ವ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಮುಕ್ತ ಸದಸ್ಯತ್ವ.
- ಮಹತ್ವ:- ಇವು ಸಣ್ಣ ವ್ಯವಹಾರಗಳಿಗೆ, ಸಂಬಳ ಪಡೆಯುವ ವ್ಯಕ್ತಿಗಳಿಗೆ ಮತ್ತು ಕಡಿಮೆ ಆದಾಯದ ಗುಂಪುಗಳಿಗೆ ಠೇವಣಿ, ಸಾಲ ಮತ್ತು ಸಾಲ ಸೌಲಭ್ಯಗಳಂತಹ ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತವೆ.
- ಇವು ಒಳಗೊಳ್ಳುವಿಕೆಯಿಂದ ಕೂಡಿದ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ, ಸಣ್ಣ ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ಮತ್ತು ಸಮಾಜದ ದುರ್ಬಲ ವರ್ಗಗಳಿಗೆ ಬೆಂಬಲಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಕಸುಗೂಡು (ಡಂಪ್ಸೈಟ್) ಪುನಶ್ಚೇತನ ವೇಗವರ್ಧಕ ಕಾರ್ಯಕ್ರಮ (DRAP)
ಸಾಮಾನ್ಯ ಅಧ್ಯಾಯನ -2/ಆಡಳಿತ
ಇದೀಗ ಸುದ್ದಿಯಲ್ಲಿದೆ:
- ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ವು ಕಸ ಹಾಕುವ ಸ್ಥಳಗಳ (ಕಸುಗೂಡು) ಪುನಶ್ಚೇತನ ವೇಗವರ್ಧಕ ಕಾರ್ಯಕ್ರಮವನ್ನು (DRAP) ಪ್ರಾರಂಭಿಸಿದೆ.
ಪುನಶ್ಚೇತನ vs ಜೈವಿಕ ಪುನಶ್ಚೇತನ ಎಂದರೇನು?
-
- ಪುನಶ್ಚೇತನವು, ಪರಿಸರ ಮಾಲಿನ್ಯಕಾರಕಗಳನ್ನು ತೆಗೆದುಹಾಕುವ ಅಥವಾ ಒಳಗೊಂಡಿರುವ ವಿಶಾಲ ಪ್ರಕ್ರಿಯೆಯಾಗಿದೆ.
- ಜೈವಿಕ ಪುನಶ್ಚೇತನವು, ಪುನಶ್ಚೇತನದ ಉಪ-ವರ್ಗವಾಗಿದ್ದು, ಇದು ಮಾಲಿನ್ಯಕಾರಕಗಳನ್ನು ವಿಘಟಿಸಲು ಅಥವಾ ಪರಿವರ್ತಿಸಲು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಂತಹ ಸೂಕ್ಷ್ಮಜೀವಿಗಳನ್ನು ಬಳಸಿಕೊಳ್ಳುತ್ತದೆ.
ಕಸುಗೂಡು (ಡಂಪ್ಸೈಟ್) ಪುನಶ್ಚೇತನ ವೇಗವರ್ಧಕ ಕಾರ್ಯಕ್ರಮ (DRAP) ದ ಬಗ್ಗೆ:
- ಉಳಿದಿರುವ ಕಸದ ಗುಡ್ಡಗಳ ಪುನಶ್ಚೇತನವನ್ನು ವೇಗಗೊಳಿಸಿ, ಸಮುದಾಯ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯವಾದ ನಗರ ಭೂಮಿಯನ್ನು ಪುನಃ ಪಡೆದಿಕೊಳ್ಳುವ ಉದ್ದೇಶವಾಗಿದೆ.
- ಇದು ಸೆಪ್ಟೆಂಬರ್ 2026 ರ ವೇಳೆಗೆ “ಲಕ್ಷ್ಯ ಶೂನ್ಯ ಕಸುಗೂಡು” ಸಾಧಿಸುವ ಭಾರತದ ದೃಷ್ಟಿಕೋನವನ್ನು ಸಾಧಿಸಲು ಸಹಾಯ ಮಾಡುತ್ತದೆ.
ಲೂಸಿಫರ್ ಜೇನು ಹುಳ
ಸಾಮಾನ್ಯ ಅಧ್ಯಾಯನ-3/ ಸುದ್ದಿಯಲ್ಲಿರುವ ಪ್ರಭೇದಗಳು

ಸಂದರ್ಭ:
- ಆಸ್ಟ್ರೇಲಿಯಾದ ವಿಜ್ಞಾನಿಗಳು ಲೂಸಿಫರ್ ಎಂಬ ಹೊಸ ಸ್ಥಳೀಯ ಜೇನುನೊಣದ ಪ್ರಭೇದವನ್ನು ಕಂಡುಹಿಡಿದಿದ್ದಾರೆ.
ಲೂಸಿಫರ್ ಜೇನುನೊಣದ ಬಗ್ಗೆ:
- “ಮೆಗಾಕೈಲ್ (ಹ್ಯಾಕೆರಿಯಾಪಿಸ್) ಲೂಸಿಫರ್” ಎಂದು ಹೆಸರಿಸಲ್ಪಟ್ಟ ಈ ಹೊಸ ಪ್ರಭೇದವನ್ನು ಮೊದಲು 2019ರಲ್ಲಿ ಪಶ್ಚಿಮ ಆಸ್ಟ್ರೇಲಿಯಾ ರಾಜ್ಯದಲ್ಲಿ ಕಂಡುಹಿಡಿಯಲಾಯಿತು.
- ಆಸ್ಟ್ರೇಲಿಯಾ ಸುಮಾರು 2,000 ಸ್ಥಳೀಯ ಜೇನುನೊಣ ಪ್ರಭೇದಗಳನ್ನು ಹೊಂದಿದ್ದು, ಅವುಗಳಲ್ಲಿ 300 ಕ್ಕೂ ಹೆಚ್ಚು ಪ್ರಭೇದಗಳನ್ನು ಇನ್ನೂ ವೈಜ್ಞಾನಿಕವಾಗಿ ಹೆಸರಿಸಲಾಗಿಲ್ಲ ಮತ್ತು ವಿವರಿಸಲಾಗಿಲ್ಲ.
- ಹೆಣ್ಣು ಪ್ರಭೇಧದ ಜೇನುನೊಣದ ಮುಖದಲ್ಲಿ ಅತ್ಯಂತ ವೈಶಿಷ್ಟ್ಯಮಯವಾದ, ಮೇಲ್ಮುಖವಾದ ಕೊಂಬುಗಳಿವೆ.
- ಕುತೂಹಲಕಾರಿಯಾಗಿ, ಗಂಡು ಪ್ರಭೇಧದ ಜೇನುನೊಣಗಳಿಗೆ ಕೊಂಬುಗಳಿರುವುದಿಲ್ಲ.
ಗಗನಯಾನ ಮಿಷನ್
ಸಾಮಾನ್ಯ ಅಧ್ಯಾಯನ-3/ ಬಾಹ್ಯಾಕಾಶ

ಇದೀಗ ಸುದ್ದಿಯಲ್ಲಿದೆ:
- ಇಸ್ರೋ ತನ್ನ ಮುಂಬರುವ ಮಾನವ ಬಾಹ್ಯಾಕಾಶ ಹಾರಾಟ ಮಿಷನ್ ಗಗನಯಾನಕ್ಕಾಗಿ ನಿರ್ಣಾಯಕ ಪ್ಯಾರಾಚೂಟ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು.
- ಇಸ್ರೋ ಮುಂದಿನ ಮಾನವರಹಿತ ಮೂರು ಉಡ್ಡಯನಗಳನ್ನು ಅರೆ -ಮಾನವರೂಪದ ರೋಬೋಟ್ ವ್ಯೋಮಿತ್ರದೊಂದಿಗೆ ನಡೆಸಲಿದ್ದು, 2027ರ ಆರಂಭದಲ್ಲಿ ಮಾನವ ಸಹಿತ ಮಿಷನ್ನ್ನು ಗುರಿಯಾಗಿಸಿಕೊಂಡಿದೆ.
ಗಗನಯಾನ ಮಿಷನ್ ನ ಬಗ್ಗೆ:
- ಡಿಸೆಂಬರ್ 2018 ರಲ್ಲಿ ಅನುಮೋದಿಸಲಾಗಿದೆ.
- ಹಣಕಾಸು ವೆಚ್ಚ – ₹20,193 ಕೋಟಿ.
- ವಿಶಿಷ್ಟತೆ – ಇದು ಭಾರತದ ಮೊದಲ ಸ್ಥಳೀಯ ನಿರ್ಮಿತ ಮಾನವ ಬಾಹ್ಯಾಕಾಶ ಹಾರಾಟ ಉಪಕ್ರಮವಾಗಿದೆ.
- ಉದ್ದೇಶ:- ಭಾರತದ ಮಾನವ ಬಾಹ್ಯಾಕಾಶ ಪ್ರಯಾಣದ ಸಾಮರ್ಥ್ಯವನ್ನು ಪ್ರದರ್ಶಿಸುವುದನ್ನು ಗುರಿಯಾಗಿಸಿದ್ದು, ಸಿಬ್ಬಂದಿಯನ್ನು 400 ಕಿ.ಮೀ ಎತ್ತರದ ಭೂನಿಮ್ನ ಕಕ್ಷೆಗೆ ಮೂರು ದಿನಗಳ ಕಾಲ ಕಳುಹಿಸಿ, ನಂತರ ಸುರಕ್ಷಿತವಾಗಿ ಹಿಂದಿರುಗಿಸಿ ಭಾರತದ ಜಲಸೀಮೆಯಲ್ಲಿ ಸಮುದ್ರದ ಮೇಲೆ ಇಳಿಸುವುದಾಗಿದೆ.
- ಉಡಾವಣಾ ವಾಹನ – LVM3 ರಾಕೆಟ್
ಅಂತರರಾಷ್ಟ್ರೀಯ ಕ್ರಯೋಸ್ಫಿಯರ್ ( ಹಿಮ ಮಂಡಲ) ಹವಾಮಾನ ಉಪಕ್ರಮ
ಸಾಮಾನ್ಯ ಅಧ್ಯಾಯನ-3/ ಪರಿಸರ ಅಧ್ಯಾಯನ


ಇದೀಗ ಸುದ್ದಿಯಲ್ಲಿದೆ:
- ಭೂಮಿಯ ಹಿಮನದಿಗಳು ಮತ್ತು ಮಂಜುಗಡ್ಡೆಗಳು ವೇಗವಾಗಿ ಕರಗುತ್ತಿವೆ ಎಂದು “2025 ರ ಕ್ರಯೋಸ್ಫಿಯರ್ ವರದಿ” ಯು ಒತ್ತಿ ಹೇಳುತ್ತದೆ.
ಕ್ರಯೋಸ್ಫಿಯರ್ ( ಹಿಮ ಮಂಡಲ) ನ ಬಗ್ಗೆ:
- ಹಿಮ ಮಂಡಲವೆಂದರೆ, ಭೂಮಿಯ ಹವಾಮಾನ ವ್ಯವಸ್ಥೆಯ ಒಂದು ಭಾಗವಾಗಿದ್ದು, ಘನಿಕೃತ ಮಳೆ, ಹಿಮ, ಸಮುದ್ರದ ಹಿಮ, ಸರೋವರ ಮತ್ತು ನದಿಯ ಹಿಮ, ಹಿಮಗುಡ್ಡಗಳು, ಹಿಮನದಿಗಳು, ಹಿಮಮುಡುಗಳು, ಹಿಮಪರತೆಗಳು, ಹಿಮದ ಬಂಡೆಗಳು, ಶಾಶ್ವತವಾಗಿ ಹಿಮಗೊಂಡ ಮಣ್ಣು (ಪರ್ಮಾಫ್ರಾಸ್ಟ್) ಹಾಗೂ ಋತುಮಾನಿಕವಾಗಿ ಹಿಮವಾಗುವ ನೆಲಗಳನ್ನು ಒಳಗೊಂಡಿರುತ್ತದೆ.
- “ಕ್ರಯೋಸ್ಫಿಯರ್” ಎಂಬ ಪದವು ಗ್ರೀಕ್ ಪದ ‘ಕ್ರಯೋಸ್’ ನಿಂದ ಬಂದಿದೆ, ಇದರರ್ಥ ಹಿಮ ಅಥವಾ ತೀವ್ರ ಶೀತ.
- ಹಿಮ ಮಂಡಲವು ಆರ್ಕ್ಟಿಕ್, ಅಂಟಾರ್ಕ್ಟಿಕ್ ಮತ್ತು ಪರ್ವತ ಪ್ರದೇಶಗಳಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ವ್ಯಾಪಿಸಿದೆ ಮತ್ತು ಸುಮಾರು ನೂರು ದೇಶಗಳಲ್ಲಿ ವ್ಯಾಪಿಸಿಕೊಂಡಿದೆ.
- ಅಂಟಾರ್ಕ್ಟಿಕಾದಲ್ಲಿ ಅತಿದೊಡ್ಡ ಭೂಖಂಡದ ಹಿಮಗಡ್ಡೆಗಳು ಮತ್ತು ಹಿಮಪರತೆಗಳು ಕಂಡುಬರುತ್ತವೆ.
- ಭೂಮಿಯ ಮೇಲಿನ ಸುಮಾರು 70% ರಷ್ಟು ಸಿಹಿನೀರು ಹಿಮ ಅಥವಾ ಮಂಜುಗಡ್ಡೆಯ ರೂಪದಲ್ಲಿ ಅಸ್ತಿತ್ವದಲ್ಲಿದೆ.
ರಾಷ್ಟ್ರೀಯ ಜಲ ಪ್ರಶಸ್ತಿಗಳು, 2024
ಇತರೆ
ಸಂದರ್ಭ:
- 2024 ರ 6 ನೇ ರಾಷ್ಟ್ರೀಯ ಜಲ ಪ್ರಶಸ್ತಿಗಳ ಅತ್ಯುತ್ತಮ ರಾಜ್ಯ ವಿಭಾಗದಲ್ಲಿ ಮಹಾರಾಷ್ಟ್ರ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
- ಗುಜರಾತ ಮತ್ತು ಹರಿಯಾಣ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.
ರಾಷ್ಟ್ರೀಯ ಜಲ ಪ್ರಶಸ್ತಿಗಳ ಬಗ್ಗೆ:
- ರಾಷ್ಟ್ರೀಯ ಜಲ ಪ್ರಶಸ್ತಿಗಳನ್ನು ಮೊದಲು 2018 ರಲ್ಲಿ ಪ್ರಾರಂಭಿಸಲಾಯಿತು.
- ಉದ್ದೇಶ:- ಜಲ ನಿರ್ವಹಣೆ ಮತ್ತು ಸಂರಕ್ಷಣೆಯಲ್ಲಿನ ಪ್ರಯತ್ನಗಳನ್ನು ಗುರುತಿಸುವುದು ಈ ಪ್ರಶಸ್ತಿಯ ಗುರಿಯಾಗಿದೆ.
- ಮಹತ್ವ:- ಈ ಉಪಕ್ರಮವು ಭಾರತ ಸರ್ಕಾರದ “ಜಲ ಸಮೃದ್ಧ ಭಾರತ” (ವಾಟರ್ ಪ್ರೊಸ್ಪೆರಸ್ ಇಂಡಿಯಾ) ದೃಷ್ಟಿಕೋನವನ್ನು ಬೆಂಬಲಿಸುತ್ತದೆ.
ಹಸಿರು ಜಲಜನಕದ ಕುರಿತು 3ನೇ ಅಂತರರಾಷ್ಟ್ರೀಯ ಸಮ್ಮೇಳನ (ICGH 2025)
ಸಾಮಾನ್ಯ ಅಧ್ಯಾಯನ-3/ಪರಿಸರ ಅಧ್ಯಾಯನ

ಇದೀಗ ಸುದ್ದಿಯಲ್ಲಿದೆ:
- ಹಸಿರು ಜಲಜನಕದ ಕುರಿತು 3ನೇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ, ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರು, ಭಾರತದ ಹಸಿರು ಜಲಜನಕದ ಕ್ಷೇತ್ರದಲ್ಲಿ ಶುದ್ಧ ಇಂಧನ ಪರಿವರ್ತನೆಗೆ ಉತ್ತೇಜಕವಾಗಿ ಕಾರ್ಯನಿರ್ವಹಿಸುತ್ತಿರುವ “ರಾಷ್ಟ್ರೀಯ ಹಸಿರು ಜಲಜನಕ ಗುರಿ” (NGHM) ಯ ಬಗ್ಗೆ ಮುಖ್ಯವಾಗಿ ಪ್ರಸ್ತಾಪಿಸಿದರು.
ಹಸಿರು ಜಲಜನಕದ ಬಗ್ಗೆ:
- ಹಸಿರು ಜಲಜನಕವನ್ನು, ನವೀಕರಿಸಬಹುದಾದ ಶಕ್ತಿಯಿಂದ ಉತ್ಪತ್ತಿಯಾಗುವ ವಿದ್ಯುತ್ನೊಂದಿಗೆ ನೀರಿನ ವಿದ್ಯುದ್ವಿಭಜನೆಯನ್ನು ಬಳಸಿಕೊಂಡು ಉತ್ಪಾದಿಸಲಾಗುತ್ತದೆ.
- ಪ್ರಯೋಜನ: ಇದು ಶುದ್ಧ ದಹನಶೀಲ ಅಂಶವಾಗಿದ್ದು, ಕಬ್ಬಿಣ ಮತ್ತು ಉಕ್ಕು, ರಾಸಾಯನಿಕ ಮತ್ತು ಸಾರಿಗೆ ಸೇರಿದಂತೆ ಹಲವು ಕ್ಷೇತ್ರಗಳ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಜಲಜನಕವನ್ನು ದೀರ್ಘಕಾಲದವರೆಗೆ ಸಂಗ್ರಹಿಸಬಹುದು, ಇದರ ಇಂಧನ ಕೋಶಗಳನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಬಹುದು.
ರಾಷ್ಟ್ರೀಯ ಹಸಿರು ಜಲಜನಕ ಗುರಿ (NGHM) ಯ ಬಗ್ಗೆ:
- ಗುರಿ:- ಭಾರತವನ್ನು ಹಸಿರು ಜಲಜನಕ ಉತ್ಪಾದನೆಯ ಜಾಗತಿಕ ಕೇಂದ್ರವನ್ನಾಗಿ ಮಾಡುವುದು.
- ಅನುಷ್ಠಾನಗೊಳಿಸುವ ಸಚಿವಾಲಯ: ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ.
ಜಲಜನಕದ ಬಗ್ಗೆ:
- ಚಿಹ್ನೆ ಮತ್ತು ಪರಮಾಣು ಸಂಖ್ಯೆ:- ಜಲಜನಕ H ಚಿಹ್ನೆ ಮತ್ತು ಪರಮಾಣು ಸಂಖ್ಯೆ 1 ಹೊಂದಿರುವ ರಾಸಾಯನಿಕ ಅಂಶವಾಗಿದೆ.
- ಜಲಜನಕವು ವಿಶ್ವದಲ್ಲೇ ಅತ್ಯಂತ ಹಗುರವಾದ ಮತ್ತು ಅತ್ಯಂತ ಹೇರಳವಾಗಿರುವ ರಾಸಾಯನಿಕ ವಸ್ತುವಾಗಿದ್ದು, ಎಲ್ಲಾ ಸಾಮಾನ್ಯ ವಸ್ತುವಿನ ಸರಿಸುಮಾರು 75% ರಷ್ಟಿದೆ.
- ಇದು ಬಣ್ಣವಿಲ್ಲದ, ವಾಸನೆಯಿಲ್ಲದ, ರುಚಿಯಿಲ್ಲದ, ವಿಷಕಾರಿಯಲ್ಲದ ಮತ್ತು ಹೆಚ್ಚು ದಹನಕಾರಿ ಅನಿಲವಾಗಿದೆ.



ನಿಮ್ಮದೊಂದು ಉತ್ತರ