ಅಂತರರಾಷ್ಟ್ರೀಯ ವ್ಯಾಪ್ತಿಯ ಜೀವ ವೈವಿಧ್ಯತೆ ಒಪ್ಪಂದ (ಹೈ ಸೀಸ್ ಒಪ್ಪಂದ)
ಪರಿಸರ ಅಧ್ಯಾಯನ
ಇದೀಗ ಸುದ್ದಿಯಲ್ಲಿದೆ:
- ಅಂತರರಾಷ್ಟ್ರೀಯ ವ್ಯಾಪ್ತಿಯ ಜೀವ ವೈವಿಧ್ಯತೆ ಒಪ್ಪಂದವು ಜನವರಿ 2026 ರಲ್ಲಿ ಜಾರಿಗೆ ಬಂದು 60 ಕ್ಕೂ ಹೆಚ್ಚು ದೇಶಗಳು ಅಂಗೀಕರಿಸಿವೆ.
ಅಂತರರಾಷ್ಟ್ರೀಯ ವ್ಯಾಪ್ತಿಯ ಜೀವ ವೈವಿಧ್ಯತೆ ಒಪ್ಪಂದ (BBNJ):
- ಉದ್ದೇಶ – ಇದು ರಾಷ್ಟ್ರೀಯ ವ್ಯಾಪ್ತಿಯನ್ನು ಮೀರಿದ ಪ್ರದೇಶಗಳಲ್ಲಿನ ಸಮುದ್ರದ ಜೀವ ವೈವಿಧ್ಯತೆಯ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಯನ್ನು ಗುರಿಯಾಗಿಟ್ಟುಕೊಂಡ ಒಂದು ಐತಿಹಾಸಿಕ ಅಂತರರಾಷ್ಟ್ರೀಯ ಒಪ್ಪಂದವಾಗಿದೆ.
- ಮಹತ್ವ – ಸಾಗರ ಸಂರಕ್ಷಣೆ, ಸಮಾನತೆ ಮತ್ತು ನ್ಯಾಯಸಮ್ಮತತೆಯನ್ನು ಉತ್ತೇಜಿಸುವುದು, ಪರಿಸರ ವಿನಾಶವನ್ನು ನಿಭಾಯಿಸುವುದು ಮತ್ತು ಸಮುದ್ರಗಳಲ್ಲಿ ಜೀವವೈವಿಧ್ಯತೆಯ ನಷ್ಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಇದು ಒಂದು ಮಹತ್ವದ ಹೆಜ್ಜೆಯಾಗಿದೆ.
- ಅಳವಡಿಕೆ – ಮಾರ್ಚ್ 2023 ರಲ್ಲಿ ನ್ಯೂಯಾರ್ಕ್ನಲ್ಲಿ ನಡೆದ 5 ನೇ BBNJ ಅಂತರ ಸರ್ಕಾರಿ ಸಮ್ಮೇಳನದಲ್ಲಿ ಇದನ್ನು ಒಮ್ಮತದಿಂದ ಅಂಗೀಕರಿಸಲಾಯಿತು.
- ಸದಸ್ಯ ರಾಷ್ಟ್ರಗಳು – ಪ್ರಸ್ತುತವಾಗಿ, ಇದರಲ್ಲಿ 80 ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಗಳು ಸಹಿ ಹಾಕಿದ್ದಾರೆ.
ಭಾರತ ಮತ್ತು ಬಹ್ರೇನ್ ದ್ವಿಪಕ್ಷೀಯ ಸಂಬಂಧಗಳು
ಸಾಮಾನ್ಯ ಅಧ್ಯಾಯನ – -2/ ಅಂತರರಾಷ್ಟ್ರೀಯ ಸಂಬಂಧಗಳು

ಸಂದರ್ಭ:
- ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಬಹ್ರೇನ್ ವಿದೇಶಾಂಗ ಸಚಿವರನ್ನು ಭೇಟಿಯಾಗಿ ರಕ್ಷಣೆ ಮತ್ತು ಭದ್ರತೆಯಲ್ಲಿನ ಸಹಕಾರದ ಕುರಿತು ಚರ್ಚಿಸಿದರು.
ಭಾರತ ಮತ್ತು ಬಹ್ರೇನ್ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ:
- ದ್ವಿಪಕ್ಷೀಯ ವ್ಯಾಪಾರ: USD 1.64 ಶತಕೋಟಿ (FY 2024–25); ಬಹ್ರೇನ್ ರಾಷ್ಟ್ರದ ಅಗ್ರ ಐದು ವ್ಯಾಪಾರ ಪಾಲುದಾರರಲ್ಲಿ ಭಾರತವೂ ಕೂಡ ಒಂದು.
- ಕೊಲ್ಲಿ ರಾಷ್ಟ್ರಗಳಿಗೆ ಮಹಾದ್ವಾರ: ಪರ್ಷಿಯನ್ ಕೊಲ್ಲಿಯ ಪಶ್ಚಿಮ ತೀರದಲ್ಲಿರುವ ರಾಷ್ಟ್ರ ಬಹ್ರೇನ್, ಭಾರತಕ್ಕೆ ಗಲ್ಫ್ ಸಹಕಾರ ಮಂಡಳಿ (GCC) ಯ ಪ್ರದೇಶಗಳಿಗೆ ಒಂದು ಕಾರ್ಯತಂತ್ರದ ಪ್ರವೇಶ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.
- ಇಂಧನ ಭದ್ರತೆ: ಇತರ GCC ರಾಷ್ಟ್ರಗಳಿಗೆ ಹೋಲಿಸಿದರೆ ಬಹ್ರೇನ್ ಸಣ್ಣ ತೈಲ ಉತ್ಪಾದಕ ರಾಷ್ಟ್ರವಾಗಿದ್ದರೂ, ಭಾರತದ ಇಂಧನ ವೈವಿಧ್ಯೀಕರಣ ತಂತ್ರ ಮತ್ತು ಸಂಸ್ಕರಿಸಿದ ಪೆಟ್ರೋಲಿಯಂ ವ್ಯಾಪಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಬಹ್ರೇನ್ ರಾಷ್ಟ್ರದ ಬಗ್ಗೆ (ರಾಜಧಾನಿ: ಮನಾಮ):
ರಾಜಕೀಯ ವೈಶಿಷ್ಟ್ಯಗಳು:
- ಬಹ್ರೇನ್ ಏಷ್ಯಾದ ಮೂರನೇ ಅತ್ಯಂತ ಚಿಕ್ಕ ರಾಷ್ಟ್ರ.
- ಸ್ಥಳ: ಪರ್ಷಿಯನ್ ಕೊಲ್ಲಿಯಲ್ಲಿರುವ, ಪಶ್ಚಿಮ ಏಷ್ಯಾದ ರಾಷ್ಟ್ರ.
- ಗಡಿ: ಇದು ದ್ವೀಪ ಸಮೂಹಗಳ ರಾಷ್ಟ್ರವಾಗಿದ್ದು, ಇತರ ದೇಶಗಳೊಂದಿಗೆ ಯಾವುದೇ ಭೂ ಗಡಿಗಳನ್ನು ಹೊಂದಿಲ್ಲ.
- ನೆರೆಯ ಜಲಮೂಲಗಳು: ಪರ್ಷಿಯನ್ ಕೊಲ್ಲಿ.
ಗಲ್ಫ್ ಸಹಕಾರ ಮಂಡಳಿ (GCC) ಯ ಬಗ್ಗೆ:

- ಇದು 6 ಅರೇಬಿಯಾ ಪರ್ಯಾಯ ದ್ವೀಪ ರಾಷ್ಟ್ರಗಳ ರಾಜಕೀಯ ಮತ್ತು ಆರ್ಥಿಕ ಒಕ್ಕೂಟವಾಗಿದೆ.
- ಸದಸ್ಯರು: ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್.
- ಸ್ಥಾಪನೆ: ಮೇ 25, 1981 ರಂದು ಸೌದಿ ಅರೇಬಿಯಾದ ರಿಯಾದ್ನಲ್ಲಿ ಸಹಿ ಹಾಕಿದ ಒಪ್ಪಂದದ ಮೂಲಕ ಸ್ಥಾಪಿಸಲಾಯಿತು.
- ಉದ್ದೇಶಗಳು: ಆರ್ಥಿಕತೆ, ಭದ್ರತೆ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸಹಕಾರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸದಸ್ಯ ರಾಷ್ಟ್ರಗಳ ನಡುವೆ ಏಕತೆ ಮತ್ತು ಸಮನ್ವಯವನ್ನು ಸಾಧಿಸುವುದು.
- ಪ್ರಧಾನ ಕಚೇರಿ: ರಿಯಾದ್, ಸೌದಿ ಅರೇಬಿಯಾ.
ಮಾಲ್ದೀವ್ಸ್ ಒಂದು ಪೀಳಿಗೆಯ ಮಟ್ಟದ ತಂಬಾಕು ನಿಷೇಧವನ್ನು ಜಾರಿಗೆ ತಂದ ಮೊದಲ ದೇಶ
ಸಾಮಾನ್ಯ ಅಧ್ಯಾಯನ – 2/ ಆರೋಗ್ಯ

ಇದೀಗ ಸುದ್ದಿಯಲ್ಲಿದೆ:
- ಮಾಲ್ದೀವ್ಸ್ ವಿಶ್ವದಲ್ಲೇ ಮೊದಲ ಬಾರಿಗೆ ಐತಿಹಾಸಿಕ ಪೀಳಿಗೆ ಮಟ್ಟದ ತಂಬಾಕು ಮತ್ತು ವೇಪಿಂಗ್ ನಿಷೇಧವನ್ನು ಜಾರಿಗೊಳಿಸಿದ ವಿಶ್ವದ ಮೊದಲ ದೇಶವಾಗಿದೆ.
ಪೀಳಿಗೆಯ ಮಟ್ಟದ ನಿಷೇಧ:
- ತಂಬಾಕು ಮೇಲಿನ ಪೀಳಿಗೆಯ ಮಟ್ಟದ ನಿಷೇಧವು ಒಂದು ಪ್ರಗತಿಪರ ಕಾನೂನು ನಿರ್ಬಂಧವಾಗಿದ್ದು, ನಿರ್ದಿಷ್ಟ ದಿನಾಂಕದ ನಂತರ ಜನಿಸಿದ ಎಲ್ಲ ವ್ಯಕ್ತಿಗಳಿಗೆ ತಂಬಾಕು ಮಾರಾಟ ಮತ್ತು ಬಳಕೆಯನ್ನು ನಿಷೇಧಿಸುವ ಮೂಲಕ ತಂಬಾಕು ರಹಿತ ಪೀಳಿಗೆಯನ್ನು ನಿರ್ಮಿಸುವ ಉದ್ದೇಶವನ್ನು ಹೊಂದಿದೆ.
ಮಾಲ್ಡೀವ್ಸ್ ದೇಶದ ಬಗ್ಗೆ:
- ರಾಜಧಾನಿ: ಮಾಲೆ
- ಅಧಿಕೃತ ಭಾಷೆ: ಧಿವೇಹಿ (ಇಂಡೋ-ಯುರೋಪಿಯನ್ ಭಾಷೆ); ಅರೇಬಿಕ್, ಹಿಂದಿ ಮತ್ತು ಇಂಗ್ಲಿಷ್ ಸಹ ಮಾತನಾಡುತ್ತಾರೆ.
- ಧರ್ಮ: ಇಸ್ಲಾಂ ಈ ರಾಷ್ಟ್ರದ ಧರ್ಮ.
- ಆರ್ಥಿಕತೆ: ಪ್ರವಾಸೋದ್ಯಮದ ಜೊತೆಗೆ ಮೀನುಗಾರಿಕೆ ಮತ್ತು ವಿದೇಶಿ ನೆರವಿನ ಮೇಲೆ ಹೆಚ್ಚು ಅವಲಂಬಿತವಾಗಿದೆ.
- ಸಂವಿಧಾನಿಕತೆ: 2008 ರ ಸಂವಿಧಾನವು ಗರಿಷ್ಠ ಐದು ವರ್ಷಗಳ ಎರಡು ಅವಧಿಗೆ ನೇರ ಚುನಾವಣೆಗಳನ್ನು ಹೊಂದಿರುವ ಅಧ್ಯಕ್ಷೀಯ ವ್ಯವಸ್ಥೆಯನ್ನು ವ್ಯಾಖ್ಯಾನಿಸುತ್ತದೆ.
ಭೌಗೋಳಿಕ ಲಕ್ಷಣಗಳು:
- ವಿಶ್ವದ 7 ನೇ ಅತಿದೊಡ್ಡ ಹವಳದ ದಿಬ್ಬಗಳ ವ್ಯವಸ್ಥೆಗೆ ನೆಲೆಯಾಗಿದ್ದು, ಜಾಗತಿಕವಾಗಿ ಹವಳದ ದಿಬ್ಬಗಳ ಪ್ರದೇಶದ 3.14% ನಷ್ಟು ಪ್ರದೇಶವನ್ನು ಒಳಗೊಂಡಿದೆ.
- ದೇಶದಲ್ಲಿ ಯಾವುದೇ ನದಿಗಳು ಅಥವಾ ಹೊಳೆಗಳಿಲ್ಲ ಮತ್ತು ಸರಾಸರಿ ಎತ್ತರ 2 ಮೀಟರ್ಗಿಂತ ಕಡಿಮೆ ಇರುವುದರಿಂದ ಸಮುದ್ರ ಮಟ್ಟ ಏರಿಕೆಗೆ ಇದು ಹೆಚ್ಚು ಗುರಿಯಾಗುತ್ತದೆ.
- ಮಾಲ್ಡೀವ್ಸ್ ಉತ್ತರ-ಮಧ್ಯ ಹಿಂದೂ ಮಹಾಸಾಗರದಲ್ಲಿರುವ 26 ಹವಳ ದ್ವೀಪಗಳಲ್ಲಿ ಸುಮಾರು 1,200 ಹವಳ ದ್ವೀಪಗಳನ್ನು ಒಳಗೊಂಡಿರುವ ಒಂದು ದ್ವೀಪಸಮೂಹ ರಾಷ್ಟ್ರವಾಗಿದೆ.
- ಇದು ಹಿಂದೂ ಮಹಾಸಾಗರ ಪ್ರದೇಶ (IOR) ದಲ್ಲಿ ಸಮುದ್ರದ ವ್ಯಾಪಾರ ಮತ್ತು ಭದ್ರತೆಗೆ ಪ್ರಮುಖವಾಗುವಂತಹ ಕಾರ್ಯತಂತ್ರದ ಸ್ಥಾನದಲ್ಲಿದೆ.
ಎನ್ಸೆಫಲೋಮಯೋಕಾರ್ಡಿಟಿಸ್ ವೈರಸ್ (EMCV)
ಸಾಮಾನ್ಯ ಅಧ್ಯಾಯನ – 2/ಆರೋಗ್ಯ
ಇದೀಗ ಸುದ್ದಿಯಲ್ಲಿದೆ:
- ದೆಹಲಿಯ ಮೃಗಾಲಯದಲ್ಲಿದ್ದ ಏಕೈಕ ಆಫ್ರಿಕಾದ ಆನೆ ಅಪರೂಪದ ದಂಶಕ-ಹರಡುವ ಎನ್ಸೆಫಲೋಮಯೋಕಾರ್ಡಿಟಿಸ್ ವೈರಸ್ (EMCV) ನಿಂದ ಮೃತಪಟ್ಟಿದೆ — ಇದು ಭಾರತದಲ್ಲಿನ ಯಾವುದೇ ಮೃಗಾಲಯದಲ್ಲಿ ವರದಿಯಾದ ಮೊದಲ ಪ್ರಕರಣ.
ಎನ್ಸೆಫಲೋಮಯೋಕಾರ್ಡಿಟಿಸ್ ವೈರಸ್ (EMCV) ನ ಬಗ್ಗೆ:
- ರೋಗಕಾರಕ:- ಇದು ಒಂದು ಸಣ್ಣ, ಏಕ-ಸೂತ್ರದ RNA ವೈರಸ್ ಆಗಿದೆ.
- ಇದು ವಿವಿಧ ಸಸ್ತನಿ ಪ್ರಭೇಧಗಳಲ್ಲಿ ಮಯೋಕಾರ್ಡಿಟಿಸ್, ಎನ್ಸೆಫಾಲಿಟಿಸ್, ನರವೈಜ್ಞಾನಿಕ ಅಸ್ವಸ್ಥತೆಗಳು, ಸಂತಾನೋತ್ಪತ್ತಿ ಸಮಸ್ಯೆಗಳು ಮತ್ತು ಮಧುಮೇಹವನ್ನು ಉಂಟುಮಾಡುತ್ತದೆ.
- ಪ್ರಸರಣ: ದಂಶಕಗಳ ಮೂತ್ರ ಅಥವಾ ಮಲದಿಂದ ಕಲುಷಿತಗೊಂಡ ಆಹಾರ ಮತ್ತು ನೀರಿನ ಸೇವನೆಯಿಂದ.
- ಮೊದಲು ಪತ್ತೇಯಾಗಿದ್ದು: 1945 ರಲ್ಲಿ ಫ್ಲೋರಿಡಾದ ಗಿಬ್ಬನ್ನಲ್ಲಿ ಪತ್ತೇಹಚ್ಚಲಾಯಿತು.
ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (NCLAT)
ಸಾಮಾನ್ಯ ಅಧ್ಯಾಯನ – 2 / ಆಡಳಿತ
ಸಂದರ್ಭ:
- ಬೈಜೂಸ್ನ ಅಂಗಸಂಸ್ಥೆಯಾದ ಆಕಾಶ್ ಶಿಕ್ಷಣ ಸೇವಾ ನಿಯಮಿತ ತನ್ನ ಪ್ರಸ್ತಾವಿತ ಹಕ್ಕುಗಳ ವಿತರಣೆಯನ್ನು ಮುಂದುವರಿಸಲು ಅನುಮತಿ ನೀಡಿದ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (NCLAT) ಯ ಆದೇಶದಲ್ಲಿ ಮಧ್ಯಪ್ರವೇಶಿಸಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿತು.
ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (NCLAT) ಯ ಬಗ್ಗೆ:
- 2013ರ ಕಂಪನಿಗಳ ಕಾಯ್ದೆಯ ಸೆಕ್ಷನ್ 410 ಅಡಿಯಲ್ಲಿ ಸ್ಥಾಪಿತವಾಗಿ, 2016ರಿಂದ ಜಾರಿಗೆ ಬಂದಿದೆ.
- ಕಾನೂನು ಸ್ಥಿತಿ – ಇದು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ಹಾಗೂ ಇತರೆ ಹಲವು ನಿಯಂತ್ರಣ ಸಂಸ್ಥೆಗಳ ಆದೇಶಗಳ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳನ್ನು ವಿಚಾರಿಸಲು ಕಾರ್ಯನಿರ್ವಹಿಸುವ ಅರೆ-ನ್ಯಾಯಾಂಗ ಸಂಸ್ಥೆಯಾಗಿದೆ.
- ಈ ಕೆಳಕಂಡ ಸಂಸ್ಥೆಗಳಿಂದ ಜಾರಿಗೊಳಿಸಲಾದ ಆದೇಶಗಳ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳನ್ನು ವಿಚಾರಿಸುವ ಮೇಲ್ಮನವಿ ನ್ಯಾಯಮಂಡಳಿಯಾಗಿಯೂ ಕಾರ್ಯನಿರ್ವಹಿಸುತ್ತದೆ:
- ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ದಿವಾಳಿತನ ಮತ್ತು ದಿವಾಳಿತನ ಸಂಹಿತೆ, 2016 ರ ಕಲಂ 61 ರ ಅಡಿಯಲ್ಲಿ ಸ್ಥಾಪಿತವಾಗಿದೆ),
- ಭಾರತೀಯ ದಿವಾಳಿತನ ಮತ್ತು ದಿವಾಳಿತನ ಮಂಡಳಿ (ದಿವಾಳಿತನ ಮತ್ತು ದಿವಾಳಿತನ ಸಂಹಿತೆ, ಕಲಂ 202 ಮತ್ತು 211 ರ ಅಡಿಯಲ್ಲಿ ಸ್ಥಾಪಿತವಾಗಿದೆ).
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ
ಸಾಮಾನ್ಯ ಅಧ್ಯಾಯನ – 3/ಆರ್ಥಿಕತೆ
ಇದೀಗ ಸುದ್ದಿಯಲ್ಲಿದೆ:
- ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಅತ್ಯಂತ ಕಡಿಮೆ ಬೆಳೆ ವಿಮಾ ಪಾವತಿಗಳ ಬಗ್ಗೆ ತಳ ಮಟ್ಟದಲ್ಲಿ ಸಮಗ್ರ ತನಿಖೆ ನಡೆಸುವಂತೆ ಕೇಂದ್ರ ಕೃಷಿ ಸಚಿವರು ಆದೇಶಿಸಿದ್ದಾರೆ.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಯ ಬಗ್ಗೆ:
-
- ಅನುಷ್ಠಾನ:- ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ.
- ಪ್ರಾರಂಭ:- ಇದು 2016 ರಲ್ಲಿ, ರೈತರ ಇಳುವರಿಗಾಗಿ ವಿಮಾ ಸೇವೆಯಾಗಿ ಪ್ರಾರಂಭವಾಯಿತು.
- ಉದ್ದೇಶಗಳು: ಪ್ರಕೃತಿವಿಕೋಪಗಳು, ಕೀಟಗಳು ಅಥವಾ ರೋಗಗಳ ಪರಿಣಾಮದಿಂದಾಗಿ, ಅಧಿಸೂಚಿಸಲಾದ ಬೆಳೆಗಳು ವಿಫಲವಾದ ಸಂದರ್ಭದಲ್ಲಿ, ರೈತರಿಗೆ ವಿಮಾ ರಕ್ಷಣೆ ಮತ್ತು ಆರ್ಥಿಕ ಬೆಂಬಲವನ್ನು ಒದಗಿಸುವುದು.
- ರೈತರು ಕೃಷಿಯಲ್ಲಿ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಅವರ ಆದಾಯವನ್ನು ಸ್ಥಿರಗೊಳಿಸುವುದು.
- ರೈತರು ನವೀನ ಮತ್ತು ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವುದು.
- ಕೃಷಿ ವಲಯಕ್ಕೆ ಸಾಲದ ಹರಿವನ್ನು ಖಚಿತಪಡಿಸಿಕೊಳ್ಳುವುದು.
PMFBY ನ ಪ್ರಮುಖ ಲಕ್ಷಣಗಳು:
ಪ್ರೀಮಿಯಂ ದರಗಳು
- ಎಲ್ಲಾ ಖಾರಿಫ್ ಬೆಳೆಗಳಿಗೆ ರೈತರು ಕೇವಲ 2% ಮತ್ತು ಎಲ್ಲಾ ರಾಬಿ ಬೆಳೆಗಳಿಗೆ (ಚಳಿಗಾಲದ ಬಿತ್ತನೆ) 1.5% ಏಕರೂಪದ ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ.
- ವಾರ್ಷಿಕ ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳಿಗೆ, ರೈತರು ಪಾವತಿಸಬೇಕಾದ ಪ್ರೀಮಿಯಂ ಕೇವಲ 5% ಆಗಿರುತ್ತದೆ.
- ಬಾಕಿ ಪ್ರೀಮಿಯಂ ಅನ್ನು ಸರ್ಕಾರ ಪಾವತಿಸುತ್ತದೆ (ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾನವಾಗಿ ಹಂಚಿಕೊಳ್ಳುತ್ತವೆ).
- ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಬೆಳೆ ನಷ್ಟದ ವಿರುದ್ಧ ರೈತರಿಗೆ ಸಂಪೂರ್ಣ ವಿಮೆ ಮೊತ್ತವನ್ನು ಒದಗಿಸುವುದು ಇದರ ಉದ್ದೇಶವಾಗಿದೆ.



ನಿಮ್ಮದೊಂದು ಉತ್ತರ