ಆರ್ಯ ಸಮಾಜ ಸ್ಥಾಪನೆಯಾಗಿ 150 ವರ್ಷಗಳು
ಸಾಮಾನ್ಯ ಅಧ್ಯಯನ – 1 / ಕಲೆ ಮತ್ತು ಸಂಸ್ಕೃತಿ
ಇದೀಗ ಸುದ್ದಿಯಲ್ಲಿದೆ:
- ನವದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ಆರ್ಯ ಮಹಾಸಮ್ಮೇಳನ 2025 ಅನ್ನು ಉದ್ದೇಶಿಸಿ ಪ್ರಧಾನ ಮಂತ್ರಿಗಳು ಮಾತನಾಡಿ ಸಮಾಜ ಸುಧಾರಣೆ, ಶಿಕ್ಷಣ ಮತ್ತು ವೈದಿಕ ಚಿಂತನೆಗಳಲ್ಲಿ ಆರ್ಯ ಸಮಾಜದ 150 ವರ್ಷಗಳ ಪರಂಪರೆಯನ್ನು ಅವರು ಶ್ಲಾಘಿಸಿದರು.
- “ಜ್ಞಾನ ಭಾರತಂ ಮಿಷನ್” ಗೆ ಬೆಂಬಲ ನೀಡುವಂತೆ ಪ್ರಧಾನಿ ಮೋದಿ ಆರ್ಯ ಸಮಾಜವನ್ನು ಕೋರಿದರು. ಪ್ರಾಚೀನ ಹಸ್ತಪ್ರತಿಗಳ ಡಿಜಿಟಲೀಕರಣ ಮತ್ತು ಭಾರತದ ಜ್ಞಾನ ಪರಂಪರೆಯ ಸಂರಕ್ಷಣೆಯಲ್ಲಿ ಯುವಜನರು ಸಕ್ರಿಯರಾಗುವಂತೆ ಅವರು ಒತ್ತಾಯಿಸಿದರು.
ಆರ್ಯ ಸಮಾಜದ ಬಗ್ಗೆ
- ಸ್ಥಾಪಕರು:- ಸ್ವಾಮಿ ದಯಾನಂದ ಸರಸ್ವತಿ.
- ಸ್ಥಾಪನೆ:- ಇದನ್ನು 1875 ರಲ್ಲಿ ಬಾಂಬೆಯಲ್ಲಿ ಸ್ಥಾಪಿಸಿ , 1877 ರಲ್ಲಿ ಲಾಹೋರ್ನಲ್ಲಿ ಸ್ಥಾಪನೆಗೆ ಅಂತಿಮ ಸ್ವರೂಪ ನೀಡಲಾಯಿತು.
ಪ್ರಮುಖ ಸುಧಾರಣೆಗಳು
- ಧಾರ್ಮಿಕ ನಂಬಿಕೆ:- ಮೂರ್ತಿ ಪೂಜೆ, ಆಚರಣೆಗಳು ಮತ್ತು ಪುರೋಹಿತಶಾಹಿ ಪ್ರಾಬಲ್ಯವನ್ನು ತಿರಸ್ಕರಿಸಿತು.
- ಸಾಮಾಜಿಕ ಸೇವೆ:- ಜನ್ಮ ಆಧಾರಿತ ಜಾತಿ ಪದ್ಧತಿ, ಅಸ್ಪೃಶ್ಯತೆ, ಬಾಲ್ಯ ವಿವಾಹ ಮತ್ತು ಬಲವಂತದ ವಿಧವೆಯತ್ವವನ್ನು ವಿರೋಧಿಸಿತು. ಅಂತರ್ಜಾತಿ ವಿವಾಹ, ವಿಧವಾ ಮರುವಿವಾಹ, ಮಹಿಳಾ ಶಿಕ್ಷಣ ಮತ್ತು ಸಮಾಜ ಸೇವೆಯನ್ನು ಪ್ರತಿಪಾದಿಸಿತು.
- ಶೈಕ್ಷಣಿಕ ಉತ್ತೇಜನ:- ವೈದಿಕ ಜ್ಞಾನವನ್ನು ಆಧುನಿಕ ವಿಜ್ಞಾನದೊಂದಿಗೆ ಸಂಯೋಜಿಸಲು, ಸಾಮಾಜಿಕ ಚಲನಶೀಲತೆ ಮತ್ತು ರಾಷ್ಟ್ರೀಯತೆಯನ್ನು ಬೆಳೆಸಲು ಡಿ.ಎ.ವಿ ಶಾಲೆಗಳು ಮತ್ತು ಗುರುಕುಲ ಕಾಂಗ್ರಿಯನ್ನು ಸ್ಥಾಪಿಸಿತು.
ಭಾರತದ ರಾಷ್ಟ್ರೀಯತೆ ಮತ್ತು ಸಾಮಾಜಿಕ ಬದಲಾವಣೆಯಲ್ಲಿನ ಇದರ ಪಾತ್ರ:
- ಲಾಲಾ ಲಜಪತ್ ರಾಯ್, ಭಗತ್ ಸಿಂಗ್ ಮತ್ತು ಇತರರು ಸೇರಿದಂತೆ ಆರ್ಯ ಸಮಾಜದ ಸದಸ್ಯರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಇವರು ಸ್ವದೇಶಿ ಮತ್ತು ಸಾಮಾಜಿಕ ಜಾಗೃತಿಯನ್ನು ಉತ್ತೇಜಿಸಿದರು.
ಸಮಕಾಲೀನ ಭಾರತದಲ್ಲಿ ಆರ್ಯ ಸಮಾಜದ ಪ್ರಸ್ತುತತೆ:
- ಮಹಿಳಾ ನೇತೃತ್ವದ ಪ್ರಗತಿ: ಮಹಿಳಾ ಸಬಲೀಕರಣಕ್ಕಾಗಿ ಆರ್ಯ ಸಮಾಜದ ಆರಂಭಿಕ ಪ್ರತಿಪಾದನೆಯು ರಾಷ್ಟ್ರೀಯ ಉಪಕ್ರಮಗಳಾದ “ಬೇಟಿ ಬಚಾವೋ ಬೇಟಿ ಪಢಾವೋ”, “ನಾರಿ ಶಕ್ತಿ ವಂದನ್ ಅಧಿನಿಯಮ್” ಮತ್ತು “ಡ್ರೋನ್ ದೀದಿ” ಗಳೊಂದಿಗೆ ಹೊಂದಾಣಿಕೆಯಾಗುತ್ತದೆ.
- ಗುರುಕುಲ ಸಂಪ್ರದಾಯ ಮತ್ತು ಶೈಕ್ಷಣಿಕ ಸುಧಾರಣೆಯ ಸಂರಕ್ಷಣೆ: ಆರ್ಯ ಸಮಾಜವು ಭಾರತದ ಗುರುಕುಲ ಪದ್ಧತಿಯನ್ನು ಪುನರುಜ್ಜೀವನಗೊಳಿಸಿತು, ವೈದಿಕ ಕಲಿಕೆಯನ್ನು ಆಧುನಿಕ ಶಿಕ್ಷಣದೊಂದಿಗೆ ಸಂಯೋಜಿಸಿತು.
- ವೈದಿಕ ಆದರ್ಶಗಳು ಮತ್ತು ಜಾಗತಿಕ ಪ್ರಸ್ತುತತೆ: “ಕೃಣ್ವಂತೋ ವಿಶ್ವಂ ಆರ್ಯಂ” ಎಂಬ ಧ್ಯೇಯವಾಕ್ಯವು ಜಾಗತಿಕ ಕಲ್ಯಾಣಕ್ಕಾಗಿ ರಾಷ್ಟ್ರೀಯ ಪ್ರಗತಿ ಎಂಬ ಭಾರತದ ಅಭಿವೃದ್ಧಿ ತತ್ವವನ್ನು ಪ್ರತಿಬಿಂಬಿಸುತ್ತದೆ. ಸುಸ್ಥಿರ ಮತ್ತು ಆಧ್ಯಾತ್ಮಿಕ ಜೀವನವನ್ನು ಪ್ರಪಂಚದಾದ್ಯಂತ ಹರಡುವ ‘ಮಿಷನ್ ಲೈಫ್’, ‘ಒಂದು ಸೂರ್ಯ, ಒಂದು ಪ್ರಪಂಚ, ಒಂದು ಗ್ರಿಡ್’ ಮತ್ತು ಅಂತರರಾಷ್ಟ್ರೀಯ ಯೋಗ ದಿನದಂತಹ ಉಪಕ್ರಮಗಳಲ್ಲಿ ಇದರ ಆದರ್ಶಗಳು ಪ್ರತಿಧ್ವನಿಸುತ್ತವೆ.
ಏಷ್ಯಾ–ಪೆಸಿಫಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆ, 2025
ಸಾಮಾನ್ಯ ಅಧ್ಯಯನ – 2 / ಅಂತರರಾಷ್ಟ್ರೀಯ ಸಂಬಂಧಗಳು; ಜಾಗತಿಕ ಸಂಘಟನೆಗಳು

ಇದೀಗ ಸುದ್ದಿಯಲ್ಲಿ
- ಇತ್ತೀಚೆಗೆ, ದಕ್ಷಿಣ ಕೊರಿಯಾದ ಗ್ಯುಂಗ್ಜುನಲ್ಲಿ ನಡೆದ ‘ಏಷ್ಯಾ–ಪೆಸಿಫಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆ’ಯು (2025), APEC ನಾಯಕರ ಗ್ಯುಂಗ್ಜು ಘೋಷಣೆ’ಯನ್ನು ಅಂಗೀಕರಿಸುವುದರೊಂದಿಗೆ ಮುಕ್ತಾಯಗೊಂಡಿತು.
ಏಷ್ಯಾ–ಪೆಸಿಫಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆ, 2025 ಯ ಬಗ್ಗೆ:
-
- ನಾಯಕರ ಘೋಷಣೆಯ (ಗ್ಯುಂಗ್ಜು ಘೋಷಣೆ) ಅಂಗೀಕಾರ: APEC ನಾಯಕರು ಈ ಕೆಳಗಿನ ವಿಷಯಗಳಿಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸುವ ಜಂಟಿ ಘೋಷಣೆಯನ್ನು ಅನುಮೋದಿಸಿದರು:
- ಏಷ್ಯಾ-ಪೆಸಿಫಿಕ್ ಪ್ರದೇಶದಾದ್ಯಂತ ಮುಕ್ತ ಮತ್ತು ತೆರೆದ ವ್ಯಾಪಾರ;
-
- ಪೂರೈಕೆ ಸರಪಳಿಯ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವುದು;
- ಅಂತರ್ಗತ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು;
- ಡಿಜಿಟಲ್ ಪರಿವರ್ತನೆ ಮತ್ತು ಹವಾಮಾನ ಕ್ರಿಯೆಯನ್ನು ಮುನ್ನಡೆಸುವುದು.
ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (APEC) ದ ಬಗ್ಗೆ
- ಇದು 1989 ರಲ್ಲಿ ಸ್ಥಾಪನೆಯಾದ ಪ್ರಾದೇಶಿಕ ಆರ್ಥಿಕ ವೇದಿಕೆಯಾಗಿದೆ.
- ಉದ್ದೇಶ – ಏಷ್ಯಾ-ಪೆಸಿಫಿಕ್ ಪ್ರದೇಶದಾದ್ಯಂತದ ಆರ್ಥಿಕತೆಗಳ ಪರಸ್ಪರ ಅವಲಂಬನೆಯನ್ನು ಬಲಪಡಿಸುವುದು.
- ಸದಸ್ಯ ಆರ್ಥಿಕತೆ ರಾಷ್ಟ್ರಗಳು (21 ಸದಸ್ಯರು): ಆಸ್ಟ್ರೇಲಿಯಾ; ಬ್ರೂನಿ ದಾರುಸ್ಸಲಾಮ್; ಕೆನಡಾ; ಚಿಲಿ; ಚೀನಾ; ಹಾಂಗ್ ಕಾಂಗ್, ಚೀನಾ; ಇಂಡೋನೇಷ್ಯಾ; ಜಪಾನ್; ರಿಪಬ್ಲಿಕ್ ಆಫ್ ಕೊರಿಯಾ; ಮಲೇಷ್ಯಾ; ಮೆಕ್ಸಿಕೊ; ನ್ಯೂಜಿಲೆಂಡ್; ಪಪುವಾ ನ್ಯೂ ಗಿನಿಯಾ; ಪೆರು; ಫಿಲಿಪೈನ್ಸ್; ರಷ್ಯನ್ ಫೆಡರೇಶನ್; ಸಿಂಗಾಪುರ್ (APEC ಸಚಿವಾಲಯ ಮತ್ತು ಕೇಂದ್ರ ಕಛೇರಿ); ಚೈನೀಸ್ ತೈಪೆ; ಥೈಲ್ಯಾಂಡ್; ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ; ಮತ್ತು ವಿಯೆಟ್ನಾಂ.
ನಿವ್ವಳ-ಶೂನ್ಯ ಭಾರತಕ್ಕಾಗಿ ಇಂಗಾಲದ ಸೆರೆಹಿಡಿಯುವಿಕೆ
ಸಾಮಾನ್ಯ ಅಧ್ಯಯನ – 3 / ಪರಿಸರ ಅಧ್ಯಯನ
ಇದೀಗ ಸುದ್ಧಿಯಲ್ಲಿದೆ:
- ಸಾಗರ ಆಧಾರಿತ ಇಂಗಾಲದ ಸೆರೆಹಿಡಿಯುವಿಕೆ (ಕಾರ್ಬನ್ ಕ್ಯಾಪ್ಚರ್) ತಂತ್ರಜ್ಞಾನವು 2070ರೊಳಗೆ ಭಾರತವನ್ನು ನಿವ್ವಳ-ಶೂನ್ಯ ಹೊರಸೂಸುವಿಕೆ ಗುರಿ ತಲುಪಲು ಸಹಾಯ ಮಾಡಬಹುದು. ಈ ತಂತ್ರಜ್ಞಾನವು ಸಮುದ್ರಗಳನ್ನು ಇಂಗಾಲ ಹೀರಿಕೊಳ್ಳುವ ಸಾಮರ್ಥ್ಯವುಳ್ಳ ಮತ್ತು ನೀಲಿ ಬೆಳವಣಿಗೆಯ ಕೇಂದ್ರಗಳಾಗಿ ಪರಿವರ್ತಿಸುತ್ತವೆ.
ಇಂಗಾಲದ ಸೆರೆಹಿಡಿಯುವಿಕೆ, ಬಳಸುವಿಕೆ ಮತ್ತು ಸಂಗ್ರಹಿಸುವಿಕೆ (CCUS) ಎಂದರೇನು?
- ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA) ಯ ಪ್ರಕಾರ, CCUS ಎಂದರೆ, ಪಳಿಯುಳಿಕೆ ಇಂಧನ ಆಧಾರಿತ ವಿದ್ಯುತ್ ಸ್ಥಾವರಗಳು ಮತ್ತು ಇತರೆ ಕೈಗಾರಿಕೆಗಳಂತಹ ದೊಡ್ಡ ಮತ್ತು ಸ್ಥಿರ ಇಂಗಾಲದ ಡೈ ಆಕ್ಸೈಡ್ (CO2) ಹೊರಸೂಸುವ ಮೂಲಗಳಿಂದ CO2 ಅನ್ನು ಸೆರೆಹಿಡಿಯುವ, ಬಳಸಿಕೊಳ್ಳುವ ಮತ್ತು ಸುರಕ್ಷಿತವಾಗಿ ಸಂಗ್ರಹಿಸುವ ತಂತ್ರಜ್ಞಾನಗಳ ಗುಂಪಾಗಿದೆ. ಈ ಪ್ರಕ್ರಿಯೆಯು ವಾತಾವರಣಕ್ಕೆ CO2 ಸೇರುವುದನ್ನು ತಡೆಯುತ್ತದೆ.
ಇಂಗಾಲದ ಹೊರಸೂಸುವಿಕೆ ಕಡಿತದ ಕುರಿತು ಭಾರತದ ಬದ್ಧತೆಗಳು:
- ಭಾರತವು ‘ಮಿಷನ್ ಲೈಫ್ ‘(ಪರಿಸರಕ್ಕಾಗಿ ಜೀವನಶೈಲಿ) ಅನ್ನು ಪ್ರಾರಂಭಿಸಿದೆ ಮತ್ತು ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ತನ್ನ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳನ್ನು (NDCs) ನವೀಕರಿಸಿದೆ.
ನವೀಕರಿಸಿದ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆ, 2022 ರ ಅಡಿಯಲ್ಲಿ ಭಾರತದ ಪ್ರಮುಖ ಬದ್ಧತೆಗಳು:
- ಹೊರಸೂಸುವಿಕೆ ತೀವ್ರತೆಯ ಕಡಿತ: 2005ರ ಮಟ್ಟಕ್ಕೆ ಹೋಲಿಸಿದರೆ, 2030ರ ವೇಳೆಗೆ ಒಟ್ಟು ದೇಶೀಯ ಉತ್ಪನ್ನದ ಪ್ರತಿ ಘಟಕಕ್ಕೆ CO₂ ಹೊರಸೂಸುವಿಕೆಯನ್ನು 45%ರಷ್ಟು ಕಡಿಮೆ ಮಾಡುವುದು.
- ಪಳೆಯುಳಿಕೆಯೇತರ ಇಂಧನ ಮೂಲಗಳು: 2030ರ ವೇಳೆಗೆ ದೇಶದ ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯದ 50% ಅನ್ನು ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಪಡೆಯುವುದು.
- ಇಂಗಾಲದ ತೊಟ್ಟಿ (ಕಾರ್ಬನ್ ಸಿಂಕ್) ಯ ಸೃಷ್ಟಿ: ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ಹೆಚ್ಚಿಸುವ ಮೂಲಕ 2.5 ರಿಂದ 3 ಶತಕೋಟಿ ಟನ್ಗಳಷ್ಟು CO₂ ಸಮಾನ (GtCO₂e) ಹೆಚ್ಚುವರಿ ಇಂಗಾಲದ ತೊಟ್ಟಿಯನ್ನು ಸೃಷ್ಟಿಸುವುದು.
ಹೆಚ್ಚುವರಿ ಮಾಹಿತಿ:
- ಭಾರತವು 2070ರ ವೇಳೆಗೆ ನಿವ್ವಳ-ಶೂನ್ಯ ಹೊರಸೂಸುವಿಕೆಯ ಗುರಿಯನ್ನು ತಲುಪುವ ಯೋಜನೆಯನ್ನು 2021ರ COP26ನಲ್ಲಿ ಘೋಷಿಸಿತು.
- ಸಾಗರ ಆಧಾರಿತ CCUS ತಂತ್ರಜ್ಞಾನಗಳೊಂದಿಗೆ, ಸಮುದ್ರದೊಳಗಿನ ಭೂವೈಜ್ಞಾನಿಕ ರಚನೆಗಳಲ್ಲಿ CO2 ಅನ್ನು ಸಂಗ್ರಹಿಸಬಹುದು, ಇದು ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತೊಂದು ಮಾರ್ಗ ಒದಗಿಸುತ್ತದೆ.
ಕೇಂದ್ರ ಆರೋಗ್ಯ ಸಚಿವಾಲಯದಿಂದ 3 ಗಿನ್ನೆಸ್ ವಿಶ್ವ ದಾಖಲೆಗಳ ನಿರ್ಮಾಣ
ಸಾಮಾನ್ಯ ಅಧ್ಯಯನ – 2 / ಆರೋಗ್ಯ
ಇದೀಗ ಸುದ್ಧಿಯಲ್ಲಿದೆ:
- ರಾಷ್ಟ್ರವ್ಯಾಪಿ “ಸ್ವಸ್ಥ ನಾರಿ, ಸಶಕ್ತ ಪರಿವಾರ್ ಅಭಿಯಾನ”ದ (SNSPA) ಅಡಿಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಮೂರು ಗಿನ್ನೆಸ್ ವಿಶ್ವ ದಾಖಲೆಗಳ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
3 ಗಿನ್ನೆಸ್ ವಿಶ್ವ ದಾಖಲೆಗಳು:
- ಒಂದು ತಿಂಗಳಲ್ಲಿ ಅತೀ ಹೆಚ್ಚಿನ ಜನರು “ಆರೋಗ್ಯ ರಕ್ಷಣಾ ವೇದಿಕೆ”ಯಲ್ಲಿ ನೋಂದಾಯಿಸಿಕೊಂಡಿರುವುದು.
- ಒಂದು ವಾರದಲ್ಲಿ ಆನ್ಲೈನ್ ಮೂಲಕ ಸ್ತನ ಕ್ಯಾನ್ಸರ್ ತಪಾಸಣೆಗಾಗಿ ಅತಿ ಹೆಚ್ಚು ಜನರು ನೋಂದಾಯಿಸಿಕೊಂಡಿರುವುದು.
- ಒಂದು ವಾರದಲ್ಲಿ ಆನ್ಲೈನ್ ಮೂಲಕ ಪ್ರಮುಖ ಆರೋಗ್ಯ ಲಕ್ಷಣಗಳ ತಪಾಸಣೆಗಾಗಿ (ರಾಜ್ಯ ಮಟ್ಟದಲ್ಲಿ) ಅತಿ ಹೆಚ್ಚು ಜನರು ನೋಂದಾಯಿಸಿಕೊಂಡಿರುವುದು.
ಸ್ವಸ್ಥ ನಾರಿ, ಸಶಕ್ತ ಪರಿವಾರ್ ಅಭಿಯಾನದ ಬಗ್ಗೆ:
- ಚಾಲನೆ: ‘ರಾಷ್ಟ್ರೀಯ ಪೋಷಣಾ ಮಾಸಾಚರಣೆ’ಯ (ಪೋಷಣ್ ಮಾಹ್) ಅಂಗವಾಗಿ, 2025 ರ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರ ಅವಧಿಯಲ್ಲಿ ಈ ರಾಷ್ಟ್ರವ್ಯಾಪಿ ಅಭಿಯಾನವನ್ನು ಅನುಷ್ಠಾನಗೊಳಿಸಲಾಯಿತು.
- ಉದ್ದೇಶ: ದೇಶದ ಮಹಿಳೆಯರು, ಕಿಶೋರಿಯರು ಮತ್ತು ಮಕ್ಕಳ ಆರೋಗ್ಯ ಹಾಗೂ ಸಮಗ್ರ ಪೋಷಣೆಯ ಮಟ್ಟವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಅಭಿಯಾನವು ಪ್ರಮುಖವಾಗಿ ಗಮನ ಹರಿಸುತ್ತದೆ.



ನಿಮ್ಮದೊಂದು ಉತ್ತರ