ಸಖರೋವ್ ಪ್ರಶಸ್ತಿ, 2025
ಇತರೆ

ಸಂದರ್ಭ:
- ಬೆಲಾರಸ್‌ನ ಆಂಡ್ರೆಜ್ ಪೊಕ್ಜೊಬಟ್ ಮತ್ತು ಜಾರ್ಜಿಯಾದ ಎಂಜಿಯಾ ಅಮಾಗ್ಲೋಬೆಲಿ ಎಂಬ ಇಬ್ಬರು ಜೈಲಿನಲ್ಲಿರುವ ಪತ್ರಕರ್ತರು 2025 ರ ಸಖರೋವ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ಸಖರೋವ್ ಪ್ರಶಸ್ತಿಯ ಬಗ್ಗೆ:
- ಈ ಪ್ರಶಸ್ತಿ 1988 ರಲ್ಲಿ ಸ್ಥಾಪನೆಯಾಯಿತು.
- ಸೋವಿಯತ್ ನ ಭಿನ್ನಮತೀಯ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಆಂಡ್ರೇ ಸಖರೋವ್ ಅವರ ಸ್ಮರಣಾರ್ಥ ಈ ಹೆಸರನ್ನು ಇಡಲಾಗಿದೆ.
- ಇದು ಯುರೋಪಿನ ಒಕ್ಕೂಟದ ಅತ್ಯುನ್ನತ ಮಾನವ ಹಕ್ಕುಗಳ ಪ್ರಶಸ್ತಿಯಾಗಿದೆ.
- ಉದ್ದೇಶ: – ಇದು ಮಾನವ ಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯಗಳನ್ನು ರಕ್ಷಿಸುವ ವ್ಯಕ್ತಿಗಳು ಅಥವಾ ಗುಂಪುಗಳನ್ನು ಗೌರವಿಸುತ್ತದೆ.
|
ನಿಮಗಿದು ಗೊತ್ತೇ?
|
ಸರ್ವೋಚ್ಚ ನ್ಯಾಯಾಲಯದಲ್ಲಿ ಅರಣ್ಯ ಹಕ್ಕುಗಳ ಕಾಯ್ದೆಯನ್ನು ಸರ್ಕಾರ ಸಮರ್ಥಿಸಿಕೊಂಡಿದೆ
ಸಾಮಾನ್ಯ ಅಧ್ಯಾಯನ 2/ ಆಡಳಿತ, ಸಾಮಾನ್ಯ ಅಧ್ಯಯನ 3/ ಪರಿಸರ ಅಧ್ಯಾಯನ
ಸಂದರ್ಭ:
- ಕೇಂದ್ರ ಸರ್ಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಅರಣ್ಯ ಹಕ್ಕುಗಳ ಕಾಯ್ದೆ (FRA), 2006 ಅನ್ನು ಸಮರ್ಥಿಸಿಕೊಂಡಿದೆ.
- ಈ ಕಾಯ್ದೆಯು ಭಾರತದಲ್ಲಿ ಅರಣ್ಯವನ್ನು ಅವಲಂಬಿಸಿರುವ ಸಮುದಾಯಗಳ ಘನತೆ, ಜೀವನೋಪಾಯ ಮತ್ತು ಸಾಂಸ್ಕೃತಿಕ ಗುರುತನ್ನು ಪುನಃಸ್ಥಾಪಿಸುತ್ತಿದೆ ಎಂದು ಹೇಳುತ್ತದೆ.
ಅರಣ್ಯ ಹಕ್ಕುಗಳ ಕಾಯ್ದೆ, 2006 ಯ ಬಗ್ಗೆ:
- ಈ ಕಾಯ್ದೆಯನ್ನು, ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯ ನಿವಾಸಿಗಳು (ಅರಣ್ಯ ಹಕ್ಕುಗಳ ಗುರುತಿಸುವಿಕೆ) ಕಾಯ್ದೆ, 2006 ಎಂತಲೂ ಕರೆಯುತ್ತಾರೆ.
- ಇದು ಅರಣ್ಯವಾಸಿ ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ ಅರಣ್ಯ ಭೂಮಿ ಮತ್ತು ಅವರು ತಲೆಮಾರುಗಳಿಂದ ಸಾಂಪ್ರದಾಯಿಕವಾಗಿ ಬಳಸುತ್ತಿರುವ ಸಂಪನ್ಮೂಲಗಳ ಮೇಲಿನ ಹಕ್ಕುಗಳನ್ನು ಕಾನೂನುಬದ್ಧವಾಗಿ ಗುರುತಿಸುತ್ತದೆ.
ದೀನದಯಾಳ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗುರಿ (DAY-NRLM)
ಸಾಮಾನ್ಯ ಅಧ್ಯಾಯನ 2/ಆಡಳಿತ ; ಸಾಮಾನ್ಯ ಅಧ್ಯಾಯನ 3/ ಆರ್ಥಿಕತೆ
ಸಂದರ್ಭ:
- ಗ್ರಾಮೀಣಾಭಿವೃದ್ಧಿ ಸಚಿವಾಲಯವು ಅನುಷ್ಠಾನಗೊಳಿಸುವ ದೀನದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗುರಿ (DAY-NRLM) ಯು, ವಿಶ್ವದ ಅತಿದೊಡ್ಡ ಬಡತನ ನಿರ್ಮೂಲನಾ ಕಾರ್ಯಕ್ರಮಗಳಲ್ಲಿ ಒಂದಾಗಿದೆ.
ದೀನದಯಾಳ ಅಂತ್ಯೋದಯ ಯೋಜನೆಯ ಬಗ್ಗೆ:
- ಆರಂಭ:- ಹಿಂದಿನ ಸ್ವರ್ಣಜಯಂತಿ ಗ್ರಾಮ ಸ್ವರೋಜ್‌ಗಾರ್ ಯೋಜನೆ (SGSY)ಯನ್ನು ಪುನರ್ರಚಿಸುವ ಮೂಲಕ ಇದನ್ನು 2010 ರಲ್ಲಿ ಪ್ರಾರಂಭಿಸಲಾಯಿತು, ಈ ಉಪಕ್ರಮವನ್ನು 2016 ರಲ್ಲಿ ದೀನದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗುರಿ (DAY-NRLM) ಎಂದು ಮರುನಾಮಕರಣ ಮಾಡಲಾಯಿತು.
- ಹಣಕಾಸು:- ಇದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
- ಉದ್ದೇಶ:- ಸ್ವ-ಉದ್ಯೋಗ ಮತ್ತು ಕೌಶಲ್ಯಪೂರ್ಣ ವೇತನ ಉದ್ಯೋಗದ ಮೂಲಕ ಗ್ರಾಮೀಣ ಭಾಗದಲ್ಲಿರುವ ಬಡತನವನ್ನು ಕಡಿಮೆ ಮಾಡುವುದು.
- ಮಹಿಳಾ ಕೇಂದ್ರಿತ ಮಾದರಿ:- ಈ ಗುರಿಯು ಮಹಿಳೆಯರನ್ನು ಸ್ವಸಹಾಯ ಗುಂಪುಗಳು ಮತ್ತು ಒಕ್ಕೂಟಗಳ ಮೂಲಕ ಸಾಲ, ಮಾರುಕಟ್ಟೆ ಮತ್ತು ತಂತ್ರಜ್ಞಾನಕ್ಕೆ ಸಂಪರ್ಕಿಸುವ ಮೂಲಕ ಆರ್ಥಿಕ ಸ್ವಾತಂತ್ರ್ಯವನ್ನು ಉತ್ತೇಜಿಸುತ್ತದೆ.
ವಿಶ್ವಸಂಸ್ಥೆಯ ಎಲ್ಲರಿಗೂ ಮುನ್ನೆಚ್ಚರಿಕೆ (EW4All) ಯ ಉಪಕ್ರಮ
ಸಾಮಾನ್ಯ ಅಧ್ಯಾಯನ 3/ಪರಿಸರ ಅಧ್ಯಾಯನ
ಇದೀಗ ಸುದ್ದಿಯಲ್ಲಿದೆ:
- ವಿಶ್ವ ಹವಾಮಾನ ಸಂಸ್ಥೆ (WMO) ಯು ತನ್ನ 193 ಸದಸ್ಯ ರಾಷ್ಟ್ರಗಳಿಗೆ 2027 ರ ವೇಳೆಗೆ ಸಾರ್ವತ್ರಿಕ ಮುನ್ನೆಚ್ಚರಿಕೆ ವ್ಯಾಪ್ತಿಗೆ ಬದ್ಧವಾಗುವಂತೆ ವಿಶ್ವಸಂಸ್ಥೆಯ ಎಲ್ಲರಿಗೂ ಮುನ್ನೆಚ್ಚರಿಕೆ (EW4All) ಉಪಕ್ರಮದ ಅಡಿಯಲ್ಲಿ ಒಟ್ಟುಗೂಡಿಸಿತು.
ಮುನ್ನೆಚ್ಚರಿಕೆ ವ್ಯವಸ್ಥೆ (EWS) ಯ ಬಗ್ಗೆ:
- ಇದು ಅಪಾಯದ ಮೇಲ್ವಿಚಾರಣೆ, ಮುನ್ಸೂಚನೆ, ವಿಪತ್ತು ಅಪಾಯದ ಮೌಲ್ಯಮಾಪನ, ಸಂವಹನ ಮತ್ತು ಸನ್ನದ್ಧತೆಯನ್ನು ಸಂಯೋಜಿಸುವ ವಿಧಾನವಾಗಿದ್ದು, ಅಪಾಯದಲ್ಲಿರುವ ಜೀವ, ಜೀವನೋಪಾಯ ಮತ್ತು ಸ್ವತ್ತುಗಳನ್ನು ಉಳಿಸಲು ಸಕಾಲಿಕ ಕ್ರಮವನ್ನು ಸಕ್ರಿಯಗೊಳಿಸುತ್ತದೆ.
ವಿಶ್ವಸಂಸ್ಥೆಯ ಎಲ್ಲರಿಗೂ ಮುನ್ನೆಚ್ಚರಿಕೆ (EW4All) ಯ ಉಪಕ್ರಮ:
- ಇದನ್ನು 2022 ರಲ್ಲಿ ಪ್ರಾರಂಭಿಸಲಾಯಿತು.
- ಸಹ-ನೇತೃತ್ವದಲ್ಲಿ: – ವಿಶ್ವ ಹವಾಮಾನ ಸಂಸ್ಥೆ (WMO), ವಿಶ್ವಸಂಸ್ಥೆಯ ವಿಪತ್ತು ಅಪಾಯ ಕಡಿತ ಕಚೇರಿ (UNDRR), ಅಂತರರಾಷ್ಟ್ರೀಯ ದೂರಸಂಪರ್ಕ ಸಂಘಟನೆ (ITU), ಮತ್ತು ಅಂತರರಾಷ್ಟ್ರೀಯ ರೆಡ್ ಕ್ರಾಸ್ ಹಾಗೂ ರೆಡ್ ಕ್ರೆಸೆಂಟ್ ಸಮಾಜಗಳ ಒಕ್ಕೂಟ (IFRC).
- ಉದ್ದೇಶ: – ಚಂಡಮಾರುತ, ಪ್ರವಾಹ, ಶಾಖದ ಅಲೆ ಅಥವಾ ಬರಗಾಲದಂತಹ ಅಪಾಯಗಳ ವಿರುದ್ಧ ಜೀವ ಉಳಿಸುವ ಎಚ್ಚರಿಕೆಗಳ ಮೂಲಕ ಪ್ರತಿಯೊಬ್ಬ ವ್ಯಕ್ತಿಯು ಎಲ್ಲೇ ವಾಸಿಸುತ್ತಿದ್ದರೂ ರಕ್ಷಿಸಲ್ಪಡುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಗುರಿಯಾಗಿದೆ.



ನಿಮ್ಮದೊಂದು ಉತ್ತರ